ನಿಮ್ಮ ಸ್ಮಾರ್ಟ್‌ಫೋನ್‌ ಇನ್ನಷ್ಟು ಸೆಕ್ಯೂರ್‌; ಟ್ರೂಕಾಲರ್‌ನಲ್ಲಿ ಹೊಸ ಫೀಚರ್ಸ್‌!

|

ಈಗಂತೂ ನಕಲಿ ಕರೆಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಯಾವುದೇ ಅನಾಮಿಕ ಕರೆ ಬಂದರೂ ತಕ್ಷಣಕ್ಕೆ ಅದನ್ನು ಸ್ವೀಕರಿಸದೆ ಟ್ರೂಕಾಲರ್‌ನಲ್ಲಿ ಹೆಸರು ಕಂಡುಬಂದ ನಂತರವಷ್ಟೇ ಕರೆ ಸ್ವೀಕಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಯಾಕೆಂದರೆ ಫೋನ್ ಕರೆ ಮೂಲಕವೇ ಗ್ರಾಹಕರನ್ನು ವಂಚಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದರಿಂದ ಬಚಾವ್‌ ಆಗಲು ಟ್ರೂಕಾಲರ್‌ ಬಹಳ ಪ್ರಯೋಜನಕಾರಿ. ಇದರ ನಡುವೆ ಈ ಆಪ್‌ನಲ್ಲಿ ಹೊಸದೊಂದು ಫೀಚರ್ಸ್‌ ಪರಿಚಯಿಸಲಾಗಿದೆ.

ಅನಾಮಿಕ

ಹೌದು, ಅನಾಮಿಕ ಕರೆಗಳ ಗುರುತನ್ನು ತಕ್ಷಣವೇ ತಿಳಿಸುವ ಈ ಆಪ್‌ನಲ್ಲಿ ಆಗಾಗ್ಗೆ ಹೊಸ ರೀತಿಯ ಫೀಚರ್ಸ್‌ಗಳು ಬಳಕೆದಾರರಿಗೆ ಲಭ್ಯವಾಗುತ್ತಲೇ ಇವೆ. ಇದರ ಬೆನ್ನಲ್ಲೇ ಈಗ ಹೊಸ ಫ್ಯಾಮಿಲಿ ಪ್ಲ್ಯಾನ್‌ ಒಂದನ್ನು ಘೋಷಣೆ ಮಾಡಿದೆ. ಈ ಪ್ಲ್ಯಾನ್‌ ಮೂಲಕ ಇಡೀ ಕುಟುಂಬ ಸ್ಪ್ಯಾಮ್ ಕರೆಗಳಿಂದ ಮುಕ್ತವಾಗಲಿದೆ. ಹಾಗಿದ್ರೆ ಈ ಹೊಸ ಫೀಚರ್ಸ್‌ ಯಾವೆಲ್ಲಾ ಬಳಕೆದಾರರಿಗೆ ಲಭ್ಯ, ಯಾವ ರೀತಿ ಕೆಲಸ ಮಾಡಲಿದೆ ಎಂಬ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ಟ್ರೂಕಾಲರ್‌ ಪ್ರೀಮಿಯಂ ಕನೆಕ್ಟ್‌

ಟ್ರೂಕಾಲರ್‌ ಪ್ರೀಮಿಯಂ ಕನೆಕ್ಟ್‌

ಟ್ರೂಕಾಲರ್‌ ಪ್ರೀಮಿಯಂ ಕನೆಕ್ಟ್‌ ಎಂಬ ಯೋಜನೆಯಲ್ಲಿ ಟ್ರೂಕಾಲರ್‌ ತನ್ನ ಪ್ರೀಮಿಯಂ ಬಳಕೆದಾರರಿಗೆ ಹೊಸದಾಗಿ ಈ ಫ್ಯಾಮಿಲಿ ಪ್ಲ್ಯಾನ್‌ ಘೋಷಣೆ ಮಾಡಿದ್ದು, ಇದು ಕುಟುಂಬದ ಇತರೆ ನಾಲ್ಕು ಸದಸ್ಯರ ಖಾತೆಗಳನ್ನು ಆಡ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಬಳಕೆದಾರರು ಸ್ಪ್ಯಾಮ್‌ನಿಂದ ರಕ್ಷಣೆ ಪಡೆಯಬಹುದಾಗಿದೆ. ಈ ಅಡ್ವಾನ್ಸಡ್‌ ಫೀಚರ್ಸ್‌ ಗ್ರಾಹಕರಿಗೆ ಭಿನ್ನ ಅನುಭವ ನೀಡಲಿದೆ.

