Subscribe to Gizbot

ಮಾರ್ಕ್‌ ಜುಕರ್‌ಬರ್ಗ್‌ ಕುರಿತಾಗಿ ಹರಡಿರುವ ಕೆಲ ವದಂತಿಗಳು ಇಲ್ಲಿದೆ ನೋಡಿ

Posted By: Staff
ಮಾರ್ಕ್‌ ಜುಕರ್‌ಬರ್ಗ್‌ ಕುರಿತಾಗಿ ಹರಡಿರುವ ಕೆಲ ವದಂತಿಗಳು ಇಲ್ಲಿದೆ ನೋಡಿ

ವಿಶ್ವದ ದಿಗ್ಗಜ ಸಾಮಾಜಿಕ ಜಾಲತಾಣ ಎಂದೆನಿಸಿಕೊಂಡಿರುವ ಫೇಸ್‌ಬುಕ್‌ನಲ್ಲಿ ದಿನನಿತ್ಯ ಕೋಟ್ಯಾಂತರ ಮಂದಿ ಬಳಕೆದಾರರು ತಮ್ಮ ಬಂಧುಮಿತ್ರರೊಂದಿಗೆ ಫೋಟೋ ಹಾಗೂ ಸಂದೇಶಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಇಂತಹದೊಂದು ಐಶಸ್ವೀ ಸಂಸ್ಥೆ ಹುಟ್ಟು ಹಾಕಿದಂತಹ ಓರ್ವಾ ಸಾಮಾನ್ಯಾ ಕಾಲೇಜು ವಿದ್ಯಾರ್ಥಿಯಾಗಿದ್ದಂತಹ ಮಾರ್ಕ್‌ ಜುಕರ್‌ಬರ್ಗ್‌ ನೋಡ ನೋಡುತ್ತಿದ್ದಂತೆಯೇ ಪ್ರಭಾವಿ ಹಾಗೂ ಮಾದರಿ ಯುವ ಶ್ರೀಮಂತ ವ್ಯಕ್ತಿಯಾಗಿ ಗುರ್ತಿಸಿಕೊಂಡರು. ಅಂದಹಾಗೆ ಯಾವುದೇ ವಸ್ತು ಅಥವಾ ವ್ಯಕ್ತಿ ಕುರಿತಾಗಿ ಜನಪ್ರಿಯತೆ ಹೆಚ್ಚುತ್ತಾ ಹೋದಂತೆಲ್ಲಾ ಅವರ ಕುರಿತಾದ ಅಪಪ್ರಚಾರಗಳೂ ಹಾಗೂ ಸುಳ್ಳು ವದಂತಿಗಳು ಕೂಡಾ ಹೆಚ್ಚುತ್ತಾ ಹೋಗುತ್ತವೆ. ಅದೇರೀತಿ ಇಂದು ಅತ್ಯಂತ ಜನಪ್ರಿಯ ಸಾಮಾಜಿಕ ಜಾಲ ತಾಣ ವೆನಿಸಿರುವ ಫೇಸ್‌ಬುಕ್‌ ಮಾಲಿಕ ಮಾರ್ಕ್‌ ಜುಕರ್‌ಬರ್ಗ್‌ ಕುರಿತಾಗಿಯೂ ಕೂಡಾ ಸಾಕಷ್ಟು ಊಹಾಪೋಹಗಳು ಇಂದು ತಲೆ ಎತ್ತಿವೆ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಜುಕರ್‌ಬರ್ಗ್‌ ಕುರಿತಾಗಿ ಹರಡಿರುವಂತಹ ಐದು ಊಹಾಪೋಹಗಳ ಕುರಿತಾಗಿ ಗಿಜ್ಬಾಟ್‌ ಓದುಗರೆದುರು ತಂದಿದೆ ಒಮ್ಮೆ ಓದಿ ನೋಡಿ.

1. ಮಾರ್ಕ್‌ ಜುಕರ್‌ಬರ್ಗ್‌ ಕುರಿತಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ವದಂತಿಗಳು ಹಬ್ಬಿವೆ. ಅದೇನೆಂದರೆ ಮಾರ್ಕ್‌ ಜುಕರ್‌ಬರ್ಗ್‌ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದರೆ ವಾಸ್ತವದಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ವಿಶ್ವದ ಅದರಲ್ಲಿಯೂ ತಾಂತ್ರಿಕ ಲೋಕದ ಯುವ ಕೋಟ್ಯಾಧಿಪತಿಗಳ ಸಾಲಿನಲ್ಲಿ ಮಾತ್ರವಷ್ಟೇ ಅಗ್ರಪಟ್ಟಿಯಲ್ಲಿ ಕಾಣಸಿಗುತ್ತಾರೆ.

2. ಮಾರ್ಕ್‌ ಜುಕರ್‌ಬರ್ಗ್‌ ಸದಾ ಒಂದೇ ಬಣ್ಣದ ಟಿ-ಶರ್ಟ್‌ ಧರಿಸುತ್ತಾನೆ, ಇದರ ಅರ್ಥ ಆತನ ಬಳಿ ಧರಿಸಲು ಬೇರೆ ಟಿ-ಶರ್ಟ್‌ ಇಲ್ಲವೆಂದೊ ಅಥವಾ ಆತ ಜುಗ್ಗಣ್ಣ ಎಂತಲೂ ಅಲ್ಲ.

3. ಮಾರ್ಕ್ ಜುಕರ್‌ಬರ್ಗ್‌ ಕುರಿತಾಗಿ ಹಬ್ಬಿರುವ ಮತ್ತೊಂದು ವದಂತಿ ಏನೆಂದರೆ ಆತ ಮಾಹಾನ್‌ ದುರಹಂಕಾರಿ ಹಾಗೂ ಹಟವಾದಿ ಎಂಬುದು ಆದರೆ ವಾಸ್ತವದಲ್ಲಿ ಆರೀತಿ ಏನು ಇಲ್ಲವಾಗಿದೆ. ಜುಕರ್‌ಬರ್ಗ್‌ನ ಕಾಲೇಜು ಸಹಪಾಟಿಗಳ ಹಾಗೂ ರೂಮ್‌ ಮೇಟ್‌ಗಳ ಪ್ರಕಾರ ಆತ ತೀರಾ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ.

4. ಮಾರ್ಕ್‌ ಜುಕರ್‌ಬರ್ಗ್‌ ಮೊದಲಿನಿಮದಲೂ ಓರ್ವ ಉದ್ಯಮಿ ಯಾಗಿದ್ದರು ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಜುಕರ್‌ಬರ್ಗ್‌ ಓರ್ವ ಸಾಮಾನ್ಯ ಸ್ಟೂಡೆಂಟ್‌ ಆಗಿದ್ದರು ಫೇಸ್‌ಬುಕ್‌ ಸಂಸ್ಥೆಯ ಯಶಸ್ಸಿನ ಬಳಿಕವಷ್ಟೇ ಅವರು ಶ್ರೀಮಂತರಾದ್ದದ್ದು.

5. ಜುಕರ್‌ಬರ್ಗ್‌ ಸಾಮಾನ್ಯವಾಗಿ ಯಾರೊಂದಿಗೂ ಬೆರೆಯುವ ಮನೋಭಾವದವರಲ್ಲ ಎಂದು ಹೇಳಲಾಗುತ್ತದೆ. ಇದು ಶುದ್ಧ ಸುಳ್ಳಾಗಿದೆ ಏಕೆಂದರೆ ಜುಕರ್‌ಬರ್ಗ್‌ ತಮ್ಮ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ದೊಡ್ಡ ಪ್ರಮಾಣದ ಗೆಳೆಯರನ್ನು ಹೊಂದಿದ್ದರು ಹಾಗೂ ತರಲೇ ಸ್ವಭಾವದ ವ್ಯಕ್ಯಿಯಾಗಿದ್ದರು.

ತಂತ್ರಜ್ಞಾನ ಲೋಕದ ಯುವ ಕೋಟ್ಯಾಧಿಪತಿಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot