Subscribe to Gizbot

ಜಿಯೋಗಾಗಿ ಮತ್ತೊಂದು ನಿಯಮ ಜಾರಿಗೆ ತಂದ ಟ್ರಾಯ್..ಸಕ್ಕತ್ತಾಗಿದೆ ಇದು ಗ್ರಾಹಕರಿಗೆ!!

Written By:

ಟೆಲಿಕಾಂನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕೂಲಂಕುಶವಾಗಿ ಅವಲೋಕಿಸುತ್ತಿರುವ ಟ್ರಾಯ್ (ಭಾರತದ ದೂರಸಂಪರ್ಕ ನಿಯಂತ್ರಣ ಮಂಡಳಿ) ಫೋನ್ ಕರೆಯ ಗುಣಮಟ್ಟವನ್ನು ಮಾಪನ ಮಾಡುವ ಆಪ್ ಅಭಿವೃದ್ಧಿಪಡಿಸಲು ಮುಂದಾಗಿದೆ.! ಈ ಮೂಲಕ ಟೆಲಿಕಾಂನಲ್ಲಿದ್ದ ಕೆಲವು ಅನವಶ್ಯಕ ತೊಂದರೆಗಳನ್ನು ನಿವಾರಿಸಲು ಮುಂದಾಗಿದೆ.!!

ಈ ಹೊಸ ಆಪ್ ಮೂಲಕ ಜಿಯೋ ಮತ್ತು ಟೆಲಿಕಾಂ ಗ್ರಾಹಕರಿಗೆ ಹೆಚ್ಚು ಉಪಯೋಗವಾಗಲಿದ್ದು, ಇತರ ಟೆಲಿಕಾಂಗಳ ಆಟಕ್ಕೆ ಬ್ರೇಕ್ ಹಾಕಲಿದೆ.! ಹಾಗಾದರೆ, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಹೊಸದಾಗಿ ಬಿಡುಗಡೆ ಮಾಡಲಿರುವ ಆಪ್ ಯಾವುದು? ಇದರಿಂದ ಜಿಯೋಗೆ ಹೇಗೆ ಲಾಭ? ಇದರಿಂದ ಗ್ರಾಹಕರಿಗೆ ಏನು ಲಾಭ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಟ್ರಾಯ್‌ನ ಹೊಸ ಆಪ್?

ಏನಿದು ಟ್ರಾಯ್‌ನ ಹೊಸ ಆಪ್?

ಟೆಲಿಕಾಂ ಕಂಪೆನಿಗಳು ನೀಡುವ ಫೋನ್ ಕರೆಯ ಗುಣಮಟ್ಟನ್ನು ಈ ಆಪ್ ಮಾಪನ ಮಾಡಲಿದೆ ಒಂದು ವೇಳೆ ಗುಣಮಟ್ಟ ಕಳಪೆಯಾಗಿದ್ದಲ್ಲಿ ಸೇವಾ ಕಂಪೆನಿಗಳು ಬಳಕೆದಾರರಿಗೆ ಹಣ ವಾಪಸು ನೀಡುವಂತಹ ಕಾನೂನು ರಚಿಸುವ ಬಗ್ಗೆ ಚಿಂತನೆ ಪರಿಶೀಲನೆಯಲ್ಲಿ ಇದೆ ಎಂದು ‘ಟ್ರಾಯ್' ತಿಳಿಸಿದೆ.!!

ಇದರಿಂದ ಜಿಯೋಗೆ ಹೇಗೆ ಲಾಭ?

ಇದರಿಂದ ಜಿಯೋಗೆ ಹೇಗೆ ಲಾಭ?

ಜಿಯೋ ಟೆಲಿಕಾಂಗೆ ಬಂದಾಗಿನಿಂದಲೂ ಜಿಯೋ ಕಾಲ್‌ಡ್ರಾಪ್ ಸಮಸ್ಯೆಗಳನ್ನು ಅನುಭವಿಸುತ್ತಲೇ ಇದೆ. ಹಾಗಾಗಿ, ಟ್ರಾಯ್ ಹೊರತರುತ್ತಿರುವ ನೂತನ ಕಾನೂನಿನಿಂದಾಗಿ ಕಾಲ್‌ಡ್ರಾಪ್ ಸಮಸ್ಯೆ ಜಿಯೋಗೆ ತಟ್ಟುವುದಿಲ್ಲ. ಇದರಿಂದ ಜಿಯೋ ಸೇವೆ ಉತ್ತಮವಾಗಲಿದೆ.!!'

ಗ್ರಾಹಕರಿಗೆ ಏನು ಲಾಭ?

ಗ್ರಾಹಕರಿಗೆ ಏನು ಲಾಭ?

ಒಂದು ವೇಳೆ ಸೇವಾ ಕಂಪೆನಿಗಳ ಲಾಕ್ ಗುಣಮಟ್ಟ ಕಳಪೆಯಾಗಿದ್ದಲ್ಲಿ ಬಳಕೆದಾರರಿಗೆ ಹಣ ವಾಪಸು ನೀಡುವಂತಹ ಕಾನೂನು ರಚಿಸಲು ಮುಂದಾಗಿರುವುದು ಗ್ರಾಹಕರಿಗೂ ಹೆಚ್ಚಿನ ಲಾಭವಾಗುತ್ತದೆ. ಕಾಲ್‌ಡ್ರಾಪ್ ಮೂಲಕ ಜನರ ಸುಲಿಗೆ ಮಾಡುತ್ತಿದ್ದ ಕಂಪೆನಿಗಳಿಗನ್ನು ನಿಯಂತ್ರಣದಲ್ಲಿಡುತ್ತದೆ.!!

ಆಪ್ ಯಾವುದು?

ಆಪ್ ಯಾವುದು?

ಕರೆಯ ಗುಣಮಟ್ಟದ ಆಪ್ ವಿನ್ಯಾಸದ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲೇ ಈ ಆಪ್ ಬಿಡುಗಡೆಯಾಗಲಿದೆ ಎಂದು ಟ್ರಾಯ್ ಹೇಳಿದೆ. ಆದರೆ, ಆಪ್ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಟ್ರಾಯ್ ಬಿಡುಗಡೆ ಮಾಡಿಲ್ಲ. ಇನ್ನು ಜೂನ್ ತಿಂಗಳ ಮೊದಲಾರ್ಧದಲ್ಲಿ ಈ ಆಪ್ ಬಿಡುಗಡೆಯಾಗುತ್ತದೆ.!!

ಓದಿರಿ:ಜಿಯೋದಂತೆ ಅಮೆಜಾನ್ ಸಹ ಪ್ರೈಮ್ ಮೆಂಬರ್‌ಶಿಪ್ ನೀಡಿದೆ!..ಏನು ಆಫರ್!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
trai will introduce a mobile application to measure call quality and beef up the ‘do not disturb’ to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot