Just In
- 11 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 13 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 13 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 15 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ಯಾಟೂಗಳಿಂದಲೂ ಕಂಪ್ಯೂಟರ್,ಸ್ಮಾರ್ಟ್‌ಫೋನ್ ಆಪರೇಟ್ ಮಾಡಿ!
ಸ್ಮಾರ್ಟ್‌ಫೋನ್ ಮನೆಯಲ್ಲೇ ಇರಲಿ, ಅಥವಾ ಪ್ಯಾಂಟ್, ಶರ್ಟ್‌ಗಳ ಜೇಬಲ್ಲೇ ಇರಲಿ. ಕ್ರೇಜ್‌ನಿಂದ ಸ್ಟೈಲ್‌ಗೋಸ್ಕರ ಕೈಗಳ ತೋಳಿನ ಮೇಲೆ ಹಾಕಿಸಿದ ಟ್ಯಾಟೂನಿಂದ(Tattoo) ಸ್ಮಾರ್ಟ್‌ಫೋನ್‌ಗಳನ್ನು ಆಪರೇಟ್ ಮಾಡಬಹುದು. ಟೆಕ್ನಾಲಜಿ ದಿನದಿಂದ ದಿನಕ್ಕೆ ಎಷ್ಟೊಂದು ಸರಳವಾಗುತ್ತಿದೆ ಎಂಬುದು ಆಶ್ಚರ್ಯಕರ ಸಂಗತಿ.
ಅಂದಹಾಗೆ ಕೈ ತೋಳಿನ ಮೇಲೆ ಹಾಕಿಸಿಕೊಂಡ ಟ್ಯಾಟೂ (ಹಚ್ಚೆ)ನಿಂದ ಸ್ಮಾರ್ಟ್‌ಫೋನ್ ಆಪರೇಟ್ ಮಾಡುವುದರಿಂದ ಇತ್ತ ಕಣ್ಣಿನ ಆರೋಗ್ಯವು ಚೆನ್ನಾಗಿರುತ್ತದೆ. ಹಾಗಾದ್ರೆ ಸ್ಮಾರ್ಟ್‌ಫೋನ್ ಟ್ಯಾಟೂಗಳಿಂದ(Tattoo) ಹೇಗೆ ಆಪರೇಟ್ ಆಗುತ್ತದೆ, ಈ ಟ್ಯಾಟೂಗಳ ವಿಶೇಷತೆ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.
ಆಂಡ್ರಾಯ್ಡ್ ಫೋನ್ ಅನ್‌ಲಾಕ್ ಮಾಡಿ ಹಣಗಳಿಸುವುದು ಹೇಗೆ?

ಮೆಟಾಲಿಕ್ ಟ್ಯಾಟೂ (ಲೋಹದ ಹಚ್ಚೆ)
ಬೋಸ್ಟನ್ ಸಂಶೋಧಕರು ತಾತ್ಕಾಲಿಕವಾದ ಮೆಟಾಲಿಕ್ ಟ್ಯಾಟೂ (ಲೋಹದ ಹಚ್ಚೆ) ರಚಿಸಿದ್ದು, ಟ್ಯಾಟೂ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ನಿಯಂತ್ರಿಸಬಲ್ಲದಂತೆ. ಅಲ್ಲದೇ ಇತರೇ ಡಿವೈಸ್‌ಗಳಿಗೂ ಸಹ ಕನೆಕ್ಟ್ ಆಗಬಲ್ಲದಂತೆ.

ಯಾರಾದರೂ ಸಹ ಕ್ರಿಯೇಟ್ ಮಾಡಬಹುದು
"ತಮ್ಮ ಚರ್ಮನದ ಮೇಲೆ ನೇರವಾಗಿ ಮೆಟಾಲಿಕ್ ಟ್ಯಾಟೂ (ಲೋಹದ ಹಚ್ಚೆ)ಗಳಲ್ಲಿ ಸಂಪರ್ಕಸಾಧನಗಳನ್ನು ಯಾರಾದರೂ ಸಹ ಕ್ರಿಯೇಟ್ ಮಾಡಬಹುದು" ಎಂದು ಮೆಸ್ಸಾಚುಸೆಟ್ ಟೆಕ್ನಾಲಜಿ ಸಂಸ್ಥೆಯ 'ಸಿನ್ ಲಿಯು ಕಾವ್' ಹೇಳಿದ್ದಾರೆ.

ಡ್ಯುಯೊಸ್ಕಿನ್
ತಾತ್ಕಾಲಿಕ ಟ್ಯಾಟೂಗಳನ್ನು 'ಡ್ಯುಯೊಸ್ಕಿನ್' ಎಂದು ಕರೆಯಲಾಗುತ್ತದೆ. ಟ್ಯಾಟೂಗಳು ಚಿನ್ನದ ಎಲೆಯ ಪದರಗಳನ್ನು ಬಳಸಿಕೊಳ್ಳುತ್ತವೆ. ಅಲ್ಲದೇ ಸಾಮಾನ್ಯವಾಗಿ ಫೋಟೋ ಫ್ರೇಮ್ ಡೆಕೋರೇಟ್ ಮಾಡಲು ಮತ್ತು ಚಾಕಲೇಟ್ ತಯಾರಿಸುವಲ್ಲಿ ಬಳಸಲಾಗುತ್ತದೆ. ಈ ಚಿನ್ನದ ಪದರಗಳು ಕಂಡಕ್ಟರ್ ಮತ್ತು ಸಣ್ಣ, ಸರಳ ಸರ್ಕ್ಯೂಟ್ ಸಂಪರ್ಕ ಭಾಗಗಳಾಗಿ ಕಾರ್ಯನಿರ್ವಹಿಸುತ್ತವೆ.

ಯಾರು ಬೇಕಾದರೂ ರಚಿಸಿಕೊಳ್ಳಿ
ಹೊಸ ಟೆಕ್ನಾಲಜಿಯಿಂದ ತಾತ್ಕಾಲಿಕ ಟ್ಯಾಟೂವನ್ನು ಯಾರು ಬೇಕಾದರೂ ತಮಗಿಷ್ಟ ಬಂದ ಕಸ್ಟಮೈಸ್ ಆಧಾರದಲ್ಲಿ ಚಿನ್ನದ ಲೋಹದ ಎಲೆಯಿಂದ ರಚಿಸಿಕೊಳ್ಳಬಹುದಾಗಿದ್ದು, ನೇರವಾಗಿ ಚರ್ಮದ ಮೇಲೆ ಧರಿಸುತ್ತದೆ. ಅಲ್ಲದೇ ಹಲವು ಮಾರ್ಗಗಳಿಂದ ಉಪಯೋಗವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇನ್‌ಪುಟ್ ಡಿವೈಸ್
ಟ್ಯಾಟೂಗಳು ಇನ್‌ಪುಟ್ ಡಿವೈಸ್ ಆಗಿ ಕಾರ್ಯನಿರ್ವಹಿಸಬಲ್ಲವಾಗಿದ್ದು, ಚರ್ಮವನ್ನು ಟ್ರ್ಕಾಕ್ ಪ್ಯಾಡ್ ಆಗಿ ಬದಲಿಸುತ್ತವೆ. ಅಲ್ಲದೇ ಬಳಕೆದಾರರು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗಳನ್ನು ನಿಯಂತ್ರಿಸಬಲ್ಲವು. ಆಪ್‌ಗಳನ್ನು ಸಹ ನಿಯಂತ್ರಿಸಬಹುದಾಗಿದ್ದು, ಟ್ಯಾಟೂ ಮೇಲೆ ಸ್ವೈಪ್ ಮಾಡುವ ಮುಖಾಂತರ ನಿಯಂತ್ರಣ ಹೊಂದಬಹುದು.

ಔಟ್‌ಪುಟ್ ಡಿವೈಸ್
ಟ್ಯಾಟೂಗಳಲ್ಲಿ ನಿರ್ವಹಿಸಿದ ಚಟುವಟಿಕೆಗಳು ಡಿವೈಸ್‌ಗಳ ಮೇಲೆ ಪ್ರದರ್ಶನವಾಗುತ್ತವೆ. ವಿಶೇಷವೆಂದರೆ ಟ್ಯಾಟೂಗಳು ವ್ಯಕ್ತಿಯ ದೇಹದ ಉಷ್ಣತೆ ಆಧಾರದಲ್ಲಿ ಬಣ್ಣ ಬದಲಾವಣೆ ಹೊಂದಿರುತ್ತವೆ. ಇತರೆ ಟ್ಯಾಟೂಗಳು ಆಪ್‌ನಿಂದ ಅಭಿವೃದ್ದಿಗೊಳಿಸಲಾಗಿ ಹೊಂದಿಕೊಳ್ಳುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಟ್ಯಾಟೂಗಳನ್ನು 'ಕಪಲ್ ಹಾರ್ಮೊನಿ' ಎಂದು ಕರೆಯಲಾಗುತ್ತದೆ. 'ಕಪಲ್ ಹಾರ್ಮೊನಿ' ಟ್ಯಾಟೂಗಳ ಮುಖಾಂತರ ಪಾಲುದಾರರು ಪರಸ್ಪರ ದೃಶ್ಯಗಳನ್ನು ನೋಡಿಕೊಳ್ಳಬಹುದು.

ವೈರ್‌ಲೆಸ್ ಕಂಮ್ಯೂನಿಕೇಷನ್ ಡಿವೈಸ್
ಟ್ಯಾಟೂಗಳು {near field communication (NFC)} ಕ್ಷೇತ್ರ ಸಂವಹನ ಒಳಗೊಂಡಿದ್ದು, ಟ್ಯಾಟೂಗಳ ವರ್ಸನ್ ಅನ್ನು ಎನೇಬಲ್ ಮಾಡಲಾಗಿದೆ. ಇದರಿಂದ ಟ್ಯಾಟೂಗಳು ವೈರ್‌ಲೆಸ್ ಕಂಮ್ಯೂನಿಕೇಷನ್ ಡಿವೈಸ್‌ಗಳಾಗಿ ಬಳಸಲ್ಪಡುತ್ತಿವೆ. ಸ್ಕಿನ್ ಸ್ಟೇಟಸ್, ಸಿನಿಮಾ ಟಿಕೆಟ್‌ಗಳು, ಮಾಹಿತಿಯ ಬಗ್ಗೆ ಸಂವಹನ ನೆಡೆಸಲು ಅವಕಾಶ ನೀಡುತ್ತದೆ. ಸ್ಮಾರ್ಟ್‌ಫೋನ್ ಅನ್ನು ಟ್ಯಾಟೂ ಮೇಲೆ ಟ್ಯಾಪ್ ಮಾಡುವ ಮುಖಾಂತರವೇ ಬಳಸಬಹುದು.
ಟ್ಯಾಟೂ ವಿಶೇಷತೆ
ಪ್ರತಿಯೊಂದು ಟ್ಯಾಟೂ ಸಹ {near field communication (NFC)} ಚಿಪ್, ಒಂದು ಥರ್ಮೋಖ್ರೋಮೆಟಿಕ್ ಪದರ ಅಥವಾ ಬೆಳಕು ಸೂಸುವ ಡಯೋಡ್ ಎಲ್‌ಇಡಿ ಲೈಟ್ ಅನ್ನು ಒಳಗೊಂಡಿದೆ ಎಂದು ಕಾವೊ ಹೇಳಿದ್ದಾರೆ. ಸ್ಲೈಡರ್‌ನಲ್ಲಿನ ವೀಡಿಯೋ ನೋಡಿ.

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470