ಮೊಟೊರೊಲಾ ಬಳಕೆದಾರರಿಗೆ ಸಿಹಿಸುದ್ದಿ!..ನಿಮ್ಮ ಫೋನಿನಲ್ಲಿ ಈಗ ಹೊಸತನ!

|

ಜನಪ್ರಿಯ ಮೊಬೈಲ್‌ ಸಂಸ್ಥೆಗಳಲ್ಲಿ ಒಂದಾಗಿರುವ ಮೊಟೊರೊಲಾ (Motorola) ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಆಯ್ಕೆ ಒಳಗೊಂಡಿದೆ. ಇತ್ತೀಚಿಗೆ ಮೊಟೊರೊಲಾ ಸಂಸ್ಥೆಯು ಆಂಡ್ರಾಯ್ಡ್ 13 ಅಪ್‌ಡೇಟ್‌ಗೆ ಅರ್ಹವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಘೋಷಿಸಿತು. ಇದೀಗ ಮೊಟೊ ಆಂಡ್ರಾಯ್ಡ್ 13 ಅಪ್‌ಡೇಟ್‌ಗೆ ಅರ್ಹವಾಗಿರುವ ಮತ್ತಷ್ಟು ಸ್ಮಾರ್ಟ್‌ಫೋನ್‌ಗಳನ್ನು ತನ್ನ ಲಿಸ್ಟ್‌ಗೆ ಸೇರ್ಪಡೆ ಮಾಡಿದೆ.

ಆಂಡ್ರಾಯ್ಡ್ 13

ಹೌದು, ಮೊಟೊರೊಲಾ ಆಂಡ್ರಾಯ್ಡ್ 13 ಅಪ್‌ಡೇಟ್‌ಗೆ G ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಸೇರಿಸಿದ್ದು, ಅವುಗಳಲ್ಲಿ ಮೊಟೊ G52 ಮತ್ತು ಮೊಟೊ G72 ಸೇರಿವೆ. ಈ ಫೋನ್‌ಗಳ ಹೊರತಾಗಿ, ಮೊಟೊ ಎಡ್ಜ್‌ 30 ಅಲ್ಟ್ರಾ, ಮೊಟೊ ಎಡ್ಜ್‌ 30 ಫ್ಯೂಶನ್‌, ಮೊಟೊ ಎಡ್ಜ್‌ 30 ನಿಯೋ, ಮೊಟೊ ಎಡ್ಜ್‌ 20 ಪ್ರೊ, ಮೊಟೊ ಎಡ್ಜ್‌ 20, ಮೊಟೊ ಎಡ್ಜ್‌ 20 ಲೈಟ್‌ ಸೇರಿದಂತೆ ಇತರೆ ಕೆಲವು ಫೋನ್‌ಗಳನ್ನು ಸೇರಿಸಲಾಗಿದೆ. ಹಾಗಾದರೆ ಆಂಡ್ರಾಯ್ಡ್ 13 ಅಪ್‌ಡೇಟ್‌ ಪಡೆದ ಮೊಟೊ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಂಡ್ರಾಯ್ಡ್ 13 ಅಪ್‌ಡೇಟ್‌ ಪಡೆದ ಮೊಟೊ ಫೋನ್‌ಗಳ ಲಿಸ್ಟ್‌ ಇಲ್ಲಿದೆ:

ಆಂಡ್ರಾಯ್ಡ್ 13 ಅಪ್‌ಡೇಟ್‌ ಪಡೆದ ಮೊಟೊ ಫೋನ್‌ಗಳ ಲಿಸ್ಟ್‌ ಇಲ್ಲಿದೆ:

* ಮೊಟೊರೊಲಾ ರೇಜರ್ (2022)
* ಮೊಟೊರೊಲಾ ಎಡ್ಜ್‌ 30 ಅಲ್ಟ್ರಾ
* ಮೊಟೊರೊಲಾ ಎಡ್ಜ್‌ 30 ಪ್ರೊ
* ಮೊಟೊರೊಲಾ ಎಡ್ಜ್ 30 ಫ್ಯೂಷನ್
* ಮೊಟೊರೊಲಾ ಎಡ್ಜ್‌ 30 ನಿಯೋ
* ಮೊಟೊರೊಲಾ ಎಡ್ಜ್ 30

ಮೊಟೊರೊಲಾ

* ಮೊಟೊರೊಲಾ ಎಡ್ಜ್‌+ 5G UW (2022)
* ಮೊಟೊರೊಲಾ ಎಡ್ಜ್ (2022)
* ಮೊಟೊರೊಲಾ ಎಡ್ಜ್‌ 20 ಪ್ರೊ
* ಮೊಟೊರೊಲಾ ಎಡ್ಜ್ 20
* ಮೊಟೊರೊಲಾ ಎಡ್ಜ್‌ 20 ಲೈಟ್
* ಮೊಟೊರೊಲಾ ಎಡ್ಜ್ (2021)
* ಮೊಟೊರೊಲಾ ಎಡ್ಜ್‌ G ಸ್ಟೈಲಸ್‌ 5G (2022)
* ಮೊಟೊರೊಲಾ ಮೊಟೊ G 5G

ಮೊಟೊ

* ಮೊಟೊರೊಲಾ ಮೊಟೊ G82 5G
* ಮೊಟೊರೊಲಾ ಮೊಟೊ G72
* ಮೊಟೊರೊಲಾ ಮೊಟೊ G62 5G
* ಮೊಟೊರೊಲಾ ಮೊಟೊ G52
* ಮೊಟೊರೊಲಾ ಮೊಟೊ G42
* ಮೊಟೊರೊಲಾ ಮೊಟೊ G32

ಆಂಡ್ರಾಯ್ಡ್‌ 13 ಫೀಚರ್ಸ್‌

ಆಂಡ್ರಾಯ್ಡ್‌ 13 ಫೀಚರ್ಸ್‌

ಆಂಡ್ರಾಯ್ಡ್ 13 ಅಪ್‌ಡೇಟ್‌ನೊಂದಿಗೆ, ಸಾಫ್ಟ್‌ವೇರ್ ಅಪ್‌ಡೇಟ್‌ ನಂತರ ಮೊಟೊರೊಲಾ ಬಳಕೆದಾರರು ನೂತನ ಓಎಸ್‌ನ ಫೀಚರ್ಸ್‌ಗಳನ್ನು ಪಡೆಯುತ್ತಾರೆ. ಅನುಭವಿಸುತ್ತಾರೆ. ಆಂಡ್ರಾಯ್ಡ್‌ 13 ಓಎಸ್‌ನೊಂದಿಗೆ, ಬಳಕೆದಾರರು ಹೊಸ ವಸ್ತು ಥೀಮ್ ವಿನ್ಯಾಸದಂತಹ ಫೀಚರ್ಸ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ. ಆಂಡ್ರಾಯ್ಡ್‌ 13 ರ ವಿನ್ಯಾಸವು ಥೀಮ್ ಮತ್ತು ವಾಲ್‌ಪೇಪರ್‌ಗೆ ಹೊಂದಿಕೊಳ್ಳುವ ಸ್ವಯಂ-ಥೀಮಿಂಗ್ ಐಕಾನ್‌ಗಳೊಂದಿಗೆ ಮುಂದಿನ ಹಂತಕ್ಕೆ ವಿಷಯಗಳನ್ನು ತೆಗೆದುಕೊಳ್ಳುತ್ತದೆ.

ಪಿಕ್ಕರ್

ಆಂಡ್ರಾಯ್ಡ್ 13 ರ ಫೋಟೋ ಪಿಕ್ಕರ್ ಗೌಪ್ಯತೆ (photo picker privacy) ಫೀಚರ್‌ ಹೆಚ್ಚು ಗೌಪ್ಯತೆ ಮತ್ತು ಅಪ್ಲಿಕೇಶನ್ ಪ್ರವೇಶಿಸಬಹುದಾದ ಫೋಟೋಗಳ ಮೇಲೆ ನಿಯಂತ್ರಣವನ್ನು ನೀಡುತ್ತದೆ. ಫೋಟೋ ಪಿಕರ್ ಅನುಮತಿಸುವ ಫೋಟೋಗಳನ್ನು ಪ್ರವೇಶಿಸಲು ಆಪ್‌ಗಳಿಗೆ ಅನುಮತಿಸುತ್ತದೆ. ಆದರೆ ಇದು ಮೊದಲಿನಂತೆ ಸಂಪೂರ್ಣ ಫೋಟೋ ಲೈಬ್ರರಿಯಲ್ಲ.

ಕ್ಯಾಮೆರಾಗಳು

ನೂತನ ಆಂಡ್ರಾಯ್ಡ್ 13 ಹೊಂದಿರುವ ಪ್ರಮುಖ ಫೀಚರ್ಸ್‌ ನಲ್ಲಿ ಹೊಸ ನೋಟಿಫಿಕೇಶನ್‌ ಪರ್ಮಿಷನ್ (notification permissions). ಈಗ, ಆಪ್‌ ಕರೆಗಳು, ಕಾಂಟ್ಯಾಕ್ಟ್‌, ಕ್ಯಾಮೆರಾಗಳು ಇತ್ಯಾದಿಗಳಿಗೆ ಅನುಮತಿಗಳನ್ನು ಬಯಸುತ್ತಿವೆ. ಆಂಡ್ರಾಯ್ಡ್ 13 (Android 13) ಓಎಸ್‌ ನೊಂದಿಗೆ, ಅವರು push ನೋಟಿಫಿಕೇಶನ್‌ ಗಳನ್ನು ಕಳುಹಿಸಲು ಸಹ ಅನುಮತಿಯನ್ನು ಕೇಳಬೇಕಾಗುತ್ತದೆ.

Best Mobiles in India

English summary
Motorola Shared a list of ten smartphones that were eligible for the Android 13 update.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X