ಭಾರತದಲ್ಲೂ ಇವೆ ಅತ್ಯಾಧುನಿಕ ಟಾಪ್‌ ಟೆಕ್ನಾಲಜಿ ನಗರಗಳು

By Suneel
|

ಪ್ರಪಂಚಕ್ಕೆ ಹೊಸ ಹೊಸ ಟೆಕ್ನಾಲಜಿಗಳನ್ನು ಅಭಿವೃದ್ದಿ ಪಡಿಸುವಲ್ಲಿ ಮುಂಚೂಣಿ ದೇಶ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ. ಯಾಕಂದ್ರೆ ಒಂದೊಂದು ದೇಶದ ವಿಜ್ಞಾನಿಗಳು ಸಹ ಟೆಕ್‌ ಕ್ಚೇತ್ರಕ್ಕೆ ಅತ್ಯುತ್ತಮ ಕೊಡುಗೆಗಳನ್ನು ತಮ್ಮದೇ ಆದ ರೀತಿಯಲ್ಲಿ ನೀಡಿದ್ದಾರೆ.

ಓದಿರಿ: ಫೇಸ್‌ಬುಕ್‌ನಲ್ಲಿ ನೀವು ಮಾಡಲೇಬಾರದ ಚಟುವಟಿಕೆಗಳು

ತಂತ್ರಜ್ಞಾನ ಬಳಕೆ ಮತ್ತು ಆವಿಷ್ಕಾರದಲ್ಲಿ ಭಾರತವು ಹೆಮ್ಮೆಪಡುವ ಆವಿಷ್ಕಾರಗಳನ್ನು ಹೊಂದಿದೆ. ಅಲ್ಲದೇ ಪ್ರಸ್ತುತದಲ್ಲಿ ಆಧುನಿಕೃತ ಟೆಕ್ನಾಲಜಿಗಳನ್ನು ಬಳಸಿಕೊಂಡು ಅಭಿವೃದ್ದಿಗೊಂಡ ಅತ್ಯಾಧುನಿಕ ಟಾಪ್‌ ಸಿಟಿಗಳನ್ನು ಹೊಂದಿದೆ. ತಂತ್ರಜ್ಞಾನ, ಸಂವಹನ, ಶಿಕ್ಷಣ, ಮೂಲಭೂತ ಸೌಕರ್ಯ ಹೀಗೆ ಹಲವು ವಿಷಯಗಳಲ್ಲಿ ಅತ್ಯಾಧುನಿಕತೆಯಿಂದ ಈ ನಗರಗಳು ಅಭಿವೃದ್ದಿಗೊಂಡಿವೆ. ಇನ್ನು ಕನ್ನಡಿಗರು ಹೆಮ್ಮೆ ಪಡುವ ವಿಷಯ ಕರ್ನಾಟಕದ ಬೆಂಗಳೂರು ಅತಿಹೆಚ್ಚಿನ ರೀತಿಯಲ್ಲಿ ಟೆಕ್ನಾಲಜಿ ಆಧಾರಿತ ಟಾಪ್‌ ಮೋಸ್ಟ್‌ ಆಧುನಿಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಧುನಿಕ ಭಾರತದ 10 ಟಾಪ್‌ ಮೋಸ್ಟ್‌ಆತ್ಯಾಧುನಿಕ ನಗರಗಳು

ಬೆಂಗಳೂರು - ಕರ್ನಾಟಕ

ಬೆಂಗಳೂರು - ಕರ್ನಾಟಕ

ಭಾರತದ ಸಿಲಿಕಾನ್‌ ವ್ಯಾಲಿ ಎಂತಲೇ ಪ್ರಖ್ಯಾತವಾದ ಬೆಂಗಳೂರು, ಪ್ರತಿ ವರ್ಷಕ್ಕೆ ಸಾವಿರಾರು ಐಟಿ ಉದ್ಯಮಗಳನ್ನು ಹೊಸದಾಗಿ ಹೊಂದುತ್ತಿದೆ. ಭಾರತದ ನಂ 1 ಐಟಿ ಕೇಂದ್ರವಾಗಿದೆ.
ಪ್ರಪಂಚದ ಮೋಸ್ಟ್‌ ಹೈ ಟೆಕ್‌ ನಗರಗಳ ಪಟ್ಟಿಯಲ್ಲೂ ಸ್ಥಾನಗಳಿಸಿದೆ.

