ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

|

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯುತ್ತಿದ್ದು, ಬಹುತೇಕ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ಇಲ್ಲಿಯ ಮಾರುಕಟ್ಟೆಯೇ ಆಸರೆಯಾಗಿದೆ. ಈ ದಿಸೆಯಲ್ಲಿ ದೇಶಿಯ ಮಾರುಕಟ್ಟೆಗೆ ತರಹೇವಾರಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಮುಂದಾಗುತ್ತಿವೆ. ಈ ತಿಂಗಳು ಸಹ ಹಲವು ಸೂಪರ್ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಿವೆ.

ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಹೌದು, ವಿಶ್ವ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಇದ್ದು, ಇದನ್ನು ಮನಗಂಡಿರುವ ಸ್ಮಾರ್ಟ್‌ಫೋನ್‌ ಕಂಪನಿಗಳು ವಿವಿಧ ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತ ಸಾಗಿವೆ. ಅವುಗಳಲ್ಲಿ ಎವರ್‌ಗ್ರೀನ್ ಸ್ಯಾಮ್‌ಸಂಗ್, ಶಿಯೋಮಿ, ಒಪ್ಪೊ, ವಿವೋ ಮತ್ತು ಹಾನರ್ ಕಂಪನಿಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುವತ್ತ ಹೆಜ್ಜೆ ಇರಿಸಿವೆ.

ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಇತ್ತೀಚಿಗೆ ಬಿಡುಗಡೆಗೊಂಡಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ, ಪ್ರೊಸೆಸರ್‌, ಬ್ಯಾಟರಿ ಫೀಚರ್ಸ್‌ಗಳಿಗೆನೇ ಹೆಚ್ಚಿನ ಒತ್ತು ನೀಡಲಾಗಿದ್ದು, ಹಾಗೆಯೇ ವಿಶಾಲ ಡಿಸ್‌ಪ್ಲೇಯನ್ನು ಸಹ ಒದಗಿಸಲಾಗುತ್ತಿದೆ. ಹಾಗಾದರೇ ಸದ್ಯ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಮೂಡಿಸಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ವೊಡಾಫೋನ್‌ನಿಂದ 205ರೂ ಮತ್ತು 225ರೂ. ಪ್ಲ್ಯಾನ್ ಲಾಂಚ್!..ಉಚಿತ ಕರೆ!ಓದಿರಿ : ವೊಡಾಫೋನ್‌ನಿಂದ 205ರೂ ಮತ್ತು 225ರೂ. ಪ್ಲ್ಯಾನ್ ಲಾಂಚ್!..ಉಚಿತ ಕರೆ!

ಶಿಯೋಮಿ ಮಿ A3

ಶಿಯೋಮಿ ಮಿ A3

ಇತ್ತೀಚಿಗೆ ಲಾಂಚ್‌ ಆಗಿರುವ ಶಿಯೋಮಿ ಮಿ A3 ಸ್ಮಾರ್ಟ್‌ಫೋನ್ 720 x 1560 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಇರುವ 6.01 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. 48ಎಂಪಿ+8ಎಂಪಿ+2ಎಂಪಿ ಸೆನ್ಸಾರ್‌ ಸಾಮರ್ಥ್ಯದ ತ್ರಿವಳಿ ಕ್ಯಾಮೆರಾ ಆಯ್ಕೆಗಳನ್ನು ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದೊಂದಿಗೆ 4030 mAh ಬ್ಯಾಟರಿ ಪವರ್‌ ಒಳಗೊಂಡಿದೆ.

ಶಿಯೋಮಿ ರೆಡ್ಮಿ ಕೆ20 ಪ್ರೊ

ಶಿಯೋಮಿ ರೆಡ್ಮಿ ಕೆ20 ಪ್ರೊ

ಮಾರುಕಟ್ಟೆಯಲ್ಲಿ ಸದ್ಯಕ್ಕೆ ಹಾಟ್‌ ಫೇವರೇಟ್ ಎನಿಸಿರುವ ರೆಡ್ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.39 ಇಂಚಿನ ಸೂಪರ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. 48ಎಂಪಿ+8ಎಂಪಿ+13ಎಂಪಿ ಸೆನ್ಸಾರ್‌ ಸಾಮರ್ಥ್ಯದ ತ್ರಿವಳಿ ಕ್ಯಾಮೆರಾ ಆಯ್ಕೆಗಳನ್ನು ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದೊಂದಿಗೆ 4030 mAh ಬ್ಯಾಟರಿ ಪವರ್‌ ಒಳಗೊಂಡಿದೆ.

ಓದಿರಿ : ನಿಮ್ಮ ವಾಟ್ಸಪ್‌ ಎಷ್ಟು ಸುರಕ್ಷಿತ?..ಈ ಸೆಕ್ಯುರಿಟಿ ಆಯ್ಕೆಗಳನ್ನು ಬಳಸಿದ್ದಿರಾ?ಓದಿರಿ : ನಿಮ್ಮ ವಾಟ್ಸಪ್‌ ಎಷ್ಟು ಸುರಕ್ಷಿತ?..ಈ ಸೆಕ್ಯುರಿಟಿ ಆಯ್ಕೆಗಳನ್ನು ಬಳಸಿದ್ದಿರಾ?

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ80

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ80

ಗ್ಯಾಲ್ಯಾಕ್ಸಿ ಎ80 ಸ್ಮಾರ್ಟ್‌ಫೋನ್ 6.7 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಪಾಪ್‌ಅಪ್‌ ರೋಟೆಟಿಂಗ್ ಕ್ಯಾಮೆರಾ ಹೊಂದಿದ್ದು, 48ಎಂಪಿ+8ಎಂಪಿ+TOF 3D ಸೆನ್ಸಾರ್‌ ಕ್ಯಾಮೆರಾ ಆಯ್ಕೆಗಳನ್ನು ಪಡೆದಿದೆ. ಅದರೊಂದಿಗೆ 3700 mAh ಸಾಮರ್ಥ್ಯದ ಬ್ಯಾಟರಿ ಲೈಫ್‌ ಪಡೆದಿದ್ದು, ಹಾಗೆಯೇ 25W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದೊಂದಿಗೆ ಹೊಂದಿದೆ.

ಶಿಯೋಮಿ ಮಿ 9T

ಶಿಯೋಮಿ ಮಿ 9T

ಈ ಸ್ಮಾರ್ಟ್‌ಫೋನ್ 6.39 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. 48ಎಂಪಿ+8ಎಂಪಿ+13ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಹಾಗೆಯೇ 4000 mAh ಪವರ್‌ಫುಲ್‌ ಬ್ಯಾಟರಿ ಅದಕ್ಕೆ ಬೆಂಬಲವಾಗಿ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ.

ಓದಿರಿ : ರೆಡ್ಮಿಯ ಹೊಸ ಪವರ್‌ಬ್ಯಾಂಕ್ ಲಾಂಚ್!ಓದಿರಿ : ರೆಡ್ಮಿಯ ಹೊಸ ಪವರ್‌ಬ್ಯಾಂಕ್ ಲಾಂಚ್!

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50

6.4 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿರುವ ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಿಂಬದಿ ಕ್ಯಾಮೆರಾ 25ಎಂಪಿ+8ಎಂಪಿ+5ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದ್ದು, ಸೆಲ್ಫಿಯು ಸಹ 25ಎಂಪಿ ಸೆನ್ಸಾರ್‌ನಲ್ಲಿದೆ. ಜೊತೆಗೆ 15W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದೊಂದಿಗೆ 4000 mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ.

ಓದಿರಿ : ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ? ಓದಿರಿ : ಟಿಕ್‌ಟಾಕ್‌ ಸೇರಿಕೊಳ್ಳಲಿದೆ ಹೊಸ ಫೀಚರ್‌!..ಏನದು ಗೊತ್ತಾ?

Best Mobiles in India

English summary
The list of relegated phones this week. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X