ಟ್ರೂಕಾಲರ್‌ನಲ್ಲಿ ಅಸಿಸ್ಟೆಂಟ್‌ ಫೀಚರ್ಸ್‌ ಬಳಸುವುದು ಹೇಗೆ?...ಇಲ್ಲಿದೆ ವಿವರ!

|

ಟ್ರೂ ಕಾಲರ್‌ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದ್ದು, ಈ ಆಪ್‌ನಿಂದ ನಕಲಿ ಹಾಗೂ ಮೋಸದ ಕರೆಗಳನ್ನು ಪತ್ತೆ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಯಾವುದೇ ಗುರುತಿಲ್ಲದ ಕರೆ ಬಂದರೆ ಅವರ ಮಾಹಿತಿಯನ್ನು ನಿಖರವಾಗಿ ತಿಳಿಸುವ ಜೊತೆಗೆ ಫ್ಲ್ಯಾಶ್-ಮೆಸೇಜಿಂಗ್, ಕಾಲ್ ರೆಕಾರ್ಡಿಂಗ್ ಸೇರಿದಂತೆ ಇನ್ನಿತರೆ ಫೀಚರ್ಸ್‌ ಪಡೆದಿದೆ. ಇದರ ನಡುವೆ ಇತ್ತೀಚೆಗೆ 'ಅಸಿಸ್ಟೆಂಟ್‌' ಸೇವೆಯನ್ನು ಟ್ರೂ ಕಾಲರ್ ಗ್ರಾಹಕರಿಗೆ ಪರಿಚಯಿಸಿದೆ.

ಸ್ಪ್ಯಾಮ್

ಹೌದು, ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವ ಆತುರದಲ್ಲಿ ಹಲವು ಬಳಕೆದಾರರು ಸಾಮಾನ್ಯವಾಗಿ ಎಲ್ಲಾ ಅನಾಮಿಕ ಕರೆಗಳನ್ನೂ ನಿರ್ಲಕ್ಷಿಸುತ್ತಾರೆ. ಈ ಅನಾಮಿಕ ಕರೆಯಲ್ಲಿ ಕೆಲಸದಾತರರು ಇರಬಹುದು, ನಿಮ್ಮ ಆತ್ಮೀಯರೂ ಇರಬಹುದು. ಇದನ್ನು ತಪ್ಪಿಸುವ ಸಲುವಾಗಿಯೇ ಕಾಲರ್‌ ಐಡಿ ಹಾಗೂ ಸ್ಪ್ಯಾಮ್‌ ಬ್ಲಾಕಿಂಗ್‌ ಆಯ್ಕೆಯನ್ನು ನೀಡಲಾಗಿತ್ತು. ಈಗ ಟ್ರೂ ಕಾಲರ್ ಅಸಿಸ್ಟೆಂಟ್ ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲಾಗಿದ್ದು, ಈ ಅಸಿಸ್ಟೆಂಟ್‌ ಆಯ್ಕೆಯು ನಿಮ್ಮ ಪರವಾಗಿ ಮಾತನಾಡುತ್ತದೆ.

ಆಂಡ್ರಾಯ್ಡ್‌

ಈ ಫೀಚರ್ಸ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ನಲ್ಲಿ ಲಭ್ಯವಿರಲಿದ್ದು, ಅದರಲ್ಲೂ ಪ್ರೀಮಿಯಂ ಬಳಕೆದಾರರು ಮಾತ್ರ ಇದರ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಆರಂಭಿಕವಾಗಿ ಯುಎಸ್‌ ನಲ್ಲಿ ಮಾತ್ರ ಲಭ್ಯವಿದ್ದು, ನಿಮಗೂ ಈ ಸೌಲಭ್ಯ ಬೇಕೆಂದರೆ ಟ್ರೂಕಾಲರ್‌ನ ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ಮನವಿ ಸಲ್ಲಿಸಿ ಫೀಚರ್ಸ್‌ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಟ್ರೂ ಕಾಲರ್ ಅಸಿಸ್ಟೆಂಟ್ ಅನ್ನು ಸಕ್ರಿಯಗೊಳಿಸಿದ ತಕ್ಷಣ ನಿಮ್ಮ ಮೊಬೈಲ್‌ನಲ್ಲಿ ಇರುವ ಕಾಲರ್ ಐಡಿಯಲ್ಲಿ ಇದು ಕಾಣಿಸಿಕೊಳ್ಳುತ್ತದೆ.

ಏನಿದು ಅಸಿಸ್ಟೆಂಟ್ ?

ಏನಿದು ಅಸಿಸ್ಟೆಂಟ್ ?

ಈ ನೂತನ ಫೀಚರ್ಸ್‌ ಮೂಲಕ ನೀವು ಯಾವುದೇ ಪ್ರಮುಖ ಕರೆಗಳನ್ನು ಎಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ. ಈ ಅಸಿಸ್ಟೆಂಟ್‌ ಫೀಚರ್ಸ್‌ ನಿಮ್ಮ ಅನುಮತಿ ಪಡೆದುಕೊಂಡು ಕರೆ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತದೆ. ಈ ಕೆಲಸಕ್ಕಾಗಿ ಟ್ರೂ ಕಾಲರ್‌ ಅಸಿಸ್ಟೆಂಟ್ ಮೆಷಿನ್‌ ಲರ್ನಿಂಗ್‌ ಹಾಗೂ ಜನರೇಟಸ್‌ ರಿಪ್ಲೈ ಫೀಚರ್ಸ್‌ಗಳನ್ನು ಬಳಕೆ ಮಾಡಿಕೊಳ್ಳಲಿದೆ.

