ವೇಟಿಂಗ್‌ ಲಿಸ್ಟ್ ರೈಲು ಟಿಕೆಟ್‌ ಕನ್ಫರ್ಮ್‌ ಆಗ್ಲಿಲ್ಲಾ ಅಂದ್ರೆ, ಉಚಿತ ವಿಮಾನ ಟಿಕೆಟ್ ಸಿಗುತ್ತೆ!

|

ದೂರದ ಪ್ರವಾಸ ಮಾಡುವ ಅನೇಕ ಪ್ರಯಾಣಿಕರು ರೈಲು ಪ್ರಯಾಣವನ್ನು ಇಷ್ಟಪಡುತ್ತಾರೆ. ಇನ್ನು ರೈಲು ಪ್ರಯಾಣ ಮಾಡುವ ಪ್ರಯಾಣಿಕರು ಟಿಕೆಟ್‌ ಕನ್ಫರ್ಮ್ ಗಾಗಿ ಮುಂಗಡವೇ ಬುಕ್ ಮಾಡಲು ಮುಂದಾಗುತ್ತಾರೆ. ಅದಾಗ್ಯೂ, ಕೆಲವೊಮ್ಮೆ ತುರ್ತು ಅಥವಾ ಅನಿರೀಕ್ಷಿತ ಪ್ರಯಾಣ ಮಾಡಬೇಕಾಗಿ ಬಂದಾಗ ಕೊನೆಯ ಕ್ಷಣದಲ್ಲಿ ಕನ್ಫರ್ಮ್ ಟಿಕೆಟ್‌ ಲಭ್ಯವಾಗುವ ಸಾಧ್ಯತೆ ತುಂಬಾ ವಿರಳ ಆಗಿರುತ್ತದೆ. ಚಿಂತೆ ಬಿಡಿ, ಇನ್ಮುಂದೆ ವೇಟಿಂಗ್‌ ಲಿಸ್ಟ್‌ ಟಿಕೆಟ್‌ ಕನ್ಫರ್ಮ್‌ ಆಗ್ಲಿಲ್ಲಾ ಅಂದ್ರೆ, ಉಚಿತ ವಿಮಾನ ಟಿಕೆಟ್ ಲಭ್ಯ!?

 ಟ್ರೈನ್‌ಮ್ಯಾನ್

ಹೌದು, ಸದ್ಯ ಟಿಕೆಟ್ ಬುಕಿಂಗ್ ಮಾಡಲು ಅನೇಕ ಅಪ್ಲಿಕೇಶನ್‌ಗಳು ಇದ್ದು, ಅವುಗಳಲ್ಲಿ ಕೆಲವು ಹೆಚ್ಚಿನ ಸೌಲಭ್ಯ ಒದಗಿಸುತ್ತಿವೆ. ಅನಿರೀಕ್ಷಿತ ಪ್ರಯಾಣ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲಕರ ಸೌಲಭ್ಯ ಹೊಂದಿವೆ. ಇದೇ ರೀತಿ ಜನಪ್ರಿಯ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಗಳಲ್ಲಿ ಒಂದಾದ ಟ್ರೈನ್‌ಮ್ಯಾನ್ (Trainman app) ವಿಶೇಷ ಫೀಚರ್‌ ಅನ್ನು ಪರಿಚಯಿಸಿದ್ದು, ಪ್ರಯಾಣಿಕರ ಗಮನ ಸೆಳೆದಿದೆ.

ರೈಲು ಟಿಕೆಟ್

ಟ್ರೈನ್‌ಮ್ಯಾನ್ (Trainman app) ಆಪ್ ಪ್ರಯಾಣಿಕರಿಗೆ ರೈಲು ಪ್ರಯಾಣಗಳನ್ನು ಖಾತರಿಪಡಿಸುತ್ತದೆ. ರೈಲು ಟಿಕೆಟ್ (confirm) ದೃಢೀಕರಿಸದಿದ್ದಲ್ಲಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಲು ಸಹಾಯ ಮಾಡಲು ಕಂಪನಿಯು ಉಚಿತ ವಿಮಾನ ಟಿಕೆಟ್‌ಗಳನ್ನು ವ್ಯವಸ್ಥೆಗೊಳಿಸುತ್ತದೆ.

ಟ್ರಿಪ್ ಅಶ್ಯೂರೆನ್ಸ್

ಟ್ರೈನ್‌ಮ್ಯಾನ್ ಅಪ್ಲಿಕೇಶನ್ 'ಟ್ರಿಪ್ ಅಶ್ಯೂರೆನ್ಸ್' (Trip Assurance) ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ನೂತನ ಹೊಸ ಫೀಚರ್ಸ್‌ ರೈಲು ಪ್ರಯಾಣಿಕರಿಗೆ, ವೈಟಿಂಗ್‌ ಲಿಸ್ಟ್‌ ಟಿಕೆಟ್‌ಗಳೊಂದಿಗೆ, ಅವರ ಪ್ರಯಾಣವನ್ನು ಪೂರ್ಣಗೊಳಿಸಲು ಖಾತರಿಯ ಮಾರ್ಗವನ್ನು ಖಚಿತಪಡಿಸುತ್ತದೆ. ಟ್ರೈನ್‌ಮ್ಯಾನ್ ಮೂಲಕ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಯಾರಾದರೂ ತಮ್ಮ ಟಿಕೆಟ್ ಸ್ಟೇಟಸ್‌ ಅನ್ನು ಅಪ್ಲಿಕೇಶನ್‌ನಲ್ಲಿಯೇ ಪರಿಶೀಲಿಸಲು ಸಾಧ್ಯವಾಗುತ್ತದೆ.

ಚಾರ್ಟ್ ತಯಾರಿಕೆ

ಒಂದು ವೇಳೆ ಪ್ರಯಾಣಿಕರು ದೃಢೀಕೃತ ಟಿಕೆಟ್ ಅನ್ನು ಪಡೆಯದಿದ್ದಲ್ಲಿ, ಟಿಕೆಟ್ ಕನ್ಫರ್ಮ್‌ ಸಾಧ್ಯತೆಗಳನ್ನು ತೋರಿಸುವ ಮುನ್ಸೂಚನೆ ಮೀಟರ್ ಅನ್ನು ಆಪ್‌ ಪ್ರದರ್ಶಿಸುತ್ತದೆ. ಚಾರ್ಟ್ ತಯಾರಿಕೆಯ ಮೊದಲು ಟಿಕೆಟ್‌ ಕನ್ಫರ್ಮ್‌ ಆಗದಿದ್ದಲ್ಲಿ, ಟ್ರಿಪ್ ಅಶ್ಯೂರೆನ್ಸ್ (Trip Assurance) ಸೇವೆಯು ಪ್ರಯಾಣಿಕರಿಗೆ ಕೊನೆಯ ನಿಮಿಷದ ಪರ್ಯಾಯ ಪ್ರಯಾಣದ ಆಯ್ಕೆಗಳನ್ನು ಹುಡುಕಲು ಮತ್ತು ಕಾಯ್ದಿರಿಸಲು ನೆರವಾಗುತ್ತದೆ.

ಪ್ರಯಾಣಿಕರ

ಪ್ರಯಾಣಿಕರ ಟಿಕೆಟ್ ಮುನ್ಸೂಚನಾ ಮೀಟರ್ (meter indicates) ಶೇಕಡಾ 90% ಅಥವಾ ಅದಕ್ಕಿಂತ ಹೆಚ್ಚಿನದನ್ನು ಸೂಚಿಸಿದರೆ, ಅಪ್ಲಿಕೇಶನ್ ಟ್ರಿಪ್ ಅಶ್ಯೂರೆನ್ಸ್ ಶುಲ್ಕ 1 ರೂ. ಅನ್ನು ವಿಧಿಸುತ್ತದೆ. ಶೇಕಡಾವಾರು 90% ಕ್ಕಿಂತ ಕಡಿಮೆಯಿದ್ದರೆ, ಸಂಸ್ಥೆಯು ಟಿಕೆಟ್‌ನ ವರ್ಗವನ್ನು ಅವಲಂಬಿಸಿ ಕಡಿಮೆ ಶುಲ್ಕವನ್ನು ವಿಧಿಸುತ್ತದೆ.

ಪ್ರಯಾಣವನ್ನು

ಹಾಗೆಯೇ ಚಾರ್ಟ್ ಸಿದ್ಧಪಡಿಸುವ ಸಮಯದಲ್ಲಿ ರೈಲು ಟಿಕೆಟ್ ದೃಢೀಕರಿಸಲ್ಪಟ್ಟರೆ ಟ್ರಿಪ್ ಅಶ್ಯೂರೆನ್ಸ್ ಶುಲ್ಕವನ್ನು ಗ್ರಾಹಕರಿಗೆ ಮರುಪಾವತಿಸಲಾಗುತ್ತದೆ. ಆದಾಗ್ಯೂ, ಟಿಕೆಟ್ ದೃಢೀಕರಿಸದಿದ್ದರೆ, ಪ್ರಯಾಣವನ್ನು ಪೂರ್ಣಗೊಳಿಸಲು ಟ್ರೈನ್‌ಮ್ಯಾನ್ ಪ್ರಯಾಣಿಕರಿಗೆ ಉಚಿತ ವಿಮಾನ ಟಿಕೆಟ್ ಅನ್ನು ಒದಗಿಸುತ್ತದೆ.

