ಈ ವರ್ಷ ವಿಶ್ವದಲ್ಲಿಯೇ ಅತೀ ಹೆಚ್ಚು ಮಾರಾಟವಾದ ಫೋನ್‌ಗಳು ಯಾವುವು ಗೊತ್ತೆ!

|

ಪ್ರಸ್ತುತ ಸ್ಮಾರ್ಟ್‌ಫೋನ್ ಅತೀ ಅಗತ್ಯ ಗ್ಯಾಜೆಟ್‌ಗಳಲ್ಲಿ ಒಂದಾಗಿದ್ದು, ಪ್ರತಿಯೊಬ್ಬರು ತಮ್ಮ ಬಜೆಟ್‌ನಲ್ಲಿ ಅತ್ಯುತ್ತಮ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನನ್ನೇ ಖರೀದಿಸಲು ಇಚ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಹಲವು ಶ್ರೇಣಿಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಆದರೆ ಇತ್ತೀಚಿಗೆ ಮಾರುಕಟ್ಟೆಗೆ ಕಾಲಿಟ್ಟಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು ತ್ರಿವಳಿ ಕ್ಯಾಮೆರಾ, ಹೈ ಪ್ರೊಸೆಸರ್‌ ಮತ್ತು ಬಿಗ್ ಬ್ಯಾಟರಿ ಫೀಚರ್ಸ್‌ಗಳತ್ತ ಹೆಚ್ಚಿನ ಒಲವು ನೀಡಿವೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರು ತಮ್ಮ ಒಂದು ಲೆಕ್ಕಾಚಾರದಲ್ಲಿ ಅವಲೋಕಿಸಿ ಇರುವುದರಲ್ಲಿಯೇ ಬೆಸ್ಟ್‌ ಸ್ಮಾರ್ಟ್‌ಫೋನ್ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇನ್ನು ಕೆಲವರು ಖರೀದಿಸಿದರೇ 'ಐಫೋನ್'‌ನೇ ಖರೀದಿಸಬೇಕು ಎಂದುಕೊಂಡಿರುತ್ತಾರೆ. ಆದರೆ HIS ಮಾರ್ಕೆಟ್ ನೀಡಿರುವ ವರದಿ ಪ್ರಕಾರ ಪ್ರಸಕ್ತ ವರ್ಷದಲ್ಲಿ-2019 ವಿಶ್ವದಲ್ಲಿಯೇ ಅತೀ ಹೆಚ್ಚು ಮಾರಾಟ ಕಾಣುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಭಾರತದಲ್ಲಿ 'ರೆಡ್ಮಿ 70 ಇಂಚಿನ' ಸ್ಮಾರ್ಟ್‌ಟಿವಿ ಸ್ವಾಗತಕ್ಕೆ ದಿನಾಂಕ ಫಿಕ್ಸ್!ಓದಿರಿ : ಭಾರತದಲ್ಲಿ 'ರೆಡ್ಮಿ 70 ಇಂಚಿನ' ಸ್ಮಾರ್ಟ್‌ಟಿವಿ ಸ್ವಾಗತಕ್ಕೆ ದಿನಾಂಕ ಫಿಕ್ಸ್!

ಆಪಲ್ ಎಕ್ಸ್‌ಆರ್

ಆಪಲ್ ಎಕ್ಸ್‌ಆರ್ ಫೋನ್ ಪ್ರಸಕ್ತ 2019ರ ಮಧ್ಯಂತರ ವೇಳೆಯವರೆಗೆ 26.4ಮಿಲಿಯನ್ ಯೂನಿಟ್ಸ್‌ ಮಾರಾಟವಾಗಿವೆ ಎಂದು HIS ಮಾರ್ಕೆಟ್ ತಿಳಿಸಿದೆ. 828x1792 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.10 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಆಪಲ್ A12 ಬಯೋನಿಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಐಓಎಸ್‌ 12 ಬೆಂಬಲ ಪಡೆದಿದ್ದು, 64GB ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ10

ಸ್ಯಾಮ್‌ಸಂಗ್‌ನ ಎಂಟ್ರಿ ಲೆವೆಲ್ ಫೋನ್ 'ಗ್ಯಾಲ್ಯಾಕ್ಸಿ ಎ10' HIS ಮಾರ್ಕೆಟ್ ವರದಿ ಪ್ರಕಾರ ಪ್ರಸ್ತುತ ವರ್ಷದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಎರಡನೇ ಫೋನ್‌ ಆಗಿ ಗುರುತಿಸಿಕೊಂಡಿದೆ. 720 x 1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಆಂಡ್ರಾಯ್ಡ್‌ 9 ಓಎಸ್‌ ಜೊತೆ ಸ್ಯಾಮ್‌ಸಂಗ್ Exynos 7884 ಪ್ರೊಸೆಸರ್‌ ಪಡೆದಿದ್ದು, 3400 mAh ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ50

ಗ್ಯಾಲ್ಯಾಕ್ಸಿ ಎ50 ಒಟ್ಟು 12 ಮಿಲಿಯನ್ ಯುನಿಟ್ಸ್‌ ಮಾರಾಟ ಕಂಡು ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಈ ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಆಂಡ್ರಾಯ್ಡ್‌ 9 ಓಎಸ್‌ ಜೊತೆ ಸ್ಯಾಮ್‌ಸಂಗ್ Exynos 9610 ಪ್ರೊಸೆಸರ್‌ ಪಡೆದಿದ್ದು, 4000 mAh ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಒಳಗೊಂಡಿದೆ.

ಆಪಲ್ ಐಫೋನ್ 8

'ಆಪಲ್ ಐಫೋನ್ 8' ಈ ವರ್ಷದಲ್ಲಿ 10.3 ಯೂನಿಟ್ಸ್‌ಗಳಷ್ಟು ಸೇಲ್ ಆಗಿವೆ. 750 x 1334 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 4.7 ಇಂಚಿನ IPS LCD ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಆಪಲ್ A11 ಬಯೋನಿಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇತ್ತೀಚಿಗೆ ಐಓಎಸ್‌ 12.4 ಅಪಡೇಟ್‌ ಪಡೆದಿದ್ದು, 64GB+256GB ಸಾಮರ್ಥ್ಯದ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ.

ಓದಿರಿ : ಫ್ಲಿಪ್‌ಕಾರ್ಟ್‌ನ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!ಓದಿರಿ : ಫ್ಲಿಪ್‌ಕಾರ್ಟ್‌ನ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!

ರೆಡ್ಮಿ 6A

ಶಿಯೋಮಿಯ ರೆಡ್ಮಿ 6A ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, ಈ ಫೋನ್ 10 ಮಿಲಿಯನ್ ಯೂನಿಟ್ಸ್ ಸೇಲ್ ಆಗಿದೆ. 720 x 1440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.45 ಇಂಚಿನ IPS LCD ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಮೀಡಿಯಾ ಟೆಕ್ MT6761 ಹಿಲಿಯೊ A22 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್‌ 9 ಪೈ ಓಎಸ್‌ಗೆ ಅಪಡೇಟ್‌ ಪಡೆದಿದ್ದು, 16GB+32GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ.

ರೆಡ್ಮಿ ನೋಟ್‌ 7

ಶಿಯೋಮಿಯ ರೆಡ್ಮಿ ನೋಟ್‌ 7 ಫೋನ್ ಸಹ 10 ಮಿಲಿಯನ್ ಯೂನಿಟ್ಸ್‌ ಮಾರಾಟವಾಗಿದ್ದು, 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ IPS LCD ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಕ್ವಾಲ್ಕಮ್ SDM660 ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂಬದಿಯಲ್ಲಿ 48ಎಂಪಿ ಕ್ಯಾಮೆರಾ ಸೆನ್ಸಾರ್ ಪಡೆದಿದ್ದು, 32GB 3GB RAM+64GB, 4GB RAM+64GB, 6GB RAM+128GB ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ J2 ಕೋರ್

ಗ್ಯಾಲ್ಯಾಕ್ಸಿ ಸ್ಮಾರ್ಟ್‌ಫೋನ್ ಒಟ್ಟಾರೇ 9.9 ಮಿಲಿಯನ್ ಯೂನಿಟ್‌ ಸೇಲ್ ಆಗಿದ್ದು, 540 x 960 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.0 ಇಂಚಿನ PLS TFTಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದ್ದು, ಸ್ಯಾಮ್‌ಸಂಗ್ Exynos 7570 ಕ್ವಾಡ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 2600 mAh ಬ್ಯಾಟರಿ ಬಾಳಿಕೆಯೊಂದಿಗೆ, ಬ್ಲ್ಯಾಕ್, ಗೋಲ್ಡ್‌ ಮತ್ತು ಲ್ಯಾವೆಂಡರ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಒಪ್ಪೊ A5

HIS ಮಾರ್ಕೆಟ್‌ನ ವರದಿಯಂತೆ ಹೆಚ್ಚು ಮಾರಾಟ ಕಂಡ ಫೋನ್‌ಗಳಲ್ಲಿ 'ಒಪ್ಪೊ A5' ಸ್ಮಾರ್ಟ್‌ಫೋನ್ ಸಹ ಗುರುತಿಸಿಕೊಂಡಿದೆ. 720 x 1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.2 ಇಂಚಿನ IPS LCD ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಕ್ವಾಲ್ಕಮ್ SDM660 ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 4230 mAh ಬ್ಯಾಟರಿ ಬಾಳಿಕೆಯೊಂದಿಗೆ, 32GB+3GB RAM ಮತ್ತು 4GB RAM+ 64GB ಆಯ್ಕೆಯನ್ನು ಹೊಂದಿದೆ.

ಆಪಲ್ ಐಫೋನ್ XS ಮ್ಯಾಕ್ಸ್‌

ಆಪಲ್ ಐಫೋನ್ XS ಮ್ಯಾಕ್ಸ್‌ ಒಟ್ಟು 9.6 ಮಿಲಿಯನ್ ಯೂನಿಟ್‌ ಸೇಲ್ ಆಗಿದೆ. 1242 x 2688 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ OLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಆಪಲ್ A12 ಬಯೋನಿಕ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಐಓಎಸ್‌ 12.4 ಅಪ್‌ಗ್ರೇಡ್ ವರ್ಷನ್ ಪಡೆದಿದ್ದು, 64GB+4GB RAM, 256GB+4GB RAM ಮತ್ತು 512GB+4GB RAM ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ30

ಗ್ಯಾಲ್ಯಾಕ್ಸಿ ಎ30 ಫೋನ್ ಪ್ರಸಕ್ತ ವರ್ಷದಲ್ಲಿ 9.2 ಮಿಲಿಯನ್ ಯೂನಿಟ್ಸ್ ಮಾರಾಟ ಕಂಡಿವೆ. ಈ ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.4 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಆಂಡ್ರಾಯ್ಡ್‌ 9 ಓಎಸ್‌ ಜೊತೆ ಸ್ಯಾಮ್‌ಸಂಗ್ Exynos 7904 ಪ್ರೊಸೆಸರ್‌ ಪಡೆದಿದ್ದು, 4000 mAh ಬ್ಯಾಟರಿ ಬಾಳಿಕೆಯ ಶಕ್ತಿಯನ್ನು ಒಳಗೊಂಡಿದೆ.

ಓದಿರಿ : ಬ್ರಾಡ್‌ಬ್ಯಾಂಡ್‌ ಸಮರ : ಬೆಲೆ ಇಳಿಕೆ ಮಾಡಿದ 'ವೊಡಾಫೋನ್ ಯೂ'!ಓದಿರಿ : ಬ್ರಾಡ್‌ಬ್ಯಾಂಡ್‌ ಸಮರ : ಬೆಲೆ ಇಳಿಕೆ ಮಾಡಿದ 'ವೊಡಾಫೋನ್ ಯೂ'!

Best Mobiles in India

English summary
HIS Market has released the list of top 10 best-selling smartphones across the world. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X