ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್‌ಗಳಲ್ಲಿ ಅಧಿಕ ಡೇಟಾ ಜೊತೆಗೆ ಬಿಗ್ ವ್ಯಾಲಿಡಿಟಿ ಪಕ್ಕಾ!

|

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿ) ಕಂಪನಿಗಳು ಪ್ರಾಬಲ್ಯ ಹೊಂದಿವೆ. ಅದಾಗ್ಯೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ (BSNL) ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುವಂತಹ ಕೆಲವು ಪ್ರಿಪೇಯ್ಡ್ ಯೋಜನೆಗಳನ್ನು ಒದಗಿಸುತ್ತಿದೆ. ಬಿಎಸ್‌ಎನ್‌ಎಲ್‌ ಸಂಸ್ಥೆಯ ಕೆಲವು ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳು ಹೆಚ್ಚಿನ ಡೇಟಾವನ್ನು ಪಡೆದಿವೆ.

BSNLನ ಈ ಪ್ಲ್ಯಾನ್‌ಗಳಲ್ಲಿ ಅಧಿಕ ಡೇಟಾ ಜೊತೆಗೆ ಬಿಗ್ ವ್ಯಾಲಿಡಿಟಿ ಪಕ್ಕಾ!

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಭಿನ್ನ ಪ್ರಿಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಪಡೆದಿದೆ. ಅವುಗಳಲ್ಲಿ ಕೆಲವು ಅತ್ಯುತ್ತಮ ಡೇಟಾ ಪ್ರಯೋಜನ ಒಳಗೊಂಡಿವೆ. ಇದಲ್ಲದೇ ಬಿಎಸ್‌ಎನ್‌ಎಲ್‌ ನ ಟ್ಯೂನ್‌ ಸೇರಿದಂತೆ ಇತರೆ ಪ್ರಯೋಜನಗಳನ್ನು ಪಡೆದಿವೆ. ಹಾಗಾದರೆ ಬಿಎಸ್‌ಎನ್‌ಎಲ್‌ ಟೆಲಿಕಾಂನ ಬಜೆಟ್‌ ದರದಲ್ಲಿ ದೀರ್ಘಾವಧಿ ವ್ಯಾಲಿಡಿಟಿ ಹಾಗೂ ಉತ್ತಮ ಡೇಟಾ ಪ್ರಯೋಜನ ಪಡೆದ ಯೋಜನೆಗಳ ಬಗ್ಗೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ STV 399ರೂ. ಯೋಜನೆ
ಬಿಎಸ್‌ಎನ್‌ಎಲ್‌ ಟೆಲಿಕಾಂನ STV 399ರೂ. ಯೋಜನೆ ಆಕರ್ಷಕ ಪ್ರಯೋಜನ ಪಡೆದಿದೆ. ಇದು ಅನಿಯಮಿತ ಧ್ವನಿ ಕರೆಗಳ ಜೊತೆಗೆ ದಿನಕ್ಕೆ 1GB ಡೇಟಾವನ್ನು 80 ದಿನಗಳ ಅವಧಿಗೆ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ನೀಡುತ್ತದೆ. ಈ ಯೋಜನೆಯು ಬಿಎಸ್‌ಎನ್‌ಎಲ್‌ ಟ್ಯೂನ್‌ಗಳು ಮತ್ತು ಲೋಕಧುನ್ ವಿಷಯಕ್ಕೆ ಉಚಿತ ಪ್ರವೇಶವನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌ STV 429ರೂ. ಯೋಜನೆ
ಬಿಎಸ್‌ಎನ್‌ಎಲ್‌ ಟೆಲಿಕಾಂನ STV 399ರೂ. ಯೋಜನೆ ಆಕರ್ಷಕ ಪ್ರಯೋಜನ ಪಡೆದಿದೆ. ಈ ಯೋಜನೆ ದಿನಕ್ಕೆ 1GB ಡೇಟಾವನ್ನು ನೀಡುತ್ತದೆ ಮತ್ತು 81 ದಿನಗಳವರೆಗೆ ಅನಿಯಮಿತ ಧ್ವನಿ ಕರೆಗಳು ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ನೀಡುತ್ತದೆ. ಜೊತೆಗೆ Eros Now ಮನರಂಜನಾ ಸೇವೆಗಳಿಗೆ ಪ್ರವೇಶವನ್ನು ಈ ಯೋಜನೆ ನೀಡುತ್ತದೆ.

ಬಿಎಸ್‌ಎನ್‌ಎಲ್‌ STV 447ರೂ. ಯೋಜನೆ
ಬಿಎಸ್‌ಎನ್‌ಎಲ್‌ STV 447ರೂ. ಯೋಜನೆ 100GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. 100GB ಡೇಟಾದ ನಿಗದಿತ ಮಿತಿಯನ್ನು ಮೀರಿ, ಬಳಕೆದಾರರು 80 Kbps ವೇಗದಲ್ಲಿ ಇಂಟರ್ನೆಟ್ ಅನ್ನು ಪ್ರವೇಶಿಸಬಹುದು. ಯೋಜನೆಯು 60 ಕ್ಯಾಲೆಂಡರ್ ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ ಮತ್ತು ಇದನ್ನು ವೆಬ್‌ಸೈಟ್‌ನಲ್ಲಿ 'ಡೇಟಾ ವೋಚರ್' ಅಡಿಯಲ್ಲಿ ನಮೂದಿಸಿದ್ದರೂ ಸಹ, ಇದು ದಿನಕ್ಕೆ 100 SMS ಜೊತೆಗೆ ಅನಿಯಮಿತ ಧ್ವನಿ ಕರೆಯನ್ನು ನೀಡುತ್ತದೆ.

BSNLನ ಈ ಪ್ಲ್ಯಾನ್‌ಗಳಲ್ಲಿ ಅಧಿಕ ಡೇಟಾ ಜೊತೆಗೆ ಬಿಗ್ ವ್ಯಾಲಿಡಿಟಿ ಪಕ್ಕಾ!

ಬಿಎಸ್‌ಎನ್‌ಎಲ್‌ STV 499ರೂ. ಯೋಜನೆ
ಬಿಎಸ್‌ಎನ್‌ಎಲ್‌ STV 499ರೂ. ಯೋಜನೆ ಬಳಕೆದಾರರಿಗೆ ಮೂರು ತಿಂಗಳ ಮಾನ್ಯತೆಯ ಅವಧಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಧ್ವನಿ ಕರೆಗಳು ಮತ್ತು 100 SMS/ದಿನದೊಂದಿಗೆ 90 ದಿನಗಳ ಮಾನ್ಯತೆಯ ಅವಧಿಗೆ ದಿನಕ್ಕೆ 2GB ಡೇಟಾವನ್ನು ಪಡೆಯಬಹುದು. ಈ ಯೋಜನೆಯು ಯಾವುದೇ OTT ಚಂದಾದಾರಿಕೆಯೊಂದಿಗೆ ಬರುವುದಿಲ್ಲ.

ಬಿಎಸ್‌ಎನ್‌ಎಲ್‌ 797ರೂ. ಪ್ರಿಪೇಯ್ಡ್‌ ಪ್ಲಾನ್‌
ಬಿಎಸ್‌ಎನ್‌ಎಲ್‌ 797ರೂ. ಪ್ರಿಪೇಯ್ಡ್‌ ಪ್ಲಾನ್‌ 395 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಪ್ಲಾನ್‌ನ ಲಾಂಚ್‌ ಆಫರ್‌ನಲ್ಲಿ ಬಿಎಸ್‌ಎನ್‌ಎಲ್‌ ಹೆಚ್ಚುವರಿ 30ದಿನಗಳ ವ್ಯಾಲಿಡಿಟಿಯನ್ನು ನೀಡುವುದಾಗಿ ಘೋಷಿಸಿದೆ. ಬಳಕೆದಾರರು ಜೂನ್ 12, 2022 ರೊಳಗೆ ಈ ಪ್ಲಾನ್‌ ಆರಿಸಿಕೊಂಡರೆ ಮಾತ್ರ ಈ ಹೆಚ್ಚುವರಿ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದಲ್ಲದೆ ಗ್ರಾಹಕರು ಮೊದಲ 60 ದಿನಗಳವರೆಗೆ ಮಾತ್ರ ಈ ಪ್ಲಾನ್‌ನ ಎಲ್ಲಾ ಪ್ರಯೋಜನಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. 60 ದಿನಗಳ ನಂತರ, ಬಳಕೆದಾರರು ಕರೆ ಮಾಡಲು ಅಥವಾ ಇಂಟರ್ನೆಟ್ ಬ್ರೌಸ್ ಮಾಡಲು ಟಾಕ್‌ಟೈಮ್ ಅಥವಾ ಡೇಟಾ ಯೋಜನೆಗಳನ್ನು ಆರಿಸಬೇಕಾಗುತ್ತದೆ.

Best Mobiles in India

English summary
These BSNL Plans Offers Heavy-Data and Long-Term Validity.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X