ಸತತ 20 ವರ್ಷ ಸೆಲ್ಫಿ ಕ್ಲಿಕ್ಕಿಸಿರುವ ವ್ಯಕ್ತಿಯ ರೋಚಕ ಕಹಾನಿ ವೈರಲ್!

|

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಅನೇಕ ವಿಷಯಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಯಾವುದೇ ಸದ್ದು ಮಾಡುವುದಿಲ್ಲ. ಆದರೆ ಇನ್ನು ಕೆಲವು ಬಹುಬೇಗನೇ ವೈರಲ್ ಆಗಿಬಿಡುತ್ತವೆ. ಇಂಥಹದ್ದೆ ವಿಷಯ ವೈರಲ್ ಆಗುತ್ತೆ ಎಂದು ಹೇಳುವುದು ಕಷ್ಟ ಏಕೆಂದರೇ ನಾವು ನಿರೀಕ್ಷಿಸಿದ ಸಣ್ಣ ಪುಟ್ಟ ಘಟನೆಗಳು, ಸಂಗತಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ರೂಪ ಪಡೆದುಕೊಳ್ಳುತ್ತವೆ. ಅಂತಹ ಒಂದು ವೈರಲ್ ಸುದ್ದಿ ಇಲ್ಲದೆ ನೋಡಿ.

ನೋವಾ ಕಲಿನಾ

ಹೌದು, ನ್ಯೂಯಾರ್ಕ ಮೂಲದ ನೋವಾ ಕಲಿನಾ ಎಂಬ ಫೋಟೊಗ್ರಾಫರ್ ಈಗ ವೈರಲ್ ಆಗಿರುವ ವ್ಯಕ್ತಿ. ಅರೇ ಈತ ಅಂತಹದ್ದೆನು ಮಾಡಿದ ಅಂತ ಯೋಚಿಸುತ್ತಿದ್ದಿರಾ? ನೋವಾ ಕಲಿನಾ ಸುಮಾರು 20 ವರ್ಷ ಸೆಲ್ಫಿ ಫೋಟೊ ಕ್ಲಿಕ್ಕಿಸುತ್ತಾ ಬಂದಿದ್ದಾನೆ. ಅದೇ ಇವತ್ತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈತ 19 ವರ್ಷ ವಯಸ್ಸು ಇದ್ದಾಗಿನಿಂದ ಅಂದರೆ ಜನೆವರಿ 11, 2000 ರಿಂದ ಪ್ರತಿದಿನ ಒಂದು ಸೆಲ್ಫಿ ಫೋಟೊ ಸೆರೆಹಿಡಿಯುತ್ತಾ ಬಂದಿದ್ದಾನೆ. ಅದರ ವಿಡಿಯೊ ಇಂದು ವೈರಲ್ ಆಗಿದೆ. ಈ ಲೇಖನದ ಕೊನೆಯಲ್ಲಿ ಆ ವಿಡಿಯೊ ಇದೆ.

ಸೆಲ್ಫಿ ಫೋಟೊ

20 ವರ್ಷದ ಹಿಂದೆ ಸೆಲ್ಫಿ ಫೋಟೊ ಹೇಗೆ ಸಾಧ್ಯವಿತ್ತು ಎನ್ನುವ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಮೂಡುತ್ತೆ. ಈತ ಕ್ಯಾಮೆರಾದಿಂದ (reversible viewfinder) ರಿವರ್ಸೆಬಲ್ ವ್ಯೂವ್‌ಫೈಂಡರ್ ನಿಂದ ತನ್ನ ಫೋಟೊ ತಾನೆ ಕ್ಲಿಕ್ಕಿಸುತ್ತಾ ಇದ್ದ. ಪ್ರತಿದಿನ ಕ್ಯಾಮೆರಾಗೆ ಒಂದೆ ರೀತಿಯ ಮುಖಭಾವ ವ್ಯಕ್ತಪಡಿಸಿದ್ದಾನೆ. ಮುಂದೆ 2006ರಲ್ಲಿ ಈ ಕಾಯಕಕ್ಕೆ 'ಎವರಿಡೇ (Everyday)' ಎಂದು ಕರೆದಿದ್ದಾನೆ.

 ಈ ಪ್ರೊಜೆಕ್ಟ್‌

ಅಲ್ಲಿನ Simpsons ಮತ್ತು ಇತರೆ ಕೆಲವು ಪ್ರಮುಖ ಕಂಪನಿಗಳು ನೋವಾ ಕಲಿನಾನ ಎವರಿಡೇ ಪ್ರೊಜೆಕ್ಟ್ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದವು. ಪ್ರತಿಯಾಗಿ 2012ರಲ್ಲಿ ಈತ ಈ ಪ್ರೊಜೆಕ್ಟ್‌ನ ಮಾಹಿತಿ ಅವರೊಂದಿಗೆ ಶೇರ್ ಮಾಡಿದ. ಅಲ್ಲಿಂದ ಆತನ ಈ ಕೆಲಸ ಹೆಚ್ಚು ಜನರನ್ನು ತಲುಪಲು ಶುರುವಾಯಿತು. ಬೇರೆ ಬೇರೆ ಬ್ಯಾಕ್‌ಗ್ರೌಂಡ್‌ ಫೋಟೊಗಳನ್ನು ಸೆರೆಹಿಡಿದಿದ್ದಾನೆ. ಮೊದಲ ಫೋಟೊ ಅಪಾರ್ಟ್‌ಮೆಂಟಿನ ಬ್ಯಾಕ್‌ಗ್ರೌಂಡ್‌ನಲ್ಲಿದ್ದು, ಮುಂದೆ 20 ವರ್ಷದಲ್ಲಿ ಹಲವು ಬ್ಯಾಕ್‌ಗ್ರೌಂಡ್‌ಗಳು ಕಾಣಿಸಿಕೊಂಡಿವೆ.

ಮೊದಲ ಬಾರಿಗೆ ವೈರಲ್

ಈತನ ಈ ಪ್ರೊಜೆಕ್ಟ್ ಮೊದಲ ಬಾರಿಗೆ ವೈರಲ್ ಆದಾಗ ಬಹಳಷ್ಟು ಜನರಿಗೆ ಅವರ ವಯೋಮಾನವನ್ನು ಚಿತ್ರಗಳ/ಫೋಟೊ ರೂಪದಲ್ಲಿ ಸೆರೆಹಿಡಿದಿಡುವಂತೆ ಪ್ರೇರೆಪಿಸಿತು. ಕೆಲವು ಚಿಕ್ಕ ಮಕ್ಕಳು ಫೋಟೊ ಕ್ಲಿಕ್ಕಿಸಲು ಶುರುಮಾಡಿದರು. ಈ ಪ್ರಕ್ರಿಯೇಯಲ್ಲಿ ಬಾಲ್ಯಾವಸ್ಥೆಯಿಂದ ಕೊನೆಯ ವೃದ್ಧಾಪ್ಯದ ವರೆಗಿನ ಬದಲಾವಣೆಗಳನ್ನು ಸೆರೆಹಿಡಿದ ಫೋಟೊಗಳ ಮುಖಭಾವದಲ್ಲಿ ನೆನಪಿಸಿಕೊಳ್ಳಬಹುದು ಎನ್ನಲಾಗಿದೆ.

ಕೊನೆಉಸಿರು

20 ವರ್ಷದಿಂದ ಫೋಟೊ ಸೆರೆಹಿಡಿಯುತ್ತಾ ಸಾಗಿ ಬಂದಿರುವ ನೋವಾ ಕಲಿನಾ ಈಗ ಒಬ್ಬ ಸೆಲ್ಫಿ ಕಲಾವಿದನಾಗಿ ಗುರುತಿಸಿಕೊಂಡಿದ್ದಾನೆ. ತನ್ನ ಕೊನೆಉಸಿರು ಇರುವವರೆಗೂ ಸೆಲ್ಫಿ ಫೋಟೊ ಕ್ಲಿಕ್ಕಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾನೆ.

Most Read Articles
Best Mobiles in India

English summary
Kalina decided to pick up this habit at age 19 on January 11, 2000. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X