ಟೆಲಿಕಾಂ ಸಂಸ್ಥೆಗಳಿಂದ ಡೇಟಾ ಫ್ಲೋರ್ ಪ್ರೈಸ್‌ಗೆ ಮನವಿ; ಗ್ರಾಹಕರಿಗೆ ಭಾರಿ ಹೊರೆ!

|

ಪ್ರಸ್ತುತ ಭಾರತೀಯ ಖಾಸಗಿ ಟೆಲಿಕಾಂ ಸಂಸ್ಥೆಗಳು ಭಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಒಂದು ಕಡೆ AGR-ಹೊಂದಾಣಿಕೆಯ ಒಟ್ಟು ಆದಾಯ ಭಾಕಿ ಮೊತ್ತ ಪಾವತಿಸಬೇಕಿದ್ದು, ಇನ್ನೊಂದೆಡೆ ಚಂದಾದಾರರನ್ನು ಕಳೆದುಕೊಳ್ಳುತ್ತಿರುವುದು ಸಂಸ್ಥೆಗಳನ್ನು ಕಂಗಾಲುಮಾಡಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಪ್ರತಿ ಜಿಬಿ ಡೇಟಾ ಪ್ಲ್ಯಾನ್ ಗೆ ನಿಗದಿತ ಶುಲ್ಕ ನಿಗದಿ ಮಾಡಬೇಕೆನ್ನುವ ನಿಲುವನ್ನು ತಾಳಿದ್ದು, ಈ ಬಗ್ಗೆ ಜಿಯೋ, ವೊಡಾಫೋನ್ ಮತ್ತು ಏರ್‌ಟೆಲ್ ಟ್ರಾಯ್‌ಗೆ ಮನವಿ ಸಲ್ಲಿಸಿವೆ.

ಫ್ಲೋರ್ ಪ್ರೈಸ್‌

ಹೌದು, ವೊಡಾಫೋನ್, ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಗಳು ಒಂದು ಜಿಬಿ ಡೇಟಾ ಫ್ಲೋರ್ ಪ್ರೈಸ್‌-ಕನಿಷ್ಠ ಶುಲ್ಕ ನಿಗದಿ ಪಡಿಸಬೇಕೆಂದು ಟ್ರಾಯ್‌ಗೆ ಬೇಡಿಕೆ ಸಲ್ಲಿಸಿವೆ. ಪ್ರಸ್ತುತ 6-9ರೂ ಪ್ರೈಸ್‌ನಲ್ಲಿ 1GB ಡೇಟಾವನ್ನು ಒದಗಿಸುತ್ತಿವೆ. ಈ ಮೊತ್ತವನ್ನು ಹೆಚ್ಚಿಸಲು ಇದೀಗ ಟೆಲಿಕಾಂ ಸಂಸ್ಥೆಗಳು ಬೇಡಿಕೆ ಇಟ್ಟಿವೆ. ವೊಡಾಫೋನ್ ಸಂಸ್ಥೆಯೇ ಡೇಟಾಗೆ ನಿಗದಿತ ಶುಲ್ಕ ಮಾಡಬೇಕೆಂದು ಟ್ರಾಯ್‌ಗೆ ಮನವಿ ಸಲ್ಲಿಸಿದ್ದು, ಆ ನಂತರ ಜಿಯೋ, ಏರ್‌ಟೆಲ್ ಸಹ ಧ್ವನಿಗೂಡಿಸಿವೆ. ಹಾಗಾದರೆ ಟೆಲಿಕಾಂ ಸಂಸ್ಥೆಗಳು ನಿಗದಿಪಡಿಸಲು ಕೇಳಿರುವ ಡೇಟಾ ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಜಿಯೋ ಟೆಲಿಕಾಂ

ಜಿಯೋ ಟೆಲಿಕಾಂ

ಡೇಟಾ ಫ್ಲೋರ್ ಪ್ರೈಸ್‌ ನಿಗದಿಗೆ ಜಿಯೋ ಟೆಲಿಕಾಂ ಸಹ ಬೇಡಿಕೆ ಇಟ್ಟಿದೆ. 1GB ಡೇಟಾಗೆ ಕನಿಷ್ಠ 20ರೂ.ಗಳನ್ನು ನಿಗದಿಪಡಿಸಬೇಕೆಂದು ಜಿಯೋ ಮನವಿ ಮಾಡಿದೆ. ಟೆಲಿಕಾಂ ವಲಯದಲ್ಲಿ ಉಂಟಾಗಿರುವ ಆರ್ಥಿಕ ಹೊರೆಯನ್ನು ಇಳಿಕೆ ಮಾಡಿಕೊಳ್ಳಲು ಈ ನಿರ್ಧಾರಕ್ಕೆ ಮುಂದಾಗಿದೆ.

ವೊಡಾಫೋನ್ ಟೆಲಿಕಾಂ

ವೊಡಾಫೋನ್ ಟೆಲಿಕಾಂ

ಬಾಕಿ ಹಣ ಪಾವತಿಸಲು ಕಾಲಾವಕಾಶ ಕೇಳಿರುವ ವೊಡಾಫೋನ್ ಐಡಿಯಾ ಕೆಲವು ಬೇಡಿಕೆಗಳನ್ನು ಇಟ್ಟಿದೆ. ಪ್ರಸ್ತುತ ಇರುವ ಡೇಟಾ ಬೆಲೆಯನ್ನು ಸುಮಾರು 7 ರಿಂದ 8 ಪಟ್ಟು ಹೆಚ್ಚಳ ಮಾಡಬೇಕು ಎಂದು ಹೇಳಿದೆ. 1GB ಡೇಟಾಗೆ ಕನಿಷ್ಠ 35ರೂ. ದರ ನಿಗದಿ ಮಾಡಬೇಕೆಂದು ಕೇಳಿಕೊಂಡಿದೆ.

ಏರ್‌ಟೆಲ್‌ ಟೆಲಿಕಾಂ

ಏರ್‌ಟೆಲ್‌ ಟೆಲಿಕಾಂ

ಜನಪ್ರಿಯ ಏರ್‌ಟೆಲ್ ಟೆಲಿಕಾಂ ಸಹ ಫ್ಲೋರ್‌ ಟಾರೀಫ್ ಜಾರಿ ಮಾಡಬೇಕು ಎಂದಿದ್ದು, 1GB ಡೇಟಾಗೆ ಕನಿಷ್ಠ 30ರೂ. ದರ ನಿಗದಿ ಮಾಡಬೇಕೆಂದು ಟ್ರಾಯ್‌ಗೆ ಕೇಳಿಕೊಂಡಿದೆ. ಏರ್‌ಟೆಲ್ ಸಹ AGR-ಹೊಂದಾಣಿಕೆಯ ಒಟ್ಟು ಆದಾಯ ಭಾಕಿ ಹೊರೆ ಅನುಭವಿಸಿದೆ.

ಪ್ರತಿ ನಿಮಿಷದ ಕರೆಗೆ 6 ಪೈಸೆ

ಪ್ರತಿ ನಿಮಿಷದ ಕರೆಗೆ 6 ಪೈಸೆ

ಜಿಯೋ ಟೆಲಿಕಾಂ 1GB ಡೇಟಾಗೆ 20ರೂ, ನಿಗದಿಗೆ ಮನವಿ ಮಾಡಿದ್ದು, ಅದರೊಂದಿಗೆ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ ಕನಿಷ್ಠ 6 ಪೈಸೆ ಶುಲ್ಕ ನಿಗದಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದೆ. ವೊಡಾಫೋನ್ ಐಡಿಯಾ ಸಹ ಹೊರ ಹೋಗುವ ಪ್ರತಿ ನಿಮಿಷದ ಕರೆಗೆ 6 ಪೈಸೆ ದರ ನಿಗದಿಯ ಮಾತುಗಳನ್ನು ಆಡಿತ್ತು. ಹಾಗೂ ಈ ಶುಲ್ಕವನ್ನು ತಿಂಗಳ ಮುಂದುವರಿಸಬೇಕು ಎಂದು ಬೇಡಿಕೆ ಇತ್ತೀಚಿಗೆ ಬೇಡಿಕೆ ಸಹ ಸಲ್ಲಿಸಿತ್ತು.

Best Mobiles in India

English summary
Vodafone Idea, airtel and jio suggested that floor prices must be set up at Rs 35 per GB.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X