ಗೂಗಲ್‌ ಅಸಿಸ್ಟಂಟ್ ಸೇರಿವೆ ಆರು ಕುತೂಹಲಕಾರಿ ಫೀಚರ್ಸ್!

|

ಸದ್ಯ ವಾಯಿಸ್‌ ಅಸಿಸ್ಟಂಟ್ ಸೌಲಭ್ಯ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಸೇರಿದ್ದು, ಬಳಕೆದಾರರ ಕೆಲಸ ಸುಲಭವಾಗಿಸಿವೆ. ಆಂಡ್ರಾಯ್ಡ್‌, ಐಫೋನ್ ಎರಡು ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಯಿಸ್ ಕಮಾಂಡ್/ಅಸಿಸ್ಟಂಟ್ ಕಾರ್ಯನಿರ್ವಹಿಸುತ್ತಿದ್ದು, ಐಫೋನ್‌ಗಳಲ್ಲಿ ಸಿರಿ ವಾಯಿಸ್‌ ಅಸಿಸ್ಟಂಟ್ ಬೆಂಬಲ ಇದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಅಸಿಸ್ಟಂಟ್ ಕೆಲಸ ಮಾಡುತ್ತಿದೆ.

ಗೂಗಲ್ ಅಸಿಸ್ಟಂಟ್

ಈಗಾಗಲೇ ಬಹುತೇಕ ಬಳಕೆದಾರರು ತಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಅಸಿಸ್ಟಂಟ್ ಸೇವೆಯನ್ನು ಬಳಕೆ ಮಾಡುತ್ತಿದ್ದಾರೆ. ಹೇ ಗೂಗಲ್ ಅಥವಾ ಓಕೆ ಗೂಗಲ್ ಎನ್ನುವ ಮೂಲಕ ಧ್ವನಿಯಿಂದಲೇ ಆದೇಶ ನೀಡುತ್ತಾರೆ. ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರುವ ಗೂಗಲ್ ಅಸಿಸ್ಟಂಟ್ ಇದೀಗ ಮತ್ತೆ ಆರು ಹೊಸ ಫೀಚರ್ಸ್‌ಗಳನ್ನು ಸೇರಿಸಿದ್ದು, ಇವು ಬಳಕೆದಾರರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತವೆ. ಹಾಗಾದರೇ ಗೂಗಲ್ ಅಸಿಸ್ಟಂಟ್ ಸೇರಿರುವ ಆರು ಹೊಸ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ.

ಗೂಗಲ್ ಡಿವೈಸ್‌ ಲಿಂಕ್

ಗೂಗಲ್ ಡಿವೈಸ್‌ ಲಿಂಕ್

ಬಳಕೆದಾರರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಗೂಗಲ್ ಈ ಸೇವೆಯನ್ನು ನೀಡಿದೆ. ಗೂಗಲ್ ಡಿವೈಸ್‌ಗಳನ್ನು ಗೂಘಲ್ ಅಸಿಸ್ಟಂಟ್ ಸೇವೆಯೊಂದಿಗೆ ಲಿಂಕ್ ಮಾಡಬಹುದಾಗಿದೆ. ಸ್ಮಾರ್ಟ್‌ ಡಿವೈಸ್‌ಗಳನ್ನು ಆಪ್‌ ಮೂಲಕವೂ ಕಂಟ್ರೋಲ್ ಮಾಡಬಹುದಾಗಿದೆ. ಬಳಕೆದಾರರು ಹೊಸದಾಗಿ ಯಾವುದಾದರು ಸ್ಮಾರ್ಟ್‌ ಡಿವೈಸ್‌ ಅನ್ನು ಕನೆಕ್ಟ್ ಮಾಡಿದರೇ, ನೋಟಿಫಿಕೇಶನ್ ನೀಡುತ್ತದೆ. ಆ ಮೂಲಕ ಆಟೋಮ್ಯಾಟಿಕ್ ಆಡ್ ಆಗುತ್ತದೆ.

ಸೆಡ್ಯೂಲ್‌ ಟೈಮಿಂಗ್

ಸೆಡ್ಯೂಲ್‌ ಟೈಮಿಂಗ್

ಸ್ಮಾರ್ಟ್‌ ಡಿವೈಸ್‌ಗಳನ್ನು ಗೂಗಲ್‌ ಅಸಿಸ್ಟಂಟ್ ಮೂಲಕ ನಿಯಂತ್ರಿಸುವ ಜೊತೆಗೆ ಸ್ಮಾರ್ಟ್‌ ಡಿವೈಸ್‌ಗಳು ಕಾರ್ಯನಿರ್ವಹಿಸಲು ಸೆಡ್ಯೂಲ್‌ ಫಿಕ್ಸ್‌ ಮಾಡಬಹುದಾದ ಆಯ್ಕೆ ಸಹ ಗೂಗಲ್ ಒದಗಿಸಿದೆ. ಉದಾಹರಣೆಗೆ-ಹೇ ಗೂಗಲ್ ಸ್ಟಾರ್ಟ್‌ ಕಾಫಿ ಮೇಕರ್ ಅಟ್ 6AM, ಇದೇ ರೀತಿ ಇತರೆ ಡಿವೈಸ್‌ಗಳಿಗೂ ಸೆಡ್ಯೂಲ್‌ ಸೆಟ್ ಮಾಡಬಹುದಾಗಿದೆ. ಈ ವರ್ಷ ಸುಮಾರು 20 ಡಿವೈಸ್‌ಗಳು ಈ ಫೀಚರ್ ಪಡೆದುಕೊಳ್ಳಲಿವೆ.

ಮನೆ ಕೆಲಸದ ಮಾಹಿತಿ

ಮನೆ ಕೆಲಸದ ಮಾಹಿತಿ

ಗೂಗಲ್ ಅಸಿಸ್ಟಂಟ್ ಎಷ್ಟೊಂದು ಸ್ಮಾರ್ಟ್‌ ಅಂದರೇ, ಮನೆಯ ಯಾವೆಲ್ಲ ಕೆಲಸಗಳು ನಡೆದಿವೆ ಎಂಬುದನ್ನು ಅದು ಇತರೆ ಮನೆಯ ಸದಸ್ಯರಿಗೆ ತಿಳಿಸುವ ಆಯ್ಕೆ ಸಹ ಪಡೆದಿದೆ. ಹೇ ಗೂಗಲ್, ಬೆಕ್ಕಿಗೆ ಫುಡ್ ನೀಡಿ ಆಗಿದೆ. ಎಂಬ ಸಂದೇಶವನ್ನು ಹೇಳಿಟ್ಟರೆ ಸಾಕು ಅದು ಇತರೆ ಸದಸ್ಯರಿಗೆ ತಿಳಿಸುತ್ತದೆ. ಈ ಸೇವೆ ಸಿದ್ಧತೆಯಲ್ಲಿದ್ದು, ಕೆಲವೇ ತಿಂಗಳಿನಲ್ಲಿ ಈ ಸೇವೆ ಸೇರಿಕೊಳ್ಳಲಿದೆ.

ಸ್ಪೀಡ್‌ ಡೈಲ್‌ ಸೆಟ್ ಮಾಡುವ ಆಯ್ಕೆ

ಸ್ಪೀಡ್‌ ಡೈಲ್‌ ಸೆಟ್ ಮಾಡುವ ಆಯ್ಕೆ

ಮನೆಯ ಸದಸ್ಯರ ಮೊಬೈಲ್ ಸಂಖ್ಯೆಯನ್ನು ಸ್ಪೀಡ್ ಡೈಲ್‌ ಲಿಸ್ಟ್‌ನಲ್ಲಿ ಸೆಟ್ ಮಾಬಹುದಾಗಿದೆ. ಅಗತ್ಯವಿದ್ದಾಗ ಹೇ ಗೂಗಲ್ ಕಾಲ್ ಟು ಅಂತಾ ಯಾರಿಗೆ ಕಾಲ್ ಮಾಡಬೇಕೊ ಅವರ ಹೆಸರು ಹೇಳಿ ಮಾಡಬಹುದಾಗಿದೆ. ಅದಕ್ಕೂ ಮೊದಲು ಗೂಗಲ್ ಅಸಿಸ್ಟಂಟ್ ಆಪ್ ಅಥವಾ ಸ್ಮಾರ್ಟ್‌ಫೋನಿನಲ್ಲಿ ಸ್ಪೀಡ್‌ ಡೈಲ್‌ ಮಾಡುವ ಹೆಸರುಗಳನ್ನು ನಮೂದಿಸಬೇಕಿದೆ.

ಸ್ಟೋರಿ, ಇ-ಮೇಲ್ ರೀಡಿಂಗ್

ಸ್ಟೋರಿ, ಇ-ಮೇಲ್ ರೀಡಿಂಗ್

ಗೂಗಲ್ ಅಸಿಸ್ಟಂಟ್ ಸದ್ಯದಲ್ಲಯೇ ಸ್ಟೋರಿ, ಇ-ಬುಕ್ ಮತ್ತು ಇ-ಮೇಲ್ ರೀಡಿಂಗ್ ಸೌಲಭ್ಯವನ್ನು ಪರಿಚಯಿಸಲಿದೆ. ಈ ಆಯ್ಕೆಯಲ್ಲಿ ಬಳಕೆದಾರರು ಆದೇಶಿಸಿದರೇ ಸಾಕು ಗೂಗಲ್ ಅಸಿಸ್ಟಂಟ್ ತಾನಾಗಿಯೇ ಇ-ಬುಕ್ ಮತ್ತು ಇ-ಮೇಲ್ ಓದುತ್ತದೆ. ಹಾಗೂ 42 ಭಾಷೆಗಳ ಭಾಷಾಂತರದ ಆಯ್ಕೆ ಸಹ ಇದ್ದು, ಈ ಸೇವೆಯನ್ನು ಸಹ ಪಡೆಯಬಹುದಾಗಿದೆ.

ಪ್ರೈವೆಸಿ ಕಂಟ್ರೋಲ್

ಪ್ರೈವೆಸಿ ಕಂಟ್ರೋಲ್

ಬಳಕೆದಾರರ ಎಲ್ಲ ಮಾತುಗಳನ್ನು ಗೂಗಲ್ ಅಸಿಸ್ಟಂಟ್ ಗ್ರಹಿಸಬಾರದು ಎಂದಾದರೇ, "Hey, Google, that wasn't for you" ಎಂದು ಹೇಳಬಹುದಾಗಿದೆ. ಈ ರೀತಿ ಹೇಳಿದರೇ ನಿಮ್ಮ ಮಾತನ್ನು ಅದು ಗ್ರಹಿಸುವುದಿಲ್ಲ. ಹಾಗೆಯೇ ಪ್ರೈವೆಸಿ ಸೆಟ್ಟಿಂಗ್ ಆಯ್ಕೆಯಲ್ಲಿ ಬಳಕೆದಾರರು ಅಗತ್ಯವಾಗ ಸೆಟ್ಟಿಂಗ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Assistant's new tools include scheduling actions, digital sticky notes and a privacy tool. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X