Subscribe to Gizbot

ಪ್ರಪಂಚವನ್ನೇ ಬದಲಿಸುವ ಆಶ್ಚರ್ಯಕರ ಸಂಶೋಧನೆಗಳು

Written By:

ಟೆಕ್‌ ಉಪಯೋಗ ಪಡೆಯದವರು ಇಂದು ಯಾರು ಇಲ್ಲ. ಟೆಕ್‌ ಬೆಳವಣಿಗೆ ಇಂದು ಹೆಚ್ಚು ಹೆಚ್ಚು ಉಪಯೋಗಿ ತಂತ್ರಜ್ಞಾನಗಳನ್ನು ಹೊರಹೊಮ್ಮಿಸುತ್ತಲೇ ಇದೆ. ಹೊಸದಾಗಿ ಆವಿಷ್ಕಾರ ಗೊಂಡ ತಂತ್ರಜ್ಞಾನ ಎಷ್ಟೇ ಉಪಯೋಗದ್ದಾಗಿದ್ದರೂ, ಅದು ಎಷ್ಟು ಜನರಿಂದ ಉಪಯೋಗಿಸಲ್ಪಡುತ್ತದೆ, ಎಂತಹ ಜನರು ಉಪಯೋಗಿಸಬಲ್ಲರು ಎಂಬ ಅಂಶವು ಗಣನೆಗೆ ಬರುತ್ತದೆ. ಕಾರಣ ಹಲವು ತಂತ್ರಜ್ಞಾನಗಳು ಹೆಚ್ಚು ದುಭಾರಿಯದ್ದಾಗಿದ್ದು, ಅವುಗಳನ್ನು ಹೆಚ್ಚು ಜನ ಬಳಸಲಾರರು.

ಓದಿರಿ: ಬದುಕಿಗೆ ಮುಳುವಾದ ಟ್ರಾಜಿಡಿ ಸೆಲ್ಫೀಗಳು

ಹಾಗಾದರೆ ಸಾಮಾನ್ಯರು ಹೆಚ್ಚು ಹಣ ವೆಚ್ಚ ಮಾಡದೇ ಸ್ವಲ್ಪ ಶ್ರಮದಿಂದ ಉಪಯೋಗಿಸ ಬಹುದಾದ ತಂತ್ರಜ್ಞಾನಗಳು ಯಾವುವು ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರವಾಗಿ ಗಿಜ್‌ಬಾಟ್‌ ಕೆಲವು ಸರಳ ಸಂಶೋಧನೆಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ರಾವಿಟಿ ಲೈಟ್

ಗ್ರಾವಿಟಿ ಲೈಟ್

ಇಂದಿಗೂ ಸಹ 1.3 ಬಿಲಿಯನ್‌ ಜನರು ಇಲೆಕ್ಟ್ರಿಸಿಟಿ ಆಕ್ಸೆಸ್‌ ಹೊಂದದೇ ಬೆಳಕಿಗಾಗಿ ಆಯಿಲ್‌ ಲ್ಯಾಂಪ್‌ ಬಳಸುತ್ತಿದ್ದಾರೆ. ಗ್ರಾವಿಟಿ ಲೈಟ್, ಗ್ರಾವಿಟೇಶನಲ್ ಪೊಟೆನ್ಷಿಯಲ ಉಪಯೋಗದಿಂದ ಲೈಟ್‌ಅನ್ನು ಜೆನೆರೇಟ್‌ ಮಾಡುತ್ತದೆ. ಒಂದು ಭಾರ ವಸ್ತು ಕೆಳಗೆ ನಿಧಾನವಾಗಿ ಹೋಗುವ ಮೂಲಕ ಲೈಟ್‌ ಉತ್ಪತ್ತಿಯಾಗುತ್ತದೆ.

ಸಾಕೆಟ್‌

ಸಾಕೆಟ್‌

ಈ ಸಾಕೆಟ್‌ ಬಾಲ್‌ ಒಮ್ಮೆಲೇ ದೈಹಿಕವಾಗಿ ವ್ಯಾಯಾಮವನ್ನು ಕಿಕ್ಕಿಂಗ್‌ನಿಂದ ನೀಡುವುದಲ್ಲದೇ ಎನರ್ಜಿಯನ್ನು ಶೇಖರಿಸಿ ಮೊಬೈಲ್‌ ಚಾರ್ಜಿಂಗ್ ಮಾಡಲು ಸಹಾಯ ಮಾಡುತ್ತದೆ.

ಕ್ಯೂ ಡ್ರಮ್

ಕ್ಯೂ ಡ್ರಮ್

ಮನುಷ್ಯ ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳಲಲ್ಲಿ ನೀರು ಒಂದಾಗಿದೆ. ನೀರನ್ನು ಸಾಗಿಸಲು ಬಹಳ ಹಿಂದೆಯೇ ಈ ಚಿತ್ರದಲ್ಲಿರುವ ಕ್ಯೂ ಡ್ರಮ್‌ ಕಂಡುಹಿಡಿಯಲಾಗಿತ್ತು.

ಮೈಂಡ್‌ ರೀಡಿಂಗ್‌ ಮತ್ತು ಮೆಮೊರಿ ರೆಕಾರ್ಡಿಂಗ್‌ ಸ್ಕ್ಯಾನ್‌

ಮೈಂಡ್‌ ರೀಡಿಂಗ್‌ ಮತ್ತು ಮೆಮೊರಿ ರೆಕಾರ್ಡಿಂಗ್‌ ಸ್ಕ್ಯಾನ್‌

ಇದು ಮೊಟ್ಟಮೊದಲ ಬ್ರೈನ್‌ ಸ್ಕ್ಯಾನ್‌ ಟೆಕ್‌ ಆಗಿದ್ದು, ಆಲೋಚನೆಗಳನ್ನು ರೆಕಾರ್ಡ್‌ ಮಾಡಲು ಮತ್ತು ಮೆಮೊರಿ ಪ್ಲೇಬ್ಯಾಕ್‌ ಮಾಡಲು ಸಹಾಯವಾಗುವ ತಂತ್ರಜ್ಞಾನವಾಗಿದೆ.

ಸ್ಮಾರ್ಟ್‌ ಕಾಂಟ್ಯಾಕ್ಟ್‌ ಲೆನ್ಸ್‌

ಸ್ಮಾರ್ಟ್‌ ಕಾಂಟ್ಯಾಕ್ಟ್‌ ಲೆನ್ಸ್‌

ಈ ಸ್ಮಾರ್ಟ್‌ ಕಾಂಟ್ಯಾಕ್ಟ್‌ ಲೆನ್ಸ್‌ ಡಯಾಬಿಟೀಸ್‌ ಇರುವವರಲ್ಲಿ ಗ್ಲೂಕೋಸ್‌ ಪ್ರಮಾಣವನ್ನು ಅಳೆಯುತ್ತದೆ. ಇದು ಗೂಗಲ್‌ ನಿಂದ ಅಭಿವೃದ್ದಿಗೊಂಡಿದೆ.

 ಬೆಳಕಿನ ಮೂಮೆಂಟ್‌ ರೆಕಾರ್ಡ್‌ ಮಾಡುವ ಕ್ಯಾಮೆರಾ

ಬೆಳಕಿನ ಮೂಮೆಂಟ್‌ ರೆಕಾರ್ಡ್‌ ಮಾಡುವ ಕ್ಯಾಮೆರಾ

STAMP ಎಂಬುವ ಕ್ಯಾಮೆರಾ ಕೇವಲ ಒಂದು ಸೆಕೆಂಡಿಗೆ 4.4 ಟ್ರಿಲಿಯನ್‌ ಫ್ರೇಮ್‌ಗಳನ್ನ ಕ್ಯಾಪ್ಚರ್‌ ಮಾಡುತ್ತದೆ. ಇದನ್ನು ಜಪಾನ್‌ನ ಸಂಶೋಧಕರು ಅಭಿವೃದ್ದಿಗೊಳಿಸಿದ್ದಾರೆ.

ಇನ್ವಿಸಿಬಿಲಿಟಿ ಕ್ಲಾಕ್ಸ್

ಇನ್ವಿಸಿಬಿಲಿಟಿ ಕ್ಲಾಕ್ಸ್

ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಲೇಸರ್‌ ಸ್ಟಿಚಿಂಗ್ ಬಳಸಿಕೊಂಡು ಇನ್ವಸಿಬಿಲಿಟಿ ಮೆಟಾಮೆಟಿರೀಯಲ್‌ನಿಂದ ಇನ್ವಿಸಿಬಿಲಿಟಿ ಕ್ಲಾಕ್ಸ್ ಕಂಡುಹಿಡಿದಿದ್ದಾರೆ.

ಪ್ರಿಂಟೇಬಲ್‌ ಮತ್ತು ಬೆಂಡೇಬಲ್‌ ಬ್ಯಾಟರಿ

ಪ್ರಿಂಟೇಬಲ್‌ ಮತ್ತು ಬೆಂಡೇಬಲ್‌ ಬ್ಯಾಟರಿ

ಸರಳ ರೀತಿಯ ಮೆದುವಾದ ಜಿಂಕ್‌ ಪಾಲಿಮರ್‌ನಿಂದ ಬ್ಯಾಟರಿಯೊಂದನ್ನು ಕ್ಯಾಲಿಪೋರ್ನಿಯಾ ಮೂಲದ ಕಂಪನಿಯೊಂದು ಅಭಿವೃದ್ದಿ ಪಡಿಸಿದೆ. ಇದನ್ನು ಮಡಿಸಬಹುದಾಗಿದೆ.

ಸೋಲಾರ್ ಪ್ಯಾನೆಲ್‌ ವಿಂಡೋಸ್

ಸೋಲಾರ್ ಪ್ಯಾನೆಲ್‌ ವಿಂಡೋಸ್

ಕ್ವಾಂಟಮ್‌ ಡಾಟ್‌ ಸಂಶೋಧನೆಯಲ್ಲಿ ಲಾಸ್ ಅಲಮಾಸ್ ರಾಷ್ಟ್ರೀಯ ಲ್ಯಾಬೋರೇಟರಿಯು ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುವ ಸೋಲಾರ್ ಪ್ಯಾನೆಲ್‌ ವಿಂಡೋಸ್‌ ಅನ್ನು ಅಭಿವೃದ್ದಿ ಪಡಿಸಿದ್ದಾರೆ.

ಅಂಧರಿಗೆ ಸ್ಮಾರ್ಟ್‌ಗ್ಲಾಸೆಸ್

ಅಂಧರಿಗೆ ಸ್ಮಾರ್ಟ್‌ಗ್ಲಾಸೆಸ್

ಅಂಧರಿಗಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದವರು ಸ್ಮಾರ್ಟ್‌ಗ್ಲಾಸೆಸ್ ಅಭಿವೃದ್ದಿ ಪಡಿಸಿದ್ದು, ಇದರಲ್ಲಿ 3D ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾ ವಸ್ತುಗಳನ್ನು ಬೇರ್ಪಡಿಸಿ ಲೆನ್ಸ್‌ಮೇಲೆ ಇರಿಸುತ್ತವೆ.

ಬಯೋನಿಕ್ ಪ್ಲಾಂಟ್

ಬಯೋನಿಕ್ ಪ್ಲಾಂಟ್

ಬಯೋನಿಕ್ ಪ್ಲಾಂಟ್‌ ಅನ್ನು ಮೆಸ್ಸಾಜುಸೆಟ್ಸ್‌ನ ಸಂಶೋಧಕರು ಆವಿಷ್ಕರಿಸಿದ್ದಾರೆ.

 ಸ್ಮಾರ್ಟ್‌ ಎಕ್ಸ್‌ಪೈರಿ ಲೇಬಲ್

ಸ್ಮಾರ್ಟ್‌ ಎಕ್ಸ್‌ಪೈರಿ ಲೇಬಲ್

ಲಂಡನ್‌ ಮೂಲದ ಸ್ಟೂಡೆಂಟ್‌ ಬಯೋ-ಪ್ರಕ್ರಿಯೆಯ ಈ ಸ್ಮಾರ್ಟ್‌ ಎಕ್ಸ್‌ಪೈರಿ ಲೇಬಲ್‌ ಅನ್ನು ಅಭಿವೃದ್ದಿ ಪಡಿಸಿದ್ದಾರೆ. ಇಂದು ವಿಶ್ವದಾದ್ಯಂತ ಮಿಲಿಯನ್‌ ಗಟ್ಟಲೇ ಆಹಾರ ವ್ಯರ್ಥವಾಗುತ್ತಿರುವ ದೃಷ್ಟಿಯಿಂದ ಇದನ್ನು ಅಭಿವೃದ್ದಿ ಪಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It is commonly argued that only through the use of high-end technology that we can provide for the needs of the masses. This is not true as much of the third world, in particular, is still stuck with these fundamental problems like clean water and infant mortality rate.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot