ಸರ್ಕಾರ- ನಾಗರಿಕರಿಗೆ'ಸಂಪರ್ಕ' ಬೆಳೆಸಿದ ಟ್ರೂಕಾಲರ್‌; ಏನಿದು ಡಿಜಿಟಲ್ ಸರ್ಕಾರಿ ಡೈರೆಕ್ಟರಿ?

|

ಟ್ರೂಕಾಲರ್ ಸ್ಮಾರ್ಟ್‌ಫೋನ್ ಆಪ್‌ ಆಗಿದ್ದು, ಕರೆ ಮಾಡುವವರ ಬಗ್ಗೆ ಮಾಹಿತಿ ನೀಡುತ್ತದೆ. ಹಾಗೆಯೇ ಕರೆ ನಿರ್ಬಂಧಿಸುವ ಆಯ್ಕೆ, ಫ್ಲ್ಯಾಶ್‌-ಮೆಸೇಜಿಂಗ್, ಕಾಲ್‌ ರೆಕಾರ್ಡಿಂಗ್, ಚಾಟ್ ಆಯ್ಕೆ ಇದರಲ್ಲಿದೆ. ಇನ್ನು ಈ ಆಪ್‌ ಬಳಕೆದಾರರ ಡೇಟಾ ಗೌಪ್ಯತೆ ವಿರುದ್ಧ ನಡೆದುಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಈಗ ಭಾರತೀಯರು ಸಂತಸಪಡುವ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಟ್ರೂಕಾಲರ್‌

ಹೌದು, ಭಾರತೀಯರಿಗೆ ಟ್ರೂಕಾಲರ್‌ ಹೊಸ ಫೀಚರ್ಸ್‌ ಪರಿಚಯಿಸಿದ್ದು, ಇನ್ಮುಂದೆ ಸರ್ಕಾರಿ ಅಧಿಕಾರಿಗಳ ಮೊಬೈಲ್‌ ಸಂಖ್ಯೆಗೆ ಕಷ್ಟ ಪಡಬೇಕಿಲ್ಲ. ಈ ಮೂಲಕ ಬಳಕೆದಾರರು ಸುಲಭವಾಗಿ ಯಾವ ಸಮಸ್ಯೆಯನ್ನು ಯಾವ ಅಧಿಕಾರಿಗೆ ತಿಳಿಸಬೇಕು ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬುದಾಗಿದೆ. ಹಾಗಿದ್ರೆ ಟ್ರೂಕಾಲರ್‌ನ ಈ ಹೊಸ ಫೀಚರ್ಸ್ ಏನು? ಹೇಗೆಲ್ಲಾ ಕೆಲಸ ಮಾಡಲಿದೆ ಎಂಬ ವಿವರವನ್ನು ನಾವಿಲ್ಲಿ ತಿಳಿಸಿದ್ದೇವೆ ಓದಿರಿ.

ಭಾರತೀಯರು ಹಾಗೂ ಸರ್ಕಾರಕ್ಕೂ ಕೊಂಡಿ

ಭಾರತೀಯರು ಹಾಗೂ ಸರ್ಕಾರಕ್ಕೂ ಕೊಂಡಿ

ಟ್ರೂಕಾಲರ್‌ ಆಪ್‌ ಭಾರತದ ಪ್ರಜೆಗಳು ಹಾಗೂ ಸರ್ಕಾರಕ್ಕೂ ಸಂಬಂಧ ಬೆಸೆಯುವ ಕೆಲಸ ಮಾಡಿದೆ. ಅದರಂತೆ ಇನ್ಮುಂದೆ ಬಳಕೆದಾರರು ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಲು ತುಂಬಾ ಸುಲಭವಾದ ವಿಧಾನ ಸಿಕ್ಕಂತಾಗಿದೆ. ನಾಗರಿಕರು ಸರ್ಕಾರದೊಂದಿಗೆ ಬೇಕೆಂದಾಗ ಸಂಪರ್ಕಿಸಲು ಆಪ್‌ನಲ್ಲಿ ಡಿಜಿಟಲ್ ಸರ್ಕಾರಿ ಡೈರೆಕ್ಟರಿಯನ್ನು ಆರಂಭಿಸುವುದಾಗಿ ತಿಳಿಸಿದೆ.

ಮೋಸಹೋಗುವ ಅಗತ್ಯವಿಲ್ಲ!

ಮೋಸಹೋಗುವ ಅಗತ್ಯವಿಲ್ಲ!

ಈ ಹೊಸ ಫೀಚರ್ಸ್ ನಿಂದ ಜನರು ಸರಿಯಾದ ಸರ್ಕಾರಿ ಸಂಖ್ಯೆಗಳನ್ನು ಒಂದೇ ಪ್ಲಾಟ್‌ಫಾರ್ಮ್‌ ನಲ್ಲಿ ಅದೂ ಸಹ ಕೆಲವೇ ಸೆಕೆಂಡುಗಳಲ್ಲಿ ಪತ್ತೆ ಮಾಡಿ ಕರೆ ಮಾಡಬಹುದಾಗಿದೆ. ಈ ಮೂಲಕ ಯಾರ್ಯಾರೋ ನಕಲಿ ಅಧಿಕಾರಿಗಳಿಗೆ ಕರೆ ಮಾಡಿ ಮೋಸ ಹೋಗುವುದು ತಪ್ಪಿದಂತಾಗುತ್ತದೆ. ಜೊತೆಗೆ ಈ ಆಪ್‌ನ ಹೊಸ ವಿಭಾಗದಲ್ಲಿ ಸರ್ಕಾರಿ ಅಧಿಕಾರಿಗಳ ಸಾವಿರಾರು ಪರಿಶೀಲಿಸಿದ ಸಂಪರ್ಕಗಳನ್ನು ಒದಗಿಸಲಾಗುತ್ತದೆ.

ಡಿಜಿಟಲ್ ಸರ್ಕಾರಿ ಡೈರೆಕ್ಟರಿ

ಡಿಜಿಟಲ್ ಸರ್ಕಾರಿ ಡೈರೆಕ್ಟರಿ

ಟ್ರೂಕಾಲರ್ ಈ ಫೀಚರ್ಸ್‌ಗೆ ಡಿಜಿಟಲ್ ಸರ್ಕಾರಿ ಡೈರೆಕ್ಟರಿ ಎಂದು ಹೆಸರಿಸಿದ್ದು, ಸರ್ಕಾರಿ ಅಧಿಕಾರಿಗಳ ಹಾಗೆ ಸೋಗು ಹಾಕುವ ವಂಚಕರಿಂದ ಹಾಗೂ ಬ್ರೋಕರ್‌ಗಳಿಂದ ನೀವು ಬಚಾವ್‌ ಆಗಬಹುದು. ಈ ಕಾರಣಕ್ಕೆ ಈ ಹೊಸ ಫೀಚರ್ಸ್‌ ಪರಿಚಯಿಸಲಾಗಿದೆ ಎಂದು ಟ್ರೂಕಾಲರ್‌ ತಿಳಿಸಿದೆ.

23 ರಾಜ್ಯಗಳ ಪ್ರಮುಖ ಸರ್ಕಾರಿ ಸಂಪರ್ಕ ಸಂಖ್ಯೆ ಲಭ್ಯ!

23 ರಾಜ್ಯಗಳ ಪ್ರಮುಖ ಸರ್ಕಾರಿ ಸಂಪರ್ಕ ಸಂಖ್ಯೆ ಲಭ್ಯ!

ಈ ಹೊಸ ಫೀಚರ್ಸ್‌ ನಲ್ಲಿ ಬರೋಬ್ಬರಿ 23 ರಾಜ್ಯಗಳ ಪ್ರಮುಖ ಸರ್ಕಾರಿ ಸಂಪರ್ಕಗಳು ನಿಮಗೆ ಲಭ್ಯವಾಗಲಿವೆ. ಅದರಲ್ಲಿ ಕಾನೂನು ಜಾರಿ ಸಂಸ್ಥೆಗಳು, ರಾಯಭಾರ ಕಚೇರಿಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಇತರ ಪ್ರಮುಖ ಇಲಾಖೆಗಳು ಸೇರಿದಂತೆ ಸುಮಾರು 23 ರಾಜ್ಯಗಳ ಸಂಪರ್ಕ ಸಂಖ್ಯೆಗಳನ್ನು ನೀವು ಈ ಆಪ್‌ನಲ್ಲಿ ಪಡೆದುಕೊಳ್ಳಬಹುದು.

