15,000ರೂ. ಒಳಗೆ ಲಭ್ಯ ಈ ಅತ್ಯುತ್ತಮ ಟ್ಯಾಬ್ಲೆಟ್‌ಗಳು; ಫೀಚರ್ಸ್‌ ಬಗ್ಗೆ ತಿಳಿಯಿರಿ

|

ಟ್ಯಾಬ್ಲೆಟ್ ಇತ್ತೀಚೆಗೆ ಜನಪ್ರಿಯ ಬಳಕೆಯ ಡಿವೈಸ್‌ಗಳಲ್ಲಿ ಒಂದಾಗಿದೆ. ಇದನ್ನು ಪ್ರಮುಖವಾಗಿ ವೀಡಿಯೊ ವೀಕ್ಷಣೆ, ವೀಡಿಯೋ ಕಾನ್ಫರೆನ್ಸಿಂಗ್, ಇ-ಪುಸ್ತಕಗಳನ್ನು ಓದುವುದು, ಚಲನಚಿತ್ರಗಳನ್ನು ವೀಕ್ಷಿಸುವುದು ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ 2021 ರ ಹೊತ್ತಿಗೆ ಜಗತ್ತಿನಾದ್ಯಂತ ಬರೋಬ್ಬರಿ 1.28 ಬಿಲಿಯನ್ ಜನ ಟ್ಯಾಬ್ಲೆಟ್ ಬಳಕೆದಾರರಿದ್ದಾರೆ.

ಸ್ಮಾರ್ಟ್‌

ಹೌದು, ಆಧುನಿಕ ಜಗತ್ತಿನಲ್ಲಿ ಎಲ್ಲವೂ ಸ್ಮಾರ್ಟ್‌ ಆಗಿವೆ. ಈ ಕಾರಣಕ್ಕಾಗಿಯೇ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳು ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿವೆ. ಅದರಲ್ಲೂ ಟ್ಯಾಬ್ಲೆಟ್ ಪ್ರಸ್ತುತ ದಿನಗಳಿಗೆ ಸೂಕ್ತವಾಗಿದೆ. ನೀವೇನಾದರೂ ಈ ಸಮಯದಲ್ಲಿ ಟ್ಯಾಬ್ಲೆಟ್ ಡಿವೈಸ್‌ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಖಂಡಿತಾ ಈ ಲೇಖನ ನಿಮಗೆ ಉಪಯೋಗ ಆಗಲಿದೆ. ಇದರಲ್ಲಿ ಕೇವಲ 15,000ರೂ. ಒಳಗೆ ಲಭ್ಯ ಇರುವ ಟ್ಯಾಬ್ಲೆಟ್ ವಿವರವನ್ನು ನೀಡಿದ್ದೇವೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಟ್ಯಾಬ್‌ A8 2021

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಟ್ಯಾಬ್‌ A8 2021

ಈ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಟ್ಯಾಬ್‌ A8 2021 ಟ್ಯಾಬ್‌ ಅನ್ನು ರಿಯಾಯಿತಿ ದರದಲ್ಲಿ ಸ್ಯಾಮ್‌ಸಂಗ್‌ ಮಳಿಗೆಗಳಿಂದ 11,999ರೂ. ಗಳಿಗೆ ಖರೀದಿ ಮಾಡಬಹುದು. 10.4 ಇಂಚಿನ FHD ಡಿಸ್‌ಪ್ಲೇ ಹೊಂದಿದ್ದು, 1200x2000 ಪಿಕ್ಸೆಲ್‌ಗಳ ರೆಸಲ್ಯೂಶನ್‌ಗೆ ಬೆಂಬಲ ಪಡೆದಿದೆ. ಈ ಡಿವೈಸ್‌ ಆಕ್ಟಾಕೋರ್ ಸ್ನಾಪ್‌ಡ್ರಾಗನ್ 662 ಚಿಪ್‌ಸೆಟ್‌ನ ಸಾಮರ್ಥ್ಯ ಪಡೆದಿದ್ದು, ಆಂಡ್ರಾಯ್ಡ್‌ 11 ಆಪರೇಟಿಂಗ್ ಸಿಸ್ಟಂನಲ್ಲಿ ರನ್‌ ಆಗಲಿದೆ. ಜೊತೆಗೆ ಅಡ್ರಿನೊ 610 GPU ಇದರಲ್ಲಿದೆ. ಇನ್ನು 4GB RAM ಹಾಗೂ 64GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಇದರಲ್ಲಿದ್ದು, ವಿಸ್ತರಣೆ ಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ. 13MP ರಿಯರ್‌ ಕ್ಯಾಮೆರಾ ಹಾಗೂ 8MP ಸೆಲ್ಪಿ ಕ್ಯಾಮರಾ ರಚನೆ ಪಡೆದಿದೆ. ಇನ್ನು ಪಾಸ್ಟ್‌ ಚಾರ್ಜಿಂಗ್‌ ಜೊತೆಗೆ 7500mAh ಸಾಮರ್ಥ್ಯದ ಬ್ಯಾಟರಿ ಈ ಡಿವೈಸ್‌ನಲ್ಲಿದೆ.

ರಿಯಲ್‌ ಮಿ ಪ್ಯಾಡ್

ರಿಯಲ್‌ ಮಿ ಪ್ಯಾಡ್

ರಿಯಲ್‌ ಮಿ ಪ್ಯಾಡ್ ಅನ್ನು ಅಮೆಜಾನ್‌ನಲ್ಲಿ 12,700ರೂ. ಗಳಿಗೆ ಕೊಂಡುಕೊಳ್ಳಬಹುದು. ಈ ಡಿವೈಸ್‌ 1080x2400 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಬೆಂಬಲದೊಂದಿಗೆ 10.4 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 325 PPI ನ ಪಿಕ್ಸೆಲ್ ಸಾಂದ್ರತೆಯ ಆಯ್ಕೆ ಪಡೆದಿದೆ. ಹಾಗೆಯೇ ಆಕ್ಟಾಕೋರ್ ಸ್ನಾಪ್‌ಡ್ರಾಗನ್ 765G ಪ್ರೊಸೆಸರ್‌ ಶಕ್ತಿ ಪಡೆದಿದ್ದು, ಆಂಡ್ರಾಯ್ಡ್‌ 11 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡಲಿದೆ. ಉತ್ತಮ ಗುಣಮಟ್ಟದ ವೀಡಿಯೊ ರೆಂಡರಿಂಗ್‌ಗಾಗಿ ಅಡ್ರಿನೊ 620 GPU ಫೀಚರ್‌ ಪ್ಯಾಕ್‌ ಮಾಡುತ್ತದೆ. ಇನ್ನುಳಿದಂತೆ 6GB RAM ಹಾಗೂ 64GB ಇಂಟರ್ನಲ್‌ ಸ್ಟೋರೇಜ್ ಹೊಂದಿದ್ದು, ಇದನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ. ಜೊತೆಗೆ 8MP ರಿಯರ್‌ ಕ್ಯಾಮೆರಾ‌ ಹಾಗೂ 8MP ಸೆಲ್ಫಿ ಕ್ಯಾಮೆರಾ ಇದರಲ್ಲಿದೆ ಮತ್ತು ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7100mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

ಒಪ್ಪೋ ಪ್ಯಾಡ್ ಏರ್

ಒಪ್ಪೋ ಪ್ಯಾಡ್ ಏರ್

ಒಪ್ಪೋ ಪ್ಯಾಡ್ ಏರ್‌ ಅನ್ನು ಕ್ರೋಮಾ ಸೈಟ್‌ನಲ್ಲಿ 14,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ 1200x2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಜೊತೆಗೆ 10.36 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾಕೋರ್ ಸ್ನಾಪ್‌ಡ್ರಾಗನ್ 680 SoC ಯ ಸಾಮರ್ಥ್ಯ ಪಡೆದಿದ್ದು, ಆಂಡ್ರಾಯ್ಡ್‌ 11 ಆವೃತ್ತಿಯಲ್ಲಿ ರನ್‌ ಆಗಲಿದೆ. 64GB ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಇದನ್ನು 512GB ವರೆಗೂ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. 18W ವೇಗದ ಚಾರ್ಜಿಂಗ್ ಜೊತೆಗೆ 7100mAh ಬ್ಯಾಟರಿ ಸಾಮರ್ಥ್ಯ ಇದರಲ್ಲಿದೆ.

