Subscribe to Gizbot

ಜುಕರ್‌ಬರ್ಗ್‌ನ ಈ ಫೋಟೋ ಇಂಟರ್ನೆಟ್‌ನಲ್ಲಿ ಸದ್ದುಮಾಡಿದ್ದೇಕೆ?

Written By:

ಫೇಸ್‌ಬುಕ್‌ನಂತಹ ಅತಿ ದೊಡ್ಡ ಜಾಲತಾಣ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ವ್ಯವಹಾರ, ಸಂಪರ್ಕ, ಸಾಮಾಜಿಕತೆ, ಆರ್ಥಿಕತೆ ಹೀಗೆ ಪ್ರತಿಯೊಂದು ರಂಗಗಳಲ್ಲೂ ಇಂದು ಫೇಸ್‌ಬುಕ್ ವ್ಯಾಪಿಸುತ್ತಿದೆ. ಈ ತಾಣವನ್ನೇ ಬಳಸಿಕೊಂಡು ವಿಶ್ವದಾದ್ಯಂತ ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ. ಆದ್ದರಿಂದಲೇ ಫೇಸ್‌ಬುಕ್‌ನಲ್ಲಿ ಏನು ನಡೆದರೂ ಅದು ಸುದ್ದಿಯಾಗುತ್ತದೆ ಮತ್ತು ವೈರಲ್ ಆಗಿ ಪ್ರಸಿದ್ಧತೆಯನ್ನು ಪಡೆದುಕೊಳ್ಳುತ್ತದೆ.

ಓದಿರಿ: ಫೋನ್‌ ಬ್ಯಾಟರಿ ಬಾಳಿಕೆಗಾಗಿ ಫೇಸ್‌ಬುಕ್‌ ಡಿಲೀಟ್‌ ಮಾಡಲೇಬೇಕು; 7 ಕಾರಣಗಳು

ಇಂದಿನ ಲೇಖನದಲ್ಲಿ ಫೇಸ್‌ಬುಕ್ ಸುದ್ದಿಯಾಗುತ್ತಿರುವುದು ಅದರ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ನಿಂದಾಗಿದೆ. ಜುಕರ್‌ಬರ್ಗ್‌ನ ಪೋಸ್ಟ್ ಒಂದು ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದ್ದು ಚರ್ಚಾಗ್ರಾಸವಾಗಿದೆ. ಬನ್ನಿ ಅದೇನು ಎಂಬುದನ್ನೇ ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಕ್ ಅವರ ಈ ಚಿತ್ರ

ಮಾರ್ಕ್ ಅವರ ಈ ಚಿತ್ರ

ಮಾರ್ಕ್ ಅವರ ಈ ಚಿತ್ರವನ್ನು ನೋಡುವಾಗ ಅದರಲ್ಲಿ ಹೊಸತನ ನಮಗೇನೂ ಕಂಡುಬರುವುದಿಲ್ಲ. ಆದರೂ ಇದು ಇಂಟರ್ನೆಟ್ ಸುದ್ದಿಯಾಗಿದೆ.

ಕಾಳ್ಗಿಚ್ಚು

ಕಾಳ್ಗಿಚ್ಚು

ಈ ವೈರಲ್ ಚಿತ್ರವು ಅದ್ಭುತವಾಗಿ 447,000 ಲೈಕ್‌ಗಳು ಮತ್ತು 8,000 ಶೇರ್‌ಗಳನ್ನು ಪಡೆದುಕೊಂಡಿದೆ. ಇನ್‌ಸ್ಟಾಗ್ರಾಮ್ ಔಟ್‌ಲೆಟ್ ಅನ್ನು ಹಿಡಿದುಕೊಂಡು ಮಾರ್ಕ್ ನಗುತ್ತಿರುವ ಈ ಫೋಟೋ ಇಷ್ಟೊಂದು ಕಾಳ್ಗಿಚ್ಚು ಉಂಟುಮಾಡಲು ಇದರ ಹಿಂದಿರುವ ಕಾರಣವಾದರೂ ಏನು?

ರಹಸ್ಯ

ರಹಸ್ಯ

ನೀವು ಈ ಚಿತ್ರವನ್ನು ಇನ್ನಷ್ಟು ಹತ್ತಿರದಲ್ಲಿ ನೋಡಿದಾಗ ನಿಮಗಿದರ ಹಿಂದಿರುವ ರಹಸ್ಯದ ಅರಿವಾಗುತ್ತದೆ. ಮಾರ್ಕ್‌ನ ಹಿಂಭಾಗದಲ್ಲಿರುವ ಲ್ಯಾಪ್‌ಟಾಪ್‌ನಿಂದಲೇ ಈ ಚಿತ್ರ ಇಷ್ಟೊಂದು ಸುದ್ದಿಯಾಗುತ್ತಿರುವುದು.

ಹದ್ದಿನ ಕಣ್ಣು

ಹದ್ದಿನ ಕಣ್ಣು

ವೆಬ್ ಜಗತ್ತಿನಲ್ಲಿ ಹದ್ದಿನ ಕಣ್ಣು ಇದ್ದು ಫೋಟೋದಲ್ಲಿರುವ ರಹಸ್ಯವನ್ನು ಪತ್ತೆಮಾಡಿದೆ. ಜುಕರ್ ಬರ್ಗ್‌ನ ಮೈಕ್ರೋಫೋನ್ ಜ್ಯಾಕ್ ಮತ್ತು ಲ್ಯಾಪ್‌ಟಾಪ್ ಕ್ಯಾಮೆರಾಗೆ ಸಣ್ಣ ಟೇಪ್ ಒಂದನ್ನು ಅಂಟಿಸಲಾಗಿದೆ.

ಟ್ವಿಟ್ಟರ್ ಕಾಮೆಂಟ್

ಟ್ವಿಟ್ಟರ್ ಬಳಕೆದಾರರೊಬ್ಬರು ಈ ಫೋಟೋಗೆ ನೀಡಿರುವ ಕಾಮೆಂಟ್ ಅನ್ನು ನಿಮಗಿಲ್ಲಿ ಗಮನಿಸಬಹುದಾಗಿದೆ

ಪ್ರಗತಿ

ಪ್ರಗತಿ

ಫೇಸ್‌ಬುಕ್ ತನ್ನ ಸುರಕ್ಷತಾ ವಿಷಯಗಳಲ್ಲಿ ಇನ್ನೂ ಪ್ರಗತಿಯನ್ನು ಕಾಣಬೇಕಾಗಿದ್ದು ಭದ್ರತಾ ವಿಷಯದಲ್ಲಿ ಇದು ಮುಗ್ಗರಿಸಿದೆ ಎಂದಾಗಿದೆ.

ಎಚ್ಚರಿಕೆ

ಎಚ್ಚರಿಕೆ

ಮಾರ್ಕ್ ಅವರೇ ತಮ್ಮ ಫೋಟೋ ಪೋಸ್ಟ್ ಮಾಡುತ್ತಿರುವಾಗ ಇಷ್ಟೊಂದು ಕಾಳಜಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದಾದಾಗ ಜನ ಸಾಮಾನ್ಯರು ಫೇಸ್‌ಬುಕ್ ಬಳಸುವಾಗ ಎಷ್ಟೊಂದು ಎಚ್ಚರಿಕೆಯನ್ನು ವಹಿಸಬೇಕು ಎಂಬುದು ಇಲ್ಲಿ ಚರ್ಚೆಗೆ ಪಾತ್ರವಾಗಿರುವುದು.

ಫೇಸ್‌ಬುಕ್ ಫ್ಯಾನ್ಸ್ ಅಭಿಪ್ರಾಯ

ಫೇಸ್‌ಬುಕ್ ಫ್ಯಾನ್ಸ್ ಅಭಿಪ್ರಾಯ

ಮಾರ್ಕ್ ಕೂಡ ಟೇಪ್ ಅನ್ನು ಅಂಟಿಸಿ ತಮ್ಮ ಗೌಪ್ಯ ವಸ್ತುಗಳನ್ನು ಬಚ್ಚಿಟ್ಟುಕೊಂಡಿರುವುದು ಅಷ್ಟೊಂದು ಒಳಿತಾದುದಲ್ಲ ಎಂಬುದು ಫೇಸ್‌ಬುಕ್ ಫ್ಯಾನ್ಸ್ ಅಭಿಪ್ರಾಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
the viral picture, which has amassed over 447,000 likes and 8,000 shares, features a smiling Zuckerberg holding an Instagram cutout and explaining the great success the platform has seen over the past two years in his caption.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot