ಇಂಟರ್ನೆಟ್ ಬಳಸುತ್ತಿದ್ದೀರಾ? ಎಚ್ಚರಿಕೆಯಿಂದಿರಿ

By Shwetha

ಇಂಟರ್ನೆಟ್ ನಮ್ಮ ಜೀವನವನ್ನು ಸರಳಗೊಳಿಸಿದೆ ಅಂತೆಯೇ ತಾಂತ್ರಿಕವಾಗಿ ನಮ್ಮನ್ನು ಸುಧಾರಿಸಿದೆ. ಫೇಸ್‌ಬುಕ್, ಇಮೇಲ್ ಇಂಟರ್ನೆಟ್ ಇಲ್ಲದೆಯೇ ಸರಳವಾದ ಜೀವನವನ್ನು ನಡೆಸುವುದು ಅಸಾಧ್ಯದ ಮಾತಾಗಿದೆ. ಇಂದು ಪ್ರತಿಯೊಂದು ಮಾಹಿತಿಯನ್ನು ಕಲೆಹಾಕಲು ಗೂಗಲ್ ತಡಕಾಡುವುದನ್ನು ನಾವು ಮರೆಯುವುದಿಲ್ಲ.

ಓದಿರಿ: ಇಂಟರ್ನೆಟ್ ಅಭಾವ ಜೀವನ ನರಕಸದೃಶ ಹೇಗೆ?

ಇಂಟರ್ನೆಟ್ ನಮಗೆ ಎಷ್ಟೊಂದು ಪ್ರಯೋಜನವನ್ನು ಉಂಟುಮಾಡಿದೆಯೋ ಅಷ್ಟೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಯುವ ಜನಾಂಗ ಮತ್ತು ಮಕ್ಕಳ ಮೇಲೆ ಇದು ದುಷ್ಪರಿಣಾಮವನ್ನು ಬೀರುತ್ತಿದ್ದು ಇಂಟರ್ನೆಟ್‌ನ ಪರಿಣಾಮಗಳಿಂದ ಭವಿಷ್ಯ ಕತ್ತಲ ಕೂಪಕ್ಕೆ ಹೋಗುವುದಂತೂ ಖಂಡಿತ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಅರಿತುಕೊಳ್ಳಿ.

ಅಶ್ಲೀಲತೆ

ಅಶ್ಲೀಲತೆ

ಇಂಟರ್ನೆಟ್‌ನಿಂದ ಉಂಟಾಗುವ ದುಷ್ಪರಿಣಾಮಗಳಲ್ಲಿ ಅಶ್ಲೀಲ ವೀಡಿಯೊಗಳ ಬಳಕೆ ಕೂಡ ಒಂದಾಗಿದೆ. ಹದಿಹರೆಯದವರ ಮನಸ್ಸನ್ನು ಕೆಟ್ಟದಾರಿಗೆ ಎಳೆಯುವ ಪ್ರಯತ್ನವನ್ನು ಈ ಸೈಟ್‌ಗಳು ಮಾಡುತ್ತಿವೆ.

ಮಾಹಿತಿ ಕಳ್ಳತನ

ಮಾಹಿತಿ ಕಳ್ಳತನ

ಇಂಟರ್ನೆಟ್ ನಿಮ್ಮ ಐಡಿಯ ಕಳ್ಳತನ ಮಾಡುತ್ತದೆ. ಮಾಹಿತಿಯನ್ನು ದೋಚುವ ಕೆಲಸವನ್ನು ಇದು ಮಾಡುತ್ತದೆ. ಸಾಮಾಜಿಕ ತಾಣಗಳಲ್ಲಿರುವ ನಿಮ್ಮ ಅಮೂಲ್ಯ ಮಾಹಿತಿಯನ್ನು ಇಂಟರ್ನೆಟ್ ಮೂಲಕ ಹ್ಯಾಕರ್‌ಗಳು ದೋಚಬಹುದು.

ಕೃತಿಚೌರ್ಯ

ಕೃತಿಚೌರ್ಯ

ಹಕ್ಕುಸ್ವಾಮ್ಯವುಳ್ಳ ಮಾಹಿತಿಯನ್ನು ನಕಲಿಸುವುದು ಅಥವಾ ಡೌನ್‌ಲೋಡ್ ಮಾಡುವುದು ಕೃತಿಚೌರ್ಯ ಎಂದೆನಿಸುತ್ತದೆ. ಹಣ ಉಳಿಸುತ್ತದೆ ಎಂಬ ಕಾರಣಕ್ಕೆ ಜನರು ಕೃತಿಚೌರ್ಯ ವಿಧಾನವನ್ನು ಪಾಲಿಸುತ್ತಿದ್ದಾರೆ.

ಸೈಬರ್ ಬೆದರಿಸುವಿಕೆ

ಸೈಬರ್ ಬೆದರಿಸುವಿಕೆ

ಇಂಟರ್ನೆಟ್‌ನ ಇನ್ನೊಂದು ತಪ್ಪು ಬಳಕೆ ಎಂದರೆ ಸೈಬರ್ ಬೆದರಿಸುವಿಕೆಯಾಗಿದೆ. ಸಾಮಾಜಿಕ ನೆಟ್‌ವರ್ಕ್ ತಾಣಗಳಲ್ಲಿ ಫೇಕ್ ಪ್ರೊಫೈಲ್‌ಗಳನ್ನು ಮಾಡುವುದರ ಮೂಲಕ ಇನ್ನೊಬ್ಬ ವ್ಯಕ್ತಿಯನ್ನು ಮೋಸಗೊಳಿಸುವುದನ್ನು ಸೈಬರ್ ಬೆದರಿಸುವಿಕೆ ಒಳಗೊಂಡಿದೆ.

ಮೋಸದ ಜಾಹೀರಾತುಗಳು
 

ಮೋಸದ ಜಾಹೀರಾತುಗಳು

ಇಂಟರ್ನೆಟ್ ಅನ್ನು ಬಳಸಿಕೊಂಡು ಮೋಸದ ಜಾಹೀರಾತನ್ನು ಪ್ರದರ್ಶಿಸುವುದು ಕೂಡ ಅಪಾಯವನ್ನು ಬಳಕೆದಾರರಿಗೆ ತಂದೊಡ್ಡಲಿದ್ದು ಇದರಿಂದ ಜನರು ಹೆಚ್ಚು ಹೆಚ್ಚು ಮೋಸದ ಸುಳಿಗೆ ಸಿಲುಕುತ್ತಿದ್ದಾರೆ.

ಹ್ಯಾಕಿಂಗ್

ಹ್ಯಾಕಿಂಗ್

ನೀವು ಬಳಸುತ್ತಿರುವ ಸಾಮಾಜಿಕ ತಾಣವು ಪ್ರಬಲ ಪಾಸ್‌ವರ್ಡ್ ಅನ್ನು ಒಳಗೊಂಡಿಲ್ಲ ಎಂದಾದಲ್ಲಿ ಸೈಟ್ ಹ್ಯಾಕ್ ಆಗುವುದು ಖಚಿತವಾಗಿದೆ. ಇಂಟರ್ನೆಟ್ ಅನ್ನು ಹ್ಯಾಕಿಂಗ್‌ ಕೃತ್ಯ ನಡೆಸಲು ಕೂಡ ಜನರು ಬಳಸುತ್ತಿದ್ದಾರೆ.

ಸಮಯ ಕಳೆಯುವುದು

ಸಮಯ ಕಳೆಯುವುದು

ಇಂಟರ್ನೆಟ್‌ನಲ್ಲಿ ಹೆಚ್ಚು ಸಮಯ ನೀವು ವ್ಯಯಿಸುತ್ತಿದ್ದೀರಿ ಎಂದಾದಲ್ಲಿ ಸಮಯ ಪೊಲಾಗುವುದನ್ನು ಇದು ನಿಚ್ಚಳವಾಗಿ ತೋರಿಸುತ್ತಿದೆ.

ಕುಚೇಷ್ಟೆ

ಕುಚೇಷ್ಟೆ

ರೀಟೈಲ್ ತಾಣದಲ್ಲಿ ದುಬಾರಿ ವಸ್ತುವಿನ ಬದಲಿಗೆ ಇಟ್ಟಿಗೆ, ಮರದ ತುಂಡುಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವ ದೃಷ್ಟಾಂತ ನಿಮಗೆ ತಿಳಿದಿರಬಹುದು. ಇವರುಗಳ ಕುಚೇಷ್ಟೆ ಗ್ರಾಹಕರಿಗೆ ಮುಳುವಾಗುತ್ತಿದೆ.

ಋಣಾತ್ಮಕ ಅಂಶಗಳು

ಋಣಾತ್ಮಕ ಅಂಶಗಳು

ಇನ್ನು ಇಂಟರ್ನೆಟ್‌ನಿಂದ ನಿಮಗೆ ದೊರೆಯುವ ಮಾಹಿತಿ ಎಲ್ಲವೂ ಧನಾತ್ಮಕ ಎಂದು ಆಲೋಚಿಸಬೇಡಿ. ಋಣಾತ್ಮಕ ಅಂಶವನ್ನೇ ಇದು ಹೆಚ್ಚು ಉಣಬಡಿಸುವುದರಿಂದ ಸರ್ಚ್ ಮಾಡಿದಾಗ ದೊರೆಯುವ ಎಲ್ಲಾ ಮಾಹಿತಿ ನಿಮಗೆ ಉಪಯೋಗಕರವಾಗಿರುತ್ತದೆ ಎಂದು ಮಾತ್ರ ಭಾವಿಸಬೇಡಿ.

ಇಮೇಲ್ ಸ್ಪ್ಯಾಮ್

ಇಮೇಲ್ ಸ್ಪ್ಯಾಮ್

ಮಾಲ್‌ವೇರ್‌ನಂತಹ ಇಮೇಲ್ ಸ್ಪ್ಯಾಮ್‌ಗಳು ನಿಮ್ಮನ್ನು ತೊಂದರೆಗೆ ಒಳಪಡಿಸಬಹುದು. ಇದರಿಂದ ನೇರವಾಗಿ ವೈರಸ್‌ಗಳು ನಿಮ್ಮ ಕಂಪ್ಯೂಟರ್‌ ಅನ್ನು ಪ್ರವೇಶಿಸಬಹುದು.

Most Read Articles
 
English summary
The internet has been a blessing to humanity. It has made life easy and helped technology improve. We can’t imagine living without e-mails and video calls and not to forget Facebook! It’s really amazing how much we rely on Google to search information. Here are the Dangerous Ways Internet is Misused.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more