ಟಿವಿ ನೋಡುಗರಿಗೆ ಕ್ಯಾನ್ಸರ್, ಹೃದಯ ರೋಗ ಗ್ಯಾರಂಟಿ

  By Suneel
  |

  ಟೆಕ್ನಾಲಜಿ ಎಂಬುದು ಇಂದು ಮನುಷ್ಯನ ಕಷ್ಟಕರ ಕೆಲಸಗಳನ್ನು ಅತಿ ಸುಲಭವಾಗಿ ಮಾಡಿದೆ. ತಂತ್ರಜ್ಞಾನ ಬಳಕೆಯಾಗದ ಕ್ಷೇತ್ರವೇ ಇಲ್ಲಾ ಎನ್ನಬಹುದಾಗಿದೆ. ಆರೋಗ್ಯ ಕ್ಷೇತ್ರಕ್ಕಂತು ಇದರ ಕೊಡುಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ಟೆಕ್ನಾಲಜಿಯ ಗ್ಯಾಜೆಟ್ಸ್ ದೂರದರ್ಶನವನ್ನು ವೀಕ್ಷಿಸುವವರಿಗೆ ಒಂದು ಆಘಾತಕಾರಿ ಮಾಹಿತಿಯನ್ನು ನೀಡುತ್ತಿದೆ.

  ಓದಿರಿ: ಪ್ರಪಂಚವನ್ನೇ ಬದಲಿಸುವ ಆಶ್ಚರ್ಯಕರ ಸಂಶೋಧನೆಗಳು

  ದೂರದರ್ಶನ ನೋಡುಗರಿಗೆ ಇಂದಿನ ಲೇಖನ ಆಘಾತಕಾರಿಯಂತು ಹೌದು, ಆದರೇ ಇದು ಅನ್ವಯಿಸುವುದು ಟಿವಿಯನ್ನು ಪ್ರತಿದಿನ 3 ರಿಂದ 4 ಗಂಟೆಗಳಿಗಿಂತ ಹೆಚ್ಚು ಸಮಯ ನೋಡುವವರಿಗೆ ಮಾತ್ರ ಟಿವಿಯು ಹೆಚ್ಚು ಅಪಾಯಕಾರಿ ರೋಗಗಳನ್ನು ತಂದೊಡ್ಡುತ್ತದೆ ಎಂದು ಅಮೇರಿಕ ಸಂಶೋಧನೆ ಹೇಳಿದೆ. ಅಲ್ಲದೇ ಇತರೆ 8 ಬಯಾನಕ ರೋಗಗಳಿಗೂ ಟಿವಿಯನ್ನು 3 ರಿಂದ 4 ಗಂಟೆಗಿಂತ ಹೆಚ್ಚು ಸಮಯ ನೋಡುವವರು ತುತ್ತಾಗುತ್ತಾರೆ ಎಂದು ಸಂಶೋಧನೆ ಹೇಳಿದೆ. ಹಾಗಾದರೇ ಇದರ ಪ್ರಮುಖ ಅಂಶಗಳೇನು ಏನು ಎಂಬುದನ್ನು ಈ ಲೇಖನವನ್ನು ಓದಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಅಮೇರಿಕ ಸಂಶೋಧನೆ ಹೇಳಿದ್ದು !

  ಪ್ರತಿದಿನ 3 ರಿಂದ 4 ಗಂಟೆಗಳಿಗಿಂತ ಹೆಚ್ಚು ಸಮಯ ಟಿವಿ ನೋಡುವುದು ಹೃದಯ ರೋಗ, ಮಧುಮೇಹದಂತಹ 8 ಪ್ರಮುಖ ರೋಗಗಳಿಗೆ ಕಾರಣವಾಗುತ್ತದೆ.

  ಹಿಂದಿನ ಸಂಶೋಧನೆ ಹೇಳಿದ್ದು !

  ಟಿವಿ ನೋಡುತ್ತಿದ್ದ ಮತ್ತು ಕ್ಯಾನ್ಸರ್‌ ಹಾಗು ಹೃದಯ ಸಂಬಂಧಿ ಅಪಾಯಕಾರಿ ರೋಗಗಳಿಂದ ಸತ್ತವರಿಗೂ ಹೆಚ್ಚು ದೃಡವಾದ ಸಂಬಂಧವಿದೆ ಎಂದು ಹಿಂದಿನ ಸಂಶೋಧನೆ ಹೇಳಿತ್ತು.

  ಅಮೇರಿಕ ನ್ಯಾಷನಲ್‌ ಕ್ಯಾನ್ಸರ್‌ ಇನ್ಸ್ಟಿಟ್ಯೂಟ್‌

  ಈ ಅಧ್ಯಯನದಲ್ಲಿ ಅಮೇರಿಕ ನ್ಯಾಷನಲ್‌ ಕ್ಯಾನ್ಸರ್‌ ಇನ್ಸ್ಟಿಟ್ಯೂಟ್‌ 50-71 ವಯಸ್ಸಿನ 2,21,000 ಕ್ಕಿಂತ ಹೆಚ್ಚು ಜನರನ್ನು ವಯಕ್ತಿಕವಾಗಿ ಪರೀಕ್ಷಿಸಲಾಗಿ ಇವರುಗಳಲ್ಲಿ ಹೆಚ್ಚಿನದಾಗಿ ಕ್ಯಾನ್ಸರ್‌ ಹಾಗೂ ಹೃದಯ ರೋಗಗಳಿಂದ ಬಳಲುತ್ತಿದ್ದವರು ಇದ್ದಾರೆ ಎಂದು ಸಂಸ್ಥೆ ಹೇಳಿತ್ತು.

  ಹೊಸ ಅಸೋಸಿಯೇಷನ್‌ ಹೇಳಿದ್ದು !

  ಅಮೇರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಧುಮೇಹ, ಇನ್ಫ್ಲುಯೆನ್ಸ, ನ್ಯುಮೋನಿಯಾ, ಪಾರ್ಕಿನ್ಸನ್ ರೋಗ ಮತ್ತು ಯಕೃತ್ತಿನ ರೋಗಗಳಿರುವವರು ಸತ್ತಿದ್ದಾರೆ ಎಂದಿದೆ.

  ಶರತ್‌ ಕೆ ಕೀಡಲ್‌

  'ಟಿವಿ ನೋಡುವುದು ಎಲ್ಲರು ಸಹ ಬಿಡುವಿನ ಸಮಯದಲ್ಲೇ, ಹಾಗೂ ಕೆಲಸದ ಬಿಡುವಿನ ಸಮಯದಲ್ಲೇ ಎಂದು ತಿಳಿದಿದೆ. ಆದರೆ ಇದು ದೈಹಿಕ ನಿಷ್ಕ್ರಿಯತೆಯ ಚಟುವಟಿಕೆ', ಎಂದು ಅಮೇರಿಕ ನ್ಯಾಷನಲ್‌ ಕ್ಯಾನ್ಸರ್‌ ಇನ್ಸ್ಟಿಟ್ಯೂಟ್‌ ನ ಮುಖ್ಯ ಸಮೀಕ್ಷಕರಾದ ಶರತ್‌ ಕೆ ಕೀಡಲ್‌ ಹೇಳಿದ್ದಾರೆ.

  ಸಂಶೋಧನೆಯ ಅಂಶಗಳು

  ಟಿವಿ ಹೆಚ್ಚು ನೋಡುಗರನ್ನು ಕುರಿತಂತೆ ದೈಹಿಕ ಸಂಶೋಧನೆಗೆ ಮೀಸಲಿರಿಸಿದ ಅಧ್ಯಯನದಿಂದ ಹೆಚ್ಚು ಸಮಯಗಳ ಕಾಲ ಕೂರುವುದರಿಂದ ಆರೋಗ್ಯದ ಮೇಲಿನ ವಿವಿಧ ದುಷ್ಪರಿಣಾಮಗಳು ಎದುರಾಗುತ್ತವೆ ಎಮದು ಕೀಡಲ್‌ ಹೇಳಿದ್ದಾರೆ.

  ಅಧ್ಯಯನ

  ಈ ಅಧ್ಯಯನವನ್ನು ಪ್ರತಿದಿನಕ್ಕೆ 1 ಗಂಟೆಗಿಂತ ಟಿವಿ ನೋಡುವವರು ಮತ್ತು 3 ರಿಂದ 4 ಗಂಟೆಗಳಿಗಿಂತ ಹೆಚ್ಚು ಕಾಲ ಟಿವಿ ನೋಡವವರನ್ನು ವಯಕ್ತಿಕವಾಗಿ ಸಮೀಕ್ಷೆಗೆ ಒಳಪಡಿಸಿದೆ.

  3 ರಿಂದ 4 ಗಂಟೆಗಳಿಗಿಂತ ಕಾಲ ಹೆಚ್ಚು ಟಿವಿ ನೋಡುವವರು

  ಪ್ರತಿದಿನ 3 ರಿಂದ 4 ಗಂಟೆಗಳಿಗಿಂತ ಕಾಲ ಹೆಚ್ಚು ಟಿವಿ ನೋಡುವವರಲ್ಲಿ ಶೇಕಡ 15 ರಷ್ಟು ಮಂದಿ ಯಾವುದೇ ಕಾರಣಗಳಿಂಧ ಸಾಯಬಹುದು ಎನ್ನಲಾಗಿದೆ.

  ಅಧ್ಯಯನ ಫಲಿತಾಂಶದ ಪ್ರಮುಖ ಅಂಶ

  ಪ್ರತಿದಿನ 7 ಗಂಟೆಗಿಂತ ಹೆಚ್ಚು ಸಮಯ ಟಿವಿ ನೋಡುವವರಲ್ಲಿ ಶೇಕಡ 48 ರಷ್ಟು ಮಂದಿ ಅಧ್ಯಯನದ ಅವಧಿಯಲ್ಲೇ ಮರಣಹೊಂದುತ್ತಾರೆ, 3ರಿಂದ 4 ಗಂಟೆಗಿಂತ ಹೆಚ್ಚು ಸಮಯ ಟಿವಿ ನೋಡುಗರಿಗೆ ಈ ಅಪಾಯಗಳು ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಹೆಚ್ಚುತ್ತಾ ಹೋಗುತ್ತವೆ.

  ಹೆಚ್ಚು ಸಮಯ ಟಿವಿ ನೋಡುವವರು ಇನ್ನು ಮುಂದೆ ಯಾದರೂ ಎಚ್ಚರ ವಹಿಸಿ.

  ಹೆಚ್ಚು ಸಮಯ ಟಿವಿ ನೋಡುವವರು ಇನ್ನು ಮುಂದೆ ಯಾದರೂ ಎಚ್ಚರ ವಹಿಸಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Watching television for more than three to four hours a day is linked to eight leading causes of death, including cancer, heart disease and diabetes, in the U.S. researchers say.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more