ಹೇಗೆ ಕೆಲಸ ಮಾಡಲಿದೆ?

ಹೇಗೆ ಕೆಲಸ ಮಾಡಲಿದೆ?

ನಿಮ್ಮ ಸ್ಮಾರ್ಟ್‌ ಫೋನ್‌ಗೆ ಬಂದ ಕರೆಯನ್ನು ನಿರಾಕರಿಸಿದರೆ ಅಥವಾ ಉತ್ತರಿಸದಿದ್ದರೆ ಅದನ್ನು ಅಸಿಸ್ಟೆಂಟ್‌ಗೆ ವಹಿಸಬಹುದು. ನಂತರ ಅಸಿಸ್ಟೆಂಟ್‌ ಆ ಕರೆಯ ಉದ್ದೇಶ ಹಾಗೂ ಯಾರು ಕರೆ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ತಾನೇ ಕಲೆ ಹಾಕುತ್ತದೆ. ಇದಿಷ್ಟೇ ಅಲ್ಲದೆ, ಲೈವ್‌ ಸ್ಕ್ರೀನಿಂಗ್‌ ಮೂಲಕ ಅವರ ಬಳಿ ಪ್ರಶ್ನೆಗಳನ್ನು ಹಾಕುತ್ತದೆ. ನಂತರ ಈ ಮಾಹಿತಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡಿಸ್‌ಪ್ಲೇ ಆಗುತ್ತದೆ. ಪರಿಣಾಮ ನಿಮ್ಮ ಸ್ಮಾರ್ಟ್‌ಫೋನ್‌ಗೆ ಕರೆ ಮಾಡಿದ್ದವರು ಯಾರು?, ಯಾವ ಕಾರಣಕ್ಕೆ ಕರೆ ಮಾಡಿದ್ದರು ಎಂಬ ನಿಖರ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಿವ್‌ ಮಾಡುವುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಟಿವ್‌ ಮಾಡುವುದು ಹೇಗೆ?

ಹಂತ 1 : ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪಲ್‌ ಆಪ್‌ ಸ್ಟೋರ್‌ಗೆ ಹೋಗಿ ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು ಪ್ರೊಫೈಲ್ ರಚಿಸಿ.

ಹಂತ 2 : ನಂತರ, ಹೋಮ್ ಸ್ಕ್ರೀನ್ ಟ್ಯಾಬ್‌ನಲ್ಲಿ ಕಾಣುವ ಅಸಿಸ್ಟೆಂಟ್ ಟ್ಯಾಬ್‌ ಮೇಲೆ ಟ್ಯಾಪ್ ಮಾಡಿ.

ಹಂತ 3 : ಇದಾದ ಬಳಿಕ, ಯಾವ ರೀತಿಯ ಪ್ರಶ್ನೆಗಳನ್ನು ಕರೆ ಮಾಡಿದವರ ಬಳಿ ಕೇಳಬೇಕು ಎಂಬುದನ್ನು ಸೆಲೆಕ್ಟ್‌ ಮಾಡಿಕೊಳ್ಳಿ(ಇದರಲ್ಲಿ ಹಲವು ಆಯ್ಕೆಗಳಿವೆ) ನಂತರ ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 4: ನಂತರದಲ್ಲಿ, ನಿಮಗೆ ಬರುವ ಕರೆಗಳ ಕಾಲರ್‌ ಐಡಿ ಕೆಳಗೆ ಇದು ಕಾಣಿಸಿಕೊಳ್ಳುತ್ತದೆ. ಆ ಕರೆಯನ್ನು ಸ್ವೀಕರಿಸಲು ಇಷ್ಟ ಇಲ್ಲದಿದ್ದರೆ 'ಲೆಟ್ ಅಸಿಸ್ಟೆಂಟ್ ಟೇಕ್ ದಿ ಕಾಲ್' ಆಯ್ಕೆ ಮೇಲೆ ಟ್ಯಾಪ್‌ ಮಾಡಿ ಬಿಡಿ.

ಹಂತ 5: ಅಸಿಸ್ಟೆಂಟ್‌ ಫೀಚರ್ಸ್‌ ನಿಮಗೆ ಕರೆ ಮಾಡಿದವರ ಬಳಿ ಮಾತನಾಡಿ ನಂತರ ನಿಮಗೆ ಯಾರು ಕರೆ ಮಾಡಿದ್ದರು ಯಾವ ಕಾರಣಕ್ಕೆ ಕರೆ ಮಾಡಿದ್ದರು ಎನ್ನುವುದನ್ನು ತಿಳಿಸುತ್ತದೆ.

Best Mobiles in India

English summary
True Caller is currently one of the most popular apps. In between now Truecaller has introduced assistant features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X