ವಂಚನೆ ಪ್ರಕರಣ ಹೆಚ್ಚಳಕ್ಕೆ ಕಡಿವಾಣ

ವಂಚನೆ ಪ್ರಕರಣ ಹೆಚ್ಚಳಕ್ಕೆ ಕಡಿವಾಣ

ಭಾರತದಲ್ಲಿ ಈಗಾಗಲೇ ಹಲವಾರು ನಾಗರೀಕರು ನಕಲಿ ಕರೆಗಳಿಂದ ಮೋಸ ಹೋಗಿದ್ದಾರೆ. ನಿಮಗೆ ಕೆಲಸ ಲಭಿಸಿದೆ, ಇಷ್ಟ ಹಣ ನೀಡಿದರೆ ನಿಮಗೆ ಕೆಲಸ ಗ್ಯಾರಂಟಿ, ಹಾಗೆ ಹೀಗೆ ಎಂಬ ಕರೆಗಳು ಸಾಮಾನ್ಯವಾಗಿ ಬರುತ್ತವೆ. ಇವೆಲ್ಲವುಗಳನ್ನು ಈ ಮೂಲಕ ನಿಯಂತ್ರಿಸಬಹುದಾಗಿದ್ದು, ನಾಗರೀಕರು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡುವುದರ ಮೂಲಕ ಸ್ಪಷ್ಟನೆ ಸಹ ಪಡೆದುಕೊಳ್ಳಬಹುದಾಗಿದೆ.

ಟ್ರೂಕಾಲರ್ ಬಳಕೆದಾರರ ರಕ್ಷಣೆಗೆ ಒತ್ತು

ಟ್ರೂಕಾಲರ್ ಬಳಕೆದಾರರ ರಕ್ಷಣೆಗೆ ಒತ್ತು

ಇದೆಲ್ಲದರ ನಡುವೆ 240 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ಬಳಕೆದಾರರು ಈ ಆಪ್ ಬಳಕೆ ಮಾಡುತ್ತಿದ್ದು, ಈ ರೀತಿಯ ಹಗರಣಗಳಿಂದ ಸುರಕ್ಷಿತವಾಗಿರಲು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಅಗತ್ಯವಿದ್ದಾಗ ಸಂವಹನ ನಡೆಸಲು ಸಹಾಯ ಮಾಡಲಿದೆ.

ನಂಬರ್‌ಗಳನ್ನು ಹೇಗೆ ಪ್ರದರ್ಶಿಸುತ್ತದೆ?

ನಂಬರ್‌ಗಳನ್ನು ಹೇಗೆ ಪ್ರದರ್ಶಿಸುತ್ತದೆ?

ಟ್ರೂಕಾಲರ್ ಪರಿಶೀಲಿಸಿದ ಎಲ್ಲಾ ಸರ್ಕಾರಿ ನಂಬರ್‌ಗಳು ಹಸಿರು ಬಣ್ಣದ ಬ್ಯಾಗ್ರೌಂಡ್ ಅನ್ನು ಹೊಂದಿರಲಿದೆ. ಹಾಗೆಯೇ ಸಂಬಂಧಿಸಿದವರ ಹೆಸರಿನ ಮುಂದೆ ನೀಲಿ ಟಿಕ್ ಸಹ ಕಾಣಬಹುದಾಗಿದೆ. ಅದರಂತೆ ಈಗಾಗಲೇ ಜಿಲ್ಲಾ ಮತ್ತು ಪುರಸಭೆ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಫೋನ್‌ ನಂಬರ್‌ಗಳನ್ನು ಈ ವಿಭಾಗಕ್ಕೆ ಆಡ್‌ ಮಾಡಲು ತಿಳಿಸಲಾಗಿದೆ ಎಂದು ಟ್ರೂಕಾಲರ್ ಮಾಹಿತಿ ನೀಡಿದೆ.

Best Mobiles in India

English summary
Truecaller launches in app digital government directory.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X