ಟ್ರೂಕ್ BTG X1 ಗೇಮಿಂಗ್ ಇಯರ್‌ಬಡ್‌ ಲಾಂಚ್‌; ಆಫರ್ ಬೆಲೆ 999ರೂ.!

|

ಟ್ರೂಕ್ ಕಂಪೆನಿ ಈಗಾಗಲೇ ಭಿನ್ನ ರೀತಿಯ ಇಯರ್‌ಬಡ್ಸ್‌ ಹಾಗೂ ಇನ್ನಿತರೆ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರಲ್ಲೂ ಈ ಬ್ರ್ಯಾಂಡ್‌ನ ಡಿವೈಸ್‌ಗಳು ವಿಭಿನ್ನ ಶೈಲಿಯನ್ನು ಹೊಂದಿರುವುದು ಇನ್ನಷ್ಟು ವಿಶೇಷ. ಇದರ ನಡುವೆ ಈಗ ಟ್ರೂಕ್ ಹೊಸ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿದೆ. ಈ ಇಯರ್‌ಬಡ್‌ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ಆಯ್ಕೆ ಹೊಂದಿದ್ದು, 40 ಎಂಎಸ್ ವರೆಗಿನ ಕಡಿಮೆ ಲೇಟೆನ್ಸಿಯನ್ನು ಸಹ ಬೆಂಬಲಿಸುತ್ತದೆ.

ಟ್ರೂಕ್

ಹೌದು, ಟ್ರೂಕ್ ಕಂಪೆನಿಯ ಟ್ರೂಕ್ BTG X1 ಗೇಮಿಂಗ್ (Truke BTG X1) ಇಯರ್‌ಬಡ್ ಅನ್ನು ಅನಾವರಣ ಮಾಡಲಾಗಿದೆ. BTG (ಬಾರ್ನ್ ಟು ಗೇಮ್) X1 ಗೇಮಿಂಗ್ ಇಯರ್‌ಬಡ್‌ಗಳ ಬಿಡುಗಡೆಯೊಂದಿಗೆ ಭಾರತದಲ್ಲಿ ತನ್ನ ಪ್ರೊಡಕ್ಟ್‌ನ ಪೋರ್ಟ್‌ಫೋಲಿಯೊವನ್ನು ಟ್ರೂಕ್ ವಿಸ್ತರಣೆ ಮಾಡಿಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಇನ್ನಿತರೆ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಟ್ರೂಕ್ BTG X1 ಗೇಮಿಂಗ್‌ ಇಯರ್‌ಬಡ್ಸ್‌ ಸುಧಾರಿತ ಧ್ವನಿ ಗುಣಮಟ್ಟವನ್ನು ನೀಡಲಿದ್ದು, ಹಗುರವಾದ ವಿನ್ಯಾಸ ಪಡೆದುಕೊಂಡಿದೆ. ಅದರಲ್ಲೂ ಗೇಮಿಂಗ್‌ ಹಾಗೂ ಹೆಚ್ಚಿನ ಸಂಗೀತ ಅನುಭವ ಪಡೆದುಕೊಳ್ಳಲು ಅವಕಾಶ ನೀಡಿದ್ದು, ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ಅನ್ನು ಬೆಂಬಲಿಸುತ್ತದೆ ಎಂದು ಹೇಳುತ್ತದೆ. ಈ ಇಯರ್‌ಬಡ್‌ಗಳು ಆಫ್‌-ಇಯರ್ ವಿನ್ಯಾಸವನ್ನು ಹೊಂದಿದ್ದು, 20RGB ಗೇಮಿಂಗ್ ಫೀಚರ್ಸ್‌ ಕೇಸ್ ವಿನ್ಯಾಸದೊಂದಿಗೆ ಬಂದಿದೆ. .

ಗೇಮಿಂಗ್

ಟ್ರೂ ಗೇಮಿಂಗ್ ಮೋಡ್‌ನೊಂದಿಗೆ ಸಜ್ಜುಗೊಂಡಿರುವ ಈ ಇಯರ್‌ಬಡ್ಸ್‌ 12 ಎಂಎಂ ಟೈಟಾನಿಯಂ ಸ್ಪೀಕರ್ ಡ್ರೈವರ್‌ನಿಂದ ಪ್ಯಾಕ್‌ ಆಗಿದೆ. ಅದರಲ್ಲೂ ಸಿನಿಮ್ಯಾಟಿಕ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ ಸೌಲಭ್ಯ ನೀಡಲಿದ್ದು, 40 ಎಂಎಸ್ ವರೆಗಿನ ಕಡಿಮೆ ಲೇಟೆನ್ಸಿಯನ್ನು ಸಹ ಬೆಂಬಲಿಸುತ್ತದೆ. ಇದರೊಂದಿಗೆ ಬ್ಲೂಟೂತ್‌ ಆವೃತ್ತಿ 5.3 ನಲ್ಲಿ ಕೆಲಸ ಮಾಡಲಿದ್ದು, ಡಿವೈಸ್‌ಗಳಿಗೆ ವೇಗವಾಗಿ ಕನೆಕ್ಟ್‌ ಆಗಲಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಪ್ರತಿ ಬಡ್ಸ್‌ 40mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಹಾಗೆಯೇ ಚಾರ್ಜಿಂಗ್ ಕೇಸ್ 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದೆ. ಈ ಇಯರ್‌ಬಡ್‌ಗಳು ಚಾರ್ಜಿಂಗ್ ಕೇಸ್‌ನೊಂದಿಗೆ 48 ಗಂಟೆಗಳವರೆಗೆ ಪ್ಲೇಟೈಮ್ ನೀಡಲಿದೆ ಎಂದು ಟ್ರೂಕ್ ಮಾಹಿತಿ ನೀಡಿದೆ. ಜೊತೆಗೆ ಈ ಚಾರ್ಜಿಂಗ್‌ ಕೇಸ್‌ನಲ್ಲಿ ಆರ್‌ಜಿಬಿ ಲೈಟ್ಸ್‌ ಆಯ್ಕೆ ಇರುವುದು ಇನ್ನಷ್ಟು ಆಕರ್ಷಕವಾಗಿದೆ.

ಸಂಸ್ಥಾಪಕ

ಟ್ರೂಕ್ ಇಂಡಿಯಾದ ಸಂಸ್ಥಾಪಕ ಮತ್ತು ಸಿಇಓ ಪಂಕಜ್ ಉಪಾಧ್ಯಾಯ ಮಾತನಾಡಿ, ಕೊರೊನಾ ಭಾರತದಾದ್ಯಂತ ಗೇಮಿಂಗ್ ವಲಯದಲ್ಲಿ ತಕ್ಷಣದ ಸಮಸ್ಯೆ ನಿರ್ಮಾಣ ಮಾಡಿತ್ತು. ಆ ಸಮಯದಲ್ಲಿ ದೇಶವು ಸುಮಾರು 507 ಮಿಲಿಯನ್ ಗೇಮರುಗಳನ್ನು ಹೊಂದಿತ್ತು. ಹಾಗೆಯೇ ಭಾರತದಲ್ಲಿ ಆನ್‌ಲೈನ್ ಗೇಮಿಂಗ್ 2021 ರಲ್ಲಿ 1.3 ಬಿಲಿಯನ್ ಡಾಲರ್‌ ಅನ್ನು ತಲುಪಿದೆ. ಅಂದರೆ 2019 ರಲ್ಲಿ 906 ಮಿಲಿಯನ್‌ ಡಾಲರ್‌ ಹೊಂದಿದ್ದು ಈ ಮೂಲಕ 28% ಏರಿಕೆಯನ್ನು ಕಂಡಿದೆ ಎಂದು ತಿಳಿಸಿದ್ದಾರೆ.

BTG1

ಅದರಲ್ಲೂ BTG1, BTG2, BTG ಆಲ್ಫಾ ಮತ್ತು BTG3 ನಂತಹ ಇತರ ಪ್ರೊಡಕ್ಟ್‌ಗಳು ಭಾರತದಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಯುನಿಟ್‌ಗಳ ಮಾರಾಟವನ್ನು ಹೆಚ್ಚಿಸಿಕೊಂಡಿವೆ ಎಂಬುದು ಗಮನಾರ್ಹ ಸಂಗತಿ.

ಟ್ರೂಕ್ BTG X1 ಬೆಲೆ ಮತ್ತು ಲಭ್ಯತೆ

ಟ್ರೂಕ್ BTG X1 ಬೆಲೆ ಮತ್ತು ಲಭ್ಯತೆ

ಟ್ರೂಕ್ BTG X1 ಇಯರ್‌ಬಡ್‌ಗಳನ್ನು ಭಾರತದಲ್ಲಿ 999 ರೂ. ಗಳ ಪರಿಚಯಾತ್ಮಕ ಬೆಲೆಯಲ್ಲಿ ಲಾಂಚ್‌ ಮಾಡಲಾಗಿದೆ. ಈ ಆಫರ್ ಮುಗಿದ ನಂತರ ಗ್ರಾಹಕರು ಈ ಗೇಮಿಂಗ್ ಇಯರ್‌ಬಡ್‌ಗಳನ್ನು 1,499 ರೂ. ಗೆ ಖರೀದಿ ಮಾಡಬೇಕಾಗುತ್ತದೆ. ಇವುಗಳನ್ನು ಫ್ಲಿಪ್‌ಕಾರ್ಟ್‌ ಹಾಗೂ ಕ್ರೋಮಾ ಸೇರಿದಂತೆ ಇನ್ನಿತರೆ ಆನ್‌ಲೈನ್‌ ತಾಣದಲ್ಲಿ ಖರೀದಿ ಮಾಡಬಹುದು.

Best Mobiles in India

English summary
Truke announces BTG X1 gaming earbuds.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X