ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಿಸುವಾಗ ಈ ಫೀಚರ್ಸ್‌ ಬಳಕೆ ಮಾಡಿದ್ದಿರಾ?

|

ಕೊರೊನಾ ವೈರಸ್‌ ಹಾವಳಿಯಿಂದಾಗಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಈ ಅವಧಿಯಲ್ಲಿ ಎಲ್ಲರು ಮನೆಯಲ್ಲಿರುವುದು ಅಗತ್ಯವಾಗಿದ್ದು, ಸಮಯ ಕಳೆಯಲು ಹೆಚ್ಚಿನವರು ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳತ್ತ ಮುಖ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌, ಹಾಟ್‌ಸ್ಟಾರ್‌, ಯೂಟ್ಯೂಬ್‌ ಸೇರಿದಂತೆ ಹಲವು ವಿಡಿಯೊ ಕಂಟೆಂಟ್‌ ಆಪ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ ಚಂದಾದಾರಿಕೆ ಪಡೆಯದೆ ಯೂಟ್ಯೂಬ್‌ ಅನ್ನು ವೀಕ್ಷಿಸಬಹುದಾಗಿದ್ದು, ಅನೇಕರಿಗೆ ಇದು ಅನುಕೂಲಕರವಾಗಿದೆ.

ಗೂಗಲ್ ಒಡೆತನದ ಯೂಟ್ಯೂಬ್

ಹೌದು, ಗೂಗಲ್ ಒಡೆತನದ ಯೂಟ್ಯೂಬ್ ಆಪ್‌ ಎಲ್ಲ ವಿಷಯದ ಕಂಟೆಂಟ್‌ ಹೊಂದಿದ್ದು, ಸಿನಿಮಾ ವೀಕ್ಷಣೆಗೂ ಅವಕಾಶ ಒದಗಿಸಿದೆ. ಇತರೆ ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳ ಹೆಚ್ಚಿನ ಸೇವೆ ಪಡೆಯಲು ಗ್ರಾಹಕರು ಚಂದಾದಾರಿಕೆ ಪಡೆಯಬೇಕಿರುತ್ತದೆ. ಯೂಟ್ಯೂಬ್‌ನಲ್ಲಿ ಹಾಗಿಲ್ಲ ಅನ್ನೊದು ಪ್ಲಸ್‌ ಪಾಯಿಂಟ್‌ ಆಗಿದೆ. ಹಾಗೆಯೇ ಬಳಕೆದಾರರ ವೀಕ್ಷಣೆಗೆ ನೆರವಾಗುವಂತಹ ಹಲವು ನೂತನ ಫೀಚರ್ಸ್‌ಗಳನ್ನು ಯೂಟ್ಯೂಬ್ ಅಳವಡಿಸಿಕೊಂಡಿದೆ. ಅವುಗಳಲ್ಲಿ ವಿಡಿಯೊ ವೀಕ್ಷಣೆಗೆ ಪೂರಕವಾಗಿರುವ ಫೀಚರ್ಸ್‌ಗಳು ಸೇರಿವೆ. ಅಂತಹ ಫೀಚರ್ಸ್‌ಗಳು ಯಾವುವು ಮತ್ತು ಅವುಗಳನ್ನು ನೀವು ಬಳಕೆ ಮಾಡಿದ್ದಾರೆ ಒಂದ್ಸಾರಿ ನೋಡಿಬಿಡಿ.

ಡಾರ್ಕ್ ಥೀಮ್ ಆಯ್ಕೆ

ಡಾರ್ಕ್ ಥೀಮ್ ಆಯ್ಕೆ

ಇತ್ತೀಚಿಗೆ ಹೆಚ್ಚು ಮುನ್ನೆಲೆಗೆ ಬಂದಿರುವ ಡಾರ್ಕ್‌ ಮೋಡ್‌ ಅಥವಾ ಡಾರ್ಕ್ ಥೀಮ್ ಆಯ್ಕೆಯನ್ನು ಯೂಟ್ಯೂಬ್‌ನಲ್ಲಿಯೂ ಕಾಣಬಹುದಾಗಿದೆ. ಡಾರ್ಕ್‌ ಥೀಮ್‌ ವಿಡಿಯೊ ವೀಕ್ಷಣೆಯನ್ನು ಮತ್ತಷ್ಟು ಸ್ಪಷ್ಟವಾಗಿ ಕಾಣಿಸುತ್ತದೆ ಮತ್ತು ಕಣ್ಣಿಗೂ ಒಳ್ಳೆಯದು. ಬಳಕೆದಾರರು ಯೂಟ್ಯೂಬನಲ್ಲಿ ಡಾರ್ಕ್‌ ಮೋಡ್‌ ಆನ್‌ ಮಾಡಲು ಯೂಟ್ಯೂಬ್ ಮೆನು > ಸೆಟ್ಟಿಂಗ್ ಸೆಲೆಕ್ಟ್ ಮಾಡಿ > ಜನರಲ್ ಆಯ್ಕೆ > ಡಾರ್ಕ್‌ ಥೀಮ್ ಫೀಚರ್ಸ್ ಆನ್ ಮಾಡಿಕೊಳ್ಳಬಹುದಾಗಿದೆ.

ಸ್ವೈಪ್‌ ಆಯ್ಕೆ

ಸ್ವೈಪ್‌ ಆಯ್ಕೆ

ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೊ ವೀಕ್ಷಿಸುತ್ತಿರುವಾಗ ಸ್ವೈಪ್‌ ಆಯ್ಕೆಯನ್ನು ಬಳಸಬಹುದಾಗಿದೆ. ಈ ಆಯ್ಕೆಯಲ್ಲಿ ಬ್ಯಾಕ್‌ ಹೋಗದೆ, ಹಿಂದಿನ ವಿಡಿಯೊ ಮತ್ತು ಮುಂದಿನ ವಿಡಿಯೊ ನೋಡಲು ಅವಕಾಶವಿದೆ. ಡಿಸ್‌ಪ್ಲೇಯಲ್ಲಿಯೇ ಸ್ವೈಪ್‌ ಆಯ್ಕೆ ಬಳಸಬಹುದಾಗಿದ್ದು, ಲೆಫ್ಟ್‌ ಸ್ವೈಪ್‌ ಮಾಡಿದರೇ ಹಿಂದಿನ ವಿಡಯೊ ಮತ್ತೆ ಪ್ಲೇ ಆಗುತ್ತದೆ. ಹಾಗೆಯೇ ಬಲಕ್ಕೆ ಸ್ವೈಪ್ ಮಾಡಿದರೇ ಮುಂದಿನ ವಿಡಿಯೊ ಪ್ಲೇ ಆಗುತ್ತದೆ.

ವಿಡಿಯೊ ಕ್ವಾಲಿಟಿ ಬದಲಿಸಬಹುದು

ವಿಡಿಯೊ ಕ್ವಾಲಿಟಿ ಬದಲಿಸಬಹುದು

ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಣೆ ಮಾಡುವಾಗ ಪ್ಲೇ ಆಗುತ್ತಿರುವ ವಿಡಿಯೊ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಆಯ್ಕೆ ನೀಡಲಾಗಿದೆ. ಅದಕ್ಕಾಗಿ ಬಲಕ್ಕೆ ಕಾಣುವ ಮೂರು ಡಾಟ್‌ಗಳ ಮೆನು ಬಟನ್ ಸೆಲೆಕ್ಟ್ ಮಾಡಿರಿ. ಆನಂತರ ಕಾಣಿಸುವ ಆಯ್ಕೆಗಳ ಪಟ್ಟಿಯಲ್ಲಿ ಕ್ವಾಲಿಟಿ ಆಯ್ಕೆಯನ್ನು ಟ್ಯಾಪ್ ಮಾಡಿ ನಿಮಗೆ ಅಗತ್ಯವೆನಿಸುವ ಗುಣಮಟ್ಟದಲ್ಲಿ ಸೆಟ್‌ ಮಾಡಿ ವಿಡಿಯೊ ನೋಡಬಹುದಾಗಿದೆ.

ಶಾರ್ಟ್‌ಕಟ್‌ ಕೀ ವರ್ಡ್‌ ಬಳಸಬಹುದು

ಶಾರ್ಟ್‌ಕಟ್‌ ಕೀ ವರ್ಡ್‌ ಬಳಸಬಹುದು

ಕಂಪ್ಯೂಟರ್‌ನಲ್ಲಿ ಯೂಟ್ಯೂಬ್‌ ವೀಕ್ಷಿಸುತ್ತಿದ್ದರೇ ಕೇಲವು ಶಾರ್ಟ್‌ಕಟ್ ಕೀ ಬಳಸಿ ವಿಡಿಯೊ ನಿಯಂತ್ರಿಸುವ ಅವಕಾಶವಿದೆ. ವಿಡಿಯೊ ಫಾರ್ವರ್ಡ್‌ ಮಾಡಲು ಕ್ಯಾಪ್ಸ್ J ಕೀ ಬಳಕೆಯಾದರೇ, ಬ್ಯಾಕ್‌ವರ್ಡ್‌ ಮಾಡಲು ಕ್ಯಾಪ್ಸ್ L ಕೀ ನೆರವಾಗಲಿದೆ. ಹಾಗೆಯೇ ಕ್ಯಾಪ್ಸ್ K ಕೀ ಒತ್ತಿ ವಿಡಿಯೊ ನಿಲ್ಲಿಸಬಹುದು (pauses), ಮತ್ತು ಕ್ಯಾಪ್ಸ್‌ M ಪ್ರೆಸ್‌ ಮಾಡಿ ವಿಡಿಯೊದ ಆಡಿಯೊವನ್ನು ಮ್ಯೂಟ್‌ ಮಾಡಬಹುದಾಗಿದೆ.

ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್‌

ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್‌

ಯೂಟ್ಯೂಬ್‌ ವಿಡಿಯೊ ವೀಕ್ಷಿಸುವಾಗ ಫಾರ್ವರ್ಡ್‌ ಮತ್ತು ಬ್ಯಾಕ್‌ವರ್ಡ್‌ ಮಾಡಲು ಅವಕಾಶವಿದ್ದು, ಅದಕ್ಕಾಗಿ ಆಯ್ಕೆಗಳು ಇವೆ. ವಿಡಿಯೊವನ್ನು ಸುಮಾರು 10 ಸೆಕೆಂಡ್‌ಗೆ ಫಾರ್ವರ್ಡ್‌ ಮಾಡಲು ಪೇ ಆಗುತ್ತಿರುವ ವಿಡಿಯೊ ಡಿಸ್‌ಪ್ಲೇ ಬಲಕ್ಕೆ ಎರಡು ಟ್ಯಾಪ್‌ ಮಾಡಿರಿ. ಹಾಗೆಯೇ ಎಡಕ್ಕೆ ಡಬಲ್ ಟ್ಯಾಪ್ ಮಾಡಿದರೇ ವಿಡಿಯೊವು ಬ್ಯಾಕ್‌ವರ್ಡ್‌ ಆಗುತ್ತದೆ.

Best Mobiles in India

English summary
YouTube Added some new features to Improve users video watching experience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X