ಟಾಪ್‌ 10 ರೋಬೋಟ್ ವ್ಯಾಕ್ಯೂಮ್ ಕ್ಲೀನರ್‌ಗಳು: ಬೆಲೆ, ಫೀಚರ್ಸ್‌ ಬಗ್ಗೆ ತಿಳಿಯಿರಿ!

|

ಪ್ರಸ್ತುತ ದಿನಗಳಲ್ಲಿ ಎಲ್ಲರೂ ಒಂದೊಂದು ಕಾರ್ಯದಲ್ಲಿ ಬ್ಯುಸಿಯಾಗಿರುತ್ತಾರೆ. ಇಂದಿನ ಸ್ಮಾರ್ಟ್‌ ಕಾಲಕ್ಕೆ ತಕ್ಕಂತೆ ಇಂತಹ ಜನರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಹಲವಾರು ಬ್ರಾಂಡ್‌ಗಳು ಅಕರ್ಷಕ ಫೀಚರ್ಸ್‌ ಇರುವ ರೋಬೋಟ್‌ ವ್ಯಾಕ್ಯೂಮ್‌ ಕ್ಲೀನರ್‌ಗಳನ್ನು ಪರಿಚಯಿಸಿವೆ. ಇವು ಮನೆಯನ್ನು ಕ್ಲೀನ್‌ ಮಾಡಿ ಅಂದವಾಗಿ ಕಾಣುವಂತೆ ಮಾಡುತ್ತವೆ.

ರೋಬೋಟ್‌

ಹೌದು, ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ರೋಬೋಟ್‌ಗಳು ಲಭ್ಯ ಇವೆ. ಇವು ನಿಮಗೆ ಮನೆಯ ನೆಲವನ್ನು ಕ್ಲೀನ್‌ ಮಾಡಲು ಸಹಾಯ ಮಾಡಲಿವೆ. ಅದೂ ಸಹ ಆಜ್ಞೆಗಳ ಮೂಲಕ. ನೀವೇನಾದರೂ ಧೀರ್ಘಕಾಲ ಬಾಳಿಕೆ ಬರುವ ಹಾಗೂ ಎಲ್ಲಾ ರೀತಿಯ ನೆಲವನ್ನು ಕ್ಲೀನ್‌ ಮಾಡುವ ರೋಬೋಟ್‌ ವ್ಯಾಕ್ಯೂಮ್‌ ಕ್ಲೀನರ್‌ಗಳನ್ನು ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ ಈ ಲೇಖನ ಓದಿ.

ಮಿ ರೋಬೋಟ್ ವ್ಯಾಕ್ಯೂಮ್‌ ಮಾಪ್‌

ಮಿ ರೋಬೋಟ್ ವ್ಯಾಕ್ಯೂಮ್‌ ಮಾಪ್‌

ಪ್ರತಿಷ್ಟಿತ ಮಿ ಕಂಪೆನಿಯ ಈ ರೋಬೋಟ್‌ ಅನ್ನು ಅಮೆಜಾನ್‌ನಲ್ಲಿ 23,995ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ 2100 Pa (ಪ್ಯಾಸ್ಕಲ್ ಪ್ರೆಶರ್ ಯೂನಿಟ್‌) ಹೀರುವಿಕೆ ಶಕ್ತಿಯನ್ನು ಪಡೆದುಕೊಂಡಿದ್ದು, ಇದರಲ್ಲಿ ಮೂರು ರೀತಿಯ ಕ್ಲೀನಿಂಗ್‌ ಮೋಡ್‌ ಆಯ್ಕೆಗಳನ್ನು ನೀಡಲಾಗಿದೆ. 3200mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 130 ನಿಮಿಷಗಳ ವರೆಗೆ ಬಳಕೆ ಮಾಡಬಹುದಾಗಿದೆ. ಇದನ್ನು ಶಿಯೋಮಿ ಹೋಮ್ ಅಪ್ಲಿಕೇಶನ್, ಗೂಗಲ್‌ ಅಸಿಸ್ಟೆಂಟ್‌, ಮಿ ಹೋಮ್ ಅಪ್ಲಿಕೇಶನ್, ಐಒಎಸ್‌, ಆಂಡ್ರಾಯ್ಡ್ ಆಪ್‌ ಮೂಲಕ ನಿಯಂತ್ರಣ ಮಾಡಬಹುದು.

ECOVACS DEEBOT 2-in-1

ECOVACS DEEBOT 2-in-1

ಈ ರೋಬೋಟ್‌ ವ್ಯಾಕ್ಯೂಮ್‌ ಕ್ಲೀನರ್‌ ಅನ್ನು ಅಮೆಜಾನ್‌ನಲ್ಲಿ 38,000ರೂ. ಗಳ ಆಸುಪಾಸಿನಲ್ಲಿ ಕೊಂಡುಕೊಳ್ಳಬಹುದಾಗಿದೆ. ಈ ಡಿವೈಸ್‌ 2300Pa ಹೀರಿಕೊಳ್ಳುವ ಶಕ್ತಿಯನ್ನು ಪಡೆದಿದ್ದು, ಎಂತಹ ಕಠಿಣ ಕಲೆಯನ್ನೂ ಸಹ ಇದು ಕ್ಲೀನ್‌ ಮಾಡುವ ಸಾಮರ್ಥ್ಯ ಪಡೆದಿದೆ. ಹಾಗೆಯೇ 5200mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಅಪ್‌ಗ್ರೇಡ್ ಮಾಡಲಾದ ಲೇಸರ್ ನ್ಯಾವಿಗೇಶನ್ ಆಯ್ಕೆಯನ್ನು ಒಳಗೊಂಡಿದೆ. ಇನ್ನುಳಿದಂತೆ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ವಿಯೋಮಿ SE ರೋಬೋಟ್ ವ್ಯಾಕ್ಯೂಮ್ ಕ್ಲೀನರ್

ವಿಯೋಮಿ SE ರೋಬೋಟ್ ವ್ಯಾಕ್ಯೂಮ್ ಕ್ಲೀನರ್

ಈ ವ್ಯಾಕ್ಯೂಮ್ ಕ್ಲೀನರ್‌ ಅನ್ನು ನೀವು 18,990ರೂ. ಗಳ ರಿಯಾಯಿತಿ ದರದಲ್ಲಿ ಅಮೆಜಾನ್‌ನಲ್ಲಿ ಖರೀದಿ ಮಾಡಬಹುದು. ಹೆಚ್ಚಿನ ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದ್ದು, ಎಲ್ಲಾ ರೀತಿಯ ನೆಲವನ್ನು ಇದರ ಮೂಲಕ ಕ್ಲೀನ್‌ ಮಾಡಬಹುದಾಗಿದೆ. ಇದು 3200mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 2150 ಚದರ ಅಡಿಗಳಷ್ಟು ಸ್ವಚ್ಛಗೊಳಿಸಬಹುದಾಗಿದೆ. ಹಾಗೆಯೇ ಇದನ್ನು ಶಿಯೋಮಿ ಮಿ ಹೋಮ್ ಅಪ್ಲಿಕೇಶನ್ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ಪ್ರೊಸೆನಿಕ್ 850T ವೈ-ಫೈ ಕನೆಕ್ಟೆಡ್‌ ರೋಬೋಟ್ ವ್ಯಾಕ್ಯೂಮ್ ಕ್ಲೀನರ್

ಪ್ರೊಸೆನಿಕ್ 850T ವೈ-ಫೈ ಕನೆಕ್ಟೆಡ್‌ ರೋಬೋಟ್ ವ್ಯಾಕ್ಯೂಮ್ ಕ್ಲೀನರ್

ಈ ವ್ಯಾಕ್ಯೂಮ್ ಕ್ಲೀನರ್ ಅಮೆಜಾನ್‌ನಲ್ಲಿ 19,990ರೂ. ಗಳ ರಿಯಾಯಿತಿಯಲ್ಲಿ ಲಭ್ಯ ಇದೆ. 3000Pa ಹೀರಿಕೊಳ್ಳುವ ಶಕ್ತಿಯನ್ನು ಪಡೆದಿದ್ದು, ಹೆಚ್ಚಿನ ಕಾಲ ಬಾಳಿಕೆ ಬರುವ ವ್ಯಾಕ್ಯೂಮ್ ಕ್ಲೀನರ್‌ ಆಗಿದೆ. ಇದರಲ್ಲಿ ಮೂರು ರೀತಿಯ ಕ್ಲೀನಿಂಗ್ ಆಯ್ಕೆಯನ್ನು ನೀಡಲಾಗಿದೆ. ಇನ್ನುಳಿದಂತೆ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್‌ ಹಾಗೂ ಪ್ರೋಸೆನಿಕ್ ಅಪ್ಲಿಕೇಶನ್‌ನೊಂದಿಗೆ ನಿಯಂತ್ರಿಸಬಹುದು.

ಐರೋಬೋಟ್ ರೂಂಬಾ 692 ವ್ಯಾಕ್ಯೂಮ್ ಕ್ಲೀನಿಂಗ್ ರೋಬೋಟ್

ಐರೋಬೋಟ್ ರೂಂಬಾ 692 ವ್ಯಾಕ್ಯೂಮ್ ಕ್ಲೀನಿಂಗ್ ರೋಬೋಟ್

ಇದನ್ನು ಅಮೆಜಾನ್‌ನಲ್ಲಿ 18,919ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು ಕಾರ್ಪೆಟ್‌ಗಳು ಮತ್ತು ನೆಲದಲ್ಲಿ ಗಟ್ಟಿಯಾಗಿ ಅಂಟಿರುವ ಕಸ, ಕಡ್ಡಿಗಳನ್ನೂ ಹೀರಿಕೊಳ್ಳುತ್ತದೆ. ಇದರಲ್ಲೂ ಮೂರು ರೀತಿಯ ಕ್ಲೀನಿಂಗ್‌ ಆಯ್ಕೆಯನ್ನ ನೀಡಲಾಗಿದೆ. ಜೊತೆಗೆ ಕ್ಲೀನಿಂಗ್‌ ಮಾಡುವ ಸಮಯವನ್ನೂ ಇದರಲ್ಲಿ ಹೊಂದಿಸಬಹುದಾಗಿದೆ. ಇನ್ನು ಗೂಗಲ್ ಅಸಿಸ್ಟೆಂಟ್‌, ಅಮೆಜಾನ್ ಅಲೆಕ್ಸಾ ಮೂಲಕ ನಿಯಂತ್ರಣ ಮಾಡಬಹುದು.

ಆಂಕರ್ ರೋಬೋವಾಕ್ ಜಿ 30

ಆಂಕರ್ ರೋಬೋವಾಕ್ ಜಿ 30

ಆಂಕರ್ ರೋಬೋವಾಕ್ ಜಿ 30 ವ್ಯಾಕ್ಯೂಮ್‌ ಕ್ಲೀನರ್‌ ಆಫರ್‌ ಬೆಲೆಯಲ್ಲಿ 21,999ರೂ. ಗಳಿಗೆ ಅಮೆಜಾನ್‌ನಲ್ಲಿ ಲಭ್ಯವಿದೆ. ಇದು 2000 Pa ಹೀರುವಿಕೆ ಶಕ್ತಿಯನ್ನು ಪಡೆದಿದ್ದು, ಕಾರ್ಪೆಟ್‌ ಹಾಗೂ ನೆಲಕ್ಕೆ ಆಳವಾಗಿ ಅಂಟಿಕೊಂಡಿರುವ ಕೊಳೆಯನ್ನೂ ಕ್ಲೀನ್‌ ಮಾಡುತ್ತದೆ. ಇದರಲ್ಲಿ ವ್ಯಾಕ್ಯೂಮಿಂಗ್‌ ಹಾಗೂ ಮಾಪಿಂಗ್‌ ಆಯ್ಕೆ ಇದೆ. ಇನ್ನುಳಿದಂತೆ ಇದನ್ನು ಸ್ಮಾರ್ಟ್‌ಫೋನ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ.

ಐರೋಬೊಟ್ ಬ್ರಾವ ಎಂ6 ರೋಬೋಟ್

ಐರೋಬೊಟ್ ಬ್ರಾವ ಎಂ6 ರೋಬೋಟ್

ಈ ವ್ಯಾಕ್ಯೂಮ್‌ ಕ್ಲೀನರ್‌ ಅನ್ನು ನೀವು 49,900ರೂ. ಗಳಲ್ಲಿ ಅಮೆಜಾನ್‌ನಲ್ಲಿ ಕೊಂಡುಕೊಳ್ಳಬಹುದು. ಇದು 100W ಶಕ್ತಿಯೊಂದಿಗೆ ಕಾರ್ಯನಿರ್ವಹಿಸಲಿದ್ದು, ಇಂಪ್ರಿಂಟ್ ಸ್ಮಾರ್ಟ್ ಮ್ಯಾಪಿಂಗ್ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿದೆ. ಈ ಮೂಲಕ ಯಾವ ಕೊಠಡಿಯನ್ನು ಯಾವಾಗ ಕ್ಲೀನ್‌ ಮಾಡಬೇಕು ಎಂಬಿತ್ಯಾದಿ ಆದೇಶಗಳನ್ನು ಇದಕ್ಕೆ ನೀಡಬಹುದು. ಜೊತೆಗೆ ಐರೋಬೊಟ್ ಆಪ್‌ ಮೂಲಕ ಇದನ್ನು ನಿಯಂತ್ರಣ ಮಾಡಬಹುದಾಗಿದೆ.

