ಟಾಪ್‌ 5 ಮೊಬೈಲ್‌ ಗೇಮ್‌ಗಳಿವು: ಹೇಗೆಲ್ಲಾ ಆಡಬಹುದು ಗೊತ್ತಾ!?

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಹಾಗೂ ಪಿಸಿಗಳನ್ನು ಗೇಮಿಂಗ್‌ಗಾಗಿಯೇ ಬಹುಪಾಲು ಮಂದಿ ಬಳಕೆ ಮಾಡುತ್ತಾರೆ. ಇದೇ ಕಾರಣಕ್ಕೆ ಪ್ರಮುಖ ಗ್ಯಾಜೆಟ್‌ ತಯಾರಿಕಾ ಸಂಸ್ಥೆಗಳು ಗೇಮಿಂಗ್‌ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಪಿಸಿಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿ ಗೇಮರ್‌ಗಳಿಂದ ಸೈ ಎನಿಸಿಕೊಂಡಿವೆ.

ಟೆಕ್‌

ಹೌದು, ಟೆಕ್‌ ವಲಯದಲ್ಲಿ ಗೇಮಿಂಗ್‌ಗೆ‌ ವಿಶೇಷ ಸ್ಥಾನ ಇದ್ದು, ಮಕ್ಕಳಿಂದ ದೊಡ್ಡವರೂ ಸಹ ಆಡಬಹುದಾದದ ವಿವಿಧ ಆಯ್ಕೆ ಇರುವ ಗೇಮಿಂಗ್‌ ಆಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದರಲ್ಲೂ ಪ್ರಮುಖವಾಗಿ ಕೆಲವು ಉಚಿತವಾಗಿ ಸಿಕ್ಕರೆ ಇನ್ನೂ ಕೆಲವು ಆಪ್‌ಗಳಿಗೆ ಹಣ ಪಾವತಿ ಮಾಡಬೇಕಿದೆ. ಇದರ ನಡುವೆ ಕಳೆದ ತಿಂಗಳು(ಸೆಪ್ಟೆಂಬರ್‌) ನಲ್ಲಿ ಲಾಂಚ್‌ ಆದ ಕೆಲವು ಗೇಮಿಂಗ್‌ ಆಪ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಓದಿರಿ.

ಐರನ್‌ ಮೆರೀನ್‌ ಇನ್ವೇಶನ್‌

ಐರನ್‌ ಮೆರೀನ್‌ ಇನ್ವೇಶನ್‌

ಐರನ್‌ಹೈಡ್‌ ಸ್ಟುಡಿಯೋನ ಐರನ್ ಮೆರೀನ್ ಇನ್ವೆನ್ಶನ್‌ ಗೇಮ್‌ ಆಪ್‌ ಮೂಲಕ ಗಂಟೆಗಳ ವರೆಗೆ ಬೇಸರವಿಲ್ಲದೆ ಆಟ ಆಡಬಹುದು. ಇದು ಹೆಚ್ಚಿನ ಮೋಜನ್ನು ನೀಡುವುದರ ಜೊತೆಗೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲೂ ಆಡಬಹುದಾಗಿದೆ. ಈ ಆಟದಲ್ಲಿ ಆಳವಾದ ಜಾಗ ಹಾಗೂ ಲೆಕ್ಕವಿಲ್ಲದಷ್ಟು ಪ್ರಪಂಚಗಳನ್ನು ಅನ್ವೇಷಿಸಬಹುದು ಹಾಗೂ ಅವನ್ನು ವಶಪಡಿಸಿಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ, ಸಮುದ್ರಯಾನದ ಅನುಭವವನ್ನು ಇಲ್ಲಿ ಪಡೆಯಬಹುದಾಗಿದೆ. ಹಾಗೆಯೇ ನಕ್ಷತ್ರಪುಂಜದ ಮಧ್ಯೆ ಚಲಿಸಿ ಅಲ್ಲಿ ಸಾಹಸಗಳನ್ನೂ ಮೆರೆಯಬಹುದಾಗಿದೆ. ಈ ಆಪ್‌ ಸೆಪ್ಟೆಂಬರ್ 08 ರಂದು ಲಾಂಚ್‌ ಆಗಿದ್ದು, ಇದಕ್ಕೆ 411ರೂ. ಗಳನ್ನು ಪಾವತಿ ಮಾಡಬೇಕಿದೆ.

ನೆಟ್‌ಫ್ಲಿಕ್ಸ್‌ನ ಆಕ್ಸೆನ್‌ಫ್ರೀ

ನೆಟ್‌ಫ್ಲಿಕ್ಸ್‌ನ ಆಕ್ಸೆನ್‌ಫ್ರೀ

ನೆಟ್‌ಫ್ಲಿಕ್ಸ್‌ನ ಆಕ್ಸೆನ್‌ಫ್ರೀ ಗೇಮ್‌ನಲ್ಲಿ ಹಾರರ್, ಮಿಸ್ಟರೀಸ್, ಅಡ್ವೆಂಚರ್ ನಂತರ ಆಯ್ಕೆಗಳನ್ನು ನೀಡಲಾಗಿದೆ. ಈ ಹಿಂದೆ ಪಿಸಿಗಳಲ್ಲಿ ಲಭ್ಯ ಇದ್ದ ಈ ಆಟವನ್ನು ಈಗ ಮೊಬೈಲ್‌ನಲ್ಲೂ ಆಡಬಹುದಾಗಿದೆ. ಇನ್ನು ಯುವಕರಿಗೆ ಇದು ಅಚ್ಚುಮೆಚ್ಚಿನ ಗೇಮ್‌ ಆಗಲಿದೆ. ಯಾಕೆಂದರೆ, ಇದರಲ್ಲಿ ಮಿಸ್ಟರೀಸ್ ಹೆಚ್ಚಾಗಿ ಇರುವುದರಿಂದ ಕ್ಯೂರಿಯಾಸಿಟಿಯಲ್ಲಿಯೇ ಗೇಮ್‌ ಆಡಿಕೊಂಡು ಸಮಯ ದೂಡಬಹುದು. ಇನ್ನು ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಇರುವವರು ಈ ಆಟವನ್ನು ಉಚಿತವಾಗಿ ಆಡಬಹುದಾಗಿದೆ. ಸೆಪ್ಟೆಂಬರ್ 25 ರಂದು ಈ ಗೇಮ್‌ಅನ್ನು ಲಾಂಚ್‌ ಮಾಡಲಾಗಿದೆ.

ಸ್ಕೋರ್ಜ್ ಬ್ರಿಂಗರ್

ಸ್ಕೋರ್ಜ್ ಬ್ರಿಂಗರ್

ಸ್ಕೋರ್ಜ್ ಬ್ರಿಂಗರ್ ಗೇಮ್‌ನಲ್ಲಿ ಅಜ್ಞಾತ ವಿಷಯವನ್ನು ಅನ್ವೇಷಿಸಲು ಹಾಗೂ ನಾಯಕನ ಮುದ್ರೆಯನ್ನು ಕಾಪಾಡುವ ಪ್ರಾಚೀನ ಯಂತ್ರಗಳನ್ನು ಜಯಿಸಲು ಆಟಗಾರರು ಕೈಹ್ರಾ ಆಗಿ ರೂಪುಗೊಳ್ಳಬಹುದಾಗಿದೆ. ಇದರಲ್ಲಿ ಮತ್ತೊಮ್ಮೆ ರೋಗುಲೈಕ್‌ ಹೊಸ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದೆ. ಇದಕ್ಕೆ 576.10ರೂ. ಗಳನ್ನು ಪಾವತಿ ಮಾಡಬೇಕಿದ್ದು, ಈ ಗೇಮ್‌ ಸೆಪ್ಟೆಂಬರ್‌ 13 ರಂದು ಲಾಂಚ್‌ ಆಗಿದೆ.

