ಟ್ರೂಕ್ BTG ಬೀಟಾ ಇಯರ್‌ಬಡ್ಸ್ ಲಾಂಚ್‌; 38 ಗಂಟೆಯ ಪ್ಲೇಟೈಮ್

|

ಟ್ರೂಕ್ ಸಂಸ್ಥೆಯು ಗೇಮಿಂಗ್‌ ಆಧಾರಿತ ಇಯರ್‌ಬಡ್ಸ್‌ಗಳನ್ನು ತಯಾರು ಮಾಡುವುದರಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಈ ಸಂಸ್ಥೆಯ ಡಿವೈಸ್‌ಗಳು ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಜೊತೆಗೆ ದೀರ್ಘ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿರುವುದು ಸಹ ವಿಶೇಷವಾದ ಸಂಗತಿ. ಇದರ ನಡುವೆ ಈಗ ಟ್ರೂಕ್ ಹೊಸ ಒಂದು ಜೊತೆ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿದೆ.

ಟ್ರೂಕ್ BTG ಬೀಟಾ ಇಯರ್‌ಬಡ್ಸ್ ಲಾಂಚ್‌; 38 ಗಂಟೆಯ ಪ್ಲೇಟೈಮ್

ಹೌದು, ಟ್ರೂಕ್ ಭಾರತದಲ್ಲಿ ಹೊಸ ಜೋಡಿ ಟ್ರೂ ವಾಯರ್‌ಲೆಸ್‌ ಸ್ಟಿರಿಯೊ (TWS) ಇಯರ್‌ಬಡ್‌ಗಳನ್ನು ಅನಾವರಣ ಮಾಡಿದ್ದು, ಈ ಇಯರ್‌ಬಡ್‌ಗಳನ್ನು ಬಿಟಿಜಿ ಬೀಟಾ ಎಂದು ಕರೆಯಲಾಗಿದೆ. ಹಾಗೆಯೇ ದೀರ್ಘ ಸಮಯದ ವರೆಗೆ ಪ್ಲೇಟೈಮ್ ನೀಡುತ್ತಿರುವುದು ಮತ್ತೊಂದು ವಿಶೇಷ. ಹಾಗಿದ್ರೆ, ಭಾರತದಲ್ಲಿ ಈ ಇಯರ್‌ಬಡ್ಸ್‌ಗಳ ಆಫರ್‌ ಬೆಲೆ ಹಾಗೂ ಪ್ರಮುಖ ಫೀಚರ್ಸ್‌ ಅನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌
ಟ್ರೂಕ್ ಬಿಟಿಜಿ ಬೀಟಾ ಗೇಮರುಗಳಿಗಾಗಿ ಮತ್ತು ಸಂಗೀತ ಪ್ರಿಯರಿಗಾಗಿ ತಯಾರಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಈ ಇಯರ್‌ಬಡ್‌ಗಳು 13 ಎಂಎಂ ಟೈಟಾನಿಯಂ ಡ್ರೈವರ್‌ನೊಂದಿಗೆ ಟ್ರೂಕ್‌ನ ಸಿಗ್ನೇಚರ್ ಸೌಂಡ್ ಮತ್ತು 40 ಎಂಎಸ್ ಕಡಿಮೆ ಲೇಟೆನ್ಸಿಯೊಂದಿಗೆ ಗೇಮಿಂಗ್ ಮೋಡ್ ಆಯ್ಕೆ ಪಡೆದುಕೊಂಡಿದೆ.

ಟ್ರೂಕ್ ಬಿಟಿಜಿ ಬ್ಲೂಟೂತ್ ಆವೃತ್ತಿ 5.3 ಅನ್ನು ಬೆಂಬಲಿಸಲಿದ್ದು, ಈ ಇಯರ್‌ಬಡ್‌ಗಳು ಡ್ಯುಯಲ್-ಮೈಕ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ (ENC), SBC+AAC ಆಡಿಯೊ ಡಿಕೋಡಿಂಗ್ ಅನ್ನು ಬೆಂಬಲಿಸುತ್ತದೆ. ಪ್ರತಿ ಇಯರ್‌ಬಡ್‌ನಲ್ಲಿ ಒಂದೇ ಮೈಕ್ ಅನ್ನು ಹೊಂದಿರುವುದು ವಿಶೇಷ.

ಟ್ರೂಕ್ BTG ಬೀಟಾ ಇಯರ್‌ಬಡ್ಸ್ ಲಾಂಚ್‌; 38 ಗಂಟೆಯ ಪ್ಲೇಟೈಮ್

ಚಾರ್ಜಿಂಗ್‌ ಕೇಸ್‌ ಮ್ಯಾಟ್ ಬ್ಲ್ಯಾಕ್‌ ಕ್ಲಾಸಿಕ್ ವಿನ್ಯಾಸವನ್ನು ಹೊಂದಿದ್ದು, ಟಚ್‌ ಆಯ್ಕೆ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ. ಇದರ ಬಡ್ಸ್‌ಗಳು ಕಿವಿಯ ಶೈಲಿಯನ್ನು ಹೊಂದಿದ್ದು, ಕಿವಿಗೆ ಸುಲಭವಾಗಿ ಸೆಟ್ ಆಗಲಿವೆ. ಇದರೊಂದಿಗೆ ಓಪನ್-ಟು-ಪೇರ್ ತಂತ್ರಜ್ಞಾನ ಇರುವುದರಿಂದ ತಕ್ಷಣವೇ ಸಂಬಂಧಿತ ಡಿವೈಸ್‌ಗಳಿಗೆ ಸಂಪರ್ಕ ಆಗುತ್ತವೆ.

ಇವುಗಳು IPX4 ರೇಟಿಂಗ್‌ ಮೂಲಕ ವಾಟರ್‌ ರೆಸಿಸ್ಟೆಂಟ್‌ ಆಗಿದ್ದು, ಸಣ್ಣ ಸ್ಪ್ಲಾಶ್‌ಗಳಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಇದರೊಂದಿಗೆ ಇಯರ್‌ಬಡ್‌ಗಳು ಗೂಗಲ್‌ ವಾಯ್ಸ್‌ ಅಸಿಸ್ಟೆಂಟ್‌ ಮತ್ತು ಸಿರಿಗೆ ಬೆಂಬಲ ನೀಡಲಿವೆ. ಇದನ್ನು ಆಕ್ಟಿವ್‌ ಮಾಡಲು ಬಳಕೆದಾರರು ಎಡ ಇಯರ್‌ಬಡ್‌ನಲ್ಲಿ ಡಬಲ್ ಟ್ಯಾಪ್ ಮಾಡಬೇಕಾಗುತ್ತದೆ.

ಭಾರತೀಯ TWS ವಲಯಕ್ಕೆ ಮತ್ತು ಬಳಕೆದಾರರ ಸಂಗೀತ ಆಲಿಸುವ ಅಭ್ಯಾಸದ ವಿಷಯಕ್ಕೆ ಬಂದಾಗ ನಾವು ಮೇಲ್ಮುಖ ಬದಲಾವಣೆಯನ್ನು ಕಂಡಿದ್ದೇವೆ. ಭಾರತೀಯ ಗೇಮಿಂಗ್ ಮಾರುಕಟ್ಟೆಯು ಈ ವರ್ಷ $2.6 ಶತಕೋಟಿ ಮಾರ್ಕ್ ಅನ್ನು ದಾಟಿದೆ. ಹಾಗೆಯೇ 2027 ರ ವೇಳೆಗೆ 27% ನಷ್ಟು CAGR ನಲ್ಲಿ 8.6 ಶತಕೋಟಿ ಡಾಲರ್‌ಗೆ ಏರುವ ನಿರೀಕ್ಷೆಯಿದೆ ಎಂದು ಟ್ರೂಕ್‌ ತಿಳಿಸಿದೆ.

ಟ್ರೂಕ್ BTG ಬೀಟಾ ಇಯರ್‌ಬಡ್ಸ್ ಲಾಂಚ್‌; 38 ಗಂಟೆಯ ಪ್ಲೇಟೈಮ್

ಬ್ಯಾಟರಿ ಸಾಮರ್ಥ್ಯ
ಟ್ರೂಕ್ ಬಿಟಿಜಿ ಬೀಟಾ ಕೇಸ್ 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಪ್ರತಿ ಇಯರ್‌ಬಡ್ 40mAh ಸಾಮರ್ಥ್ಯದ ಬ್ಯಾಟರಿ ಘಟಕವನ್ನು ಹೊಂದಿದೆ. ಈ ಇಯರ್‌ಬಡ್‌ಗಳು ಒಂದೇ ಚಾರ್ಜ್‌ನಲ್ಲಿ ಎಂಟರಿಂದ ಹತ್ತು ಗಂಟೆಗಳವರೆಗೆ ಪ್ಲೇ ಬ್ಯಾಕ್‌ ನೀಡಲಿದೆ. ಜೊತೆಗೆ ಚಾರ್ಜಿಂಗ್ ಕೇಸ್‌ ಒಂದು ಪೂರ್ಣ ಚಾರ್ಜ್‌ನಲ್ಲಿ 48 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ.

ಬೆಲೆ ಹಾಗೂ ಲಭ್ಯತೆ
ಟ್ರೂಕ್ ಬಿಟಿಜಿ ಬೀಟಾ TWS ಇಯರ್‌ಬಡ್‌ಗಳನ್ನು ಭಾರತದಲ್ಲಿ 1,299 ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇನ್ನು ಪರಿಚಯಾತ್ಮಕ ಕೊಡುಗೆಯಾಗಿ 999 ರೂ. ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಇಯರ್‌ಬಡ್ಸ್‌ ಅನ್ನು ಅಮೆಜಾನ್‌, ಫ್ಲಿಪ್‌ಕಾರ್ಟ್ ಹಾಗೂ ಕ್ರೋಮ್‌ ಮೂಲಕ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಭಾರತದಾದ್ಯಂತ ಹಲವಾರು ರಿಟೇಲರ್‌ ಸ್ಟೋರ್‌ಗಳಲ್ಲಿಯೂ ಇವು ಲಭ್ಯ ಇದ್ದು, 1 ವರ್ಷದ ಪ್ರಮಾಣಿತ ವಾರಂಟಿಯನ್ನು ಸಹ ಒಳಗೊಂಡಿವೆ.

Best Mobiles in India

English summary
Truke BTG Beta Earbuds Launched: Price in India, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X