ಟಿಕ್‌ಟಾಕ್‌ ಅಪ್ಲಿಕೇಶನ್‌ನಿಂದ ಮತ್ತೊಂದು ಹೊಸ ಮೈಲುಗಲ್ಲು!

|

ಚೀನಾ ಮೂಲದ ಜನಪ್ರಿಯ ಶಾರ್ಟ್‌ ವಿಡಿಯೊ ಆಪ್ ಟಿಕ್‌ಟಾಕ್ ಇದೀಗ ಮತ್ತೊಂದು ಹೊಸ ಮೈಲಿಗಲ್ಲು ಸಾಧಿಸಿದೆ. ಈಗಾಗಲೆ ಅತೀ ಹೆಚ್ಚು ಡೌನ್‌ಲೋಡ್‌ನಲ್ಲಿ ಕಂಡಿರುವ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿರುವ ಈ ವಿಡಿಯೋ ಅಪ್ಲಿಕೇಶನ್ ಈ ಲಾಕ್‌ಡೌನ್‌ ಅವಧಿಯಲ್ಲಿ ಮತ್ತಷ್ಟು ಡಿಮ್ಯಾಂಡ್‌ ಪಡೆದುಕೊಂಡಿದೆ. ಪ್ರಸ್ತುತ ಈ ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 1 ಬಿಲಿಯನ್ (ಸುಮಾರು 100 ಕೋಟಿ) ಡೌನ್‌ಲೋಡ್‌ ದಾಟಿದೆ.

ಕೋವಿಡ್‌-19 ಸಾಂಕ್ರಾಮಿಕ ರೋಗ

ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌-19 ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಈ ಅವಧಿಯಲ್ಲಿ ಜನಪ್ರಿಯ ಸಾಮಾಜಿಕ ತಾಣಗಳಾದ ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಅಪ್ಲಿಕೇಶನ್‌ಗಳ ಬಳಕೆಯಲ್ಲಿ ಭಾರಿ ಏರಿಕೆ ಕಂಡಿದೆ. ಹಾಗೆಯೇ ಟಿಕ್‌ಟಾಕ್‌ ಅಪ್ಲಿಕೇಶನ್ ಬಳಕೆಯಲ್ಲಿಯೂ ಸಹ ಏರಿಕೆ ಆಗಿದ್ದು, ಆಂಡ್ರಾಯ್ಡ್‌ ಓಎಸ್‌ನಲ್ಲಿ ಟಿಕ್‌ಟಾಕ್ ಡೌನ್‌ಲೋಡ್‌ ಬಿಲಿಯನ್ ಗಡಿ ದಾಟಿದೆ.

ಕಿರು ವಿಡಿಯೊ ಆಪ್‌

ಟಿಕ್‌ಟಾಕ್‌ ಕಿರು ವಿಡಿಯೊ ಆಪ್‌ನಲ್ಲಿ ಬಳಕೆದಾರರು ವಿಡಿಯೊ ಕ್ರಿಯೆಟ್‌ ಮಾಡಬಹುದು, ಆ ವಿಡಿಯೊಗಳನ್ನು ಶೇರ್ ಮಾಡಬಹುದು. ಜನಪ್ರಿಯ ಸಂಗೀತಕ್ಕೆ ನೃತ್ಯ, ಹಾಡು, ಸಿನಿಮಾ ಮಾತುಗಳಿಗೆ ಲಿಪ್‌-ಸಿಂಕ್ ಮಾಡಿ ವಿಡಿಯೊ ಕ್ರಿಯಟ್‌ ಮಾಡುವ ಆಯ್ಕೆಗಳು ಹೆಚ್ಚು ಟ್ರೆಂಡ್‌ ಕ್ರಿಯೆಟ್‌ ಮಾಡಿದೆ. ಆಂಡ್ರಾಯ್ಡ್‌ ಓಎಸ್‌ ಜೊತೆಗೆ ಐಓಎಸ್‌ ಓಎಸ್‌ನಲ್ಲಿಯೂ ಸಹ ಜನಪ್ರಿಯತೆ ಪಡೆದಿದೆ.

ಲಾಕ್‌ಡೌನ್‌ ಅವಧಿ

ಲಾಕ್‌ಡೌನ್‌ ಅವಧಿಯಲ್ಲಿ ಭಾರತದಲ್ಲಿ ಟಿಕ್‌ಟಾಕ್‌ ಅಪ್ಲಿಕೇಶನ್‌ ಹೆಚ್ಚು ಡೌನ್‌ಲೋಡ್ ಆಗಿದೆ. ಈ ಮೂಲಕ ವಾಟ್ಸಪ್‌ ಮತ್ತು ಫೇಸ್‌ಬುಕ್‌ಗಳನ್ನು ಹಿಂದಿಕ್ಕಿದೆ ಎಂದು ಇತ್ತೀಚಿಗೆ ಆಕ್ ಅನ್ನಿ -App Annie ವರದಿ ಹೊರಹಾಕಿದೆ. ಲಾಕ್‌ಡೌನ್ ಅವಧಿಯ ಕೆಲವೇ ದಿನಗಳಲ್ಲಿ ದೇಶದಲ್ಲಿ ಟಿಕ್‌ಟಾಕ್ ಆಪ್ ಡೌನ್‌ಲೋಡ್‌ನಲ್ಲಿ ಶೇ.20% ನಷ್ಟು ಹೆಚ್ಚಳವಾಗಿದೆ. ಈ ಮೂಲಕ ಶಾರ್ಟ್‌ ವಿಡಿಯೊ ಅಪ್ಲಿಕೇಶನ್ ಟಿಕ್‌ಟಾಕ್ ಅತೀ ಹೆಚ್ಚು ಡೌನ್‌ಲೋಡ್‌ ಕಂಡು ನಂಬರ್‌ ಒನ್‌ ಅನಿಸಿಕೊಂಡಿದೆ.

ಟಿಕ್‌ಟಾಕ್‌ನ ಒಟ್ಟು ಡೌನ್‌ಲೋಡ್‌

ಜನೆವರಿ 2020ರಲ್ಲಿ ಟಿಕ್‌ಟಾಕ್ ಆಪ್‌ ಒಟ್ಟು 104.7 ಮಿಲಿಯನ್ ಡೌನ್‌ಲೋಡ್ ಆಗಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು ಶೇ. 46% ರಷ್ಟು ಅಧಿಕ ಡೌನ್‌ಲೋಡ್ ಕಂಡಿದೆ. ಟಿಕ್‌ಟಾಕ್‌ನ ಒಟ್ಟು ಡೌನ್‌ಲೋಡ್‌ ಸಂಖ್ಯೆಯಲ್ಲಿ ಶೇ. 34.4% ಭಾರತದಲ್ಲಿಯೇ ಡೌನ್‌ಲೋಡ್ ಆಗಿರುವುದು ವಿಶೇಷ. ಇನ್ನು ಜನಪ್ರಿಯ ಫೇಸ್‌ಬುಕ್ ಒಟ್ಟು 61.9 ಮಿಲಿಯನ್ ಡೌನ್‌ಲೋಡ್ ಕಂಡಿದ್ದು, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣ

ಇನ್ನು ಸೆಪ್ಟಂಬರ್ 2016ರಲ್ಲಿ ಲಾಂಚ್ ಆಗಿರುವ ಟಿಕ್‌ಟಾಕ್ ಸದ್ಯ ಲೀಡಿಂಗ್‌ನಲ್ಲಿರುವ ಸಾಮಾಜಿಕ ಜಾಲತಾಣವಾಗಿದ್ದು, ಹಲವಾರು ಕಾರಣಗಳಿಂದ ಸುದ್ದಿಯು ಸಹ ಆಗಿತ್ತು. ಈ ಆಪ್‌ ಇತ್ತೀಚಿಗೆ ಹಲವಾರು ಅಪ್‌ಡೇಟ್‌ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಫ್ಯಾಮಿಲಿ ಸೇಫ್ಟಿ ಮೋಡ್ ಆಯ್ಕೆ ಒಂದಾಗಿದೆ. ಈ ಆಯ್ಕೆಯಲ್ಲಿ ಮಕ್ಕಳು ಟಿಕ್‌ಟಾಕ್‌ನಲ್ಲಿ ಏನು ವೀಕ್ಷಿಸಿದ್ದಾರೆ ಎಂದು ತಿಳಿಯಬಹುದಾಗಿದೆ.

Best Mobiles in India

English summary
Short-video creating app TikTok has crossed 1 billion downloads on Google Play Store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X