ಆಟೋ ಮ್ಯಾಟೋಸ್‌

ಆಟೋ ಮ್ಯಾಟೋಸ್‌

ಆಟೋ ಮ್ಯಾಟೋಸ್‌ ಗೇಮ್‌ ಹೈಪರ್‌ ರಿಯಲಿಸ್ಟಿಕ್‌ ಭೌತಶಾಸ್ತ್ರ ಆಧಾರಿತ ಗೇಮ್ ಆಗಿದೆ. ಇದರಲ್ಲಿ ಬಾಲ್‌ ಅನ್ನು 3D ಕಾಂಟ್ರಾಪ್ಶನ್‌ಗಳ ಸುತ್ತಲೂ ಚಲಿಸುವಂತೆ ಮಾಡಬೇಕಿದ್ದು, ಈ ಮೂಲಕ ಅದನ್ನು ನಿಖರವಾದ ಸ್ಥಳಕ್ಕೆ ಸೇರಿಸಬೇಕಿದೆ. ಇದು ಸರಳ ಹಾಗೂ ಚಿಕ್ಕಗಾತ್ರದ ಗೇಮ್‌ ಆಗಿದೆ. ಇದನ್ನು ಖರೀದಿ ಮಾಡುವ ಮನ್ನವೇ ಪ್ರಾಯೋಗಿಕವಾಗಿ ಆಡಬಹುದಾಗಿದೆ. ನಂತರ ಇದಕ್ಕೆ 246ರೂ. ಗಳಲ್ಲಿ ನೀಡಬೇಕಿದೆ. ಇನ್ನು ಈ ಆಪ್‌ ಸೆಪ್ಟೆಂಬರ್‌ 7ನೇ ತಾರೀಖಿನಂದು ಬಿಡುಗಡೆಗೊಂಡಿದೆ.

ಹೋಮ್‌ವರ್ಲ್ಡ್ ಮೊಬೈಲ್

ಹೋಮ್‌ವರ್ಲ್ಡ್ ಮೊಬೈಲ್

ಹೋಮ್‌ವರ್ಲ್ಡ್ ಮೊಬೈಲ್ ಸ್ಮಾರ್ಟ್‌ಫೋನ್ ಆಧಾರಿತ ಗೇಮ್‌ ಆಗಿದೆ. ಇದನ್ನು ಸ್ಟ್ರಾಟೋಸ್ಫಿಯರ್ ಗೇಮ್ಸ್ ಸ್ಟುಡಿಯೋ ಅಭಿವೃದ್ಧಿಪಡಿಸಿದ್ದು, ಈ ಮೊಬೈಲ್‌ ಆವೃತ್ತಿ ಬಗ್ಗೆ 2019 ರಲ್ಲಿಯೇ ಘೋಷಣೆ ಮಾಡಲಾಗಿತ್ತು. ಇದಾದ ನಂತರ ಈಗ ಅಂತಿಮವಾಗಿ ಲಭ್ಯವಾಗಿದೆ. ಡೀಪ್‌ ಸ್ಪೇಸ್‌ನ ಲೋಕದ ಅನುಭವವನ್ನು ಈ ಗೇಮ್‌ನಲ್ಲಿ ಕಾಣಬಹುದಾಗಿದೆ. ಇದೀಗ ಕೆನಡಾ, ಡೆನ್ಮಾರ್ಕ್‌, ಫಿನ್‌ಲ್ಯಾಂಡ್‌, ಐಸ್‌ಲ್ಯಾಂಡ್, ಐರ್ಲೆಂಡ್, ನಾರ್ವೆ, ಯುನೈಟೆಡ್‌ ಕಿಂಗ್‌ಡಮ್‌, ಹಾಗೂ ಜರ್ಮನಿಯಲ್ಲಿ ಈ ಆಟವನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಂಡು ಆಡಬಹುದಾಗಿದೆ. ಇದನ್ನು ಸೆಪ್ಟೆಂಬರ್‌ 28 ರಂದು ಲಾಂಚ್‌ ಮಾಡಲಾಗಿದೆ.

Best Mobiles in India

English summary
Nowadays, most people use smartphones and PCs for gaming. Here are the details of the Games apps launched in September.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X