ಟ್ರೂಕಾಲರ್‌ ಪ್ರೀಮಿಯಂನಿಂದಾಗುವ ಪ್ರಯೋಜನ

ಟ್ರೂಕಾಲರ್‌ ಪ್ರೀಮಿಯಂನಿಂದಾಗುವ ಪ್ರಯೋಜನ

ಈಗಾಗಲೇ ತಿಳಿದಿರುವಂತೆ ಟ್ರೂಕಾಲರ್‌ ಪ್ರೀಮಿಯಂ ಆಯ್ಕೆ ಹೊಂದಿರುವ ಗ್ರಾಹಕರು ಬಹು ಪ್ರಯೋಜನ ಪಡೆಯಲಿದ್ದಾರೆ. ಇದರಲ್ಲಿ ಅವರು ಯಾವುದೇ ಜಾಹೀರಾತುಗಳನ್ನು ವೀಕ್ಷಿಸುವುದಿಲ್ಲ, ಪ್ರೊಫೈಲ್ ಅನ್ನು ಯಾರು ವೀಕ್ಷಿಸಿದ್ದಾರೆ ಎಂಬುದನ್ನು ತಿಳಿಯಬಹುದು, ಸುಧಾರಿತ ಸ್ಪ್ಯಾಮ್ ನಿರ್ಬಂಧದ ಆಯ್ಕೆ, ಅನಿಯಮಿತ ಸಂಪರ್ಕ ವಿನಂತಿಗಳು, ಅಜ್ಞಾತ ಮೋಡ್, ಘೋಸ್ಟ್ ಕರೆ ಆಯ್ಕೆ ಸೇರಿದಂತೆ ಇನ್ನೂ ಹೆಚ್ಚಿನ ಫೀಚರ್ಸ್‌ ಇದರಲ್ಲಿದೆ. ಇದರ ನಡುವೆ ಈಗ ಟ್ರೂಕಾಲರ್ ಪ್ರೀಮಿಯಂ ಬಳಕೆದಾರರು ನಾಲ್ಕು ಜನರನ್ನು ತಮ್ಮ ಕುಟುಂಬವಾಗಿ ಆಯ್ಕೆ ಮಾಡಿಕೊಳ್ಳಬಹುದಾದ ಸೌಲಭ್ಯ ಕಲ್ಪಿಸಲಾಗಿದ್ದು, ಒಂದೇ ಚಂದಾದಾರಿಕೆಯಲ್ಲಿ ಪ್ರೀಮಿಯಂನ ಪರ್ಕ್‌ಗಳನ್ನು ಆನಂದಿಸಬಹುದಾಗಿದೆ. ಇದಕ್ಕಾಗಿ ಹೆಚ್ಚಿನ ದರ ಸಹ ವಿಧಿಸದಿರುವುದು ವಿಶೇಷ.

ಟ್ರೂಕಾಲರ್ ಪ್ರೀಮಿಯಂ ಕನೆಕ್ಟ್ ಯಾವ ಡಿವೈಸ್‌ಗೆ ಲಭ್ಯ ?

ಟ್ರೂಕಾಲರ್ ಪ್ರೀಮಿಯಂ ಕನೆಕ್ಟ್ ಯಾವ ಡಿವೈಸ್‌ಗೆ ಲಭ್ಯ ?

ಈ ಹೊಸ ಟ್ರೂಕಾಲರ್ ಪ್ರೀಮಿಯಂ ಕನೆಕ್ಟ್‌ನ ಫ್ಯಾಮಿಲಿ ಪ್ಲ್ಯಾನ್‌ ಸದ್ಯಕ್ಕೆ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆದರೂ ಈ ಆಂಡ್ರಾಯ್ಡ್‌ ಪ್ರೀಮಿಯಂ ಬಳಕೆದಾರರು ಐಓಎಸ್ ಬಳಕೆದಾರರನ್ನು ಈ ಫ್ಯಾಮಿಲಿ ಪ್ಲ್ಯಾನ್‌ಗೆ ಆಡ್‌ ಮಾಡಿಕೊಳ್ಳಬಹುದಾಗಿದೆ. ಈ ಹೊಸ ಪ್ಲ್ಯಾನ್‌ ಯುನೈಟೆಡ್ ಸ್ಟೇಟ್ಸ್ ಹೊರತುಪಡಿಸಿ ಜಗತ್ತಿನಾದ್ಯಂತ ಲಭ್ಯವಿದೆ.

ಈ ಪ್ಲ್ಯಾನ್‌ನ ಪ್ರಸ್ತುತ ದರ ಎಷ್ಟು?

ಈ ಪ್ಲ್ಯಾನ್‌ನ ಪ್ರಸ್ತುತ ದರ ಎಷ್ಟು?

ಪ್ರಸ್ತುತ ತನ್ನ ಬಳಕೆದಾರರಿಗೆ ಎರಡು ರೀತಿಯ ಚಂದಾದಾರಿಕೆ ಸೇವೆ ನೀಡುತ್ತಿದೆ. ಅದರಲ್ಲಿ ಪ್ರೀಮಿಯಂ ಕನೆಕ್ಟ್ ಪ್ಲ್ಯಾನ್‌ಗೆ 549 ರೂ. ಗಳ ವಾರ್ಷಿಕ ಬೆಲೆ ನಿಗದಿ ಮಾಡಲಾಗಿದೆ. ಹಾಗೆಯೇ 4,999 ರೂ. ಗಳ ಮತ್ತೊಂದು ಪ್ರೀಮಿಯಂ ಗೋಲ್ಡ್ ವಾರ್ಷಿಕ ಯೋಜನೆಯನ್ನು ಸಹ ಗ್ರಾಹಕರಿಗೆ ನೀಡುತ್ತಿದೆ.

ಡಿಜಿಟಲ್ ಡೈರೆಕ್ಟರಿ

ಡಿಜಿಟಲ್ ಡೈರೆಕ್ಟರಿ

ಟ್ರೂಕಾಲರ್‌ ಇತ್ತೀಚೆಗಷ್ಟೇ ಭಾರತ ಸರ್ಕಾರಕ್ಕಾಗಿ ಡಿಜಿಟಲ್ ಡೈರೆಕ್ಟರಿಯನ್ನು ಪ್ರಾರಂಭಿಸಿದೆ. ಈ ಫೀಚರ್ಸ್‌ ಆಪಲ್‌ ಹಾಗೂ ಆಂಡ್ರಾಯ್ಡ್‌ ಡಿವೈಸ್‌ ಬಳಕೆದಾರರಿಗೆ ಲಭ್ಯವಾಗಲಿದ್ದು, ಈ ಡಿಜಿಟಲ್ ಡೈರೆಕ್ಟರಿ ಫೀಚರ್ಸ್‌ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೇವೆಗಳು, ರಾಯಭಾರ ಕಚೇರಿಗಳು, ಪೊಲೀಸ್ ಇಲಾಖೆಗಳು, ಆಸ್ಪತ್ರೆಗಳು ಮತ್ತು ಹೆಚ್ಚಿನವುಗಳ ಸಾರ್ವಜನಿಕ ಸಹಾಯವಾಣಿಗಳನ್ನು ಒದಗಿಸುತ್ತದೆ. ಸದ್ಯಕ್ಕೆ ಪ್ರಸ್ತುತ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿದ್ದು, ಈ ಸೇವೆಗೆ ಯಾವುದೇ ಚಂದಾದಾರಿಕೆ ಪಾವತಿ ಮಾಡಬೇಕಿಲ್ಲ.

ಟ್ರೂಕಾಲರ್

ಇದರ ನಡುವೆ ಈ ವರ್ಷದ ಆರಂಭದಲ್ಲಿ ಟ್ರೂಕಾಲರ್ ಹೊಸ ತುರ್ತು ಮೆಸೆಜ್‌ ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಇದು ಕಸ್ಟಮ್ ಅಧಿಸೂಚನೆಯೊಂದಿಗೆ ಸೂಕ್ಷ್ಮ ಮೆಸೆಜ್‌ಗಳನ್ನು ಕಳುಹಿಸಲು ಸಹಕಾರಿಯಾಗಿದೆ. ಸ್ವೀಕರಿಸುವವರ ಗಮನವನ್ನು ಸೆಳೆಯಲು ವಿಶೇಷ ಫೀಚರ್ಸ್‌ ಹೊಂದಿದ್ದು, ಸ್ವೀಕರಿಸುವವರು ಆ ಮೆಸೆಜ್‌ ಅನ್ನು ಓದುವವರೆಗೆ ಅದು ಕಣ್ಮರೆಯಾಗುವುದಿಲ್ಲ. ಅಲ್ಲಿಯವರೆಗೂ ಅದು ಪಾಪ್ ಅಪ್ ಆಗುತ್ತಲೇ ಇರುತ್ತದೆ.

Best Mobiles in India

English summary
Truecaller launches a family plan for subscriptions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X