ನಿಮ್ಮ ಮನಗೆಲ್ಲಲಿರುವ ಹೊಚ್ಚಹೊಸ ಡಿವೈಸ್‌ಗಳು

Posted By:

ಮಾರುಕಟ್ಟೆಗೆ ಬರುತ್ತಿರುವ ನೂತನ ಡಿವೈಸ್‌ಗಳು ಬಳಕೆದಾರರಲ್ಲಿ ಹೊಸತನವನ್ನು ಉಂಟುಮಾಡುತ್ತಿದೆ. ಆಧುನಿಕ ತಂತ್ರಜ್ಞಾನ ಪ್ರಗತಿಯನ್ನು ಕಂಡುಕೊಂಡಂತೆ ಹೊಸ ಹೊಸ ಡಿವೈಸ್‌ಗಳಲ್ಲಿ ಈ ಪರಿಷ್ಕಾರ ಬೆಳಕನ್ನು ಚೆಲ್ಲುತ್ತದೆ.

ಓದಿರಿ: ದೆವ್ವಗಳನ್ನು ಪತ್ತೆಹಚ್ಚುವ ಟಾಪ್ ಅಪ್ಲಿಕೇಶನ್ಸ್

ತಾಂತ್ರಿಕವಾಗಿ ನಾವು ಪ್ರಗತಿಯನ್ನು ಕಂಡುಕೊಳ್ಳುತ್ತಿದ್ದೇವೆ ಎಂಬ ಸೂಚನೆಯನ್ನು ಈ ಆವಿಷ್ಕಾರಗಳು ನೀಡುತ್ತಿದ್ದು ನಮ್ಮ ದೈನಂದಿನ ಜೀವನದಲ್ಲಿ ಇದು ಹೆಚ್ಚಿನ ಬೆಳಕನ್ನು ಚೆಲ್ಲುತ್ತಿದೆ. ಮಾರುಕಟ್ಟೆಯಲ್ಲಿ ತಮ್ಮ ಆಗಮನದ ಸೂಚನೆಯನ್ನು ನೀಡುತ್ತಿರುವ ಡಿವೈಸ್‌ಗಳು ಕೂಡ ಬಳಕೆದಾರರಿಗೆ ಉಪಯೋಗವಾಗುವಂತಹ ರೀತಿಯಲ್ಲಿದ್ದು ಬಳಸುವವರಿಗೆ ಸದಾಕಾಲ ತಮ್ಮ ಸ್ಮರಣೆಯನ್ನು ಉಂಟುಮಾಡುವಂತಿದೆ.

ಓದಿರಿ: ಸ್ಟೀವ್ ಜಾಬ್ ಚಲನಚಿತ್ರ ಪ್ರಮುಖ ಹೈಲೈಟ್ಸ್

ಇಂದಿನ ಲೇಖನದಲ್ಲಿ ಮಾರುಕಟ್ಟೆಗೆ ಆಗಮನವನ್ನು ಕಂಡುಕೊಳ್ಳುತ್ತಿರುವ ಟಾಪ್ ಡಿವೈಸ್‌ಗಳ ಪಟ್ಟಿಯನ್ನು ನೀಡುತ್ತಿದ್ದು ಇದು ಬಜೆಟ್ ಬೆಲೆಯಲ್ಲಿ ಬರುವುದಂತೂ ಖಂಡಿತ. ನೂತನ ಓಎಸ್‌ಗಳು, ಇನ್ನಷ್ಟು ವೇಗದ ಕಾರ್ಯತತ್ಪರತೆ, ಹೀಗೆ ಬಳಕೆದಾರರಿಗೆ ನೂರು ಶೇಕಡ ಪ್ರಯೋಜನವನ್ನು ಒದಗಿಸುವಂತೆ ಇವುಗಳು ಬರುತ್ತಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜುಲೈ 27

ಜುಲೈ 27

ಒನ್ ಪ್ಲಸ್ 2

ಹೆಚ್ಚಿನ ಫ್ಲ್ಯಾಗ್‌ಶಿಪ್ ಆಂಡ್ರಾಯ್ಡ್ ಫೋನ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತಿರುವ ಒನ್ ಪ್ಲಸ್ ಒನ್ ಈ ತಿಂಗಳಲ್ಲೇ ಇನ್ನೊಂದು ಫೋನ್ ಅನ್ನು ಲಾಂಚ್ ಮಾಡಲಿದೆ. ಟಚ್ ಐಡಿಯಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಈ ಡಿವೈಸ್ ಪಡೆದುಕೊಳ್ಳಲಿದೆ.

ಜುಲೈ ಆಗಮನ

ಜುಲೈ ಆಗಮನ

ವಿಂಡೋಸ್ 10

ಮೈಕ್ರೋಸಾಫ್ಟ್‌ನ ಹೆಚ್ಚು ನಿರೀಕ್ಷಿತ ವಿಂಡೋಸ್ 10 ಅಧಿಕೃತವಾಗಿ ಜುಲೈ 29 ರಂದು ಲಾಂಚ್ ಭಾಗ್ಯವನ್ನು ಕಾಣಲಿದೆ.

ಸಪ್ಟೆಂಬರ್ ಆಗಮನ

ಸಪ್ಟೆಂಬರ್ ಆಗಮನ

ಐಫೋನ್ 6

ಆಪಲ್ ತನ್ನ ಹೊಚ್ಚ ಹೊಸ ಐಫೋನ್‌ಗಳ ಲಾಂಚ್ ಅನ್ನು ಸಪ್ಟೆಂಬರ್‌ನಲ್ಲಿ ಮಾಡಲಿದೆ.

ಸಪ್ಟೆಂಬರ್ ಆಗಮನ

ಸಪ್ಟೆಂಬರ್ ಆಗಮನ

ಐಓಎಸ್ 9

ಆಪಲ್ ಐಓಎಸ್ 9 ಅನ್ನು ತನ್ನ ಐಫೋನ್‌ಗಳ ಲಾಂಚ್ ಸಮಯದಲ್ಲಿ ಮಾಡಲಿದೆ.

ಸಪ್ಟೆಂಬರ್ ಆಗಮನ

ಸಪ್ಟೆಂಬರ್ ಆಗಮನ

ಗ್ಯಾಲಕ್ಸಿ ನೋಟ್ 5 ಎಸ್6 ಎಡ್ಜ್ ಪ್ಲಸ್

ತನ್ನ ಹೊಸ ಗ್ಯಾಲಕ್ಸಿ ನೋಟ್ ಫೋನ್‌ಗಳನ್ನು ಸ್ಯಾಮ್‌ಸಂಗ್ ಸಪ್ಟೆಂಬರ್‌ನಲ್ಲಿ ಲಾಂಚ್ ಮಾಡಲಿದೆ. ಗ್ಯಾಲಕ್ಸಿ ನೋಟ್ 5, 2ಕೆ ಅಥವಾ 4ಕೆ ರೆಸಲ್ಯೂಶನ್ ಪರದೆಯನ್ನು ಪಡೆದುಕೊಳ್ಳಲಿದೆ.

ಸಪ್ಟೆಂಬರ್ ಆಗಮನ

ಸಪ್ಟೆಂಬರ್ ಆಗಮನ

ಮೋಟೋರೋಲಾ ಮೋಟೋ ಎಕ್ಸ್ (3 ನೇ ಜನರೇಶನ್)

ಮೋಟೋರೋಲಾ ತನ್ನ ಮುಂಬರಲಿರುವ ಹೊಸ ಫೋನ್ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡದೇ ಇದ್ದರೂ ಸಪ್ಟೆಂಬರ್ ತಿಂಗಳನ್ನು ತನ್ನ ಹೊಸ ಫೋನ್ ಲಾಂಚ್‌ಗಾಗಿ ಇದು ಕಾಯ್ದಿರಿಸಿದೆ.

ಅಕ್ಟೋಬರ್ ಆಗಮನ

ಅಕ್ಟೋಬರ್ ಆಗಮನ

ಗೂಗಲ್ ನೆಕ್ಸಸ್ ಫೋನ್ಸ್

ಕಳೆದ ಎರಡು ವರ್ಷಗಳಿಂದ ಎರಡು ಹೊಸ ನೆಕ್ಸಸ್ ಫೋನ್‌ಗಳನ್ನು ಅಕ್ಟೋಬರ್‌ನಲ್ಲಿ ಲಾಂಚ್ ಮಾಡುವ ನಿಟ್ಟಿನಲ್ಲಿದೆ.

ಜುಲೈ ಆಗಮನ

ಜುಲೈ ಆಗಮನ

ಆಂಡ್ರಾಯ್ಡ್ ಎಮ್

ಆಂಡ್ರಾಯ್ಡ್ ಎಮ್‌ನ ಘೋಷಣೆಯನ್ನು ಡಿವೈಸ್‌ಗಳಿಗೆ ಗೂಗಲ್ ಈ ತಿಂಗಳಲ್ಲೇ ಮಾಡಲಿದ್ದು ನೆಕ್ಸಸ್ ಫೋನ್‌ಗಳು ಪೂರ್ವ ಸ್ಥಾಪನೆಯುಳ್ಳ ಆಂಡ್ರಾಯ್ಡ್ ಎಮ್‌ನೊಂದಿಗೆ ಬಂದಿದೆ.

ಅಕ್ಟೋಬರ್ ಆಗಮನ

ಅಕ್ಟೋಬರ್ ಆಗಮನ

ಆಪಲ್ ಐಪ್ಯಾಡ್

ಆಪಲ್ ಕೂಡ 12.9 ಇಂಚಿನ ಸ್ಕ್ರೀನ್ ಉಳ್ಳ ಐಪ್ಯಾಡ್‌ನೊಂದಿಗೆ ಅಕ್ಟೋಬರ್‌ನಲ್ಲಿ ಆಗಮನವನ್ನು ಕಂಡುಕೊಳ್ಳಲಿದೆ.

ವರ್ಷದ ಕೊನೆ

ವರ್ಷದ ಕೊನೆ

ಎಚ್‌ಟಿಸಿ ವರ್ಚುವಲ್ ರಿಯಾಲಿಟಿ

ಎಚ್‌ಟಿಸಿ ವರ್ಚುವಲ್ ರಿಯಾಲಿಟಿ ಕಾನ್ಸೆಪ್ಟ್ ಈ ವರ್ಷದ ಕೊನೆಯಲ್ಲಿ ಲಾಂಚ್ ಭಾಗ್ಯವನ್ನು ಕಾಣಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article 10 Hottest Gadgets Set To Launch In 2015.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot