ವಾಟ್ಸಾಪ್‌, ಟೆಲಿಗ್ರಾಮ್‌ ಸೇರಿದಂತೆ ಇತರೆ ಆಪ್‌ಗಳಿಗೆ ಕಡಿವಾಣ ಹಾಕಲು ಮುಂದಾಯ್ತಾ ಸರ್ಕಾರ: ಹೊಸ ಪ್ಲ್ಯಾನ್‌ ಏನು?

|

ವಾಟ್ಸಾಪ್‌, ಸಿಗ್ನಲ್‌, ಟೆಲಿಗ್ರಾಮ್‌ ಸೇರಿದಂತೆ ಇನ್ನಿತರೆ ಆಪ್‌ಗಳ ಮೇಲೆ ಭಾರತ ಸರ್ಕಾರವು ಹದ್ದಿನ ಕಣ್ಣಿಟ್ಟಿದ್ದು, ಭದ್ರತೆ ದೃಷ್ಟಿಯಿಂದ ಕೆಲವು ನೀತಿ ನಿಯಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಅದರಲ್ಲೂ ವಾಟ್ಸಾಪ್‌ ಬಳಕೆದಾರರ ಸಂಖ್ಯೆ ಭಾರತದಲ್ಲಿ ಹೆಚ್ಚಿದ್ದು, ಇದನ್ನೇ ಆಧಾರವಾಗಿರಿಸಿಕೊಂಡಿರುವ ಕೆಲವು ಕಿಡಿಕೇಡಿಗಳು ಬಳಕೆದಾರರಿಗೆ ಮೋಸ ಮಾಡುತ್ತಿದ್ದು, ಈ ಪ್ರಕರಣಗಳು ಕಾಲಕಾಲಕ್ಕೆ ಹೆಚ್ಚಾಗಿವೆ. ಇವುಗಳ ಬಗ್ಗೆ ಎಚ್ಚರಿಕೆ ವಹಿಸಿರುವ ದೂರಸಂಪರ್ಕ ಇಲಾಖೆ ಮಹತ್ವದ ಆದೇಶವೊಂದನ್ನು ಜಾರಿ ಮಾಡಲು ಮುಂದಾಗಿದೆ.

ಇನ್‌ಸ್ಟಂಟ್‌

ಹೌದು, ಕಾಲರ್ ಲೈನ್ ಗುರುತಿಸುವಿಕೆಯ ಭಾಗವಾಗಿ ದೃಢೀಕೃತ ಹೆಸರನ್ನು ಹೊಂದಲು ಇನ್‌ಸ್ಟಂಟ್‌ ಮೆಸೆಜಿಂಗ್‌ ಆಪ್‌ಗಳಿಗೆ ಹೊಸ ನಿಯಮ ಜಾರಿ ಮಾಡಲು ಪರಿಷ್ಕೃತ ದೂರಸಂಪರ್ಕ ಮಸೂದೆ ಪ್ರಕಾರ ಸರ್ಕಾರ ಮುಂದಾಗಿದೆ. ಈ ಮೂಲಕ ವಾಟ್ಸಾಪ್ ಮತ್ತು ಸಿಗ್ನಲ್‌ನಂತಹ ಸಂವಹನ ಪ್ಲಾಟ್‌ಫಾರ್ಮ್‌ ಬಳಕೆ ಮಾಡುವವರು ಕೆವೈಸಿ ವಿವರವನ್ನು ನೀಡುವುದನ್ನು ಕಡ್ಡಾಯಗೊಳಿಸಬಹುದಾಗಿದೆ.

ಏನಿದು ಹೊಸ ರೂಲ್ಸ್‌

ಏನಿದು ಹೊಸ ರೂಲ್ಸ್‌

ಕೆಲವು ವರ್ಷಗಳಿಂದಲೂ ಟೆಲಿಕಾಂ ವಲಯಕ್ಕೂ ಈ ಇನ್‌ಸ್ಟಂಟ್‌ ಮೆಸೆಜಿಂಗ್‌ ಆಪ್‌ಗಳಿಗೂ ಮುಸುಕಿನ ಗುದ್ದಾಟಗಳು ನಡೆಯುತ್ತಾ ಬರುತ್ತಿವೆ. ಅದರಂತೆ ಈ ಆಪ್‌ಗಳನ್ನು ಟೆಲಿಕಾಂ ವಿಭಾಗಕ್ಕೆ ಸೇರಿಸಬೇಕು ಎಂದು ಸಹ ಒತ್ತಾಯಿಸಲಾಗಿತ್ತು. ಯಾಕೆಂದರೆ ಈ ಆಪ್‌ಗಳಲ್ಲಿ ಇಂಟರ್ನೆಟ್ ಕರೆ ಮಾಡುವುದು ಹಿಂದೆಂದಿಗಿಂತಲೂ ಈಗ ಸುಲಭವಾಗಿದೆ. ಈ ಕಾರಣಕ್ಕೆ ಸಾಮಾನ್ಯ ಕರೆಗಿಂತ ಈಗ ಇಂಟರ್ನೆಟ್‌ ಕರೆಯಲ್ಲೇ ಹೆಚ್ಚು ಜನರು ಸದುಪಯೋಗ ಪಡೆಯುತ್ತಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿರುವ ಇಲಾಖೆ ಈ ಕೆವೈಸಿ ನಿಯಮವನ್ನು ಜಾರಿ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇದರಿಂದಾಗುವ ಪ್ರಯೋಜನ ಏನು?

ಇದರಿಂದಾಗುವ ಪ್ರಯೋಜನ ಏನು?

ಟ್ರೂಕಾಲರ್ ಸೇವೆಯಂತೆಯೇ ಯಾರೇ ಕರೆ ಮಾಡಿದರೂ ಅವರ ವಿವರವನ್ನು ಮೊಬೈಲ್‌ನಲ್ಲೇ ತಿಳಿಯುವಂತೆ ಮಾಡುತ್ತೇವೆ, ಇದಕ್ಕೆ ಯಾವುದೇ ಆಪ್‌ ಬೇಕಿಲ್ಲ ಎಂದು ದೂರಸಂಪರ್ಕ ಇಲಾಖೆ ಘೋಷಣೆ ಮಾಡಿದೆ. ಈ ಸಂಬಂಧ ಕೆಲಸಗಳೂ ಸಹ ನಡೆಯುತ್ತಿವೆ. ಅದೇ ರೀತಿ ಈ ವಾಟ್ಸಾಪ್‌ ಹಾಗೂ ಇನ್ನಿತರೆ ಪ್ಲಾಟ್‌ಫಾರ್ಮ್‌ನಿಂದ ಕರೆ ಮಾಡುವವರ ದೃಢೀಕೃತ ಹೆಸರನ್ನು ಪ್ರದರ್ಶಿಸಲು ಹೊಸ ನಿಯಮ ಸಹಾಯ ಮಾಡಲಿದೆ. ಈ ಮೂಲಕ ಗ್ರಾಹಕರು ಮೋಸ ಹೋಗುವುದು ತಪ್ಪುತ್ತದೆ.

ನಕಲಿ

ನಕಲಿ

ಈ ಪ್ಲ್ಯಾನ್‌ ಮೂಲಕ ಹಲವಾರು ನಕಲಿ ಕರೆಗಳು ಹಾಗೂ ಮೋಸದ ಕರೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಪರಿಷ್ಕೃತ ಮಸೂದೆಯು ಕಾಲರ್ ಲೈನ್ ಗುರುತಿಸುವಿಕೆಯ ಭಾಗವಾಗಿ ದೃಢೀಕೃತ ಹೆಸರನ್ನು ಹೊಂದಲು ಟೆಲಿಕಾಂ ಸೇವೆ ಮತ್ತು ಓಟಿಟಿ ಗಳ ಮೇಲೆ ಬಾಧ್ಯತೆಯನ್ನು ರಚಿಸಬಹುದು ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ.

ದೂರಸಂಪರ್ಕ ಸೇವೆಗಳ ವ್ಯಾಪ್ತಿ ವಿಸ್ತರಿಸಲು ಪ್ರಸ್ತಾಪ

ದೂರಸಂಪರ್ಕ ಸೇವೆಗಳ ವ್ಯಾಪ್ತಿ ವಿಸ್ತರಿಸಲು ಪ್ರಸ್ತಾಪ

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಸರ್ಕಾರವು ಕರಡು ಭಾರತೀಯ ದೂರಸಂಪರ್ಕ ಮಸೂದೆ, 2022 ಅನ್ನು ಬಿಡುಗಡೆ ಮಾಡಿತ್ತು. ಇದರ ಪ್ರಕಾರ ಈ ರೀತಿಯ ಓಟಿಟಿ ಸಂವಹನ ಸೇವೆಗಳನ್ನು ದೂರಸಂಪರ್ಕ ಸೇವೆಗಳ ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪಿಸಲಾಗಿದೆ. ಈ ಓಟಿಟಿ ಸಂವಹನ ಸೇವೆಗಳನ್ನು ಟೆಲಿಕಾಂಗಳಂತೆಯೇ ಅದೇ ವರ್ಗದಲ್ಲಿ ತರುವ ಷರತ್ತು ಭಾರತದಲ್ಲಿ ಚರ್ಚೆ ಹುಟ್ಟುಹಾಕಿದೆ. ಆದರೆ, ಈ ವಿಷಯದ ಕುರಿತು ಓಟಿಟಿ ಆಪ್‌ಗಳ ಕಾಳಜಿಯನ್ನು ಸಹ ಸರ್ಕಾರ ಸ್ವೀಕರಿಸಿದೆಯಂತೆ.

ಮೊಬೈಲ್

ಇನ್ನು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ (IAMAI), ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF), ಮತ್ತು ಏಷ್ಯಾ ಇಂಟರ್ನೆಟ್ ಒಕ್ಕೂಟ (AIC) ನಂತಹ ವಿವಿಧ ಉದ್ಯಮ ಸಂಸ್ಥೆಗಳು ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಟೆಲಿಕಾಂ ಕಂಪೆನಿಗಳ ರೀತಿ ನೋಡುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿವೆ. ಆದರೂ ಸಹ ವಾಟ್ಸಾಪ್‌, ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಓಟಿಟಿ ಸಂವಹನ ಆಪ್‌ಗಳನ್ನು ನಿಯಂತ್ರಿಸಲು ಟೆಲಿಕಾಂನ ಪ್ರಮುಖರು ದೀರ್ಘಕಾಲದಿಂದ ಸರ್ಕಾರಕ್ಕೆ ಬೇಡಿಕೆ ಇಡುತ್ತಾ ಬರುತ್ತಿದ್ದಾರೆ.

Best Mobiles in India

English summary
Telcos May Have To Share KYC Details With OTT Communication Apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X