ಐಲೈಫ್‌S8 ಪ್ರೊ ರೋಬೋಟ್ ವ್ಯಾಕ್ಯೂಮ್

ಐಲೈಫ್‌S8 ಪ್ರೊ ರೋಬೋಟ್ ವ್ಯಾಕ್ಯೂಮ್

ಈ ವ್ಯಾಕ್ಯೂಮ್ ಕ್ಲೀನರ್‌ ಅನ್ನು ಅಮೆಜಾನ್‌ನಲ್ಲಿ 18,900ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರಲ್ಲಿ 2000Pa ಹೀರಿಕೊಳ್ಳುವ ಶಕ್ತಿಯನ್ನು ಪಡೆದಿದ್ದು, ಮೂರು ಆಯ್ಕೆಯನ್ನು ನೀಡಲಾಗಿದೆ. ಮ್ಯಾಕ್ಸ್ ಮೋಡ್ 1500Pa , ಆಟೋ ಮೋಡ್ 800Pa ಹಾಗೂ ಆಟೋ ಬೂಸ್ಟ್ 1100Pa ಹೀರಿಕೊಳ್ಳುವ ಶಕ್ತಿಯಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ ವಿಶೇಷ ಫೀಚರ್‌ವೊಂದನ್ನು ನೀಡಲಾಗಿದ್ದು, ಅಂಗಳವನ್ನು ಕ್ಲೀನ್‌ ಮಾಡುವಾಗ ಕಾರ್ಪೆಟ್‌ ಏನಾದರೂ ಅಲ್ಲಿದ್ದರೆ ಸ್ವಯಂ ಆಟೋ ಕಾರ್ಪೆಟ್‌ ಬೂಸ್ಟ್‌ ಫೀಚರ್‌ಗೆ ಬದಲಾಗುತ್ತದೆ. ಹಾಗೆಯೇ ಇದನ್ನು ರೊಮೋಟ್‌ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ಯುರೇಕಾ ಫೋರ್ಬ್ಸ್ ರೋಬೋ

ಯುರೇಕಾ ಫೋರ್ಬ್ಸ್ ರೋಬೋ

ಯುರೇಕಾ ಫೋರ್ಬ್ಸ್ ರೋಬೋ 3 ಇನ್ 1 ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್‌ ಅನ್ನು ಅಮೆಜಾನ್‌ನಲ್ಲಿ 22,500ರೂ. ಗಳಿಗೆ ಖರೀದಿ ಮಾಡಬಹುದು. ಇದರಲ್ಲಿ ಯಾವುದೇ ರೀತಿಯ ನೆಲವನ್ನೂ ಕ್ಲೀನ್‌ ಮಾಡಬಹುದಾಗಿದೆ. ಹಾಗೆಯೇ ಮಲ್ಟಿ ಕ್ಲೀನಿಂಗ್ ಮೋಡ್‌ಗಳ ಆಯ್ಕೆಗಳನ್ನು ಹೊಂದಿದ್ದು, ಈ ಮೂಲಕ ಮನೆಯ ಎಲ್ಲಾ ಮೂಲೆಗಳನ್ನೂ ಸ್ವಚ್ಛ ಮಾಡಬಹುದು. ಇನ್ನು ರಿಮೋಟ್ ಕಂಟ್ರೋಲ್ ಮೂಲಕ ಇದನ್ನು ನಿಯಂತ್ರಣ ಮಾಡಬಹುದಾಗಿದ್ದು, ಡಿವೈಸ್‌ಗೆ ಕ್ಲೀನಿಂಗ್‌ ಕಮಾಂಡ್‌ಗಳನ್ನು ನೀಡಬಹುದಾಗಿದೆ.

ಐಬೆಲ್‌ರೊಬೊಟಿಕ್ ವ್ಯಾಕ್ಯೂಮ್ ಕ್ಲೀನರ್

ಐಬೆಲ್‌ರೊಬೊಟಿಕ್ ವ್ಯಾಕ್ಯೂಮ್ ಕ್ಲೀನರ್

ಈ ಡಿವೈಸ್‌ ಅನ್ನು 11,865ರೂ. ಗಳಿಗೆ ಅಮೆಜಾನ್‌ನಲ್ಲಿ ಕೊಂಡುಕೊಳ್ಳಬಹುದಾಗಿದೆ. ಈ ವ್ಯಾಕ್ಯೂಮ್‌ ಕ್ಲೀನರ್ 1300 Pa ಹೀರಿಕೊಳ್ಳುವ ಶಕ್ತಿಯನ್ನು ಪಡೆದಿದ್ದು, ಅತಿ ತೆಳುವಾದ ವಿನ್ಯಾಸವನ್ನು ಹೊಂದಿದೆ. ಮನೆ ಮತ್ತು ಕಛೇರಿ ಬಳಕೆಗಾಗಿ ಇದು ಸೂಕ್ತವಾಗಿದೆ. ಇದು ಸಹ ಕೆಲವು ಕ್ಲೀನಿಂಗ್‌ ಮೋಡ್‌ಗಳನ್ನು ಒಳಗೊಂಡಿದ್ದು, 2600mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಜೊತೆಗೆ ಇದನ್ನು ರಿಮೋಟ್ ಮತ್ತು ಅಪ್ಲಿಕೇಶನ್ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

Best Mobiles in India

Read more about:
English summary
Robot vacuum cleaners keep the house clean and tidy. Today we have detailed the top robot vacuum cleaners with prices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X