Subscribe to Gizbot

ಭಾರತದಲ್ಲಿ ನಾವು ನೋಡಬಯಸುವ ಆಕರ್ಷಕ - ವಿಕ್ಷಿಪ್ತ ಉತ್ಪಾದನೆಗಳು.

Written By:

2016ರಲ್ಲಿ ಹಲವಾರು ಹೊಸ ರೀತಿಯ ಉತ್ಪನ್ನಗಳನ್ನು ಕಂಡೆವು, ಅಚ್ಚರಿ ಮೂಡಿಸುವ ಉತ್ಪನ್ನಗಳ ಸೃಷ್ಟಿಗೆ ಈ ವರುಷ ಸಾಕ್ಷಿಯಾಯಿತು. ಸ್ಮಾರ್ಟ್ ಫೋನುಗಳ ಎಲ್ಲಾ ಸಮಯದಲ್ಲೂ ತನ್ನ ಜನಪ್ರಿಯತೆಯನ್ನು ಕಾಪಿಟ್ಟುಕೊಂಡವು, ಅವುಗಳ ಜೊತೆಗೆ ತಂತ್ರಜ್ಞಾನ ದೈತ್ಯರು ಮತ್ತು ಹಲವಾರು ಹೊಸ ಕಂಪನಿಗಳು ಹೊಚ್ಚ ಹೊಸ ಮಾದರಿಯ ಹೈಬ್ರಿಡ್ ಮಿಷೀನುಗಳನ್ನು, ಡಿ.ಎಸ್.ಎಲ್.ಆರ್ ಗಳನ್ನು, ಸ್ಮಾರ್ಟ್ ವಾಚುಗಳನ್ನು ಮತ್ತು ಮನೆಯ ವಸ್ತುಗಳನ್ನು ತಯಾರಿಸಿದವು.

ಭಾರತದಲ್ಲಿ ನಾವು ನೋಡಬಯಸುವ ಆಕರ್ಷಕ - ವಿಕ್ಷಿಪ್ತ ಉತ್ಪಾದನೆಗಳು.

ಹಾಗಿದ್ಯೂ ಹಲವಾರು ಉತ್ಪನ್ನಗಳು ಭಾರತಕ್ಕೆ ಕಾಲಿಡಲಿಲ್ಲ. 2016ರಲ್ಲಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾದ ಆದರೆ ಭಾರತಕ್ಕೆ ಬರದ ಹಲವು ಉತ್ಪನ್ನಗಳ ಪಟ್ಟಿಯನ್ನು ಇಲ್ಲಿ ಮಾಡಿದ್ದೇವೆ. 2017ರ ಮೊದಲರ್ಧದಲ್ಲಿ ಈ ಉತ್ಪನ್ನಗಳು ಭಾರತಕ್ಕೆ ಲಗ್ಗೆ ಇಡುವ ನಿರೀಕ್ಷೆಯಿದೆ!

ಓದಿರಿ: ಫ್ಲಿಪ್‌ಕಾರ್ಟ್‌ನ ಏಕ್ಸ್‌ಚೇಂಜ್ ಆಫರ್‌ನಲ್ಲಿ ರೂ. 9,999ಕ್ಕೆ ಆಪಲ್ ಐಫೋನ್ 6

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ವೈಐ 4ಕೆ ಆ್ಯಕ್ಷನ್ ಕ್ಯಾಮೆರಾ 2.

ಶಿಯೋಮಿ ವೈಐ 4ಕೆ ಆ್ಯಕ್ಷನ್ ಕ್ಯಾಮೆರಾ 2.

ಶಿಯೋಮಿ ತನ್ನ ವೈಐ 4ಕೆ ಆ್ಯಕ್ಷನ್ ಕ್ಯಾಮೆರಾ 2 ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಬೇಕು. ಫೋಟೋಗ್ರಫಿ ಬಗ್ಗೆ ಆಸಕ್ತಿಯಿರುವವರೆಲ್ಲರೂ ಇದನ್ನು ಹೊಂದಿರಲೇಬೇಕು. ಶಿಯೋಮಿ ಹೊಸ ವೈಐ 4ಕೆ ಆ್ಯಕ್ಷನ್ ಕ್ಯಾಮೆರಾ 2ನಲ್ಲಿ 4ಕೆ ವೀಡಿಯೋಗಳನ್ನು 30 ಎಫ್.ಪಿ.ಎಸ್ ವೇಗದಲ್ಲಿ ತೆಗೆಯಬಹುದು, ಫುಲ್ ಹೆಚ್.ಡಿ ವೀಡಿಯೋಗಳನ್ನು 120ಎಫ್.ಪಿ.ಎಸ್ ನಲ್ಲಿ ಹಾಗೂ ಹೆಚ್.ಡಿ ವೀಡಿಯೋಗಳನ್ನು 240ಎಫ್.ಪಿ.ಎಸ್ ನಲ್ಲಿ ತೆಗೆಯಬಹುದು.

ಈ ವೈಐ 4ಕೆ ಆ್ಯಕ್ಷನ್ ಕ್ಯಾಮೆರಾ 2 ನಲ್ಲಿ ಸೋನಿಯ 12 ಮೆಗಾಪಿಕ್ಸೆಲ್ಲಿನ ಸಂವೇದಕವಿದೆ, 160 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಇದೆ. ಇದರಲ್ಲಿ ಅಂಬರೆಲ್ಲಾ ಎ9 ಚಿಪ್ ಇದೆ, ಗೋಪ್ರೋ ಹೀರೊ 4ಕ್ಯಾಮೆರಾದಲ್ಲೂ ಕೂಡ ಇದೇ ಚಿಪ್ ಸೆಟ್ ಇದೆ.

ಹಾನರ್ ಮ್ಯಾಜಿಕ್ ಸ್ಮಾರ್ಟ್ ಫೋನ್.

ಹಾನರ್ ಮ್ಯಾಜಿಕ್ ಸ್ಮಾರ್ಟ್ ಫೋನ್.

ಚೀನಾದ ಟೆಕ್ ದೈತ್ಯ ಹುವಾಯಿ ಇತ್ತೀಚೆಗೆ ತನ್ನ ಉಪ ಉತ್ಪನ್ನದ ಮೂರನೇ ವಾರ್ಷಿಕೋತ್ಸವವನನ್ಉ ಆಚರಿಸಿತು, ಚೀನಾದಲ್ಲಿ ಹಾನರ್ ಮ್ಯಾಜಿಕ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆಗೊಳಿಸಿತು. ಈ ಸ್ಮಾರ್ಟ್ ಫೋನಿನಲ್ಲಿ ಉತ್ತಮ ವಿಶೇಷತೆಗಳಿವೆ, ಕಣ್ಸೆಳೆಯುವ ವಿನ್ಯಾಸವಿದೆ, ಉತ್ತಮ ತಂತ್ರಾಂಶವಿದೆ.

ಹಾನರ್ ಮ್ಯಾಜಿಕ್ ಸ್ಮಾರ್ಟ್ ಫೋನಿನ ಪ್ರಮುಖ ವಿಶೇಷತೆಯೆಂದರೆ ಇದರಲ್ಲಿರುವ ಸ್ಮಾರ್ಟ್ ಡಿಜಿಟಲ್ ಅಸಿಸ್ಟೆಂಟ್, ಒಟ್ಟಾರೆ ಅನುಭವವನ್ನು ಇದು ಹೆಚ್ಚಿಸುತ್ತದೆ. ಮ್ಯಾಜಿಕ್ ಲೈವ್ ಸಿಸ್ಟಮ್ ಎಂದು ಕರೆಯಲಾಗುವ ಈ ತಂತ್ರಜ್ಞಾನವು ಮೊಬೈಲ್ ಮಾಲೀಕನ ಬಳಸುವಿಕೆಯ ಮಾದರಿಯನ್ನು ಸಂಗ್ರಹಿಸಿ, ಗೂಗಲ್ ನೌನಂತೆಯೇ ಮಾಹಿತಿಗಳನ್ನು ನೀಡುತ್ತದೆ, ಟ್ರಾಫಿಕ್ ದಟ್ಟಣೆ ಮತ್ತು ಇನ್ನೂ ಅನೇಕ ಉಪಯುಕ್ತ ಮಾಹಿತಿಯನ್ನು ಕೊಡುತ್ತದೆ. ಬಳಕೆದಾರರು ಮೆಸೇಜಿಂಗ್ ತಂತ್ರಾಂಶದ ಮೂಲಕ ನಡೆಸುವ ಅನೇಕ ಮಾತುಕತೆಗಳ ಆಧಾರದಲ್ಲೂ ಹಲವು ಸಲಹೆಗಳನ್ನು ನೀಡುತ್ತದೆ. ಈ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ದಿನಾಂಕದ ಬಗ್ಗೆ ಹುವಾಯಿ ಇದುವರೆಗೂ ಏನನ್ನೂ ಹೇಳಿಲ್ಲ, ಇದು ಭಾರತಕ್ಕೆ ಬರಬೇಕು ಎನ್ನುವುದು ನಮ್ಮ ಆಶಯ.