ಮಶಿನ್‌ ಲರ್ನಿಂಗ್

ಸಂಸ್ಥೆಯ ಪ್ರಕಾರ, ಟ್ರೈನ್‌ಮ್ಯಾನ್ ಆಪ್‌ ಮಶಿನ್‌ ಲರ್ನಿಂಗ್ ನಂತಹ (machine learning) ಹೊಸ ತಂತ್ರಜ್ಞಾನವನ್ನು ಬಳಸುತ್ತದೆ. IRCTC ಯ ಅಧಿಕೃತ ಪಾಲುದಾರ. IRCTC ಪ್ರಯಾಣಿಕರಿಗೆ ತೊಂದರೆ-ಮುಕ್ತ ಪ್ರಯಾಣದ ಅನುಭವವನ್ನು ಒದಗಿಸಲು ಟ್ರಿಪ್ ಅಶ್ಯೂರೆನ್ಸ್ (Trip Assurance service) ಸೇವೆಯನ್ನು ಅಭಿವೃದ್ಧಿಪಡಿಸಲಾಗಿದೆ.

ವೇಟಿಂಗ್ ಲಿಸ್ಟ್‌

ವೇಟಿಂಗ್ ಲಿಸ್ಟ್‌ ಮಾಡಿದ ಟಿಕೆಟ್‌ಗಳನ್ನು ದೃಢೀಕರಿಸಿದ ಟಿಕೆಟ್‌ಗಳಾಗಿ ಪರಿವರ್ತಿಸಲು ತಮ್ಮ ರೈಲು ಭವಿಷ್ಯ ಮಾದರಿಯು ಶೇಕಡಾ 94 ರಷ್ಟು ನಿಖರತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಆದರೆ ಟಿಕೆಟ್ ದೃಢೀಕರಿಸದಿದ್ದಲ್ಲಿ, ಕಂಪನಿಯು ಉಚಿತ ವಿಮಾನ ಟಿಕೆಟ್ ನೀಡುತ್ತದೆ ಎಂದು ಹೇಳಿದೆ. ಆದಾಗ್ಯೂ, 'ಟ್ರಿಪ್ ಅಶ್ಯೂರೆನ್ಸ್' ಸೌಲಭ್ಯವು ವಿಮಾನ ನಿಲ್ದಾಣಗಳನ್ನು ಹೊಂದಿರುವ ನಗರಗಳಿಗೆ ಮಾತ್ರ ಅನ್ವಯಿಸುತ್ತದೆ.

ವಿಮಾನ

'ರೈಲು ಟಿಕೆಟ್ ದೃಢೀಕರಿಸದಿದ್ದಲ್ಲಿ, ನಾವು 'ಟ್ರಿಪ್ ಅಶ್ಯೂರೆನ್ಸ್' ಅಡಿಯಲ್ಲಿ ಫ್ಲೈಟ್ ಟಿಕೆಟ್ ಅನ್ನು ಒದಗಿಸುತ್ತೇವೆ, ಆದರೆ ಇದು ವಿಮಾನ ನಿಲ್ದಾಣಗಳನ್ನು ಹೊಂದಿರುವ ನಗರಗಳಿಗೆ ಮಾತ್ರ ಅನ್ವಯಿಸುತ್ತದೆ. ಒಟ್ಟಾರೆಯಾಗಿ, ನಮ್ಮ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸಲು ನಾವು ನಿರಂತರವಾಗಿ ತೊಡಗಿಸಿಕೊಂಡಿದ್ದೇವೆ. ಭಾರತದಲ್ಲಿ ರೈಲು ಪ್ರಯಾಣಿಕರಿಗೆ ತಡೆರಹಿತ ರೈಲು ಪ್ರಯಾಣದ ಅನುಭವ' ಎಂದು ಟ್ರೈನ್‌ಮ್ಯಾನ್‌ನ ಸಂಸ್ಥಾಪಕ ಮತ್ತು ಸಿಇಒ ವಿನೀತ್ ಚಿರಾನಿಯಾ ಹೇಳಿದ್ದಾರೆ.

Best Mobiles in India

English summary
Trainman app offers free flight ticket if your waitlist train ticket does not get confirmed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X