ಒಪ್ಪೋದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ಭಾರೀ ಬದಲಾವಣೆ!..ಒಮ್ಮೆ ಚೆಕ್ ಮಾಡಿ!

|

ಪ್ರಮುಖ ಮೊಬೈಲ್‌ ಸಂಸ್ಥೆಗಳಲ್ಲಿ ಒಂದಾಗಿರುವ ಒಪ್ಪೋ ಭಿನ್ನ ಶ್ರೇಣಿಯ ಫೋನ್‌ಗಳ ಆಯ್ಕೆ ಒಳಗೊಂಡಿದೆ. ಇತ್ತೀಚಿಗೆ ಒಪ್ಪೋ ಸಂಸ್ಥೆಯು ತನ್ನ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್‌ 13 (Android 13) ಆಧಾರಿತ ಕಲರ್‌ ಓಎಸ್‌ 13 (ColorOS 13) ಅನ್ನು ಬಿಡುಗಡೆ ಮಾಡಿದೆ. ಆ ಪೈಕಿ ಕೆಲವು ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್‌ನ ಬೀಟಾ ಆವೃತ್ತಿಯನ್ನು ಹೊಂದಿದ್ದರೆ, ಮತ್ತೆ ಕೆಲವು ಫೋನ್‌ಗಳು ಸ್ಥಿರ ಆವೃತ್ತಿಯನ್ನು ಪಡೆದುಕೊಂಡಿವೆ.

ಆಂಡ್ರಾಯ್ಡ್‌ 13 ಓಎಸ್‌

ಹೌದು, ನೂತನ ಆಂಡ್ರಾಯ್ಡ್‌ 13 ಓಎಸ್‌ ಆಧಾರಿತ ಕಲರ್‌ ಓಎಸ್‌ 13 ಅಪ್‌ಡೇಟ್‌ ಪಡೆದ ಒಪ್ಪೋ ಸಂಸ್ಥೆಯ ಈ ಸ್ಮಾರ್ಟ್‌ಫೋನ್‌ಗಳು ಕೆಲವೊಂದು ಫೀಚರ್ಸ್‌ಗಳಲ್ಲಿ ಭಿನ್ನವಾಗಿವೆ. ಕಲರ್‌ ಓಎಸ್‌ 13 ನೂತನ ಅಕ್ವಾಮಾರ್ಫಿಕ್ ವಿನ್ಯಾಸವನ್ನು ಆಧರಿಸಿದ್ದು, ಇದು ತಡೆರಹಿತ ವೀಕ್ಷಣೆಗಾಗಿ ಬಳಕೆದಾರ ಸ್ನೇಹಿ UI ಅನ್ನು ಸಕ್ರಿಯಗೊಳಿಸುತ್ತದೆ. ಹಾಗಾದರೇ ಆಂಡ್ರಾಯ್ಡ್‌ 13 ಓಎಸ್‌ ಆಧಾರಿತ ಕಲರ್‌ ಓಎಸ್‌ 13 ಪಡೆದ ಟಾಪ್‌ 5 ಒಪ್ಪೋ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ರೆನೋ 8 ಪ್ರೊ 5G ಸ್ಮಾರ್ಟ್‌ಫೋನ್‌

ಒಪ್ಪೋ ರೆನೋ 8 ಪ್ರೊ 5G ಸ್ಮಾರ್ಟ್‌ಫೋನ್‌

ಒಪ್ಪೋ ರೆನೋ 8 ಪ್ರೊ ಸ್ಮಾರ್ಟ್‌ಫೋನ್‌ ಹೊಸ ಕಲರ್‌ ಓಎಸ್‌ 13 ಗೆ ಅಪ್‌ಗ್ರೇಡ್ ಕಂಡಿದೆ. ಇನ್ನು ಈ ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಒಪ್ಪೋ A76 ಸ್ಮಾರ್ಟ್‌ಫೋನ್

ಒಪ್ಪೋ A76 ಸ್ಮಾರ್ಟ್‌ಫೋನ್

ಒಪ್ಪೋ A76 ಸ್ಮಾರ್ಟ್‌ಫೋನ್ ನೂತನ ಕಲರ್‌ ಓಎಸ್‌ 13 ಗೆ ಅಪ್‌ಗ್ರೇಡ್ ಪಡೆದಿದೆ. ಇನ್ನು ಈ ಫೋನ್ 720x1,612 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಇನ್ನು ಈ ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 SoC ಪ್ರೊಸೆಸರ್‌ ಬಲ ಪಡೆದಿದ್ದು, 6GB RAM ಆಯ್ಕೆ ಅನ್ನು ಹೊಂದಿದೆ. ಹಾಗೆಯೇ ಇನ್ನು ಈ ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದ್ದು, ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಸಹ ಇದೆ.

ಒಪ್ಪೋ ರೆನೋ 8 5G ಸ್ಮಾರ್ಟ್‌ಫೋನ್‌

ಒಪ್ಪೋ ರೆನೋ 8 5G ಸ್ಮಾರ್ಟ್‌ಫೋನ್‌

ಒಪ್ಪೋ ರೆನೋ 8 ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಕಲರ್‌ ಓಎಸ್‌ 13 OTA ಅಪ್‌ಗ್ರೇಡ್‌ಗೆ ಪಡೆದಿದೆ.

ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌

ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌

ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಹೊಂದಿದ್ದು, 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಫೋನಿನ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹಾಗೆಯೇ ಇಲ್ಲದೇ ಈ ಫೋನ್ ಕಲರ್‌ ಓಎಸ್‌ 13 ಗೆ ಅಪ್‌ಗ್ರೇಡ್ ಪಡೆದಿದೆ.

ಒಪ್ಪೋ K10 5G ಸ್ಮಾರ್ಟ್‌ಫೋನ್‌

ಒಪ್ಪೋ K10 5G ಸ್ಮಾರ್ಟ್‌ಫೋನ್‌

ಒಪ್ಪೋ K10 5G ಸ್ಮಾರ್ಟ್‌ಫೋನ್‌ 1,080 x 1920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 8 GB + 128 GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈಗ ಈ ಫೋನ್ ಕಲರ್‌ ಓಎಸ್‌ 13 ಗೆ ಅಪ್‌ಗ್ರೇಡ್ ಪಡೆದಿದೆ.

Best Mobiles in India

English summary
These Few Oppo Phones Now Running on Android 13 based ColosOS 13.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X