ಪುಣೆ -ಮಹಾರಾಷ್ಟ್ರ

ಪುಣೆ -ಮಹಾರಾಷ್ಟ್ರ

ಪುಣೆ ಭಾರತದಲ್ಲಿ ಹೆಚ್ಚು ಐಟಿ ಕೇಂದ್ರಗಳನ್ನು ಹೊಂದಿರುವ ನಗರಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನ ನಂತರದ ಸ್ಥಾನದಲ್ಲಿ ಪುಣೆ ಐಟಿ ಕೇಂದ್ರಗಳ ಅಭಿವೃದ್ದಿಯಲ್ಲಿ ಮುಂಚೂಣಿ ಪಡೆಯುತ್ತಿದೆ.

ಹೈದಾರಾಬಾದ್‌ -ಆಂಧ್ರ ಪ್ರದೇಶ

ಹೈದಾರಾಬಾದ್‌ -ಆಂಧ್ರ ಪ್ರದೇಶ

ಆಂಧ್ರ ಪ್ರದೇಶದ ರಾಜಧಾನಿ ನಗರ ಹೈದಾರಾಬಾದ್. ಸಾವಿರಾರು ಉದ್ಯೋಗಿಗಳು ಇಲ್ಲಿನ ಟೆಕ್‌ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಟೆಕ್‌ ಉದ್ಯಮಕ್ಕೆ ಉತ್ತಮ ವ್ಯವಹಾರ ನೀತಿಯನ್ನು ಇಲ್ಲಿನ ರಾಜ್ಯ ಸರ್ಕಾರ ಹೊಂದಿದೆ. ಇಲ್ಲಿ ಹೈಸ್ಪೀಡ್ ಇಂಟರ್ನೆಟ್‌ ಸೇವೆ ಇದ್ದು, ಸಾರಿಗೆ, ಸಂವಹನ, ಸೌಕರ್ಯಗಳಲ್ಲಿ ಉತ್ತಮವಾಗಿ ನಿರ್ವಹಣೆ ಇದೆ.

ಮುಂಬೈ -ಮಹಾರಾಷ್ಟ್ರ

ಮುಂಬೈ -ಮಹಾರಾಷ್ಟ್ರ

ಮುಂಬೈ ಭಾರತದ ಹಣಕಾಸಿನ ರಾಜಧಾನಿ. ಹಿಂದಿ ಸಿನಿಮಾ ಉದ್ಯಮದಿಂದ ಬಾಲಿಹುಡ್‌ ಎಂತಲೇ ಹೆಸರುವಾಸಿಯಾದ ಇದು ಭಾರತದ ಮನರಂಜನೆಯ ಕೇಂದ್ರ ಎನಿಸಿಕೊಂಡಿದೆ.

ನವ ದೆಹಲಿ - ದೆಹಲಿ

ನವ ದೆಹಲಿ - ದೆಹಲಿ

ನವ ದೆಹಲಿ ಭಾರತದ ರಾಜಧಾನಿ. ದೇಶದ ಜನತೆಗೆ ಪಾಲಿಸಿ ಮೇಕರ್‌ ಕೇಂದ್ರವಾಗಿದೆ. ಇದು ಉತ್ತಮ ಸಾರಿಗೆ ವ್ಯವಸ್ಥೆ ಮೆಟ್ರೋ ಮತ್ತು ಬಸ್ಸು ಸಾರಿಗೆಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ.

ಗುಡಗಾಂವ್ - ಹರಿಯಾಣ

ಗುಡಗಾಂವ್ - ಹರಿಯಾಣ

ಹರಿಯಾಣ ರಾಜ್ಯದ ಮೋಸ್ಟ್‌ ಹೈಟೆಕ್‌ ಸಿಟಿ ಗುಡಗಾಂವ್. ಇದು ಹಲವು ಬೃಹತ್ ಕಂಪನಿಗಳನ್ನು ಹೊಂದಿದೆ.

ಚಂಡೀಘಢ -ಪಂಜಾಬ್ ಮತ್ತು ಹರಿಯಾಣ

ಚಂಡೀಘಢ -ಪಂಜಾಬ್ ಮತ್ತು ಹರಿಯಾಣ

ಭಾರತ ಸ್ವಾತಂತ್ಯ್ಯ ಪಡೆದ ನಂತರ ಉತ್ತಮ ಯೋಜನೆಯಡಿಯಲ್ಲಿ ರೂಪಿತವಾದ ನಗರ ಚಂಡೀಘಢ. ಅತ್ಯಧಿಕ ಮಾನವ ಸಂಪನ್ಮೂಲ, ಸಂವಹನ, ಸಾರಿಗೆ, ಮೂಲಭೂತ ಸೌಕರ್ಯಗಳನ್ನು ಹೊಂದಿದೆ.

ನೋಯ್ಡಾ - ಉತ್ತರ ಪ್ರದೇಶ

ನೋಯ್ಡಾ - ಉತ್ತರ ಪ್ರದೇಶ

ನೋಯ್ಡಾ ಹೊಸ ಓಖ್ಲಾ ಕೈಗಾರಿಕೆ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ ನಗರ. ನಗರ ಪ್ರದೇಶದಲ್ಲಿ ಉತ್ತಮ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ದಿಗೊಳ್ಳುತ್ತಿರುವ ನಗರ.

ಅಹ್ಮದಾಬಾದ್  - ಗುಜರಾತ್

ಅಹ್ಮದಾಬಾದ್ - ಗುಜರಾತ್

ಗುಜರಾತಿನ ಹಣಕಾಸಿನ ಕ್ಯಾಪಿಟಲ್‌ ಅಮೇದಾಬಾದ್. ಒಮ್ಮೆ ಇದು ಭಾರತದ ಮ್ಯಾಚೆಸ್ಟರ್ ಎಂದು ಹೆಸರು ಪಡೆದಿದೆ. ಅಮೇದಾಬಾದ್‌ ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಡ್ಜ್‌ಗಳನ್ನು ಹೊಂದಿದ್ದು, ಮೋಸ್ಟ್‌ ಅಡ್ವಾನ್ಸ್‌ ಸಂವಹನ ವ್ಯವಸ್ಥೆ ಹೊಂದಿದೆ.

ಚೆನ್ನೈ -ತಮಿಳುನಾಡು

ಚೆನ್ನೈ -ತಮಿಳುನಾಡು

ದಕ್ಷಿಣ ಭಾರತದ ವಿಶಾಲ ರಾಜ್ಯ ತಮಿಳುನಾಡು. ಹೆಚ್ಚು ಜನನಿಬಿಡ ಬಂದರುಗಳನ್ನು ಹೊಂದಿರುವಲ್ಲಿ ಪ್ರಖ್ಯಾತವಾಗಿದೆ. ಇದು ಭಾರತದ ಟಾಪ್‌ ಹೈ ಟೆಕ್‌ ಸಿಟಿಗಳ ಪಟ್ಟಿಯಲ್ಲಿ 10 ನೇ ಸ್ಥಾನ ಪಡೆದಿದೆ.

Best Mobiles in India

English summary
India is growing at very fast rate in all sectors such as technology, communications, infrastructure, education and many more. India’s Bangalore is widely accepted as one of the most advanced city in the world as per information given here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X