Just In
Don't Miss
- Lifestyle
"ಭಾನುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Movies
ರಿಷಿ ಕಪೂರ್ ಅರ್ಧಕ್ಕೆ ಬಿಟ್ಟು ಹೋದ ಪಾತ್ರ ಮುಂದುವರಿಸಲಿದ್ದಾರೆ ಪರೇಶ್ ರಾವಲ್
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸದ್ಯದಲ್ಲಿಯೇ ಆಂಡ್ರಾಯ್ಡ್ ಫೋನ್ ಸೇರಲಿದೆ ನೀವು ನಿರೀಕ್ಷಿಸುತ್ತಿದ್ದ ಫೀಚರ್!
ಸದ್ಯ ಆಂಡ್ರಾಯ್ಡ್ ಮತ್ತು ಐಓಎಸ್ ಆಧಾರಿತ ಎರಡು ಮಾದರಿಯ ಫೋನ್‌ಗಳಿಗೂ ಡಿಮ್ಯಾಂಡ್ ಇದ್ದು, ಅವುಗಳು ತಮ್ಮವೇ ಆದ ವೈಶಿಷ್ಟತೆಯ ಫೀಚರ್ಸ್‌ಗಳನ್ನು ಹೊಂದಿವೆ. ಪ್ರತಿ ಬಳಕೆದಾರರಿಗೂ ಡಾಟಾ/ಫೈಲ್ ಶೇರಿಂಗ್ ಅಗತ್ಯ ಫೀಚರ್ ಆಗಿದ್ದು, ವೇಗವಾಗಿ ಫೋಟೊ, ವಿಡಿಯೊ, ಹಾಡು, ಡಾಕ್ಯುಮೆಂಟ್ ಫೈಲ್‌ಗಳನ್ನು ಇನ್ನೊಂದು ಫೋನಿಗೆ ವರ್ಗಾಯಿಸಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಗೂಗಲ್ ಕಾರ್ಯೋನ್ಮುಖವಾಗಿದೆ.

ಹೌದು, ಗೂಗಲ್ ಸಂಸ್ಥೆ ಶೀಘ್ರದಲ್ಲೇ ನೂತನ ಅಂಡ್ರಾಯ್ಡ್ ಅಪ್‌ಡೇಟ್ ಆವೃತ್ತಿಯಲ್ಲಿ ನಿಯರ್‌ಬೈ ಶೇರಿಂಗ್(Nearby Sharing) ಸೇವೆಯನ್ನು ಪರಿಚಯಿಸಲಿದೆ ಎನ್ನುವ ಮಾಹಿತಿಯನ್ನು XDA ಡೆವಲಪರ್ಸ್ ಬಹಿರಂಗಪಡಿಸಿದೆ. ಗೂಗಲ್ ಈ ಹಿಂದೆ ಪರಿಚಯಿಸಿದ್ದ ಫಾಸ್ಟ್ ಶೇರ್ ಸೇವೆಯನ್ನೇ ಇದೀಗ ನಿಯರ್‌ಬೈ ಶೇರಿಂಗ್ ಹೆಸರಿನಲ್ಲಿ ಹೊಸ ಅಪ್‌ಡೇಟ್‌ನೊಂದಿಗೆ ಪರಿಚಯಿಸಲಿದೆ. ಲೊಗೊ ಸಹ ಬದಲಾವಣೆ ಮಾಡಲಿದೆ ಎನ್ನಲಾಗಿದೆ.

ನಿಯರ್‌ಬೈ ಶೇರಿಂಗ್ ಆಪಲ್‌ನ ಏರ್‌ಡ್ರಾಪ್ ಮಾದರಿಯಂತೆ ಇರಲಿದ್ದು, ಈ ಸೇವೆಯು ಬಳಕೆದಾರರಿಗೆ ವೇಗವಾಗಿ ಎಲ್ಲ ಮಾದರಿಯ ಫೈಲ್ ಟ್ರಾನ್ಸ್‌ಫರ್ ಮಾಡಲು ನೆರವಾಗಲಿದೆ ಎಂದು ಹೇಳಲಾಗಿದೆ. ಕೇವಲ ಒಂದು ಫೂಟ್ ಅಂತರದಲ್ಲಿನ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್ ಮಾಡಬಹುದಾಗಿದ್ದು, ಕನೆಕ್ಟ್ ಮಾಡಲು ಬಳಕೆದಾರರು ವೈಫೈ, ಬ್ಲೂಟೂತ್ ಮತ್ತು ಲೊಕೇಶನ್ ಆಯ್ಕೆಗಳನ್ನು ಆನ್ ಮಾಡಿಕೊಳ್ಳಬೇಕಿರುತ್ತದೆ.

ಆಪಲ್ ಏರ್‌ಡ್ರಾಪ್‌ನಂತೆ, ನಿಯರ್‌ಬೈ ಶೇರಿಂಗ್ ಕೇವಲ ಆಂಡ್ರಾಯ್ಡ್ ಡಿವೈಸ್‌ಗಳಿಗೆ ಮಾತ್ರ ಈ ಸೇವೆ ಬಳಕೆಯಾಗಲಿದೆ. ಈ ಸೇವೆಯಲ್ಲಿ ಬಳಕೆದಾರರು ಫೋಟೊ, ವಿಡಿಯೊ, ಯುಆರ್‌ಎಲ್ ಲಿಂಕ್ಸ್, ಕಾಪಿ ಮಾಡಿರುವ ಟೆಕ್ಸ್ಟ್, ಸೇರಿದಂತೆ ಎಲ್ಲ ಮಾದರಿಯ ಫೈಲ್‌ಗಳನ್ನು ಇನ್ನೊಂದು ಆಂಡ್ರಾಯ್ಡ್ ಡಿವೈಸ್‌ಗೆ ಶೇರ್ ಮಾಡಬಹುದಾಗಿದೆ. ಗೂಗಲ್ ಸಂಸ್ಥೆಯ ಈ ಹೊಸ ಫೈಲ್ ಶೇರಿಂಗ್ ಸೇವೆಯು ಆಂಡ್ರಾಯ್ಡ್ ಬಳಕೆದಾರರಿಗೆ ಅನುಕೂಲವಾಗಲಿದೆ.

ಇನ್ನು ಚೀನಾ ಮೂಲದ ಶಿಯೋಮಿ, ಒಪ್ಪೊ ಮತ್ತು ವಿವೋ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕಂಪನಿಗಳು ಸಹ ಪ್ರತ್ಯೇಕ ಫೈಲ್ ಟ್ರಾನ್ಸ್‌ಫರ್ ಸೇವೆಗಳನ್ನು ಪರಿಚಯಿಸಿದ್ದವು. ಕಳೆದ ವರ್ಷ ಈ ಕಂಪನಿಗಳು 'ಪೀರ್-ಟು-ಪೀರ್ ಟ್ರಾನ್ಸ್ಮಿಷನ್ ಅಲೈಯನ್ಸ್' (Peer-to-Peer Transmission Alliance) ಘೋಷಿಸಿದ್ದವು. ಈ ಸೇವೆಯು ಕೇಲವು ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯ ಇದೆ. ಉಳಿದಂತೆ 'ಶೇರ್ ಇಟ್' ಆಪ್ ಸಹ ಫೈಲ್ ಶೇರಿಂಗ್‌ನಲ್ಲಿ ಜನಪ್ರಿಯತೆ ಪಡೆದಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190