ಐಓಎಸ್ 8 ಗಿಂತ ಐಓಎಸ್ 9 ಅತ್ಯುತ್ತಮ ಏಕೆ?

By Shwetha

  ನಗರದಲ್ಲಿ ಐಓಎಸ್‌ನ ತಾಜಾ ಆವೃತ್ತಿ ಬಂದಿದೆ. ಆದರೆ ಫಾಂಟ್ ಬದಲಾವಣೆ ಮಾತ್ರವಲ್ಲದೆ ಆಪಲ್‌ನ ಹೊಸ ಮೊಬೈಲ್ ಒಎಸ್‌ನಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿದ್ದೇವೆ. ಐಓಎಸ್ 8 ಗಿಂತಲೂ ಐಓಎಸ್ 9 ಏಕೆ ಅತ್ಯುತ್ತಮ ಎಂಬುದನ್ನೇ ಇಂದಿನ ಲೇಖನ ನಿಮಗೆ ತಿಳಿಸಿಕೊಡಲಿದೆ.

  ಓದಿರಿ: ಐಓಎಸ್ 8 ಸಮಸ್ಯೆಯೇ? ಇಲ್ಲಿದೆ ಪರಿಹಾರ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಐಕ್ಲೌಡ್‌ನಿಂದ ಇನ್ನಷ್ಟು ಸುಲಭವಾಗಿ ಪ್ರವೇಶ

  ಐಓಎಸ್ 9 ಇನ್ನಷ್ಟು ಸುಲಭವಾಗಿ ಐಕ್ಲೌಡ್‌ಗೆ ನಿಮ್ಮನ್ನು ಪ್ರವೇಶಿಸುವಂತೆ ಮಾಡುತ್ತಿದೆ. ಸೆಟ್ಟಿಂಗ್ಸ್, ಐಕ್ಲೌಡ್ ತದನಂತರ ಐಕ್ಲೌಡ್ ಡ್ರೈವ್ ಮತ್ತು ಹೋಮ್ ಸ್ಕ್ರೀನ್‌ನಲ್ಲಿ ತೋರಿಸಿರುವ ಸ್ವಿಚ್ ಮಾರ್ಕ್ ಅನ್ನು ಟಾಗಲ್ ಮಾಡಿ ಇಲ್ಲಿ ನಿಮಗೆ ಐಕಾನ್ ಶಾರ್ಟ್‌ಕಟ್ ದೊರೆಯುತ್ತದೆ.

  ಬ್ಯಾಟರಿ

  ನಿಮ್ಮ ಫೋನ್ ಕಡಿಮೆ ಬ್ಯಾಟರಿ ಮೋಡ್‌ನಲ್ಲಿದ್ದಾಗ ಸೆಟ್ಟಿಂಗ್ಸ್‌ನೊಳಗೆಯೇ ಬ್ಯಾಟರಿ ಮೆನುವನ್ನು ನಿಮಗೆ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಬ್ಯಾಟರಿ ಐಕಾನ್ ಹಳದಿ ಬಣ್ಣಕ್ಕೆ ತಿರುಗುತ್ತದೆ.

  ವೈಫೈ ಸಂಪರ್ಕ

  ನೀವು ಬಳಸುತ್ತಿರುವ ವೈಫೈ ಸಂಪರ್ಕ ದುರ್ಬಲವಾಗಿದೆ ಎಂಬ ಸಂದರ್ಭದಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ನಂತರ ಸೆಲ್ಯುಲಾರ್ ಮತ್ತು ವೈಫೈ ಅಸಿಸ್ಟ್ ಟಾಗಲ್‌ಗೆ ಸ್ಪರ್ಶಿಸಿ

  ವೀಡಿಯೊ ಜೂಮ್ ಇನ್ ಮಾಡಲು

  ನಿಮ್ಮ ವೀಡಿಯೊ ಕ್ಲಿಪ್‌ಗಳನ್ನು ಜೂಮ್ ಇನ್ ಮಾಡಬಹುದು. ವೀಡಿಯೊ ಆರಿಸಲು ಮತ್ತು ರೆಕಾರ್ಡ್ ಮಾಡಲು ಹಲವಾರು ವಿಧಾನಗಳಿದ್ದು ಹೊಸ ಓಎಸ್ ಇದಕ್ಕೆಲ್ಲಾ ನಿಮಗೆ ಬೆಂಬಲವನ್ನು ಒದಗಿಸಲಿದೆ.

