ಈ ದೇಶಗಳಲ್ಲಿ ಫೋನ್ ಅನ್ನೇ ಬಳಸಬಾರದಂತೆ ಗೊತ್ತೇ?
ಜಗತ್ತು ಟೆಕ್ ಲೋಕದಲ್ಲಿ ಎಷ್ಟೇ ಮುಂದುವರಿದಿದ್ದರೂ ಇನ್ನೂ ಕೆಲವೊಂದು ಅಂಶಗಳಲ್ಲಿ ಹಿನ್ನಡೆಯನ್ನು ಕಾಣುತ್ತಿದೆ ಎಂಬುದು ನಿಮಗೆ ಗೊತ್ತೇ? ಹೌದು. ಸಕಲ ಸವಲತ್ತುಗಳನ್ನು ಹೊಂದಿರುವ ದೊಡ್ಡ ದೊಡ್ಡ ದೇಶಗಳೂ ಕೂಡ ತಮ್ಮ ಜನರನ್ನು ತಾಂತ್ರಿಕ ಕ್ಷೇತ್ರದಿಂದ ಹಿಂದಿಟ್ಟಿದೆ.
ಇದನ್ನೂ ಓದಿ: ಫೇಸ್‌ಬುಕ್ ಬಳಕೆದಾರರೇ ಇಲ್ಲೊಮ್ಮೆ ನೋಟ ಹರಿಸಿ
ಶಿಕ್ಷಣ, ಟೆಕ್ ಉತ್ಪನ್ನಗಳ ಜ್ಞಾನದಲ್ಲಿ ಹಿನ್ನಡೆ, ಸುದ್ದಿಯ ಬಗ್ಗೆ ಅಜ್ಞಾನ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅಭಿವೃದ್ಧಿಶೀಲ ದೇಶಗಳೂ ಕೂಡ ಇಂತಹ ಅಂಶಗಳನ್ನು ಏಕೆ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಅಚ್ಚರಿಯನ್ನುಂಟು ಮಾಡುವ ಅಂಶವಾಗಿದೆ. ಬನ್ನಿ ಇಂದಿನ ಲೇಖನದಲ್ಲೂ ಇಂತಹುದೇ ಟೆಕ್ ನಿಷೇಧವನ್ನು ಹೇರಿರುವ ಕೆಲವೊಂದು ದೇಶಗಳ ಬಗ್ಗೆ ಅರಿತುಕೊಳ್ಳೋಣ.
ಇದನ್ನೂ ಓದಿ: ಅತಿ ವಿಶೇಷ ಅತಿ ವಿಭಿನ್ನ ದಿನೋಪಯೋಗಿ ಗ್ಯಾಜೆಟ್ಸ್

ಯುಎಇ, ಸೌದಿ ಅರೇಬಿಯಾ
ಬ್ಲ್ಯಾಕ್‌ಬೆರ್ರಿ ಬಳಕೆದಾರರಿಗೆ 2010 ರಲ್ಲೇ ಈ ಅರಬ್ ದೇಶ ನಿಷೇಧವನ್ನು ಹೇರಿದ್ದು ಇಮೇಲ್ ರವಾನೆ, ಅಂತರ್ಜಾಲದ ಪ್ರವೇಶ, ಮೊದಲಾದ ಚಟುವಟಿಕೆಗಳನ್ನು ಈ ಫೋನ್‌ನಲ್ಲಿ ಮಾಡುವುದನ್ನು ನಿಷೇಧಿಸಿದೆ.

ಪಾಕಿಸ್ತಾನ
ಮುಸ್ಲಿಂ ಸಮುದಾಯದ ಭಾಗವಾಗಿರುವ ಪಾಕಿಸ್ತಾನ, ಫೇಸ್‌ಬುಕ್ ಬಳಕೆಗೆ ನಿಷೇಧವನ್ನು ಹೇರಿದೆ. ದೇಶದ ಉಚ್ಛ ನ್ಯಾಯಾಲಯವೇ ಈ ನಿಷೇಧವನ್ನು ಘೋಷಿಸಿದೆ.

ಚೀನಾ
ಪ್ರಪಂಚದಲ್ಲೇ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ದೇಶದಲ್ಲಿ ಇಂಟರ್ನೆಟ್ ಬಳಕೆಗೆ ನಿಷೇಧವನ್ನು ಹೇರಲಾಗಿದೆ.

ಆಸ್ಟ್ರೇಲಿಯಾ ಮತ್ತು ಯುರೋಪ್
ಲೇಸರ್ ಪಾಯಿಂಟರ್ಸ್ ಅನ್ನು ಈ ದೇಶಗಳಲ್ಲಿ ನಿಷೇಧಿಸಲಾಗಿದೆ.

ಯುಎಸ್ ಕಾಲೇಜುಗಳು
34 ಶೇಕಡಾದಷ್ಟು ಯುಎಸ್ ಕಾಲೇಜುಗಳು ಮ್ಯೂಸಿಕ್ ಫೈಲ್ ಟ್ರೇಡಿಂಗ್ ಪ್ರೊಗ್ರಾಮ್ ಆದ ನ್ಯಾಪ್‌ಸ್ಟರ್ ಅನ್ನು ಬ್ಯಾನ್ ಮಾಡಿದೆ.

ಇಸ್ರೇಲ್
ಐಪ್ಯಾಡ್‌ನ ವೈಫೈ ಕಾರ್ಯಗಳು ಯುಎಸ್ ಪ್ರಮಾಣಗಳಿಗೆ ಬದ್ಧವಾಗಿದೆ ಮತ್ತು ಯುರೋಪ್‌ಗೆ ಸಂಬಂಧಪಟ್ಟದುದಲ್ಲ ಎಂದು ಈ ದೇಶವು ಐಪ್ಯಾಡ್‌ಗೆ ನಿಷೇಧವನ್ನು ಹೇರಿದೆ.

ಕ್ಯುಬಾ
ಕ್ಯೂಬಾದ 11 ಮಿಲಿಯನ್ ಪ್ರಜೆಗಳು ಸೆಲ್‌ಫೋನ್ ಬಳಕೆಯ ನಿಷೇಧಕ್ಕೆ ಒಳಗಾಗಿದ್ದು ಟೆಕ್ ಯಗದಲ್ಲಿ ಇದು ಶಾಕಿಂಗ್ ನ್ಯೂಸ್ ಆಗಿದೆ.

ಯುಎಸ್ಎ
2007 ನೇ ವರ್ಷದಲ್ಲಿ ಯುಎಸ್‌ಎ ಟ್ರ್ಯಾಕ್ ಏಂಡ್ ಫೀಲ್ಡ್, ಮ್ಯಾರಥಾನ್‌ನಲ್ಲಿ ಹೆಡ್‌ಫೋನ್‌ಗಳು ಮತ್ತು ಪೋರ್ಟೇಬಲ್ ಆಡಿಯೊ ಪ್ಲೇಯರ್‌ಗೆ ನಿಷೇಧವನ್ನು ಹೇರಿತ್ತು. ಓಟಗಾರರ ಭದ್ರೆತೆಗಾಗಿ ಈ ನಿಯಮವನ್ನು ಅಳವಡಿಸಿಕೊಳ್ಳಲಾಗಿತ್ತು.

ಗ್ರೀಸ್ ಮತ್ತು ಆಸ್ಟ್ರಿಯಾ
ಜಿಪಿಎಸ್ ಸಿಸ್ಟಮ್‌ನಂತಹ ಏಕೈಕ ಅಪ್ಲಿಕೇಶನ್ ಟೆಕ್ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಎಬ್ಬಿಸುತ್ತಿದೆ. ಆದರೆ ಗೌಪ್ಯತಾ ಸಂಬಂಧಿ ಸಮಸ್ಯೆಗಳಿಂದಾಗಿ ಈ ದೇಶಗಳು ಗೂಗಲ್ ಸ್ಟ್ರೀಟ್ ಮ್ಯಾಪ್ಸ್ ಅನ್ನು ನಿಷೇಧಿಸಿವೆ.

ಆಪಲ್
ಫೆಬ್ರವರಿ 2010 ರಲ್ಲಿ, ತನ್ನ ಐಟ್ಯೂನ್ ಸ್ಟೋರ್‌ಗೆ ಧಕ್ಕೆಯನ್ನುಂಟು ಮಾಡುವ ಕೆಲವೊಂದು ಅಪ್ಲಿಕೇಶನ್‌ಗಳನ್ನು ಕಂಪೆನಿ ಬ್ಯಾನ್ ಮಾಡಿತು. ಅದರಲ್ಲೊಂದು ಸೆಕ್ಸೀ ಅಪ್ಲಿಕೇಶನ್ ಆಗಿದೆ.


Click it and Unblock the Notifications








