ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಫೋನ್‌ಗಳು!

|

ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದ್ದು, ಮಾರುಕಟ್ಟೆಯಲ್ಲಿ ಹೊಸ ನಮೂನೆಯ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೆ ಸಾಗುತ್ತಿವೆ. ಪ್ರಮುಖ ಕಂಪನಿಗಳು ಸಹ ಹೈ ಎಂಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಈಗಾಗಾಲೇ ಹೊಸ ವರ್ಷದ ಆರಂಭದಲ್ಲಿಯೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಆಗುತ್ತಿವೆ. ಆದರೆ ಕೆಲವೊಂದು ಟ್ರೆಂಡಿಂಗ್ ಆಗುತ್ತವೆ.

ಮಾರುಕಟ್ಟೆಗೆ

ಹೌದು, ಮಾರುಕಟ್ಟೆಗೆ ಲಾಂಚ್ ಆಗುವ ಎಲ್ಲ ಸ್ಮಾರ್ಟ್‌ಫೋನ್‌ಗಳು ಕ್ಲಿಕ್ ಆಗುವುದಿಲ್ಲ. ಕೆಲವು ಗ್ರಾಹಕರನ್ನು ಸೆಳೆಯುತ್ತವೆ ಮತ್ತೆ ಇನ್ನು ಕೆಲವು ಹೇಳ ಹೆಸರಿಲ್ಲದೇ ಮಾರುಕಟ್ಟೆಯಿಂದ ಮಾಯವಾಗುತ್ತವೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್, ಶಿಯೋಮಿ, ಸೇರಿದಂತೆ ಬಜೆಟ್ ಬೆಲೆಯ ಫೋನ್‌ಗಳು ಟ್ರೆಂಡಿಂಗ್‌ನಲ್ಲಿವೆ. ಹಾಗಾದರೇ ಟ್ರೆಂಡಿಂಗ್‌ನಲ್ಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ ರೆಡ್ಮಿ ನೋಟ್ 8 ಪ್ರೊ

ಶಿಯೋಮಿ ರೆಡ್ಮಿ ನೋಟ್ 8 ಪ್ರೊ

ರೆಡ್ಮಿ ನೋಟ್ 7 ಪ್ರೊ ಯಶಸ್ಸಿನ ನಂತರ ಶಿಯೋಮಿ ಸಂಸ್ಥೆಯು ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಈಗಾಗಾಲೇ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೆಟ್ ಹುಟ್ಟುಹಾಕಿದ್ದು, ವಿಶೇಷ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಮುಖ್ಯವಾಗಿ 64ಎಂಪಿ ಕ್ಯಾಮೆರಾ ಸೆಟ್‌ಅಪ್ ಇದರ ಹೈಲೈಟ್ ಆಗಿದೆ. ಇನ್ನು 4500mAh ಬ್ಯಾಟರಿ ಬಾಳಿಕೆಯು ಪ್ಲಸ್‌ ಪಾಯಿಂಟ್ ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಸ್ಯಾಮ್‌ಸಂಗ್ ಕಂಫನಿಯ ಫೋನ್‌ಗಳಿಗೆ ಯಾವಾಗಲೂ ಡಿಮ್ಯಾಂಟ್ ಇದ್ದೆ ಇದೆ. ಇದೇ ದಾರಿಯಲ್ಲಿ ಕಂಪನಿಯ ಗ್ಯಾಲಕ್ಸಿ A51 ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿದೆ. ಈ ಸ್ಮಾರ್ಟ್‌ಫೋನ್ 48ಎಂಪಿ ಕ್ಯಾಮೆರಾ, 4000mAh ಬ್ಯಾಟರಿ, ಸೂಪರ್ AMOLED ಡಿಸ್‌ಪ್ಲೇ ಸೇರಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಈ ಫೋನ್ ಒಳಗೊಂಡಿದೆ.

ಆಪಲ್ ಐಫೋನ್ 11 ಪ್ರೊ ಮ್ಯಾಕ್ಸ್‌

ಆಪಲ್ ಐಫೋನ್ 11 ಪ್ರೊ ಮ್ಯಾಕ್ಸ್‌

ಮಾರುಕಟ್ಟೆಯಲ್ಲಿ ಆಪಲ್ ಸಂಸ್ಥೆಯ ಇತ್ತೀಚಿನ ಹೊಸ ಐಫೋನ್ 11 ಪ್ರೊ ಮ್ಯಾಕ್ಸ್‌ ಫೋನ್ ಸಹ ಗ್ರಾಹಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ಟಾಪ್‌ ಟ್ರೆಂಡಿಂಗ್ ಫೋನ್‌ಗಳಲ್ಲಿ ಈ ಫೋನ್ ಸಹ ಸ್ಥಾನ ಪಡೆದಿದೆ. ಇನ್ನು ಈ ಐಫೋನ್ 12ಎಂಪಿಯ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, 3969mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಹಾಗೆಯೇ 4GB RAM ಸಾಮರ್ಥ್ಯವನ್ನು ಪಡೆದಿದೆ.

ಒಪ್ಪೊ ರೆನೋ 3 ಪ್ರೊ

ಒಪ್ಪೊ ರೆನೋ 3 ಪ್ರೊ

ಚೀನಾ ಮೂಲದ ಒಪ್ಪೊ ಸಂಸ್ಥೆಯು ರೆನೋ ಬ್ಯ್ರಾಂಡ್‌ನಡಿ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳು ಈಗಾಗಲೇ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಜಯಕಂಡಿವೆ. ಆ ಪೈಕಿ ಒಪ್ಪೊ ರೆನೋ 3 ಪ್ರೊ ಸ್ಮಾರ್ಟ್‌ಫೋನ್ ಸ್ವಲ್ಪ ಹೆಚ್ಚು ಆಕರ್ಷಣೆಯನ್ನು ಪಡೆದಿದ್ದು, ಟ್ರೆಂಡಿಂಗ್‌ನಲ್ಲಿ ಗುರುತಿಸಿಕೊಂಡಿದೆ. ಇನ್ನು ಈ ಫೋನ್ ಸ್ನ್ಯಾಪ್‌ಡ್ರಾಗನ್ 765 ಪ್ರೊಸೆಸರ್‌ ಅನ್ನು ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A70

ಸ್ಯಾಮ್‌ಸಂಗ್ ಗ್ಯಾಲಕ್ಸಿ A70

ಇತ್ತೀಚಿಗೆ ಬಿಡುಗಡೆ ಆಗಿರುವ ಗ್ಯಾಲಕ್ಸಿ ಎ70 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇನ್ನು ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಈ ಫೋನ್ 4500mAh ಬ್ಯಾಟರಿ ಪಡೆದಿದ್ದು, ಜೊತೆಗೆ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಆಯ್ಕೆಯನ್ನು ಪಡೆದಿರುವ ಈ ಫೋನ್ 32ಎಂಪಿಯ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

Most Read Articles
Best Mobiles in India

English summary
The Redmi Note 8 Pro has regained the top spot in the two weeks since the last edition, while the Galaxy A51 has risen to get the silver medal. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X