2016ರ ಅತ್ಯುತ್ತಮ ಐ.ಒ.ಟಿ ಉತ್ಪನ್ನಗಳು.

|

ಐ.ಒ.ಟಿ ಎಂದು ಕರೆಯಲಾಗುವ ಇಂಟರ್ನೆಟ್ ಆಫ್ ಪ್ರಾಡಕ್ಟ್ಸ್/ಥಿಂಗ್ಸ್ ತಂತ್ರಜ್ಞಾನವು ನಮ್ಮ ನಗರಗಳನ್ನು, ಮನೆಗಳನ್ನು, ಕಛೇರಿಗಳನ್ನು ಬದಲಿಸುತ್ತಿದೆ; ನಮ್ಮ ಜೀವನವನ್ನು ಹೊಸ ರೀತಿಯಲ್ಲಿ ಸರಳವಾಗಿಸಲು ನಿರಂತರ ಸಂಪರ್ಕದಲ್ಲಿರುವ ಹೊಸ ಪರಿಸರವನ್ನೇ ಇವು ನಿರ್ಮಿಸುತ್ತಿವೆ.

2016ರ ಅತ್ಯುತ್ತಮ ಐ.ಒ.ಟಿ ಉತ್ಪನ್ನಗಳು.

ಓದಿರಿ: 2017ರಲ್ಲಿ ಬಿಡುಗಡೆಯಾಗಲಿರುವ ಟಾಪ್ 10 ಸ್ಮಾರ್ಟ್ ಫೋನುಗಳು.

ತಂತ್ರಜ್ಞಾನ ದೈತ್ಯರು ಮತ್ತು ಹೊಸ ಸ್ಟಾರ್ಟ್ ಅಪ್ ಗಳು ಹೊಸ ಹೊಸ ರೀತಿಯ ಐ.ಒ.ಟಿ ಉತ್ಪನ್ನಗಳನ್ನು ತಯಾರಿಸುವತ್ತ ಗಮನ ಕೊಡುತ್ತಿವೆ; ಈ ಉತ್ಪನ್ನಗಳು ನಮ್ಮ ಜೀವನದ ಪ್ರತಿ ಭಾಗವನ್ನೂ ಮುಟ್ಟಲು ಹವಣಿಸುತ್ತಿವೆ. 2016ರಲ್ಲಿ ಅನೇಕ ನವೀನ ಮತ್ತು ಆಸಕ್ತಿ ಮೂಡಿಸುವ ತಂತ್ರಜ್ಞಾನಗಳು ಬಂದವು. ಅವುಗಳಲ್ಲಿ ಉತ್ತಮ ಐ.ಒ.ಟಿ ಉತ್ಪನ್ನಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ. ಒಮ್ಮೆ ನೋಡಿ.

ಟ್ಯಾಡೋ.

ಟ್ಯಾಡೋ.

ಈ ವಿಚಿತ್ರ ಹೆಸರಿನ ಐ.ಒ.ಟಿ ಗ್ಯಾಜೆಟ್ ನಿಮ್ಮ ಮನೆಯನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯುವ ತಂತ್ರಜ್ಞಾನವಾಗಿದೆ. ಇದು ಹಲವಾರು ಕೆಲಸಗಳನ್ನು ಮಾಡುತ್ತದೆ. ನೀವು ಮನೆಯ ಕಡೆಗೆ ಪಯಣ ಬೆಳೆಸುತ್ತಿರುವುದನ್ನು ನಿಮ್ಮ ಫೋನಿನ ಜಿ.ಪಿ.ಎಸ್ ಮಾಹಿತಿಯನ್ನಾಧರಿಸಿ ಪಡೆದುಕೊಂಡು ನೀವು ಮನೆ ತಲುಪುವುಷ್ಟರಲ್ಲಿ ನಿಮ್ಮ ಮನೆಯ ಉಷ್ಣಾಂಶವನ್ನು ನಿಯಂತ್ರಿಸುತ್ತದೆ. ನಿಮ್ಮ ಮನೆಯ ಲೈಟುಗಳನ್ನು ಆನ್ ಮಾಡುತ್ತದೆ, ಅಲಾರಂ ಅನ್ನು ಆಫ್ ಮಾಡುತ್ತದೆ, ನಿಮಗಾಗಿ ಲಿಫ್ಟ್ ಅನ್ನು ಕರೆಸುತ್ತದೆ. ಎಲ್ಲವೂ ತನ್ನಿಂತಾನೇ ನಡೆಯುತ್ತದೆ, ನೀವು ಆದೇಶ ನೀಡುವ ಅವಶ್ಯಕತೆಯೇ ಇಲ್ಲ.

ಕ್ವಾಲ್ ಕಂನ ಇಂಟರ್ನೆಟ್ ಆಫ್ ಮೆಡಿಕಲ್ ಥಿಂಗ್ಸ್.

ಕ್ವಾಲ್ ಕಂನ ಇಂಟರ್ನೆಟ್ ಆಫ್ ಮೆಡಿಕಲ್ ಥಿಂಗ್ಸ್.

ಐ.ಒ.ಟಿ ಕೇವಲ ಮನೆಗಷ್ಟೇ ಸೀಮಿತವಾಗಿಲ್ಲ. 2016ರ ಸಿ.ಇ.ಎಸ್ ನಲ್ಲಿ ಕ್ವಾಲ್ ಕಮ್ ತನ್ನ ಇಂಟರ್ನೆಟ್ ಆಫ್ ಮೆಡಿಕಲ್ ಥಿಂಗ್ಸ್ ಅನ್ನು ಪರಿಚಯಿಸಿತು.

ಈ ಹೊಸ ತಂತ್ರಜ್ಞಾನದಲ್ಲಿ ಸ್ಮಾರ್ಟ್ ಡಯಾಗ್ನೋಸ್ಟಿಕ್ಸ್, ಬಯೋಮೆಟ್ರಿಕ್ ಮತ್ತು ದೇಹದಾರೋಗ್ಯದ ಮಾಪಕಗಳಿದೆ, ಇವು ರೋಗಿಯ ಆರೋಗ್ಯದ ಸ್ಥಿತಿಗತಿಯನ್ನು ಆರೋಗ್ಯ ಸಿಬ್ಬಂದಿಗಳಿಗೆ ನಿರಂತರವಾಗಿ ನೀಡುತ್ತಿರುತ್ತದೆ. ರೋಗಿಯ ಜೀವವುಳಿಸಲು ಇದು ಸಹಾಯಕ.

ಅಮೆಜಾನ್ ಡ್ಯಾಶ್ ಬಟನ್.

ಅಮೆಜಾನ್ ಡ್ಯಾಶ್ ಬಟನ್.

ಅಮೆಜಾನ್ ಡ್ಯಾಶ್ ಬಟನ್ ಅನ್ನು ಪರಿಚಯಿಸಿದೆ, ಇದು ವೈಫೈ ಆಧಾರಿತ ಸಾಧನ, ಒಂದು ಬಟನ್ ಒತ್ತುತ್ತಿದ್ದಂತೆಯೇ ನಿಮ್ಮ ನೆಚ್ಚಿನ ಉತ್ಪನ್ನವನ್ನು ಇದು ಮತ್ತೆ ಆರ್ಡರ್ ಮಾಡುತ್ತದೆ. ಕೇವಲ 5 ಡಾಲರಿನ ಈ ಐ.ಒ.ಟಿ ಸಾಧನದಲ್ಲಿ ನಿಮ್ಮ ನೆಚ್ಚಿನ ಉತ್ಪನ್ನವನ್ನು ಐ.ಒ.ಎಸ್ ಅಥವಾ ಆ್ಯಂಡ್ರಾಯ್ಡ್ ಸಾಧನದಲ್ಲಿ ಅಮೆಜಾನ್ ಆ್ಯಪ್ ಬಳಸಿ ಸೇರಿಸಿಡಬಹುದು. ಆ ಉತ್ಪನ್ನ ಮುಗಿದಾಗ ಡ್ಯಾಶ್ ಬಟನ್ ಅನ್ನು ಒಮ್ಮೆ ಒತ್ತಿದರೆ ಆಯಿತು, ಅಮೆಜಾನ್ ಮೂಲಕ ಆರ್ಡರ್ ಆಗುತ್ತದೆ.

ಫಿಟ್ ಬಾರ್ಕ್.

ಫಿಟ್ ಬಾರ್ಕ್.

ಇದು 2016ರಲ್ಲಿ ರೂಪುಗೊಂಡ ಉತ್ತಮ ಐ.ಒ.ಟಿ ಪೆಟ್ ಉತ್ತನ್ನ ಎಂದು ಹೇಳಬಹುದು. ಈ ಉತ್ಪನ್ನದಿಂದ ಗ್ರಾಹಕರು ತಮ್ಮ ನಾಯಿಯ ಚಟುವಟಿಕೆಗಳನ್ನು ಮಾಪಕ ಮಾಡಬಹುದು, ಅದು ಸರಿಯಾಗಿ ನಿದ್ರೆ ಮಾಡಿದ ಅವಧಿಯೆಷ್ಟು ಎಂದು ತಿಳಿಯಬಹುದು. ಇದನ್ನು ನಿಮ್ಮ ಫಿಟ್ ಬಿಟ್ ಖಾತೆಗೆ ಜೋಡಿಸಿಕೊಂಡು ಮಾಹಿತಿಯನ್ನು ವೀಕ್ಷಿಸಬಹುದು.

ಐ.ಒ.ಟಿ ಇರುವ ಸ್ಮಾರ್ಟ್ ಹಾಸಿಗೆ.

ಐ.ಒ.ಟಿ ಇರುವ ಸ್ಮಾರ್ಟ್ ಹಾಸಿಗೆ.

ನಿಮ್ಮ ನಿದ್ರೆ ಮತ್ತು ನಿಮ್ಮ ದೇಹದ ಬಗ್ಗೆ ಮಾಹಿತಿ ಕೊಡುವ ಸ್ಮಾರ್ಟ್ ಹಾಸಿಗೆಯೊಂದು ನಿಮ್ಮ ಕೋಣೆಯಲ್ಲಿದ್ದರೆ ಹೇಗೆ? ಸೆಲೆಕ್ಟ್ ಕಂಫರ್ಟ್ 2016ರಲ್ಲಿ ಸ್ಲೀಪ್ ನಂಬರ್ ಐಟಿ ಬೆಡ್ ಅನ್ನು ಪರಿಚಯಿಸಿದೆ. ಈ ಹಾಸಿಗೆಯಲ್ಲಿ ಬಯೋಮೆಟ್ರಿಕ್ ಸಂವೇದಕಗಳಿವೆ, ನಿಮ್ಮ ನಿದ್ರೆಯ ಬಗೆಗಿನ ಮಾಹಿತಿಯನ್ನು ಇದು ಕಲೆಹಾಕುತ್ತದೆ. ನಿಮ್ಮ ಚಲನವಲನ, ಎದೆ ಬಡಿತ, ಉಸಿರಾಟದ ವೇಗ ಮತ್ತು ನಿದ್ರೆಯ ಸಮಯವನ್ನು ಪ್ರತಿ ಸೆಕೆಂಡಿಗೆ ನೂರಾರು ಬಾರಿ ಲೆಕ್ಕ ಹಾಕುತ್ತದೆ.

ತಮ್ಮಿಚ್ಛೆಯಂತೆ ಹಾಸಿಗೆಯನ್ನು ಮೆದುವಾಗಿಸಬಹುದು, ಗಟ್ಟಿಯಾಗಿಸಬಹುದು. ತಮ್ಮ ಮೊಬೈಲಿನಲ್ಲಿ ಸ್ಲೀಪ್ ಐ.ಕ್ಯೂ ಅನ್ನು ಇನ್ಸ್ಟಾಲ್ ಮಾಡಿಕೊಂಡು ನಿದ್ರೆಯ ಗುಣಮಟ್ಟವನ್ನು ತಿಳಿದುಕೊಳ್ಳಬಹುದು.

ಜೊತೆಗೆ ಈ ಸ್ಮಾರ್ಟ್ ಐ.ಟಿ ಹಾಸಿಗೆಯನ್ನು ಇತರೆ ಕ್ಲೌಡ್ ಸೇವೆಗಳು ಮತ್ತು ಮನೆಯಲ್ಲಿರುವ ಇತರೆ ಸ್ಮಾರ್ಟ್ ಸಾಧನಗಳ ಜೊತೆಗೂ ಸಂಪರ್ಕದಲ್ಲಿರುವಂತೆ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
We saw some amazing products in the world of IoT in 2016 and here"s what you need to know about them. Check out this list of best IoT products of 2016

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X