  ನಿಮ್ಮ ಮ್ಯೂಸಿಕ್ ವೇಗಗೊಳಿಸಲು

  ನವೀಕೃತ ಐಓಎಸ್ 9 ಗೆ ಡಿವೈಸ್‌ಗೆ ನಿಮ್ಮ ಹೆಡ್‌ಫೋನ್ ಸಂಪರ್ಕಪಡಿಸಲು ಪ್ರಯತ್ನಿಸುತ್ತಿದ್ದೀರಾ, ನೀವು ಇತ್ತೀಚೆಗೆ ಬಳಸಿದ ಮ್ಯೂಸಿಕ ಪ್ಲೇಯರ್ ಅಪ್ಲಿಕೇಶನ್ ಆಗಿ ಪ್ರದರ್ಶನಗೊಳ್ಳುತ್ತಿರುವ ಸಣ್ಣ ಐಕಾನ್ ಒಂದನ್ನು ಇದು ನಿಮಗೆ ತೋರಿಸುತ್ತದೆ.

  ನಿಮ್ಮ ಇಮೇಲ್‌ಗಳಿಂದ ಈವೆಂಟ್ ಸೇರಿಸಿ

  ಆಪಲ್‌ನ ಹೊಸ, ಸ್ಮಾರ್ಟರ್ ಎಂದೆನಿಸಿರುವ ಸಿರಿ ಮತ್ತು ಐಓಎಸ್ ಸ್ಟ್ರೆಟಜಿ ನಿಮ್ಮ ಇಮೇಲ್ ಸಂದೇಶಗಳಲ್ಲಿ ಈವೆಂಟ್‌ಗಳನ್ನು ಒಳಗೊಂಡಿದ್ದು ನಿಮ್ಮ ಕ್ಯಾಲೆಂಡರ್‌ಗೆ ಸ್ವಯಂಚಾಲಿತವಾಗಿ ಸೇರಿಸುತ್ತದೆ.

  ಸೆಟ್ಟಿಂಗ್ಸ್ ಮೂಲಕ ಹುಡುಕಾಟ

  ಸೆಟ್ಟಿಂಗ್ಸ್‌ನಲ್ಲಿ ಮುಂಭಾಗ ಪರದೆಯ ಮೇಲ್ಭಾಗದಲ್ಲಿ ಹೊಸ ಸರ್ಚ್ ಬಾಕ್ಸ್ ಅನ್ನು ನೀವು ಕಾಣುತ್ತೀರಿ. ಇಲ್ಲಿ ನಿಮ್ಮ ಪ್ರಶ್ನೆಯನ್ನು ನಮೂದಿಸಿ

  ಜಾಹೀರಾತುಗಳನ್ನು ನಿರ್ಬಂಧಿಸಿ

  ಇದೀಗ ಐಓಎಸ್‌ನಲ್ಲಿ ಸಫಾರಿ ಮೊಬೈಲ್ ಜಾಹೀರಾತುಗಳನ್ನು ನಿರ್ಬಂಧಿಸುತ್ತದೆ. ಇದರಿಂದ ಯಾವುದೇ ತೊಂದರೆಯಿಲ್ಲದೆ ಇಂಟರ್ನೆಟ್ ಅನ್ನು ನಿಮಗೆ ಬ್ರೌಸ್ ಮಾಡಬಹುದಾಗಿದೆ.

  ಹೆಚ್ಚು ಫೋಟೋಗಳನ್ನು ಆರಿಸಿ

  ಸ್ಪಿಲ್ಟ್ ವೀಕ್ಷಣೆ, ಹೊಸ ಅಪ್ಲಿಕೇಶನ್‌ಗಳನ್ನು ಮರೆತುಬಿಡಿ, ಏಕೆಂದರೆ ಐಓಎಸ್ 9 ಹಿಂದೆಂದಿಗಿಂತಲೂ ಇನ್ನಷ್ಟು ಸರಳವಾಗಿ ಹೆಚ್ಚು ಫೋಟೋಗಳನ್ನು ಆರಿಸಲು ನಿಮ್ಮನ್ನು ಅನುಮತಿಸುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  It may have come to your attention that there's a fresh version of iOS in town. But aside from a font change, what's different about this new edition of Apple's mobile OS? To help you navigate around iOS 9, we've listed all the tricks that it can do that were beyond the capabilities of iOS 8.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more