Subscribe to Gizbot

ಫೇಸ್‌ಬುಕ್ ಕಂಪೆನಿ ಖರೀದಿಗಾಗಿ ಹಂಬಲಿಸಿದ ಟಾಪ್ ಕಂಪೆನಿಗಳು

Written By:

ಫೇಸ್‌ಬುಕ್ ಎಂಬ ದೈತ್ಯ ಟೆಕ್ ತಾಣದ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ? ಹಿರಿಕಿರಿಯರಾದಿಯಾಗಿ ಎಲ್ಲರೂ ಫೇಸ್‌ಬುಕ್ ಹಿಂಬಾಲಕರೇ? ಬರಿಯ ಖಾತೆ ತೆರೆದು ಸ್ನೇಹಿತರನ್ನು ಒಗ್ಗೂಡಿಸಿ, ಮಧುರ ನೆನಪುಗಳನ್ನು ಸ್ಮರಿಸುವಂತೆ ಮಾಡುವ ಈ ತಾಣ ಜ್ಞಾನದ ವಿಷಯದಲ್ಲೂ ಹಿಂದಿಲ್ಲ. ನಮಗೆ ಗೊತ್ತಿಲ್ಲದಿರುವ ಮಾಹಿತಿಗಳನ್ನು ಹಂಚಿಕೊಳ್ಳುವುದು ಇಲ್ಲವೇ ಇನ್ನೊಬ್ಬರಿಂದ ಆ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳುವುದು ಇವೇ ಕಾರ್ಯಗಳನ್ನು ಫೇಸ್‌ಬುಕ್ ಮೂಲಕ ನಿಮಗೆ ಮಾಡಿಕೊಳ್ಳಬಹುದಾಗಿದೆ.

ಓದಿರಿ: ಫೇಸ್‌ಬುಕ್ ಹ್ಯಾಕಿಂಗ್ 10 ವಿಧಾನ

ಆದರೆ ಈ ದೈತ್ಯ ಕಂಪೆನಿಯನ್ನು ಖರೀದಿ ಮಾಡಬೇಕೆಂಬ ಹಂಬಲದಿಂದ ಫೇಸ್‌ಬುಕ್ ಅನ್ನು ಸಂಪರ್ಕಿಸಿದ ಕಂಪೆನಿಗಳು ಬಹಳಷ್ಟಿವೆ. ಇಂದಿನ ಲೇಖನದಲ್ಲಿ ಆ ಕಂಪೆನಿಗಳು ಯಾವುವು ಎಂಬುದನ್ನೇ ನೀವು ನೋಡಲಿರುವಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
$10 ಮಿಲಿಯನ್ ಆಫರ್

ಅಜ್ಞಾತ ಖರೀದಿದಾರಿಂದ $10 ಮಿಲಿಯನ್ ಆಫರ್

ಫೇಸ್‌ಬುಕ್.ಕಾಮ್ ಎಂದೇ ಕರೆಯಲ್ಪಡುತ್ತಿದ್ದ ಫೇಸ್‌ಬುಕ್ 2004 ರಲ್ಲಿ ಲೈವ್ ಆಗಿ ಪ್ರಸಿದ್ಧಿಯಲ್ಲಿತ್ತು. ಅದಾಗಲೇ 20 ರ ಹರೆಯದ ಮಾರ್ಕ್ ಜುಕರ್‌ಬರ್ಗ್‌ಗೆ $10 ಮಿಲಿಯನ್ ಅನ್ನು ವ್ಯಕ್ತಿಯೊಬ್ಬ ಆಫರ್ ಮಾಡಿದ್ದರಂತೆ.

ಫೇಸ್‌ಬುಕ್ ಖರೀದಿ

ಫ್ರೆಂಡ್ಸ್‌ಸ್ಟರ್ ಪ್ರಯತ್ನಿಸಿದೆ

ಕೆಲವೊಂದು ಮೂಲಗಳ ಪ್ರಕಾರ ಫ್ರೆಂಡ್ಸ್‌ಸ್ಟರ್ ಕೂಡ ಫೇಸ್‌ಬುಕ್ ಅನ್ನು ಖರೀದಿ ಮಾಡುವ ಹಂಬಲದಲ್ಲಿತ್ತು.

ಖರೀದಿ

2004 ರಲ್ಲಿ ಗೂಗಲ್ ಆಫರ್

2004 ರಲ್ಲಿ ಗೂಗಲ್ ಕಂಪೆನಿ ಫೇಸ್‌ಬುಕ್ ಅನ್ನು ಖರೀದಿ ಮಾಡಬೇಕೆಂಬ ಆಲೋಚನೆಯನ್ನು ಮುಂದಿಟ್ಟಿತ್ತು.

ವಿಯಾಕಮ್

ಮಾರ್ಚ್ 2005 ನಲ್ಲಿ ವಿಯಾಕಮ್

ಮಾರ್ಚ್ 2005 ರಲ್ಲಿ ವಿಯಾಕಮ್ ಕಂಪೆನಿ ಫೇಸ್‌ಬುಕ್ ಅನ್ನು ಖರೀದಿ ಮಾಡುವ ಇರಾದೆಯಲ್ಲಿತ್ತು. ಕಂಪೆನಿ $75 ಅನ್ನು ಆಫರ್ ಮಾಡಿತ್ತು.

ಫೇಸ್‌ಬುಕ್ ಖರೀದಿ

ಮೈ ಸ್ಪೇಸ್

2005 ರ ವಸಂತ ಕಾಲದಲ್ಲಿ ಮೈ ಸ್ಪೇಸ್ ಸಿಇಒ ಕ್ರಿಸ್ ಡಿವೊಲ್ಫ್ ಫೇಸ್‌ಬುಕ್ ಖರೀದಿ ಮಾಡುವ ಹಿನ್ನಲೆಯಲ್ಲಿ ಜುಕರ್ ಬರ್ಗ್ ಅನ್ನು ಭೇಡಿ ಮಾಡಿದ್ದರು.

ಜನವರಿ 2006

ನ್ಯೂಸ್ ಕ್ರಾಪ್

ಜನವರಿ 2006 ರಲ್ಲಿ ನ್ಯೂಸ್ ಕ್ರಾಪ್ ಕಂಪೆನಿ ಫೇಸ್‌ಬುಕ್ ಖರೀದಿ ಮಾಡುವ ಹಿನ್ನಲೆಯಲ್ಲಿ ಮಾರ್ಕ್ ಜುಕರ್ ಬರ್ಗ್ ಅನ್ನು ಸಂಪರ್ಕಿಸಿತ್ತು.

ಆಫರ್

2005 ರಲ್ಲಿ ವಿಯಾಕಾಮ್ ಆಫರ್

ವಿಯಾಕಾಮ್ ಕಂಪೆನಿ 2005 ರಲ್ಲಿ ಮತ್ತೊಮ್ಮೆ ಫೇಸ್‌ಬುಕ್ ಅನ್ನು ಖರೀದಿ ಮಾಡುವ ಹಂಬಲದಲ್ಲಿ ಪುನಃ ಸಂಸ್ಥೆಯನ್ನು ಸಂಪರ್ಕಿಸಿತ್ತು. ಆದರೆ ಮಾರ್ಕ್ ಆಸಕ್ತಿ ತೋರಲಿಲ್ಲ.

ಎನ್‌ಬಿಸಿ

ಎನ್‌ಬಿಸಿ 2005 ರಲ್ಲಿ ಆಫರ್

ಎನ್‌ಬಿಸಿ ಕೂಡ 2005 ರಲ್ಲಿ ಫೇಸ್‌ಬುಕ್ ಅನ್ನು ಖರೀದಿ ಮಾಡಬೇಕೆನ್ನುವ ಹಂಬಲವನ್ನು ಹೊಂದಿತ್ತು.

2006

2006 ರಲ್ಲಿ ಪುನಃ ವಿಯಾಕಾಮ್ ಆಫರ್

ಛಲಬಿಡದ ತ್ರಿವಿಕ್ರಮನಂತೆ ಪುನಃ ವಿಯಾಕಾಮ್ ಫೇಸ್‌ಬುಕ್ ಸಂಸ್ಥೆಯನ್ನು ಖರೀದಿ ಮಾಡಬೇಕೆನ್ನುವ ಹಂಬಲವನ್ನು ಜುಕರ್ ಬರ್ಗ್ ಮುಂದೆ ಇಟ್ಟಿತ್ತು. ಆದರೆ ಮಾರ್ಕ್ ಇದಕ್ಕೆ ಬಗ್ಗಿರಲಿಲ್ಲ.

$1 ಬಿಲಿಯನ್ ಆಫರ್

ಯಾಹೂ ಆಫರ್

2006 ರಲ್ಲಿ ಫೇಸ್‌ಬುಕ್ ಬಾಗಿಲನ್ನು ಯಾಹೂ ತಟ್ಟಿತ್ತು. ಇದು ಸಂಸ್ಥೆಗೆ $1 ಬಿಲಿಯನ್ ಅನ್ನು ಆಫರ್ ಮಾಡಿತ್ತು. ಆದರೆ ಜುಕರ್‌ಬರ್ಗ್‌ಗೆ ತಿಳಿದಿತ್ತು ತಮ್ಮ ಕಂಪೆನಿ $1 ಬಿಲಿಯನ್‌ಗಿಂತಲೂ ಹೆಚ್ಚು ಬಾಳಿಕೆ ಬರುವಂಥದ್ದು ಎಂದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article Meet the 10 companies that tried to buy Facebook back when it was a startup.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot