ಫೇಸ್‌ಬುಕ್‌ನಲ್ಲಿ ನೀವು ಮಾಡಲೇಬಾರದ ಚಟುವಟಿಕೆಗಳು

By Suneel
|

ಪ್ರಪಂಚದ ಬಹುದೊಡ್ಡ ಸಾಮಾಜಿಕ ಜಾಲತಾಣ ಹಾಗೂ ಟ್ರೆಂಡ್‌ ಸೆಟರ್‌ ಆದ ಫೇಸ್‌ಬುಕ್‌ ಭೂಮಿ ಮೇಲಿನ ಪ್ರತಿಯೊಬ್ಬ ಪ್ರಜೆಗೂ ಬಳಕೆದಾರನಾಗುವ ಅವಕಾಶ ನೀಡಿದೆ. ಬಳಕೆದಾರರು 9 ವರ್ಷಗಳಿಂದಲೂ ಅದರ ಅನುಭವವನ್ನು ಪಡೆಯುತ್ತಿದ್ದಾರೆ. ಆದರೆ ಬಳಸುವ ವಿಧಾನದಲ್ಲಿ ನ್ಯೂಸ್‌ ಶೇರಿಂಗ್‌ ಮಾಡುವ ವಿಷಯಗಳು ಹೆಚ್ಚು ಬದಲಾವಣೆ ಆಗುತ್ತಿವೆ.

ಓದಿರಿ: ಟೆಕ್‌ ಕ್ಷೇತ್ರದ ಸಾಧನೆಗಾಗಿ ಸ್ಫೂರ್ತಿಯಾದ ಸಿಇಓಗಳು

ಹೌದು, ಫೇಸ್‌ಬುಕ್‌ ಬಳಕೆದಾರರು ಅಧಿಕವಾಗಿ ಆಸಕ್ತ ವಿಷಯಗಳ ನ್ಯೂಸ್‌ ಶೇರ್‌ ಮಾಡದೇ ಅವರದೇ ಆದ ಸ್ಟೈಲ್‌ ಪ್ರಾರಂಭ ಮಾಡಿದ್ದಾರೆ. ಆದ್ರೆ ಅದರ ಪರಿಣಾಮ ಯಾವ ರೀತಿಯಲ್ಲಿ ಬದಲಾಗುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲ. ಎಲ್ಲ, ಸರಿ ಆದ್ರೆ ನಿವ್ಯಾಕೆ ಈ ವಿಷಯ ಹೇಳ್ತಿದ್ದೀರಿ ಎಂಬ ಪ್ರಶ್ನೆ ನಿಮಗೆ ಈಗಾಗಲೇ ಕೇಳಬೇಕು ಎನಿಸಿದರೇ, ಉತ್ತರವನ್ನು ನಾವು ಕೊಡುತ್ತವೆ.

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಬಹುದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನೀವು ಮಾಡಬಾರದ ಚಟುವಟಿಕೆಗಳನ್ನು ಹಾಗೂ ನಿರ್ವಹಿಸಬಹುದಾದ ಉತ್ತಮ ಕೆಲಸಗಳನ್ನು ತಿಳಿಸುತ್ತಿದೆ.

100 ಫೋಟೋಗಳ ಆಲ್ಬಮ್ ಅಪ್ಲೋಡ್‌ ಮಾಡದಿರುವುದು.

100 ಫೋಟೋಗಳ ಆಲ್ಬಮ್ ಅಪ್ಲೋಡ್‌ ಮಾಡದಿರುವುದು.

ಟ್ರೆಂಡ್‌ ಬದಲಾದಂತೆ ಇಂದಿನ ಯೂತ್ಸ್‌ ವಾರಕ್ಕೊಂದು ಟ್ರಿಪ್‌ ಮಾಡಿ ಇತರರಿಗೆ ತಮ್ಮ ಸ್ಟೇಟಸ್ ತೋರಿಸಲು ಟ್ರಿಫ್‌ಗಳ ಎಲ್ಲಾ ಫೋಟೋಗಳನ್ನು ಅಪ್ಲೋಡ್‌ ಮಾಡುತ್ತಾರೆ. ಎಂದಾದ್ರು ಯೋಚಿಸಿದ್ದೀರ ಅವೆಲ್ಲವನ್ನು ತಾಳ್ಮೆಯಿಂದ ಕುಳಿತು ಫೇಸ್‌ಬುಕ್‌ನಲ್ಲಿ ನೋಡುತ್ತಾರೆ ಅಂತ. ಖಂಡಿತ ಯಾರು ನೋಡಲ್ಲ, ಸೋ, ಕೆಲವು ಬೆಸ್ಟ್‌ ಫೋಟೊಗಳನ್ನು ನ್ಯೂಸ್‌ ಫೀಡ್‌ ರೀತಿಯಲ್ಲಿ ಫೋಸ್ಟ್‌ಮಾಡಿ ನಿಮ್ಮ ಲೈಕ್ಸ್‌ ನೋಡಿ.

ಸ್ಟೇಟಸ್‌ ಕಾಪಿ ಮತ್ತು ಪೇಸ್ಟ್‌

ಸ್ಟೇಟಸ್‌ ಕಾಪಿ ಮತ್ತು ಪೇಸ್ಟ್‌

ಸ್ಟೇಟಸ್‌ ಕಾಪಿ ಪೇಸ್ಟ್‌ ಮಾಡುವ ಪ್ರಕ್ರಿಯೆ ಇಂದು ಹೆಚ್ಚು ಕಡಿಮೆ ಯಾಗುತ್ತಿದೆ. ಇದೊಂದು ರೀತಿಯ ಒಳ್ಳೆ ಬೆಳವಣಿಗೆ. ಫೇಸ್‌ಬುಕ್‌ ಹೊಸ ಪೋಸ್ಟ್‌ಗಳನ್ನು ಫೋಸ್ಟ್‌ಮಾಡಲು ಯಾವುದೇ ಚಾರ್ಜ್‌ ಮಾಡುವುದಿಲ್ಲ. ಆದ್ದರಿಂದ ನಿಮ್ಮದೇ ಆದ ಹೊಸ ಫೋಸ್ಟ್‌ಗಳನ್ನು ಹಾಕಿ.

ವಿಭಿನ್ನಾರ್ಥ

ವಿಭಿನ್ನಾರ್ಥ

ನಿಮ್ಮ ದುಃಖದ ಛಾಯೆ ನಿಮಗೆ ಫೇಸ್‌ಬುಕ್‌ನ ಫೋಸ್ಟ್‌ನಲ್ಲಿ ಖುಷಿತರಿಸಬಹುದು. ಆದರೆ ಇತರರಿಗೆ ಏನು ಹೇಳಿದಂತಾಗುತ್ತದೆ ಯೋಚಿಸಿ ನೋಡಿ. ಏನಾದರೂ ಹೇಳುವಂತಿದ್ದರೇ ಅದನ್ನು ನಿಖರವಾಗಿ ಹೇಳಿ. ಇಲ್ಲದಿದ್ದಲ್ಲಿ ಅಂತಹ ಪಿಕ್‌ಗಳನ್ನು ನಿಮ್ಮಲ್ಲೇ ಇರಿಸಿಕೊಳ್ಳಿ.

ನಿರಂತರ ಬೇಬಿ ಪೋಸ್ಟ್‌ಗಳು

ನಿರಂತರ ಬೇಬಿ ಪೋಸ್ಟ್‌ಗಳು

ನಿಮ್ಮ ನೆಚ್ಚಿನ ಬೇಬಿಗಳ ಫೋಟೋಗಳನ್ನು ಎಲ್ಲರೂ ನೋಡಲೂ ಇಷ್ಟ ಪಡಬಹುದು ಆದರೇ ಅದು ವಿಶೇಷ ದಿನಗಳ ಅಪ್‌ಡೇಟ್‌ ಆಗಿದ್ದರೇ ಮಾತ್ರ. ಅದರ ಬದಲೂ ನೀವು ನಿಮ್ಮ ಕುಟುಂಬದ ಒಟ್ಟಿಗೆ ತೆಗೆದ ಫೋಟೋಗಳನ್ನೇ ಫೋಸ್ಟ್‌ಮಾಡಬಹುದು. ನಿರಂತರ ಬೇಬಿ ಪೋಸ್ಟ್‌ಗಳು ಆರೋಗ್ಯದಾಯಕವಲ್ಲ.

The humblebrag

The humblebrag

ಸಾಮಾಜಿಕ ಜಾಲತಾಣ ತನ್ನದೇ ಆದ ಹೆಸರು ಗಳಿಸಿದೆ. ಇದು ಕೆಲವು ಜಾಬ್ ಪ್ರಮೋಷನ್‌ ನೀಡುವ ವೇದಿಕೆಯು ಹೌದು. ಆದ್ದರಿಂದ ನಿಮ್ಮ ಫಿಟ್ಸ್‌ನೆಸ್‌ಗೋಲ್‌, ಸಾಮಾನ್ಯ ಸಾಧನೆಗಳು ಹೀಗೆ ಹಲವು ರೀತಿಯ ವಿಷಯಗಳ ಬಗ್ಗೆ ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ಮಾಡಿ. ಆದರೆ ಅವು ನಿಮ್ಮ ಆತ್ಮ ಸಾಕ್ಷಿಯ ಚಟುವಟಿಕೆಗಳಾಗಿರಲಿ.

ವಾತಾವರಣದ ಬಗ್ಗೆ  ಚರ್ಚೆ

ವಾತಾವರಣದ ಬಗ್ಗೆ ಚರ್ಚೆ

ಫೇಸ್‌ಬುಕ್‌ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವಲ್ಲದೇ ತಕ್ಷಣದ ಹವಾಮಾನ ವರದಿ ಸೇವೆ ನೀಡುವಲ್ಲಿ ಸಂಶಯವಿಲ್ಲ. ಫೇಸ್‌ಬುಕ್‌ ಸ್ನೇಹಿತರು ನಿಮಗೆ ಪ್ರಪಂಚದ ಸ್ಥಳೀಯ ಹವಾಮಾನ ವರದಿ ನೀಡುವಲ್ಲಿ ಮುಂದಾಗುತ್ತಾರೆ.

ರಾಜಕೀಯ ಚರ್ಚೆ

ರಾಜಕೀಯ ಚರ್ಚೆ

ಫೇಸ್‌ಬುಕ್‌ ಹಲವು ಚರ್ಚೆಗಳಿಗೆ ಉತ್ತಮ ವೇದಿಕೆ. ಉತ್ತಮ ಪ್ರಜಾಪ್ರಭುತ್ವಕ್ಕೆ ಇಂದು ರಾಜಕೀಯ ಚರ್ಚೆಗಳು ಹಾಗೂ ಸಂವಾದಗಳು ಮುಖ್ಯವಾಗಿವೆ. ನಿಮ್ಮ ಅಂತಹ ಉತ್ತಮ ಅಲೋಚನೆಗಳನ್ನು ಇದರಲ್ಲಿ ಹಂಚಿಕೊಳ್ಳ ಬಹುದಾಗಿದೆ. ಅಲ್ಲದೇ ಸ್ಥಳೀಯ ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸಹ ಶೇರ್‌ ಮಾಡಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸಿದೆ.

 ಸ್ವಯಂ ಪ್ರಚಾರ ಬಿಟ್ಟು ಎನಾದರೂ ಉತ್ತಮ ಚಟುವಟಿಕೆಗಳನ್ನು ಮಾಡಿ.

ಸ್ವಯಂ ಪ್ರಚಾರ ಬಿಟ್ಟು ಎನಾದರೂ ಉತ್ತಮ ಚಟುವಟಿಕೆಗಳನ್ನು ಮಾಡಿ.

ಹಲವು ನಿಮ್ಮ ಸ್ವಯಂ ಪ್ರಚಾರಗಳೊಂದಿಗೆ ಹೊಸ ಪುಸ್ತಕಗಳು ಬಿಡುಗಡೆಗೊಂಡ ವಿಷಯ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ವಿಶೇಷ ರಿಯಾಯಿತಿಯ ಹಲವು ವಿಷಯಗಳನ್ನು ಪೋಸ್ಟ್‌ಮಾಡಿ.

 ವಿಸಿಬಲಿಟಿ ಸೆಟ್ಟಿಂಗ್ಸ್‌ಗಳ ನಿರ್ಲಕ್ಷಣೆ

ವಿಸಿಬಲಿಟಿ ಸೆಟ್ಟಿಂಗ್ಸ್‌ಗಳ ನಿರ್ಲಕ್ಷಣೆ

ನಿಮ್ಮ ಫೇಸ್‌ಬುಕ್‌ನಲ್ಲಿ ನೀವು ಪೋಸ್ಟ್‌ಮಾಡುವ ಪೋಸ್ಟ್‌ಗಳಿಗೆ ಆಡಿಯನ್ಸ್‌ಸೆಲೆಕ್ಟರ್‌ಗಳನ್ನು ಹೊಂದಿರುತ್ತೀರಿ. ನಿಮ್ಮ ಜೆನೆರಲ್‌ಪೋಸ್ಟ್‌ಗಳಿಗೆ ಈ ರೀತಿಯ ಆಡಿಯನ್ಸ್‌ ಸೆಲೆಕ್ಟ್‌ ಮಾಡುವುದನ್ನು ನಿರ್ಲಕ್ಷಿಸಿ.

ಸಾರ್ವಜನಿಕ ಪ್ರೀತಿಯ ಪ್ರದರ್ಶನಗಳು.

ಸಾರ್ವಜನಿಕ ಪ್ರೀತಿಯ ಪ್ರದರ್ಶನಗಳು.

ಫೇಸ್‌ಬುಕ್‌ ನೇರ ಸಂದೇಶಕ್ಕೆ ಅವಕಾಶ ನೀಡಿದ್ದು, ನಿಮ್ಮ ಪ್ರೀತಿಯ ಪ್ರದರ್ಶನಗಳಿಗೆ ಪ್ರೀತಿಯ ಸಂದೇಶವನ್ನು ನೇರವಾಗಿ ನೀಡಬಹುದಾಗಿದೆ. ಇಲ್ಲಿ ಯಾರನ್ನು ಮನವಿ ಮಾಡುವ ಅಗತ್ಯವಿರುವುದಿಲ್ಲ.

Most Read Articles
Best Mobiles in India

English summary
You would have thought that in the nine years since Facebook became open to anyone, people would have learned how to use it properly - but that's apparently not the case, if the behaviour we still see in our News Feeds is anything to go by.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more