ಬಜೆಟ್‌ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಈ ತಪ್ಪು ಮಾಡಿದ್ರೆ, ಆಮೇಲೆ ಬೇಸರ ಪಡ್ತಿರಾ!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಎಲ್ಲರಿಗೂ ಅಗತ್ಯ ಡಿವೈಸ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸ್ಮಾರ್ಟ್‌ಫೋನ್ ಅನ್ನು ಖರೀದಿಸುವಾಗ ಅಗತ್ಯಕ್ಕೆ ಅನುಗುಣವಾಗಿ ಫೋನ್‌ ಅನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. ಬಹುತೇಕರು ಬಜೆಟ್‌ ಪ್ರೈಸ್‌ ಟ್ಯಾಗ್‌ನ ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗುತ್ತಾರೆ. ಗ್ರಾಹಕರು ಬಜೆಟ್‌ ಸ್ಮಾರ್ಟ್‌ಫೋನ್‌ ಖರೀದಿಸುವ ದಾವಂತದಲ್ಲಿ ಕೆಲವೊಂದು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಸ್ಮಾರ್ಟ್‌ಫೋನ್‌

ಹೌದು, ಬಹುಪಾಲು ಗ್ರಾಹಕರು ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಮುಖ್ಯವಾಗಿ ಬಜೆಟ್‌ ದರದ ಫೋನ್‌ ಖರೀದಿಸುವಾಗ ಬೆಲೆಯ ಬಗ್ಗೆ ಹೆಚ್ಚಿನ ಗಮನ ನೀಡಿ, ಕೆಲವೊಂದು ಫೀಚರ್ಸ್‌ಗಳ ಬಗ್ಗೆ ಗಮನಿಸುವುದಿಲ್ಲ. ಹೊಸ ಸ್ಮಾರ್ಟ್‌ಫೋನ್‌ ಅನ್ನು ದೀರ್ಘಕಾಲ ಬಳಕೆ ಮಾಡುವ ಯೋಚನೆ ಇದ್ದರೆ, ಕೆಲವೊಂದು ಫೀಚರ್ಸ್‌ಗಳನ್ನು ಗಮನಿಸಿ ಖರೀದಿಸುವುದು ಉತ್ತಮ ಎನಿಸುತ್ತೆ. ಹಾಗಾದರೆ ಫೋನ್ ಖರೀದಿಸುವಾಗ ಗಮನಿಸಬೇಕಾದ ಅಗತ್ಯ ಆಯ್ಕೆಗಳ ಬಗ್ಗೆ ಇಲ್ಲಿದೆ ಮಾಹಿತಿ. ಮುಂದೆ ಓದಿರಿ.

128GB ಸ್ಟೋರೇಜ್‌ ಆಯ್ಕೆ ಇರಲಿ

128GB ಸ್ಟೋರೇಜ್‌ ಆಯ್ಕೆ ಇರಲಿ

ಬಜೆಟ್‌ ದರದಲ್ಲಿ ಫೋನ್ ಖರೀದಿಸುವಾಗ 128GB ಸ್ಟೋರೇಜ್‌ ವೇರಿಯಂಟ್‌ ಫೋನ್ ನಿಮ್ಮ ಆಯ್ಕೆ ಆಗಿರಲಿ. 32GB ಅಥವಾ 64GB ಆಯ್ಕೆಗಳನ್ನು ಕೈ ಬಿಡುವುದು ಬಹುತೇಕ ಉತ್ತಮ. ಅಧಿಕ ಸ್ಟೋರೇಜ್‌ ಆಯ್ಕೆಯ ಫೋನ್‌ಗಳು ನಿಮಗೆ ದೀರ್ಘಾವಧಿಯ ಬಳಕೆಗೆ ಪೂರಕವಾಗಿರುತ್ತವೆ. ಫೋಟೊಗಳು, ವಿಡಿಯೋಗಳು, ಆಪ್‌ಗಳು ಹೀಗೆ ಸ್ಟೋರೇಜ್‌ಗೆ ಅಧಿಕ ಮೆಮೊರಿ ಅಗತ್ಯ ಈ ನಿಟ್ಟಿನಲ್ಲಿ ಕನಿಷ್ಠ 128GB ಸ್ಟೋರೇಜ್‌ ಆಯ್ಕೆ ಸೂಕ್ತ. ಒಂದು ವೇಳೆ 64GB ವೇರಿಯಂಟ್ ಫೋನ್ ಖರೀದಿಸಿದರೆ, ಮುಂದೆ ಬೇಸರ ಪಡ್ತಿರಾ!.

ಆಪರೇಟಿಂಗ್ ಸಿಸ್ಟಮ್‌

ಆಪರೇಟಿಂಗ್ ಸಿಸ್ಟಮ್‌

ನೀವು ಖರೀದಿಸುವ ಸ್ಮಾರ್ಟ್‌ಫೋನಿನಲ್ಲಿ (OS) ಆಪರೇಟಿಂಗ್ ಸಿಸ್ಟಮ್‌ ಕೆಲಸ ತುಂಬಾ ಮುಖ್ಯವಾಗಿದ್ದು, ಹೀಗಾಗಿ ಚಾಲ್ತಿ ಇರುವ ಅಪ್‌ಡೇಟ್ ಓಎಸ್‌ ಫೋನ್ ಆಯ್ಕೆ ಸೂಕ್ತ. ಸದ್ಯ ಆಂಡ್ರಾಯ್ಡ್‌ 12 ಓಎಸ್ ಬಳಕೆಯಲ್ಲಿದ್ದು, ಅದಾಗ್ಯೂ ನೀವು ಆಂಡ್ರಾಯ್ಡ್‌ 12 ಓಎಸ್‌ ಇರುವ ಫೋನ್ ಖರೀದಿಸುವುದಾದರೇ ನಂತರದಲ್ಲಿ ಆ ಓಎಸ್‌ ಅಪ್‌ಡೇಟ್‌ ಸೌಲಭ್ಯ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ.

ಹೆಚ್ಚಿನ ಸೆನ್ಸಾರ್ ಕ್ಯಾಮೆರಾ ಆಯ್ಕೆ ಉತ್ತಮ

ಹೆಚ್ಚಿನ ಸೆನ್ಸಾರ್ ಕ್ಯಾಮೆರಾ ಆಯ್ಕೆ ಉತ್ತಮ

ಸಾಮಾನ್ಯವಾಗಿ ಫೋನ್ ಖರೀದಿ ಮಾಡುವಾಗ ಗ್ರಾಹಕರು ಕ್ಯಾಮೆರಾ ಬಗ್ಗೆ ಗಮನಿಸುತ್ತಾರೆ. ಆದ್ರೆ, ಕೇವಲ ಕ್ವಾಡ್‌ ಕ್ಯಾಮೆರಾ ಇದೆ ಎಂದು ಖರೀದಿಸುವುದು ಉತ್ತಮ ನಿರ್ಧಾರವಲ್ಲ. ಇಂಥಹ ತಪ್ಪು ಮಾಡಬೇಡಿ. ಬದಲಿಗೆ ಆ ಫೋನ್ ಕ್ಯಾಮೆರಾ ಎಷ್ಟು ಮೆಗಾ ಪಿಕ್ಸಲ್‌ ಸೆನ್ಸಾರ್ ಆಯ್ಕೆ ಒಳಗೊಂಡಿದೆ. ಅವುಗಳ ಗುಣಮಟ್ಟ ಎಷ್ಟು, ಹಾಗೆಯೇ ಕ್ಯಾಮೆರಾದಲ್ಲಿ ಯಾವೆಲ್ಲಾ ಆಯ್ಕೆಗಳಿವೆ ಎನ್ನುವುದನ್ನು ಗಮನಿಸುವುದು ಬಹು ಮುಖ್ಯ. ಬಹುತೇಕ ಫೋನ್‌ಗಳು ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, ಟೆಲಿಫೋಟೋ ಲೆನ್ಸ್ ಅಥವಾ ಮ್ಯಾಕ್ರೋ ಲೆನ್ಸ್ ಜೊತೆಗೆ ಪ್ರಾಥಮಿಕ ಲೆನ್ಸ್ ಇರುತ್ತದೆ. ಜೊತೆಗೆ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಪಡೆದಿವೆ.

ಡಿಸ್‌ಪ್ಲೇ ರೆಸಲ್ಯೂಶನ್ ಬಗ್ಗೆ ಗಮನ ನೀಡಿ

ಡಿಸ್‌ಪ್ಲೇ ರೆಸಲ್ಯೂಶನ್ ಬಗ್ಗೆ ಗಮನ ನೀಡಿ

ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ಆಯ್ಕೆಯು ತುಂಬಾ ಮಹತ್ವದ್ದು, ಹಾಗೆಯೇ ಫೋನಿನ ಅತ್ಯಂತ ನಿರ್ಣಾಯಕ ಭಾಗಗಳಲ್ಲಿ ಒಂದಾಗಿದೆ. FHD+ ಪ್ಯಾನೆಲ್‌ (2220 × 1080 ಪಿಕ್ಸಲ್ ರೆಸಲ್ಯೂಶನ್‌) ಆಗಿರುತ್ತದೆ. ಹಾಗೂ HD+ (1366 × 768 ಪಿಕ್ಸಲ್ ರೆಸಲ್ಯೂಶನ್) ಹೊಂದಿರುತ್ತದೆ. ಇದರ ಜೊತೆಗೆ ಸ್ಕ್ರೀನ್‌ ರೀಫ್ರೇಶ್ ರೇಟ್, ಡಿಸ್‌ಪ್ಲೇ ಗುಣಮಟ್ಟವನ್ನು ನೀವು ಗಮನಿಸುವುದು ಅಗತ್ಯ.

ಕನಿಷ್ಠ 5,000mAh ಬ್ಯಾಟರಿಗೆ ಫಿಕ್ಸ್‌ ಆಗಿ

ಕನಿಷ್ಠ 5,000mAh ಬ್ಯಾಟರಿಗೆ ಫಿಕ್ಸ್‌ ಆಗಿ

ಸ್ಮಾರ್ಟ್‌ಫೋನ್‌ ದೀರ್ಘ ಬಾಳಿಕೆಗೆ ಅದರ ಬ್ಯಾಟರಿ ಬ್ಯಾಕ್‌ಅಪ್‌ ಕಾರಣ. ಹೀಗಾಗಿ ಇತ್ತೀಚಿಗಿನ ನೂತನ ಫೋನ್‌ಗಳು ಹೆಚ್ಚಿನ ಬ್ಯಾಟರಿ ಸಾಮರ್ಥ್ಯದ ಆಯ್ಕೆ ಯೊಂದಿಗೆ ಕಾಣಿಸಿಕೊಳ್ಳುತ್ತಿವೆ. ಅದಾಗ್ಯೂ ನೀವು ಖರೀದಿಸುವ ಹೊಸ ಫೋನಿನಲ್ಲಿ 5,000mAh ಅಥವಾ 6000mAh ಬ್ಯಾಟರಿ ಆಯ್ಕೆ ಲಭ್ಯತೆ ಬಗ್ಗೆ ಗಮನಿಸಿ. ಜೊತೆಗೆ ವೇಗದ ಚಾರ್ಜಿಂಗ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು ಇದ್ದರೇ ಉತ್ತಮ. ಹಾಗೆಯೇ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿರುವ ಬಗ್ಗೆಯೂ ತಪ್ಪದೇ ತಿಳಿಯಿರಿ.

Best Mobiles in India

English summary
The Most Serious Mistake when buying a new Phone: if you do, you will regret it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X