ಕನ್ನಡಕ ಬೇಡದ 3ಡಿ ಟಿವಿ - ಅಲ್ಟ್ರಾ ಡಿ.

ಕನ್ನಡಕ ಬೇಡದ 3ಡಿ ಟಿವಿ - ಅಲ್ಟ್ರಾ ಡಿ.

ದೊಡ್ಡ ಪರದೆಯಲ್ಲಿ 3ಡಿ ಚಿತ್ರಗಳನ್ನು ನೊಡುವುದಕ್ಕೆ ನಮಗೆಲ್ಲರಿಗೂ ಇಷ್ಟವಿದೆ. ಆದರೆ 3ಡಿ ಕನ್ನಡಕ ಉಪಯೋಗಿಸಿದಾಗ ತಲೆ ನೋವು ಬರುವುದೂ ಹೌದು. 3ಡಿ ಕನ್ನಡಕವಿಲ್ಲದೇ 3ಡಿ ಚಿತ್ರಗಳನ್ನು ನೋಡಬಹುದಾದಂತಹ ಟಿವಿಯೊಂದು ಮಾರುಕಟ್ಟೆಯಲ್ಲಿದೆ ಎಂದರೆ ನಂಬುವಿರಾ? ಹೌದು. ಇದು ಸತ್ಯ. ನಾವೇಳುತ್ತಿರುವುದು ಸ್ಟ್ರೀಮ್ ಟಿವಿ ನೆಟ್ ವರ್ಕಿನ ಹೊಸ 3ಡಿ ಟಿವಿ ಬಗ್ಗೆ, ಇದರಲ್ಲಿ 4ಕೆ ಗ್ಲಾಸಸ್ ಫ್ರೀ 3ಡಿ ಪ್ಯಾನೆಲ್ ಇದೆ. ಇದನ್ನು ಸಿ.ಇ.ಎಸ್ 2016ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಇದನ್ನು ಸದ್ಯ ಪೆಗಾಟ್ರಾನ್ ಉತ್ಪಾದಿಸುತ್ತಿದೆ.

ಶಿಯೋಮಿ ಎಂಐ ಮಿಕ್ಸ್.

ಶಿಯೋಮಿ ಎಂಐ ಮಿಕ್ಸ್.

ಅಕ್ಟೋಬರ್ 2016ರಲ್ಲಿ ಶಿಯೋಮಿ ಎಂಐ ಮಿಕ್ಸ್ ಸ್ಮಾರ್ಟ್ ಫೋನ್ ಅನ್ನು ಚೀನಾದಲ್ಲಿ ಪರಿಚಯಿಸಿತು. ಶಿಯೋಮಿ ಎಂಐ ಮಿಕ್ಸ್ ನ ವಿಶೇಷತೆಯೆಂದರೆ ಬೆಜೆಲ್ ಲೆಸ್ ಪರದೆ ಮತ್ತು ಮೇಲ್ಭಾಗದಲ್ಲಿನ ಕರ್ವ್ಡ್ ಎಡ್ಜಸ್. ಈ ಮೊಬೈಲಿನಲ್ಲಿ 91.3 ಪರ್ಸೆಂಟ್ ಸ್ಕ್ರೀನ್ ಟು ಬಾಡಿ ರೇಷಿಯೋ ಇದೆ! 6.4 ಇಂಚಿನ ಪರದೆಯಿದೆ ಮತ್ತು 2040 x 1080 ಪಿಕ್ಸೆಲ್ ರೆಸೊಲ್ಯೂಷನ್ ಇದೆ. ಸೆರಾಮಿಕ್ ದೇಹ, ಪ್ಯೀಜೋ ಎಲೆಕ್ಟ್ರಿಕೆ ಅಕಾಸ್ಟಿಕ್ ಸೆರಾಮಿಕ್ ಹಿಯರ್ ಪೀಸ್ ಸ್ಪೀಕರ್, ಅಲ್ಟ್ರಾಸೋನಿಕ್ ಪ್ರಾಕ್ಸಿಮಿಟಿ ಸಂವೇದಕ ಮತ್ತು ಚಿಕ್ಕ ಮುಂಬದಿಯ ಕ್ಯಾಮೆರಾ ಮಾಡ್ಯೂಲ್ ಇದರಲ್ಲಿದೆ.

