ಐಫೋನ್‌ನಲ್ಲಿರುವ ಈ ಫೀಚರ್ಸ್‌ ಬಗ್ಗೆ ನಿಮಗೆ ತಿಳಿದಿದೆಯಾ? ಇದರ ಉಪಯೋಗ ಏನು?

|

ಆಪಲ್‌ ಕಂಪೆನಿಯ ಐಫೋನ್‌ಗಳು ತಮ್ಮ ಗುಣಮಟ್ಟ ಹಾಗೂ ಆಕರ್ಷಕ ಫೀಚರ್ಸ್‌ಗಳಿಗೆ ಹೆಸರುವಾಸಿಯಾಗಿವೆ. ಇನ್ನು ಐಫೋನ್‌ನಲ್ಲಿ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದರಲ್ಲಿ ಅತ್ಯುತ್ತಮ ಪ್ರೈವೆಸಿ ಫೀಚರ್ಸ್‌ಗಳು ಕೂಡ ಸೇರಿವೆ. ಇದರ ಜೊತೆಗೆ ಐಫೋನ್‌ನಲ್ಲಿ ಕೆಲವು ಹಿಡನ್‌ ಫೀಚರ್ಸ್‌ಗಳನ್ನು ಕೂಡ ನೀಡಲಾಗಿದೆ. ಆದರೆ ಇವುಗಳ ಬಗ್ಗೆ ಕೆಲವರಿಗೆ ತಿಳಿದಿರುವುದೇ ಇಲ್ಲ. ಈ ಫೀಚರ್ಸ್‌ಗಳು ಒಂದು ರೀತಿಯಲ್ಲಿ ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮ ಪಡಿಸಲಿವೆ.

ಐಫೋನ್‌ನಲ್ಲಿರುವ ಈ ಫೀಚರ್ಸ್‌ ಬಗ್ಗೆ ನಿಮಗೆ ತಿಳಿದಿದೆಯಾ? ಇದರ ಉಪಯೋಗ ಏನು?

ಹೌದು, ಐಫೋನ್‌ನಲ್ಲಿ ಹಲವು ಹಿಡನ್‌ ಫೀಚರ್ಸ್‌ಗಳನ್ನು ಕಾಣಬಹುದು. ಈ ಫೀಚರ್ಸ್‌ಗಳು ನಿಮ್ಮ ಅವಶ್ಯಕತೆಗೆ ತಕ್ಕಂತೆ ಬಳಸಬಹುದಾಗಿದೆ. ಒಂದು ವೇಳೆ ನೀವು ಮಳೆಯ ಶಬ್ದವನ್ನು ಕೇಳುತ್ತಾ ನಿದ್ದೆ ಮಾಡಬೇಕೆಂದು ಬಯಸಿದರೆ ಮಳೆ ಇಲ್ಲದೆ ಹೋದರೂ ಐಫೋನ್‌ನಲ್ಲಿ ಮಳೆಯ ಶಬ್ದವನ್ನು ಕೇಳಬಹುದು. ಐಫೋನ್‌ ಬ್ಯಾಕ್‌ಗ್ರೌಂಡ್‌ ಸೌಂಡ್‌ಗಳನ್ನು ಆಕ್ಟಿವ್‌ ಮಾಡುವ ಮೂಲಕ ಅನುಭವಿಸಬಹುದಾಗಿದೆ. ಹಾಗಾದ್ರೆ ಐಫೋನ್‌ನಲ್ಲಿರುವ ಈ ಹಿಡನ್‌ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌ ನೇರವಾಗಿ ವೈಟ್‌ ನಾಯ್ಸ್‌ ಜನರೇಟ್‌ ಮಾಡುವ ಇನ್‌ಬಿಲ್ಟ್‌ ಟೂಲ್‌ ಅನ್ನು ಹೊಂದಿದೆ. ಇದರ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದೆ ಇಲ್ಲ. ಈ ಫೀಚರ್ಸ್‌ ಅನ್ನು ನೀವು ನಿಮ್ಮ ಐಫೋನ್‌ ಎಂಟ್ರಿ ವಿಭಾಗದಲ್ಲಿಯೇ ಕಾಣಬಹುದು. ಮಳೆಹನಿಗಳು, ಸಾಗರದಂತಹ ವಿವಿಧ ಶಬ್ದಗಳನ್ನು ಪ್ಲೇ ಮಾಡಲು ಅವಕಾಶ ನೀಡುವ ಫೀಚರ್ಸ್‌ಗಳು ಇದಾಗಿವೆ. ಆದರೆ ಈ ಫೀಚರ್ಸ್‌ಗಳು iOS 15 ನಲ್ಲಿ ರನ್‌ ಆಗುವ ಐಫೋನ್‌ಗಳಲ್ಲಿ ಮಾತ್ರ ಕಾಣಬಹುದಾಗಿದೆ. ಮಳೆ ಶಬ್ದವನ್ನು ಹೊರಡಿಸುವ ಫೀಚರ್ಸ್‌ ಆನ್‌ ಮಾಡುವ ಮೂಲಕ ಮಳೆ ಶಬ್ದವನ್ನು ಆಲಿಸುತ್ತಾ ನಿದ್ರೆ ಮಾಡಬಹುದಾಗಿದೆ.

ಐಫೋನ್‌ನಲ್ಲಿರುವ ಈ ಫೀಚರ್ಸ್‌ ಬಗ್ಗೆ ನಿಮಗೆ ತಿಳಿದಿದೆಯಾ? ಇದರ ಉಪಯೋಗ ಏನು?

ಇದಲ್ಲದೆ ಈ ಮಳೆ ಅಥವಾ ಸಾಗರದ ಶಬ್ದವನ್ನು ವಿಡಿಯೋ ಕಂಟೆಂಟ್‌ನಲ್ಲಿಯೂ ಕೂಡ ಬಳಸಬಹುದಾಗಿದೆ. ಇಲ್ಲವೇ ಪಾಡ್‌ಕಾಸ್ಟ್‌ಗಳಿಗೆ ಬ್ಯಾಕ್‌ಗ್ರೌಂಡ್‌ ಸೌಂಡ್‌ ಆಗಿಯೂ ಬಳಸಬಹುದು. ಪ್ರಸ್ತುತ ಈ ರೀತಿಯ ಆಯ್ಕೆಗಳು ಕೆಲವು ಮಾತ್ರ ಲಭ್ಯವಿದೆ. ಇನ್ನು ಈ ಹಿಡನ್‌ ಫೀಚರ್ಸ್‌ಗಳನ್ನು ನಿಮ್ಮ ಐಫೋನ್‌ನಲ್ಲಿ ಆಕ್ಟಿವ್‌ ಮಾಡಬೇಕಾದ್ರೆ ಅನುಸರಿಬೇಕಾದ ಕ್ರಮಗಳನ್ನು ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಬ್ಯಾಕ್‌ಗ್ರೌಂಡ್‌ ಸೌಂಡ್‌ ಅನ್ನು ಆಕ್ಟಿವ್‌ ಮಾಡುವುದು ಹೇಗೆ?
* ಐಫೋನ್‌ನಲ್ಲಿ ಸೆಟ್ಟಿಂಗ್ಸ್‌ ಹೋಗಿ ಮತ್ತು 'Accessibility' ಟ್ಯಾಬ್ ಅನ್ನು ಟ್ಯಾಪ್‌ ಮಾಡಿ
* ಇದೀಗ ನೀವು ಆಡಿಯೋ/ವಿಷುಯಲ್ ಆಯ್ಕೆಗಾಗಿ ಕೆಳಗೆ ಸ್ಕ್ರಾಲ್ ಮಾಡಿ.
* ನಂತರ ನೀವು 'ಬ್ಯಾಕ್‌ಗ್ರೌಂಡ್‌ ಸೌಂಡ್ಸ್' ಟ್ಯಾಬ್ ಅನ್ನು ಕಾಣಲಿದೆ.
* ಇದೀಗ ಬ್ಯಾಕ್‌ಗ್ರೌಂಡ್‌ ಸೌಂಡ್ಸ್‌ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
* ಡೀಫಾಲ್ಟ್ ಮಳೆ ಸೌಂಡ್‌ ಅನ್ನು ಕೇಳಲು ಆಕ್ಟಿವ್‌ ಬಟನ್ ಟಾಗಲ್ ಮಾಡಿ.

ಒಂದು ವೇಳೆ ನೀವು ಬ್ಯಾಕ್‌ಗ್ರೌಂಡ್‌ ಸೌಂಡ್‌ ಅನ್ನು ಬದಲಾಯಿಸಲು ಬಯಸಿದರೆ ಸೌಂಡ್‌ ಮೇಲೆ ಕ್ಲಿಕ್‌ ಮಾಡಿದರೆ ನಿಮಗೆ ಇತರೆ ಸೌಂಡ್‌ ಮಾದರಿಗಳು ಕಾಣಲಿವೆ ಅವುಗಳನ್ನು ಆಯ್ಕೆ ಮಾಡುವ ಮೂಲಕ ಬ್ಯಾಕ್‌ಗ್ರೌಂಡ್‌ ಸೌಂಡ್‌ ಸೆಟ್‌ ಮಾಡಬಹುದಾಗಿದೆ.

ಐಫೋನ್‌ನಲ್ಲಿರುವ ಈ ಫೀಚರ್ಸ್‌ ಬಗ್ಗೆ ನಿಮಗೆ ತಿಳಿದಿದೆಯಾ? ಇದರ ಉಪಯೋಗ ಏನು?

ಇನ್ನು ನೀವು ನಿಮ್ಮ ಐಫೋನ್‌ನಲ್ಲಿ ಯಾವುದೇ ವೀಡಿಯೋ ಪ್ಲೇ ಮಾಡಿದಾಗ ನಿಮ್ಮ ಬ್ಯಾಕ್‌ಗ್ರೌಂಡ್‌ ಸೌಂಡ್‌ನ ವಾಲ್ಯೂಮ್‌ ಅನ್ನು ಕಡಿಮೆ ಮಾಡಬಹುದು. ಅಲ್ಲದೆ ನಿಮ್ಮ ಫೋನ್‌ ಲಾಕ್‌ ಆಗಿರುವಾಗ ಬ್ಯಾಕ್‌ಗ್ರೌಂಡ್‌ ಸೌಂಡ್‌ ಅನ್ನು ಲಾಕ್‌ ಮಾಡುವುದಕ್ಕೆ ಕೂಡ ಅವಕಾಸ ನೀಡಲಾಗಿದೆ. ಇದರಿಂದ ನಿಮ್ಮ ಐಫೋನ್‌ ಲಾಕ್‌ ಆದ ತಕ್ಷಣವೇ ಬ್ಯಾಕ್‌ಗ್ರೌಂಡ್‌ ಸೌಂಡ್‌ ಕೂಡ ಲಾಕ್‌ ಆಗಲಿದೆ. ಈ ಮೂಲಕ ನಿಮ್ಮ ಐಫೋನ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಸೌಂಡ್‌ ಅನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
This hidden iPhone feature can help you fall asleep faster; details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X