ಇತ್ತೀಚಿಗೆ ಬೆಲೆ ಏರಿಕೆ ಕಂಡಿರುವ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ!

|

ಮೊಬೈಲ್ ಮಾರುಕಟ್ಟೆಗೆ ಪ್ರತಿ ತಿಂಗಳು ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತವೆ. ಪ್ರತಿಷ್ಠಿತ ಮೊಬೈಲ್‌ ಕಂಪನಿಗಳು ನೂತನ ಫೋನ್‌ಗಳಲ್ಲಿ ನಯಾ ಫೀಚರ್‌ ನೀಡುತ್ತಲೇ ಸಾಗಿವೆ. ಅವುಗಳಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆ ಹೊಂದಿದ್ದರೇ, ಇನ್ನು ಕೆಲವು ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಗಡಿ ದಾಟಿರುತ್ತವೆ. ಇನ್ನು ಇ-ಕಾಮರ್ಸ್‌ ತಾಣಗಳಲ್ಲಿ ಕೆಲವೊಮ್ಮೆ ವಿಶೇಷ ಡಿಸ್ಕೌಂಟ್ ಸಹ ಸಿಗುತ್ತವೆ. ಹಾಗೆಯೇ ಬೆಲೆ ಏರಿಕೆಯ ಬಿಸಿ ಸಹ ತಟ್ಟುತ್ತದೆ.

ಮಾರುಕಟ್ಟೆಯಲ್ಲಿ

ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಕೆಲವು ಜನಪ್ರಿಯ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಬೆಲೆ ಏರಿಕೆ ಕಂಡಿವೆ. ಜಿಎಸ್‌ಟಿ ಹೆಚ್ಚಳದಿಂದಾಗಿ ಬೆಲೆ ಏರಿಕೆ ಆಗಿರುವ ಜೊತೆಗೆ ಕೆಲ ಕಂಪನಿಗಳು ಆಯ್ದ ಕೆಲವು ಫೋನ್‌ಗಳ ದರ ಹೆಚ್ಚಳ ಮಾಡಿವೆ. ಇತ್ತೀಚಿಗೆ ಬೆಲೆ ಏರಿಕೆ ಕಂಡ ಕಂಪನಿಗಳ ಲಿಸ್ಟ್‌ನಲ್ಲಿ ಸ್ಯಾಮ್‌ಸಂಗ್, ರಿಯಲ್‌ಮಿ, ಪೊಕೊ, ಶಿಯೋಮಿ ಫೋನ್‌ಗಳು ಸೇರಿವೆ. ಹಾಗಾದರೇ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ದರ ಏರಿಕೆ ಕಂಡಿವೆ ಎಂಬುದರ ಬಗ್ಗೆ ತಿಳಿಯಲು ಮುಂದೆ ಓದಿರಿ.

ರಿಯಲ್‌ಮಿ Narzo 10A

ರಿಯಲ್‌ಮಿ Narzo 10A

ಬಜೆಟ್‌ ದರದಲ್ಲಿ ಲಾಂಚ್ ಆಗಿದ್ದ ರಿಯಲ್‌ಮಿ Narzo 10A ಸ್ಮಾರ್ಟ್‌ಫೋನ್ ಇತ್ತೀಚಿಗಷ್ಟೆ 500ರೂ. ಬೆಲೆ ಹೆಚ್ಚಳ ಕಂಡಿದೆ. ಹೀಗಾಗಿ ಪ್ರಸ್ತುತ ಈ ಸ್ಮಾರ್ಟ್‌ಫೋನ್ 8999ರೂ.ಗಳಿಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್‌ನಲ್ಲಿದೆ. 3GB RAM ವೇರಿಯಂಟ್‌ ಆಯ್ಕೆ ಜೊತೆಗೆ 5000mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಮೀಡಿಯಾ ಟೆಕ್ ಹಿಲಿಯೊ G70 ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಇನ್ನು ಈ ಫೋನ್ ಬ್ಲೂ ಹಾಗೂ ವೈಟ್‌ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಪೊಕೊ X2

ಪೊಕೊ X2

ಪೊಕೊ X2 ಸ್ಮಾರ್ಟ್‌ಫೋನ್ 8GB RAM+256GB ಸ್ಟೋರೇಜ್ ವೇರಿಯಂಟ್ ಸಹ ಬೆಲೆ ಏರಿಕೆ ಕಂಡಿದೆ. ಈ ಫೋನ್ ಬೆಲೆಯಲ್ಲಿ 1,000ರೂ. ಹೆಚ್ಚಳ ಆಗಿದ್ದು, ಪ್ರಸ್ತುತ 21,499ರೂ. ಪ್ರೈಸ್‌ಟ್ಯಾಗ್ ಹೊಂದಿದೆ. ಇ-ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಬೇಸ್‌ ವೇರಿಯಂಟ್‌ 17,499ರೂ. ಬೆಲೆಯಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M21

ಸ್ಯಾಮ್‌ಸಂಗ್ ಗ್ಯಾಲಕ್ಸಿ M21

ಸ್ಯಾಮ್‌ಸಂಗ್ ಸಂಸ್ಥೆಯ ಜನಪ್ರಿಯ ಬಜೆಟ್‌ ಫೋನ್‌ಗಳಲ್ಲಿ ಒಂದಾದ ಗ್ಯಾಲಕ್ಸಿ M21 ದರದಲ್ಲಿಯೂ ಸಹ ಏರಿಕೆ ಆಗಿದೆ. ಈ ಫೋನಿನ ಎಲ್ಲಾ ವೇರಿಯಂಟ್‌ಗಳು 500 ರೂ. ಹೆಚ್ಚಳ ಕಂಡಿವೆ. 4GB RAM ಮತ್ತು 64GB ಆಂತರಿಕ ಸ್ಟೋರೇಜ್ ವೇರಿಯಂಟ್ ಫೋನ್ ಬೆಲೆಯು ಈಗ 13,999 ರೂ.ಗೆ ಆಗಿದೆ. ಅದೇ ರೀತಿ 6GB RAM ವೇರಿಯಂಟ್ ಫೋನ್ ಬೆಲೆಯು 15,999 ರೂ.ಗಳಲ್ಲಿ ಲಭ್ಯವಿದೆ.

ರೆಡ್ಮಿ 8A ಡ್ಯುಯಲ್‌

ರೆಡ್ಮಿ 8A ಡ್ಯುಯಲ್‌

ರೆಡ್ಮಿ 8A ಸ್ಮಾರ್ಟ್‌ಫೋನ್ 720 x 1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.22 ಇಂಚಿನ ಡಾಟ್‌ ನಾಚ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಹಿಂಬದಿಯ ರಿಯರ್ ಕ್ಯಾಮೆರಾವು 13ಎಂಪಿ ಸೆನ್ಸಾರ್ ಪಡೆದಿದ್ದು, ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ. 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದರೊಂದಿಗೆ 18W ಸಾಮರ್ಥ್ಯ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಈ ಫೋನ್ ಬೆಲೆಯಲ್ಲಿ 300ರೂ. ಏರಿಕೆ ಆಗಿದೆ.

ರೆಡ್ಮಿ 8 ಫೋನ್

ರೆಡ್ಮಿ 8 ಫೋನ್

ರೆಡ್ಮಿ 8 ಫೋನ್ 6.22-ಇಂಚಿನ ಎಚ್‌ಡಿ + ಡಿಸ್ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಮತ್ತು 512GB ವರೆಗೆ ಮೆಮೊರಿ ಹೆಚ್ಚಿಸಲು ಮೈಕ್ರೊ SD ಕಾರ್ಡ್ ಸ್ಲಾಟ್‌ಗಳನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಈ ಫೋನ್ 12 ಎಂಪಿ ಪ್ರೈಮರಿ ಕ್ಯಾಮೆರಾ ಹಾಗೂ 2 ಎಂಪಿ ಸೆಕೆಂಡರಿ ಡೆಪ್ತ್ ಸೆನ್ಸಾರ್ ಕ್ಯಾಮೆರಾ ಒಳಗೊಂಡಿದೆ. 18W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿ ಪಡೆದಿದೆ. ಈ ಫೋನಿನ ಬೆಲೆಯಲ್ಲಿ ಸಹ 300ರೂ. ಏರಿಕೆ ಆಗಿದೆ.

Best Mobiles in India

English summary
Here’s over to the list of phones that have become cheaper and that have see an increase in their prices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X