ಶಿಯೋಮಿ ರೆಡ್‌ಮಿ ಪ್ಯಾಡ್

ಶಿಯೋಮಿ ರೆಡ್‌ಮಿ ಪ್ಯಾಡ್

ಶಿಯೋಮಿ ರೆಡ್‌ಮಿ ಪ್ಯಾಡ್ ಅನ್ನು ಆನ್‌ಲೈನ್‌ ಮಾರುಕಟ್ಟೆಯಲ್ಲಿ 12,899ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಡಿವೈಸ್‌ 11.2 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 2560 x 1600 ಪಿಕ್ಸೆಲ್ ರೆಸಲ್ಯೂಶನ್‌ ಹೊಂದಿದೆ. ಆಕ್ಟಾಕೋರ್ ಮೀಟಿಯಾಟೆಕ್‌ ಹಿಲಿಯೋ G96 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, Mali-G57 MC2 GPU ಇದರಲ್ಲಿದೆ. 4GB RAM ಹಾಗೂ 64GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ರಿಯರ್‌ ಕ್ಯಾಮೆರಾ ರಚನೆಯನ್ನಷ್ಟೇ ಪಡೆದಿದೆ. 7,800mAh ಬ್ಯಾಟರಿ ಸಾಮರ್ಥ್ಯದ ಜೊತೆಗೆ 22W ವೇಗದ ಚಾರ್ಜಿಂಗ್ ಆಯ್ಕೆ ಈ ಪ್ಯಾಡ್‌ನಲ್ಲಿದೆ.

ಲೆನೊವೊ ಟ್ಯಾಬ್ M10 TB-X505X

ಲೆನೊವೊ ಟ್ಯಾಬ್ M10 TB-X505X

ಈ ಟ್ಯಾಬ್‌ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 11,899ರೂ. ಗಳ ಆರಂಭಿಕ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದು‌ 1200 x 1920 ಪಿಕ್ಸೆಲ್‌ ರೆಸಲ್ಯೂಶನ್‌ ಜೊತೆಗೆ 10.1 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಆಕ್ಟಾಕೋರ್ ಸ್ನಾಪ್‌ಡ್ರಾಗನ್ 450 ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ v8.1 (Oreo) OS ನಲ್ಲಿ ರನ್‌ ಆಗಲಿದೆ. 3GB RAM ಹಾಗೂ 32GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಇದು ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ. ಇನ್ನುಳಿದಂತೆ 4,850mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದೆ.

ಲೆನೊವೊ ಟ್ಯಾಬ್‌ M8 FHD

ಲೆನೊವೊ ಟ್ಯಾಬ್‌ M8 FHD

ಈ ಡಿವೈಸ್‌ ಅನ್ನು ಅಮೆಜಾನ್‌ನಲ್ಲಿ 10,499 ರೂ. ಗಳ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು. ಇದು 8 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು 1200 x 1920 ಪಿಕ್ಸೆಲ್‌ ರೆಸಲ್ಯೂಶನ್ ಆಯ್ಕೆ ಪಡೆದಿದೆ. ಹಾಗೆಯೇ ಮೀಟಿಯಾ ಟೆಕ್‌ ಹಿಲಿಯೋ P22 ಆಕ್ಟಾಕೋರ್ ಪ್ರೊಸೆಸರ್ ಅನ್ನು ಅವಲಂಬಿಸಿದ್ದು, 4GB RAM ಹಾಗೂ 64GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಜೊತೆಗೆ 13ಮೆಗಾಪಿಕ್ಸೆಲ್ ರಿಯರ್‌ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ರಚನೆ ಇದರಲ್ಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಹೊಂದಿದೆ.

Best Mobiles in India

English summary
Tablets has recently become one of the most popular consumer devices. In this article you will know the important tablet specification and price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X