Subscribe to Gizbot

ಟೆಲಿಕಾಂ ಬೆಸ್ಟ್ ಆಫರ್‌ಗಳನ್ನು ತಿಳಿಯಲು ಟ್ರಾಯ್ ನೀಡಿರುವ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು!!

Written By:

ಮೊಬೈಲ್ ಬಳಕೆದಾರರಿಗೆ ಟೆಲಿಕಾಂ ದರಸಮರದ ಸಂಪೂರ್ಣ ಮಾಹಿತಿಯನ್ನು ನೀಡುವಂತಹ ನೂತನ ಯೋಜನೆಯೊಂದಕ್ಕೆ ಭಾರತೀಯ ಟೆಲಿಕಾಂ ನಿಯಂತ್ರಣ ಇಲಾಖೆ ಮುಂದಾಗಿದೆ. ಯಾವುದೇ ಟೆಲಿಕಾಂ ಬಳಕೆದಾರರು ತಮಗೆ ಸರಿಯಾದ ಟ್ಯಾರಿಫ್ ಪ್ಲಾನ್ ಅನ್ನು ಆಯ್ಕೆ ಮಾಡಲು ಸಾಧ್ಯವಾಗುವಂತಹ ನೂತನ ಯೋಜನೆ ಇದಾಗಿದೆ ಎಂದು ಟ್ರಾಯ್ ತಿಳಿಸಿದೆ.

ಮೊಬೈಲ್ ಗ್ರಾಹಕರು ಯಾವುದೇ ಟೆಲಿಕಾಂ ಕಂಪೆನಿಗಳ ಟ್ಯಾರಿಫ್ ಪ್ಲಾನ್‌ಗಳನ್ನು ತಿಳಿಯಲು ಆ ಟೆಲಿಕಾಂ ಕಂಪೆನಿಯ ವೆಬ್‌ಸೈಟ್‌ಗೆ ತೆರಳದೇ, ಟ್ರಾಯ್‌ನ ಒಂದೇ ವೆಬ್‌ಸೈಟ್‌ನಲ್ಲಿ ಎಲ್ಲಾ ಟೆಲಿಕಾಂಗಳ ರೀಚಾರ್ಜ್ ಆಫರ್‌ಗಳನ್ನು ನೋಡಬಹುದಾದ ಆಯ್ಕೆ ಇದಾಗಿದೆ. ಈ ಮೂಲಕ ಟ್ಯಾರಿಫ್ ಯೋಜನೆಗಳಲ್ಲಿ ಪಾರದರ್ಶಕತೆ ತರಲು ಟ್ರಾಯ್ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಬೆಸ್ಟ್ ಆಫರ್‌ಗಳನ್ನು ತಿಳಿಯಲು ಟ್ರಾಯ್ ನೀಡಿರುವ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು!!

ಟ್ರಾಯ್ ನ ಈ ಹೊಸ ಸೇವೆಯೊಂದಿಗೆ (https://tariff.trai.gov.in), ಬಳಕೆದಾರರು ಯಾವುದೇ ಟೆಲಿಕಾಂ ಕಂಪನಿಯ ಯೋಜನೆಗಳ ವಿವರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಎಲ್ಲಾ ಕಂಪನಿಗಳ ಯೋಜನೆಗಳು ಒಂದೇ ಸ್ಥಳದಲ್ಲಿ ಮಾತ್ರ ಲಭ್ಯವಿರುತ್ತವೆ. ಇದರೊಂದಿಗೆ, ಬಳಕೆದಾರರು ಸುಲಭವಾಗಿ ತಮ್ಮನ್ನು ಉತ್ತಮ ಟ್ಯಾರಿಫ್ ಪ್ಲಾನ್ ಅನ್ನು ಆರಿಸಿಕೊಳ್ಳಬಹುದಾಗಿದೆ.

How to read deleted WhatsApp messages - GIZBOT KANNADA

ಈ ಪೋರ್ಟಲ್‌ನಲ್ಲಿ ಗ್ರಾಹಕರಿಗೆ ನಿಯಮಿತ ಸುಂಕಗಳು, ಎಸ್ಟಿವಿಗಳು, ವಿಶೇಷ ಟ್ಯಾರಿಫ್ ರಶೀದಿಗಳು, ಪ್ರಮೋಶನ್ ಟ್ಯಾರಿಫ್ ಮತ್ತು ವ್ಯಾಲ್ಯೂ ಆಡೆಡ್ ಸೇವಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇನ್ನು ಟೆಲಿಕಾಂ ಕಂಪೆನಿಗಳು ವಿಂಗಡನೆ ಮಾಡಿಕೊಂಡಿರುವ ಎಲ್ಲಾ ವಲಯಗಳಿಗೆ ವಿವರಗಳನ್ನು ಈ ಪೋರ್ಟಲ್‌ನಲ್ಲಿ ನೀಡಲಾಗುತ್ತದೆ ಎನ್ನಲಾಗಿದೆ.

ಬೆಸ್ಟ್ ಆಫರ್‌ಗಳನ್ನು ತಿಳಿಯಲು ಟ್ರಾಯ್ ನೀಡಿರುವ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು!!

ಟ್ರಾಯ್ ಪರಿಚಯಿಸುತ್ತಿರುವ ಈ ಪೋರ್ಟಲ್ ಬೀಟಾ ಹಂತದಲ್ಲಿದ್ದು, ಸಂಪೂರ್ಣ ಆವೃತ್ತಿಯನ್ನು ಸ್ವಲ್ಪ ಸಮಯದ ನಂತರ ಪ್ರಾರಂಭಿಸಲಾಗುವುದು ಎಂದು ಟ್ರಾಯ್ ಹೇಳಿದೆ. ಹಾಗಾಗಿ, ಟೆಲಿಕಾಂ ಗ್ರಾಹಕರು ಇನ್ನು ಒಮದೇ ವೆಬ್‌ಸೈಟ್‌ನಲ್ಲಿ ಎಲ್ಲಾ ಟೆಲಿಕಾಂಗಳು ನೀಡುವ ಆಫರ್‌ಗಳ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಯಾವುದು ಬೆಸ್ಟ್ ಎಂದು ಚೆಕ್ ಮಾಡಬಹುದು.

ಓದಿರಿ: ಮೊಬೈಲ್ ಮಾರುಕಟ್ಟೆಯಲ್ಲಿ ಈ ವಾರ ಹೆಚ್ಚು ಟ್ರೆಂಡ್ ಆಗಿರುವ 5 ಸ್ಮಾರ್ಟ್‌ಫೋನ್‌ಗಳು ಇವು!!

English summary
TRAI launches consumer portal to compare telecom tariffs across Airtel, Jio, Vodafone, Idea and others. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot