42Gbps ವೇಗದ Wi-Fi: ಸೆಕೆಂಡ್‌ನಲ್ಲಿ 40 ಸಿನಿಮಾ ಡೌನ್‌ಲೋಡ್ ಮಾಡಬಹುದಂತೆ..!!!
ಇದು ಸದ್ಯ ನಾವು ನೀವು ಬಳಸುತ್ತಿರುವ Wi-Fi ಗಿಂತಲೂ 100 ಪಟ್ಟು ವೇಗವನ್ನು ಹೊಂದಿರಲಿದೆ ಎನ್ನಲಾಗದೆ.
ಇಂದಿನ ದಿನದಲ್ಲಿ ಪ್ರತಿ ದಿನವೂ ಹೊಸ-ಹೊಸ ಸಂಶೋಧನೆಯಾಗುತ್ತಿದ್ದು, ಸದ್ಯ ಹೊಸ ಆವಿಷ್ಕಾರವೊಂದು ಮಿಂಚಿನ ವೇಗದ Wi-Fi ವ್ಯವಸ್ಥೆಯನ್ನು ನಿರ್ಮಾಣ ಮಾಡಲಿದ್ದು, ಇದು ಸದ್ಯ ನಾವು ನೀವು ಬಳಸುತ್ತಿರುವ Wi-Fi ಗಿಂತಲೂ 100 ಪಟ್ಟು ವೇಗವನ್ನು ಹೊಂದಿರಲಿದೆ ಎನ್ನಲಾಗದೆ.

ಓದಿರಿ: ಜಿಯೋ ವಿರುದ್ಧ ಸಮರ: ವೊಡೋಪೋನ್‌ನೊಂದಿಗೆ ಐಡಿಯಾ ವಿಲೀನ
ಈ ಹೊಸ ಮಾದರಿಯ Wi-Fi ನಲ್ಲಿ ಇಂಟರ್ನೆಟ್ ವೇಗವು 42.4 GB ಇರಲಿದ್ದು, ಇದು ವೈರ್ಲೈಸ್ ಆಗಿರುವ ಕಾರಣ ಹಾನಿಕಾರಕ ರಹಿತ ಇನ್‌ಫಾರೆಡ್ ಕಿರಣಗಳ ಮೂಲಕ ಕಾರ್ಯನಿರ್ವಹಿಸಿದೆ. ಇನ್‌ಫಾರೆಡ್ ಕಿರಣಗಳ ಮೂಲಕ ಇಂಟರ್ನೆಟ್ ಸೇವೆಯನ್ನು ವಿವಿಧ ಬಳಕೆದಾರರ ನಡುವೆ ಸಂಪರ್ಕ ಸಾಧಿಸಲಿದೆ.
ಸದ್ಯ ನಾವು-ನೀವು ಬಳಸುತ್ತಿರುವ Wi-Fi 300 MB ವೇಗದಲ್ಲಿ ಕಾರ್ಯನಿರ್ವಹಿಸಲಿದ್ದು, ಈಗ ಹೊಸದಾಗಿ ಆವಿಷ್ಕಾರಗೊಂಡಿರುವ Wi-Fi 42.4 GB ವೇಗದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದರ ವೇಗ ಎಷ್ಟಿರಲಿದೆ ಎಂದರೇ 40 HD ಮೂವಿಗಳು ಒಂದೇ ಕ್ಷಣದಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.

ಓದಿರಿ: ಶಿಯೋಮಿ ರೆಡ್‌ಮಿ 4A ಬಿಡುಗಡೆ: ಬೆಲೆ ಎಷ್ಟು,? ವಿಶೇಷತೆ ಏನು,? ದೊರೆಯುವುದು ಎಲ್ಲಿ.?
ಸದ್ಯ ಈ ಹೊಸ ಟೆಕ್ನಲಜಿಯನ್ನು ನೆದರ್ಲೆಂಡ್‌ನ ವಿಜ್ಞಾನಿಗಳು ಆವಿಷ್ಕರಿಸಿದ್ದು, ಈ ಹೊಸ ಮಾದರಿಯ Wi-Fi ನಲ್ಲಿ ಇಂಟರ್ನೆಟ್ ಸೇವೆಯನ್ನು ಹರದಲು ಇನ್‌ಫಾರೆಡ್ ಕಿರಣಗಳನ್ನು ಬಳಕೆ ಮಾಡಿಕೊಳ್ಳಲಿದ್ದು, ಆದರೆ ಈ ಕಿರಣಗಳು ಮಾನವ ಹಾಗೂ ಪ್ರಾಣಿಗಳ ದೇಹಕ್ಕೆ ಯಾವುದೇ ಹಾನಿಯನ್ನು ಮಾಡುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
ಮುಂದಿನ ತಲೆ ಮಾರಿನ ಜಗತ್ತಿಗಾಗಿ ಇಷ್ಟು ವೇಗದ ಇಂಟರ್ನೆಟ್ ಬೇಕಾಗಿದ್ದು, ಅದನ್ನು ತಲುಪಿಸಲು ವಿಜ್ಷಾನಿಗಳು ಯತ್ನವನ್ನ ಮಾಡುತ್ತಿದ್ದಾರೆ. ಸದ್ಯ ಈ ಹೊಸ Wi-Fi ಪ್ರಯೋಗದ ಹಂತವನ್ನು ಮುಗಿಸಿದ್ದು, ಮಾರುಕಟ್ಟೆಗೆ ಬರಲಿ ಕೆಲದಿನಗಳು ಆಗಲಿದೆ.


Click it and Unblock the Notifications








