ಹರೆಯದ ಯುವಕನ ಪಾಲಿಗೆ ಯಮನಾದ ಕಂಪ್ಯೂಟರ್ ಗೇಮ್

By Shwetha
|

ಇಂಟರ್ನೆಟ್‌ನ ಸತತ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ನಾವು ಅರಿತಿದ್ದೇವೆ. ಆದರೂ ಈ ಮಾಯಾಜಾಲ ನಮ್ಮನ್ನು ಉಸಿರುಗಟ್ಟುವಂತೆ ಬಿಗಿಹಿಡಿಯುತ್ತದೆ ಮತ್ತು ಅದರಿಂದ ಹೊರಬರಲಾರದಂತೆ ನಮ್ಮನ್ನು ತಡೆಯುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇವುಗಳ ಅಧಿಕ ಬಳಕೆಯಿಂದ ಸಾವು ನೋವುಗಳು ಸಂಭವಿಸುತ್ತಲೇ ಇದೆ. ಕಂಪ್ಯೂಟರ್ ಗೇಮ್‌ನಿಂದ ಮರಣವನ್ನಪ್ಪಿದ 17 ರ ತರುಣನ ಕಥೆಯನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ.

ಓದಿರಿ: ಚೋರರ ಮೇಲೆ ಹದ್ದಿನ ಕಣ್ಣಿಡುವ ಗ್ಯಾಜೆಟ್ಸ್

ರುಸ್ತಮ್

ರುಸ್ತಮ್

17 ರ ಹರೆಯದ ರುಸ್ತಮ್ ನಿದ್ದೆ, ಆಹಾರವನ್ನು ತ್ಯಜಿಸಿ ಕಂಪ್ಯೂಟರ್ ಗೇಮ್‌ ಅನ್ನು ನಿರಂತರವಾಗಿ ಆಡುತ್ತಿದ್ದ.

2,000 ಗಂಟೆ

2,000 ಗಂಟೆ

ಇನ್ನು ಈತನ ಪ್ರಕರಣವನ್ನು ತನಿಖೆ ಮಾಡಿದ ಅಧಿಕಾರಿಗಳು ಹೇಳುವಂತೆ ಕಳೆದ ವರ್ಷದಿಂದ ಇತ್ತೀಚಿನವರೆಗೆ ಈತ 2,000 ಗಂಟೆಗಳಷ್ಟು ಕಾಲ ಕಂಪ್ಯೂಟರ್‌ನಲ್ಲಿ ಆಟವಾಡಿದ್ದಾನೆ.

ರಷ್ಯಾದ ದಕ್ಷಿಣ ಭಾಗ

ರಷ್ಯಾದ ದಕ್ಷಿಣ ಭಾಗ

ಇನ್ನು ಈತನ ಸಾವು ರಷ್ಯಾದ ದಕ್ಷಿಣ ಭಾಗದಲ್ಲಿ ನಡೆದಿದೆ ಎನ್ನಲಾಗಿದೆ. ತುರ್ತಾಗಿ ಆಸ್ಪತ್ರೆಗೆ ಈತನನ್ನು ಕರೆದುಕೊಂಡು ಹೋದರೂ ಈತ ಸಾವನ್ನಪ್ಪಿದ್ದಾನೆ.

ಸತತವಾಗಿ ಕಂಪ್ಯೂಟರ್ ಗೇಮ್

ಸತತವಾಗಿ ಕಂಪ್ಯೂಟರ್ ಗೇಮ್

ಕಳೆದ 22 ದಿನಗಳಿಂದ ಈತ ಸತತವಾಗಿ ಕಂಪ್ಯೂಟರ್ ಗೇಮ್ ಅನ್ನು ಆಡುತ್ತಿದ್ದ ಎಂಬುದಾಗಿ ಪೋಲೀಸ್ ಮೂಲಗಳು ತಿಳಿಸಿವೆ.

ತೊಡಗಿಸಿಕೊಂಡಿದ್ದಾನೆ

ತೊಡಗಿಸಿಕೊಂಡಿದ್ದಾನೆ

ಆಗಸ್ಟ್ 8 ರಲ್ಲಿ ಕಾಲಿಗೆ ಏಟು ಬಿದ್ದಲ್ಲಿಂದ ಈತ ಕಂಪ್ಯೂಟರ್ ಗೇಮ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ.

ಕಾಳಜಿ

ಕಾಳಜಿ

ಇನ್ನು ರಷ್ಯಾದ ಮಕ್ಕಳ ಪರಿಪಾಲಕರು ಹೇಳುವಂತೆ ನಿಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ನಿಗಾವಹಿಸುವುದು ಅತ್ಯಗತ್ಯವಾಗಿದೆ. 17 ವರ್ಷದ ಹುಡುಗ ನಿರಂತರವಾಗಿ ಕಂಪ್ಯೂಟರ್ ಗೇಮ್‌ನಲ್ಲೇ ತನ್ನ ಭವಿಷ್ಯವನ್ನೇ ಕಳೆದಿದ್ದಾನೆ ಎಂದರೆ ಇದು ಹೆಚ್ಚು ಕಾಳಜಿ ವಹಿಸಬೇಕಾದ ಸುದ್ದಿಯಾಗಿದೆ.

ಆರೋಗ್ಯ ತೊಂದರೆಗಳು

ಆರೋಗ್ಯ ತೊಂದರೆಗಳು

ಹೆಚ್ಚು ಸಮಯದವರೆಗೆ ಕುಳಿತುಕೊಂಡು ಕೆಲಸ ಮಾಡುವುದರಿಂದ ಹಲವಾರು ಆರೋಗ್ಯ ತೊಂದರೆಗಳು ಉಂಟಾಗುತ್ತವೆ. ಈ ಹುಡುಗನ ಸಾವು ಹೆಪ್ಪುಗಟ್ಟುವಿಕೆಯಿಂದ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಂಪ್ಯೂಟರ್ ಲೋಕ

ಕಂಪ್ಯೂಟರ್ ಲೋಕ

ಹೆಚ್ಚು ಖಿನ್ನರಾಗುವ ಎಳೆಯರು ಕಂಪ್ಯೂಟರ್ ಲೋಕದಲ್ಲಿ ತಲ್ಲೀನರಾಗಿಬಿಡುತ್ತಾರೆ. ಊಟ ನಿದ್ದೆಯ ಪರಿವೆಯಿಲ್ಲದೆ ಇವರು ಕಾಲಕಳೆಯುತ್ತಾರೆ.

Best Mobiles in India

English summary
The 17-year-old had broken his leg and was playing game Defence of the Ancients almost continuously more than three weeks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X