ಒಂದು ಚಾರ್ಜಿಂಗ್‌ನಲ್ಲಿ 10 ದಿನ ಬಳಸಬಹುದು?; ಈ ಮೊಬೈಲ್‌ ಬಗ್ಗೆ ತಿಳಿದ್ರೆ ವಾವ್‌ ಅಂತೀರಾ!

|

ಸ್ಮಾರ್ಟ್‌ಫೋನ್‌ ವಿಭಾಗದಲ್ಲಿನ ಫೀಚರ್ಸ್‌ಗಳು ಕಾಲಕಾಲಕ್ಕೆ ಬದಲಾಗುತ್ತಿದ್ದು, ಹೆಚ್ಚಿನ ಸೌಲಭ್ಯಗಳು ಬಳಕೆದಾರರಿಗೆ ಲಭ್ಯವಾಗುತ್ತಿವೆ. ಅದರಲ್ಲೂ ಮೊಬೈಲ್‌ ತಯಾರಿಕಾ ಸಂಸ್ಥೆಗಳು ತಮ್ಮದೇ ಆದ ವಿಶೇಷ ತಂತ್ರಜ್ಞಾನ ಬಳಕೆ ಮಾಡಿಕೊಂಡು ಗ್ರಾಹಕರು ಅಚ್ಚರಿ ಪಡುವಂತಹ ಮೊಬೈಲ್‌ಗಳನ್ನ ಪರಿಚಯಿಸುತ್ತಿದ್ದಾರೆ. ಅದರಲ್ಲೂ ಡ್ಯುಯಲ್ ಡಿಸ್‌ಪ್ಲೇ ಆಯ್ಕೆ, ಫೋಲ್ಡಬಲ್‌ ಫೋನ್‌ ಸಾಕಷ್ಟು ಸದ್ದು ಮಾಡುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ವಿಶೇಷವಾದ ಫೋನ್‌ ಒಂದು ಕೆಲವೇ ದಿನಗಳಲ್ಲಿ ನಿಮ್ಮ ಕೈ ಸೇರಲಿದೆ.

ಒಂದು ಚಾರ್ಜಿಂಗ್‌ನಲ್ಲಿ 10 ದಿನ ಬಳಸಬಹುದು!?

ಹೌದು, ಸದ್ಯಕ್ಕೆ ಮೊಬೈಲ್‌ ಎಲ್ಲಾ ರೀತಿಯ ಬಳಕೆಗೂ ಯೋಗ್ಯವಾದ ಡಿವೈಸ್‌ ಆಗಿ ಮಾರ್ಪಟ್ಟಿದೆ. ಹೀಗಾಗಿ ಇದರ ಬ್ಯಾಟರಿ ಹಾಗೂ ಕಾರ್ಯಕ್ಷಮತೆಗೆ ಬಳಕೆದಾರರು ಹೆಚ್ಚಿನ ಗಮನಹರಿಸುತ್ತಾರೆ. ಇದರ ನಡುವೆ ಡೂಗೀ ಸಂಸ್ಥೆಯು ಹೊಸ ಹಾಗೂ ವಿಶೇಷ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲು ಮುಂದಾಗಿದ್ದು, ಈ ಫೋನ್‌ ಅನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ ಬರೋಬ್ಬರಿ 10 ದಿನಗಳ ವರೆಗೆ ಬಳಕೆ ಮಾಡಬಹುದು. ಹಾಗಿದ್ರೆ, ಲೀಕ್‌ ಆದ ಮಾಹಿತಿ ಪ್ರಕಾರ ಇದರ ಬ್ಯಾಟರಿ ಸಾಮರ್ಥ್ಯ ಎಷ್ಟು? ಏನೆಲ್ಲಾ ಫೀಚರ್ಸ್‌ ಹೊಂದಿರಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಡಿಸ್‌ಪ್ಲೇ ವಿವರ
ಡೂಗೀ ವಿ ಮ್ಯಾಕ್ಸ್‌ ಸ್ಮಾರ್ಟ್‌ಫೋನ್ (Doogee V Max) 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಐಪಿಎಸ್‌ನ ದೊಡ್ಡ ಡಿಸ್‌ಪ್ಲೇ ಯನ್ನು ಹೊಂದಿದ್ದು, 120 Hz ರಿಫ್ರೆಶ್ ರೇಟ್ ನೀಡಲಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಟ್‌ ಇರುವುದರಿಂದ ಇನ್ನಷ್ಟು ರಕ್ಷಣಾತ್ಮಕವಾಗಿದೆ ಎನ್ನಲಾಗಿದೆ.

ಪ್ರೊಸೆಸರ್ ಯಾವುವು?
ಡೂಗೀ ವಿ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದ್ದು, ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ 12GB RAM ಹಾಗೂ 256GB ಇಂಟರ್ನಲ್‌ ಸ್ಟೋರೇಜ್ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ
ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಬೆಂಬಲ ಸಹ ಹೊಂದಿದ್ದು, ಇಂಟರ್ನಲ್‌ ಸ್ಟೋರೇಜ್‌ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಒಂದು ಚಾರ್ಜಿಂಗ್‌ನಲ್ಲಿ 10 ದಿನ ಬಳಸಬಹುದು!?

ಕ್ಯಾಮೆರಾ ರಚನೆ
ಈ ಮುಂಬರುವ ಹೊಸ ಸ್ಮಾರ್ಟ್‌ಫೋನ್‌ ಸೋನಿ ನೈಟ್ ವಿಷನ್ ಕ್ಯಾಮೆರಾ ಆಯ್ಕೆ ಹೊಂದಿರಲಿದೆ ಎನ್ನಲಾಗಿದೆ. ಅದರಂತೆ 108MP ಪ್ರಾಥಮಿಕ ಕ್ಯಾಮೆರಾ, 20MP ಸೋನಿ ಸೆನ್ಸರ್‌ ಹಾಗೂ 16MP ಅಲ್ಟ್ರಾ ವೈಡ್ ಲೆನ್ಸ್‌ನ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಇದರಲ್ಲಿರಲಿದೆ. ಹಾಗೆಯೇ ಎಲ್ಇಡಿ ಫ್ಲ್ಯಾಶ್‌ ಲೈಟ್‌ ಫೀಚರ್ಸ್‌ ಸಹ ಗಮನಾರ್ಹ ಎಂದೇ ಹೇಳಬಹುದು. ಇದರೊಂದಿಗೆ ಸೆಲ್ಫಿಗಾಗಿ 32MP ಕ್ಯಾಮೆರಾವನ್ನು ಇದು ಪಡೆದುಕೊಂಡಿರಲಿದೆ.

ಬ್ಯಾಟರಿ ಫೀಚರ್ಸ್‌ ಹಾಗೂ ಇತರೆ
ಈ ಫೋನ್‌ನ ಪ್ರಮುಖ ವಿಶೇಷತೆ ಎಂದರೆ ಬ್ಯಾಟರಿ ಸಾಮರ್ಥ್ಯ. ಯಾಕೆಂದರೆ ಈ ಫೋನ್‌ ಬರೋಬ್ಬರಿ 22,000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರಲಿದ್ದು, ಈ ಫೋನ್‌ ಏನಾದರೂ ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ ಜಗತ್ತಿನ ಮೊದಲ ದೊಡ್ಡ ಬ್ಯಾಟರಿ ಪ್ಯಾಕ್‌ ಆಗಿರುವ ಫೋನ್‌ ಎಂದೆನಿಸಿಕೊಳ್ಳಲಿದೆ. ಅದರಲ್ಲೂ ಒಂದು ಪೂರ್ಣ ಚಾರ್ಜ್‌ನಲ್ಲಿ 10 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ ಎಂದು ವರದಿಯಾಗಿದೆ.

ಇದರೊಂದಿಗೆ ಈ ಸ್ಮಾರ್ಟ್‌ಫೋನ್ 33W ವೇಗದ ಚಾರ್ಜಿಂಗ್ ಅನ್ನು ಸಹ ಹೊಂದಿರಲಿದ್ದು, ಈ ಸ್ಮಾರ್ಟ್‌ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಬಹುದಾಗಿದೆ. ಇನ್ನುಳಿದಂತೆ ಈ ಫೋನ್ 27.3 ಎಂಎಂ ದಪ್ಪ ಇದ್ದು, ವಿಶೇಷ ವಿನ್ಯಾಸ ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ 5G ಬೆಂಬಲ ಸಹ ಪಡೆದುಕೊಂಡಿದ್ದು, ಇನ್ನೂ ಹೆಚ್ಚಿನ ಫೀಚರ್ಸ್‌ ಈ ಫೋನ್‌ನಲ್ಲಿ ಇದೆ ಎನ್ನಲಾಗಿದೆ.

ಒಂದು ಚಾರ್ಜಿಂಗ್‌ನಲ್ಲಿ 10 ದಿನ ಬಳಸಬಹುದು!?

ಬೆಲೆ ಹಾಗೂ ಲಭ್ಯತೆ
ಈ ಫೋನ್‌ ಬೆಲೆ ಹಾಗೂ ಅನಾವರಣದ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.ಆದರೆ, ಮುಂದಿನ ತಿಂಗಳು ಲಾಂಚ್ ಆಗುವ ನಿರೀಕ್ಷೆ ಇದೆ. ಇನ್ನು ಕ್ಲಾಸಿಕ್ ಬ್ಲ್ಯಾಕ್, ಸನ್‌ಶೈನ್ ಗೋಲ್ಡ್ ಮತ್ತು ಮೂನ್‌ಶೈನ್ ಸಿಲ್ವರ್ ಬಣ್ಣಗಳಲ್ಲಿ ಫೋನ್ ಬಿಡುಗಡೆಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Best Mobiles in India

English summary
This new phone with a whopping 22,000mAh battery will launch next month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X