ತಂದೆಯ ಕಿಡ್ನಿ ಕಸಿಗಾಗಿ ಇಂಟರ್ನೆಟ್ ಬಳಸಿಕೊಂಡ ಜಾಣ ಬಾಲಕ

By Shwetha
|

ಸಕ್ಸೆಸ್ ಕಿಡ್ ಮೆಮೆ ಕುರಿತು ನೀವು ಕೇಳಿರಬಹುದು ಅಲ್ಲವೇ? ಈ ಮೆಮೆಯ ಹಿಂದೆ ಒಂದು ಸಾಹಸಮಯ ಕರುಣಾಮಯ ಕಥೆಯೇ ಇದೆ. ಈ ಮೆಮೆಯಲ್ಲಿ ಬಳಸಲಾದ ಮಗುವು ತನ್ನ ತಂದೆ ಕಿಡ್ನಿ ಚಿಕಿತ್ಸೆಗಾಗಿ ಬೇಕಾದ ಹಣವನ್ನು ಒಟ್ಟುಗೂಡಿಸಲು ಸಹಾಯ ಮಾಡಿದೆ ಅದೂ ಕೂಡ ತನ್ನ ಫೋಟೋವನ್ನು ವೈರಲ್ ಆಗಿಸುವುದರ ಮೂಲಕ.

ಹೀಗೆ ಕಷ್ಟ ಬಂದಾಗ ವೆಂಕಟರಮಣ ಎಂದೆನ್ನದೇ ನಮ್ಮ ಕಷ್ಟಗಳನ್ನು ಆ ಭಗವಂತ ನೀಡಿದ ಬುದ್ಧಿವಂತಿಕೆಯನ್ನು ಬಳಸಿಕೊಂಡು ನಿವಾರಿಸಿಕೊಳ್ಳಬೇಕು ಎಂಬುದಕ್ಕೆ ಈ ಬಾಲಕ ಶ್ರೇಷ್ಟ ಉದಾಹರಣೆಯಾಗಿದ್ದಾನೆ.

#1

#1

ಸಕ್ಸೆಸ್ ಕಿಡ್ $100,000 ಹಣವನ್ನು ಸಂಗ್ರಹಿಸಿದ್ದು ಕ್ರೌಡ್ ಫಂಡಿಂಗ್ ಕ್ಯಾಂಪೇನ್ ವಿಧಾನವನ್ನು ಇದಕ್ಕಾಗಿ ಅಳವಡಿಸಲಾಗಿತ್ತು. ತನ್ನ ತಂದೆಯ ಕಿಟ್ನಿ ಕಸಿ ಚಿಕಿತ್ಸೆಗಾಗಿ ಈ ಹಣವನ್ನು ಮಗು ಒಟ್ಟುಮಾಡಿದೆ.

#2

#2

ಈ ಹುಡುಗನ ತಂದೆ ಗ್ರಿನ್ನರ್ ತಮ್ಮ 39 ರ ಹರೆಯದಲ್ಲಿ ಅಸ್ವಸ್ಥರಾದರು ಕಿಡ್ನಿ ವೈಫಲ್ಯಕ್ಕೆ 2009 ಲ್ಲಿ ಈಡಾದರು. ಅವರಿಗೆ ಡಯಾಲಿಸೀಸ್ ಮಾಡಬೇಕು ಎಂಬುದಾಗಿ ವೈದ್ಯರು ಸೂಚಿಸಿದ್ದರು.

#3

#3

ಕುಟುಂಬವು ಗಾಟ್‌ಫಂಡ್ ಮಿ ಕ್ಯಾಂಪೇನ್ ಅನ್ನು ಕಳೆದ ವಾರ ಆಯೋಜಿಸಿ ಕಿಡ್ನಿ ಕಸಿಗಾಗಿ ಹಣವನ್ನು ಒಟ್ಟುಮಾಡಿತು ಹಾಗೂ ಚಿಕಿತ್ಸೆಗೆ ಬೇಕಾಗಿದ್ದ $75,000 ಗಿಂತ ಅಧಿಕ ಹಣವನ್ನೇ ಒಟ್ಟುಮಾಡಿದೆ.

#4

#4

ಈ ಹುಡುಗನ ಹೆಸರು ಸಾಮ್ ಗ್ರಿನ್ನರ್ ಆಗಿದ್ದು 2007 ರಲ್ಲಿ ಈತ ಜನಪ್ರಿಯತೆಯನ್ನು ಪಡೆದುಕೊಂಡ. ಈಗ ಈ ಬಾಲಕನ ವಯಸ್ಸು ಎಂಟು ವರ್ಷಗಳಾಗಿವೆ.

#5

#5

ಸಾಮ್‌ನ ತಾಯಿ ಗೋಫಂಡ್‌ಮೀ ಪುಟವನ್ನು ರಚಿಸಿದ್ದು ತನ್ನ ಪತಿಯ ಚಿಕಿತ್ಸೆಯ ವೆಚ್ಚವನ್ನು ಭರಿಸುವ ಉದ್ದೇಶವನ್ನು ಆಕೆ ಹೊಂದಿದ್ದರು. ಕಿಡ್ನಿ ಕಸಿಯೊಂದೇ ಆಕೆಯ ಪತಿಯನ್ನು ಬದುಕಿಸುವ ಒಂದೇ ಮಾರ್ಗವಾಗಿದ್ದು ಆಕೆಯ ತಾಯಿ ಕೂಡ ಇದರಿಂದಲೇ ಮರಣವನ್ನಪ್ಪಿದ್ದರು.

#6

#6

ಇಂಟರ್ನೆಟ್ ಅಪಾರ ಶಕ್ತಿಯನ್ನು ಪಡೆದುಕೊಂಡಿದ್ದು ಇದನ್ನು ಬಳಸಿಕೊಳ್ಳುವ ಜಾಣ್ಮೆ ನಮ್ಮಲ್ಲಿದ್ದರೆ ನಮಗೆ ಖಂಡಿತ ಇದು ಸಹಕಾರಿಯಾಗಲಿದೆ ಎಂಬುದು ಲ್ಯಾನಿ ಮಾತಾಗಿದೆ.

#7

#7

ಸಕ್ಸೆಸ್ ಕಿಡ್ ಫೋಟೋವನ್ನು ತೆಗೆದವರು ಈತನ ತಾಯಿ ಲ್ಯಾನಿ ಗ್ರಿನ್ನರ್ ಆಗಿದ್ದಾರೆ. ಆಗ ಸಾಮ್ ಗ್ರಿನ್ನರ್ 11 ತಿಂಗಳ ಮಗುವಾಗಿದ್ದ. ಈ ಫೋಟೋ ತೆಗೆದು ಅದನ್ನು ಆಕೆ ತನ್ನ ವೈಯಕ್ತಿಕ ಫ್ಲಿಕ್ಕರ್ ಖಾತೆಗೆ ಹಾಕಿದ್ದರು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಭೂಮಿಯ ಮೇಲೆ ಜನ್ಮತಾಳಿರುವ ಮತ್ತೊಂದು ಮಂಗಳ ಗ್ರಹ</a><br /><a href=ಐಫೋನ್‌ನಲ್ಲಿ 'ಫೈಲ್‌ ಮ್ಯಾನೇಜರ್‌' ಪಡೆಯುವುದು ಹೇಗೆ?
ಹೊಸ ಸುದ್ದಿ! ವೈಫೈಗಿನ್ನು ಕಡಿಮೆ ವಿದ್ಯುತ್ ಸಾಕಂತೆ
ಬರೇ 2 ನಿಮಿಷಗಳಲ್ಲಿ ಫೋನ್ ಮೆಮೊರಿಯನ್ನು ಹೆಚ್ಚಿಸುವುದು ಹೇಗೆ?" title="ಭೂಮಿಯ ಮೇಲೆ ಜನ್ಮತಾಳಿರುವ ಮತ್ತೊಂದು ಮಂಗಳ ಗ್ರಹ
ಐಫೋನ್‌ನಲ್ಲಿ 'ಫೈಲ್‌ ಮ್ಯಾನೇಜರ್‌' ಪಡೆಯುವುದು ಹೇಗೆ?
ಹೊಸ ಸುದ್ದಿ! ವೈಫೈಗಿನ್ನು ಕಡಿಮೆ ವಿದ್ಯುತ್ ಸಾಕಂತೆ
ಬರೇ 2 ನಿಮಿಷಗಳಲ್ಲಿ ಫೋನ್ ಮೆಮೊರಿಯನ್ನು ಹೆಚ್ಚಿಸುವುದು ಹೇಗೆ?" />ಭೂಮಿಯ ಮೇಲೆ ಜನ್ಮತಾಳಿರುವ ಮತ್ತೊಂದು ಮಂಗಳ ಗ್ರಹ
ಐಫೋನ್‌ನಲ್ಲಿ 'ಫೈಲ್‌ ಮ್ಯಾನೇಜರ್‌' ಪಡೆಯುವುದು ಹೇಗೆ?
ಹೊಸ ಸುದ್ದಿ! ವೈಫೈಗಿನ್ನು ಕಡಿಮೆ ವಿದ್ಯುತ್ ಸಾಕಂತೆ
ಬರೇ 2 ನಿಮಿಷಗಳಲ್ಲಿ ಫೋನ್ ಮೆಮೊರಿಯನ್ನು ಹೆಚ್ಚಿಸುವುದು ಹೇಗೆ?

Best Mobiles in India

English summary
Justin Griner, father of the child who shot to internet fame as the "Success Kid" meme, has raised nearly $100,000 through a crowdfunding campaign to pay for a kidney transplant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X