ಈ ಉತ್ಪನ್ನವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಿಲ್ಲ ಎಂದು ಶಿಯೋಮಿ ಸ್ಪಷ್ಟಪಡಿಸಿಬಿಟ್ಟಿತು, ಅದಕ್ಕೆ ಕೊಟ್ಟ ಕಾರಣ ಎರಡೆರಡು ಫ್ಲಾಗ್ ಶಿಪ್ ಸ್ಮಾರ್ಟ್ ಫೋನುಗಳನ್ನು ಬಿಡಲಿರುವ ಸಂಕಷ್ಟ. ಹಾಗಿದ್ರೂ, ಶಿಯೋಮಿಯ ಗ್ಲೋಬಲ್ ಆಪರೇಷನ್ಸಿನ ಉಪಾಧ್ಯಕ್ಷ ಹುಗೊ ಬರ್ರಾ ಈ ತೀರ್ಮಾನ ಮುಂದಿನ ವರ್ಷ ಬದಲಾಗಬಹುದು ಎಂದಿದ್ದರು. ಶಿಯೋಮಿ ಎಂಐ ಮಿಕ್ಸ್ ಅಥವಾ ಕೊಂಚ ಬದಲಾದ ಆವೃತ್ತಿಯನ್ನು ನಾವು 2017 ಮೊದಲ ಭಾಗದಲ್ಲಿ ಭಾರತದಲ್ಲಿ ಕಾಣಬಹುದು.

ಕೊಡ್ಯಾಕ್ 360 ಡಿಗ್ರಿ ಕ್ಯಾಮೆರ.

ಕೊಡ್ಯಾಕ್ 360 ಡಿಗ್ರಿ ಕ್ಯಾಮೆರ.

ಸಿ.ಇ.ಎಸ್ 2016ರಲ್ಲಿ ಕೊಡ್ಯಾಕ್ ತನ್ನ ಹೊಸ ಪಿಕ್ಸ್ ಪ್ರೊ ಆ್ಯಕ್ಷನ್ ಕ್ಯಾಮೆರಾ ಎಸ್.ಪಿ 360 4ಕೆ ಅನ್ನು ಪರಿಚಯಿಸಿತು. ಕ್ಯೂಬ್ ಆಕಾರದ ಈ ಆ್ಯಕ್ಷನ್ ಕ್ಯಾಮೆರಾದ ವಿಶೇಷತೆಯೆಂದರೆ ಇದರಲ್ಲಿ 360 ಡಿಗ್ರಿ ಹತ್ತಿರದ ವೀಡಿಯೋ ಅನ್ನು ಒಂದನ್ನುಪಯೋಗಿಸಿ ಚಿತ್ರೀಕರಿಸಬಹುದು, ಪೂರ್ತಿ 360 ಡಿಗ್ರಿ ವೀಡಿಯೋ ಚಿತ್ರೀಕರಿಸಲು ಎರಡು ಕ್ಯಾಮೆರಾಗಳನ್ನು ಉಪಯೋಗಿಸಬೇಕು. 12.4 ಮೆಗಾಪಿಕ್ಸೆಲ್ಲಿನ ಸಿ.ಎಮ್.ಒ.ಎಸ್ ಸಂವೇದಕವಿರುವ ಕ್ಯಾಮೆರಾದಿಂದ ವೀಡಿಯೋ ಚಿತ್ರಿಸಬಹುದು, ಫೋಟೋ ತೆಗೆಯಬಹುದು. ಜೊತೆಗೆ ಇದರಲ್ಲಿ ವೈಫೈ, ಎನ್.ಎಫ್.ಸಿ, 235 ಡಿಗ್ರಿ ವ್ಯೀವ್ ಲೆನ್ಸ್, 128 ಜಿಬಿ ಮೈಕ್ರೋ ಎಸ್.ಡಿ ಕಾರ್ಡ್ ಸೌಲಭ್ಯಗಳಿವೆ.

ಜೊತೆಗೆ ಈ ಕ್ಯಾಮೆರಾ ಧೂಳು - ಜಲ ನಿರೋಧಕ, ಶಾಕ್ ನಿರೋಧಕ ಮತ್ತು ಫ್ರೀಜ್ ಪ್ರೂಫ್ ಕೂಡ ಆಗಿದೆ. ಇಂತಹ ಉತ್ತಮ ಆ್ಯಕ್ಷನ್ ಕ್ಯಾಮೆರಾ ಭಾರತಕ್ಕೆ ಬರಬೇಕು ಎನ್ನುವುದು ನಮ್ಮಿಚ್ಛೆ.

ಬ್ಯಾಟರಿ ಆಧಾರಿತ ಶಿಯೋಮಿ ಕ್ಯೂಐ ಸೈಕಲ್.

ಬ್ಯಾಟರಿ ಆಧಾರಿತ ಶಿಯೋಮಿ ಕ್ಯೂಐ ಸೈಕಲ್.

ಭಾರತದಲ್ಲಿ ನಾವು ನೋಡಬಯಸುವ ಮತ್ತೊಂದು ಉತ್ಪನ್ನವೆಂದರೆ ಶಿಯೋಮಿಯ ಕ್ಯೂಐ ಸೈಕಲ್. ಇದು ಕಂಪನಿಯ ಮೊದಲ ಎಲೆಕ್ಟ್ರಿಕ್ ಬೈಸಿಕಲ್, ಇದರ ಬೆಲೆ 2,999 ಸಿ.ಎನ್.ವೈ; ಅಂದಾಜು 30,000 ರುಪಾಯಿಗಳು. ಇದರ ತೂಕ ಕೇವಲ 7 ಕೆಜಿ! ಕಾರ್ಬನ್ ಫೈಬರ್ ಬಾಡಿ, ಹಲವಾರು ಸಂವೇದಕಗಳು ಇದರಲ್ಲಿದೆ. 250ವ್ಯಾಟ್ 36ವೋಲ್ಟ್ ಎಲೆಕ್ಟ್ರಿಕ್ ಮೋಟಾರ್ ಇದರಲ್ಲಿದೆ, ಬಳಕೆದಾರರ ತುಳಿಯುವ ಶಕ್ತಿಯನ್ನು ಬೆಂಬಲಿಸಲು ಟಾರ್ಕ್ ಮೆಶರ್ಮೆಂಟ್ ಪದ್ಧತಿ ಇದರಲ್ಲಿದೆ.

ಬ್ಯಾಟರಿ ಆಧಾರಿತ ಸೈಕಲ್ ಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಲ್ಲ, ಸರಿಯಾದ ಬೆಲೆಯೊಂದಿಗೆ ಬಂದರೆ ಶಿಯೋಮಿಯ ಈ ಉತ್ಪನ್ನು ಉತ್ತಮ ಮಾರುಕಟ್ಟೆಯನ್ನು ನಿರ್ಮಿಸಿಕೊಳ್ಳಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿನೊವೊ ಫ್ಯಾಬ್ 2 ಪ್ರೊ ಟ್ಯಾಂಗೋ ಸ್ಮಾರ್ಟ್ ಫೋನ್.

ಲಿನೊವೊ ಫ್ಯಾಬ್ 2 ಪ್ರೊ ಟ್ಯಾಂಗೋ ಸ್ಮಾರ್ಟ್ ಫೋನ್.

ಕೊನೆಯದಾಗಿ, ಲಿನೊವೊ ಫ್ಯಾಬ್ 2 ಪ್ರೊ ಟ್ಯಾಂಗೋ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ನಾವು ನಿರೀಕ್ಷಿಸುತ್ತಿದ್ದೀವಿ. ಇದು ಗೂಗಲ್ ನ ಟ್ಯಾಂಗೋ ಮಾದರಿಯನ್ನು ಆಧರಿಸಿದೆ. ಇದು ಮೊಬೈಲ್ ತಂತ್ರಜ್ಞಾನದಲ್ಲಿ ಗೂಗಲ್ಲಿನ ವಿಕ್ಷಿಪ್ತ ಉತ್ಪನ್ನ. ಗೂಗಲ್ ಹೇಳುವಂತೆ, ಟ್ಯಾಂಗೋದಿಂದ ನೀವು ಹೆಚ್ಚಿನ ಪ್ರಪಂಚವನ್ನು ಕಾಣಬಹುದು. ಟ್ಯಾಂಗೋ ಆಧಾರಿತ ಸಾಧನವನ್ನು ಎತ್ತಿ ಹಿಡಿದರೆ, ನಿಮ್ಮ ಸುತ್ತಲೂ ಮಾಹಿತಿ ಚಿತ್ರಗಳು ಮೂಡುವುದನ್ನು ನೀವು ನೋಡಬಹುದು.

ಭಾರತದಲ್ಲಿ 2016ರ ಡಿಸೆಂಬರ್ ನಲ್ಲಿ ಇದು ಬಿಡುಗಡೆಗೊಳ್ಳಬೇಕಿತ್ತು ಆದರೆ ಬಿಡುಗಡೆ ದಿನಾಂಕದ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿಯಿಲ್ಲ. 2017ರ ಮೊದಲ ಭಾಗದಲ್ಲಿ ಇದು ಭಾರತಕ್ಕೆ ಬರಬಹುದು ಎನ್ನುವುದು ನಮ್ಮ ನಿರೀಕ್ಷೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you eat breathe and live technology then this is the right place to find out what the world got in 2016 in the fascinating world of technology
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot