ಟೆಲಿಗ್ರಾಂನಲ್ಲಿ ಈಗ ಗ್ರೂಪ್‌ ವಿಡಿಯೋ ಕಾಲ್ ಲಭ್ಯ; ಮತ್ತೇನು ಹೊಸದು ಗೊತ್ತಾ?

|

ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ಗಳ ಪೈಕಿ ಒಂದಾದ ಟೆಲಿಗ್ರಾಮ್ ಇದೀಗ ಅಪ್‌ಡೇಟ್‌ ಆಗಿದ್ದು, ತನ್ನ ಬಹುನಿರೀಕ್ಷಿತ ಗ್ರೂಪ್‌ ವೀಡಿಯೊ ಕಾಲಿಂಗ್‌ ಫೀಚರ್‌ ಅನ್ನು ಪರಿಚಯಿಸಿದೆ. ಗ್ರೂಪ್‌ ವೀಡಿಯೊ ಕರೆಗಳ ಜೊತೆಗೆ ಟೆಲಿಗ್ರಾಮ್ ಕೆಲವು ಇಂಟರ್ಫೇಸ್-ಮಟ್ಟದ ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳಲ್ಲಿ ಅನಿಮೇಟೆಡ್ ಬ್ಯಾಕ್‌ಗ್ರೌಂಡ್‌ ಸಹ ಸೇರ್ಪಡೆ ಆಗಿದೆ. ಹಾಗೆಯೇ ಹೊಸ ಮೆಸೆಜ್‌ ಸೆಂಡಿಂಗ್ ಅನಿಮೇಷನ್‌ಗಳು ಮತ್ತು ಹೊಸ ಆನಿಮೇಟೆಡ್ ಎಮೋಜಿಗಳು ಸೇರಿವೆ. ಬಾಟ್‌ಗಳಿಗಾಗಿ ವಿಶೇಷ ಮೆನು ಬಟನ್ ಅನ್ನು ಸಹ ಒಳಗೊಂಡಿದೆ.

ಬಳಕೆದಾರರು

ಟೆಲಿಗ್ರಾಮ್ ನವೀಕರಣದ ಮೂಲಕ ತರುವ ಅತ್ಯಂತ ಮಹತ್ವದ ಬದಲಾವಣೆಯೆಂದರೆ ಬಳಕೆದಾರರು ತಮ್ಮ ಗ್ರೂಪ್‌ ಆಡಿಯೊ ಸಂಭಾಷಣೆಗಳನ್ನು ವೀಡಿಯೊ ಕರೆಗಳಾಗಿ ಪರಿವರ್ತಿಸಲು ಅನುಮತಿಸುವ ಸಾಮರ್ಥ್ಯ. ಬಳಕೆದಾರರು ತಮ್ಮ ವೀಡಿಯೊವನ್ನು ಆನ್ ಮಾಡಲು ಗುಂಪು ಆಡಿಯೊ ಕರೆಯಲ್ಲಿ ಕ್ಯಾಮೆರಾ ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಒಮ್ಮೆ ಸಕ್ರಿಯಗೊಳಿಸಿದ ನಂತರ, ನಿಮ್ಮ ಗುಂಪಿನ ಸದಸ್ಯರಲ್ಲಿ ಒಬ್ಬರ ವೀಡಿಯೊವನ್ನು ಮುಂಭಾಗದಲ್ಲಿ ನೋಡಲು ನೀವು ಪಿನ್ ಮಾಡಬಹುದು. ಟೆಲಿಗ್ರಾಮ್ ನಿಮ್ಮ ಸ್ಕ್ರೀನ್‌ ಅನ್ನು ಶೇರ್ ಮಾಡುವ ಆಯ್ಕೆಯನ್ನು ಮತ್ತು ನಿಮ್ಮ ಕ್ಯಾಮೆರಾ ಫೀಡ್ ಮತ್ತು ಸ್ಕ್ರೀನ್‌ ಅನ್ನು ಸಹ ಏಕಕಾಲದಲ್ಲಿ ಒದಗಿಸಿದೆ.

ಟ್ಯಾಬ್ಲೆಟ್‌ಗಳು

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಾದ್ಯಂತದ ಬಳಕೆದಾರರು ತಮ್ಮ ಗುಂಪು ಆಡಿಯೊ ಚಾಟ್‌ಗಳನ್ನು ವೀಡಿಯೊ ಕಾನ್ಫರೆನ್ಸ್ ಕರೆಗಳಾಗಿ ಪರಿವರ್ತಿಸಲು ಹೊಸ ಅಪ್‌ಡೇಟ್ ಬಳಸಿಕೊಳ್ಳಬಹುದು. ಲಂಡನ್ ಮೂಲದ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನ ಹೊಸ ನಡೆ ಫೇಸ್‌ಬುಕ್ ಮೆಸೆಂಜರ್, ವಾಟ್ಸಾಪ್ ಮತ್ತು ಆಪಲ್‌ನ ಫೇಸ್‌ಟೈಮ್‌ ನಂತಹವು ಆಪ್‌ಗಳನ್ನು ಆಕ್ರಮಿಸುವಂತಿದೆ.

ಡೆಸ್ಕ್‌ಟಾಪ್‌ಗಳಲ್ಲಿನ

ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿನ ಬಳಕೆದಾರರು ವೀಡಿಯೊ ಕರೆಗಳ ಸಮಯದಲ್ಲಿ ಹೆಚ್ಚುವರಿ ಬೆಂಬಲವನ್ನು ಪಡೆಯುತ್ತಾರೆ. ಅಲ್ಲಿ ಅವರು ಸೈಡ್ ಪ್ಯಾನಲ್ ಅನ್ನು ತೆರೆಯಬಹುದು ಮತ್ತು ವೀಡಿಯೊ ಗ್ರಿಡ್‌ನ ಸ್ಪ್ಲಿಟ್-ಸ್ಕ್ರೀನ್ ಮಾಡಿ ವೀಕ್ಷಣೆ ಮತ್ತು ಭಾಗವಹಿಸುವವರ ಪಟ್ಟಿಯನ್ನು ನೋಡಬಹುದು. ಪೋರ್ಟರೇಟ್ ಮತ್ತು ಲ್ಯಾಂಡ್‌ಸ್ಕೇಪ್‌ ಎರಡಕ್ಕೂ ವೀಕ್ಷಣೆಯ ಮಾದರಿಗಳನ್ನು ಇದು ಹೊಂದುವಂತೆ ಮಾಡುತ್ತದೆ ಎಂದು ಟೆಲಿಗ್ರಾಮ್ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

ಡೆಸ್ಕ್‌ಟಾಪ್

ಡೆಸ್ಕ್‌ಟಾಪ್ ಬಳಕೆದಾರರು ತಮ್ಮ ಸ್ಕ್ರೀನ್‌ ಅನ್ನು ಶೇರ್‌ ಮಾಡಿದಾಗ ಸದಸ್ಯರು ಸ್ವಯಂಚಾಲಿತವಾಗಿ ಪಿನ್ ಆಗುತ್ತಾರೆ. ಇದಲ್ಲದೆ, ಧ್ವನಿ ಚಾಟ್‌ಗಳು ಡೆಸ್ಕ್‌ಟಾಪ್‌ಗಳಲ್ಲಿ ಪ್ರತ್ಯೇಕ ವಿಂಡೋದಲ್ಲಿ ಲಭ್ಯವಿರುತ್ತವೆ. ಇದು ಬಳಕೆದಾರರು ತಮ್ಮ ಇತರ ಪ್ರಮುಖ ಕಾರ್ಯಗಳನ್ನು ಬಿಡದೆ ಟೈಪ್ ಮಾಡಲು ಮತ್ತು ಮಾತನಾಡಲು ಅವಕಾಶ ಮಾಡಿಕೊಡುತ್ತಾರೆ.

ವಾಯಿಸ್‌

ಟೆಲಿಗ್ರಾಮ್ ಈಗ ಬಳಕೆದಾರರಿಗೆ ಅನಿಯಮಿತ ಸಂಖ್ಯೆಯ ಭಾಗವಹಿಸುವವರೊಂದಿಗೆ ಗ್ರೂಪ್‌ ವಾಯಿಸ್‌ ಕರೆಗಳನ್ನು ಮಾಡಲು ಅನುಮತಿಸುತ್ತದೆ. ಆದಾಗ್ಯೂ, ಗ್ರೂಪ್‌ ವೀಡಿಯೊ ಕರೆಗಳನ್ನು ಮಾಡುವ ಆಯ್ಕೆಯು ಪ್ರಸ್ತುತ ವೇದಿಕೆಯಲ್ಲಿ ಸಂಭಾಷಣೆಗೆ ಸೇರುವ ಮೊದಲ 30 ಜನರಿಗೆ ಸೀಮಿತವಾಗಿದೆ. ಟೆಲಿಗ್ರಾಮ್‌ನಲ್ಲಿ ನಿಮ್ಮ ಗ್ರೂಪ್‌ ವೀಡಿಯೊ ಕರೆಗಳಿಗೆ ನೀವು 29 ಕ್ಕೂ ಹೆಚ್ಚು ಸದಸ್ಯರನ್ನು ಸೇರಿಸಲು ಸಾಧ್ಯವಿಲ್ಲ ಎಂದರ್ಥ. ಅದೇನೇ ಇದ್ದರೂ, ಟೆಲಿಗ್ರಾಮ್ ಶೀಘ್ರದಲ್ಲೇ ಆ ಮಿತಿಯನ್ನು ಹೆಚ್ಚಿಸುವ ಭರವಸೆ ವ್ಯಕ್ತಪಡಿಸಿದೆ.

ಗ್ರೇಡಿಯಂಟ್

ಹಾಗೆಯೇ ಟೆಲಿಗ್ರಾಮ್ ತನ್ನ ಇತ್ತೀಚಿನ ಅಪ್‌ಡೇಟ್‌ನ ಭಾಗವಾಗಿ ಕೆಲವು ಹೊಸ, ಇಂಟರ್ಫೇಸ್-ಮಟ್ಟದ ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಮಲ್ಟಿ-ಕಲರ್ ಗ್ರೇಡಿಯಂಟ್ ವಾಲ್‌ಪೇಪರ್‌ಗಳನ್ನು ಹೊಂದಿರುವ ಆನಿಮೇಟೆಡ್ ಹಿನ್ನೆಲೆಗಳನ್ನು ಒಳಗೊಂಡಿವೆ. ಬಳಕೆದಾರರು ಮೆಸೆಜ್‌ ಕಳುಹಿಸುವಾಗ ಪ್ರತಿ ಬಾರಿ ಅನಿಮೇಟ್ ಆಗುತ್ತವೆ. ಮಲ್ಟಿ-ಕಲರ್ಗಳು ಮತ್ತು ಮಾದರಿಗಳನ್ನು ಆರಿಸುವ ಮೂಲಕ ನಿಮ್ಮ ಸ್ವಂತ ಅನಿಮೇಟೆಡ್ ಹಿನ್ನೆಲೆಗಳನ್ನು ಸಹ ನೀವು ರಚಿಸಬಹುದು.

Most Read Articles
Best Mobiles in India

English summary
Telegram New Update Adds Features: Group Video Calls, Screen Sharing, and More.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X