ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ವಿರುದ್ಧ ಸಮರ ಸಾರಿದೆಯೇ ಟ್ವಿಟ್ಟರ್‌?; ಹೊಸ ಬದಲಾವಣೆ ಏನು?

|

ಟ್ವಿಟ್ಟರ್‌ ಒಂದಲ್ಲಾ ಒಂದು ವಿಷಯದಲ್ಲಿ ನಿರಂತರವಾಗಿ ಸುದ್ದಿಯಲ್ಲಿರುತ್ತದೆ. ಟ್ವಿಟ್ಟರ್‌ ಮಾಲೀಕ ಎಲಾನ್‌ ಮಸ್ಕ್‌ ಅವರು ಟ್ವಿಟ್ರ್‌ ಖರೀದಿ ಮಾಡಿದ ನಂತರ ನಕಾರಾತ್ಮಕ ವಿಷಯಗಳೇ ಹೆಚ್ಚು ಸದ್ದು ಮಾಡುತ್ತಿವೆ. ಇದರ ನಡುವೆ ಮತ್ತೆ ಟ್ವಿಟ್ಟರ್‌ನಲ್ಲಿ ಹೊಸ ಬದಲಾವಣೆ ಮಾಡಲಾಗಿದ್ದು, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಹಾಗೂ ಇನ್ನಿತರೆ ಪ್ರಮುಖ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಸಮರ ಸಾರಲಾಗಿದೆ.

ಟ್ವಿಟರ್

ಹೌದು, ಟ್ವಿಟರ್ ಬಳಕೆದಾರರು ಇನ್ನು ಮುಂದೆ ಕೆಲವು ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳ ಲಿಂಕ್ ಅನ್ನು ಟ್ವಿಟ್ಟರ್‌ನಲ್ಲಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಹಾಗೂ ಮಾಸ್ಟೋಡಾನ್ ಪ್ರಮುಖವಾಗಿವೆ. ಈ ನಿರ್ಧಾರದಿಂದ ಟ್ವಿಟ್ಟರ್‌ ಬಳಕೆದಾರರಿಗೆ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಟ್ವಿಟ್ಟರ್‌ ಅನ್ನು ಹೆಚ್ಚು ಅವಲಂಬಿಸಿದ್ದ ಇತರೆ ಪ್ಲಾಟ್‌ಫಾರ್ಮ್‌ ಬಳಕೆದಾರರಿಗೆ ಈ ನಿರ್ಧಾರ ಕಷ್ಟವಾಗಲಿದೆ.

ಟ್ವಿಟ್ಟರ್‌ ಹೇಳಿದ್ದೇನು?

ಟ್ವಿಟ್ಟರ್‌ ಹೇಳಿದ್ದೇನು?

ನಮ್ಮ ಅನೇಕ ಬಳಕೆದಾರರು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿದ್ದಾರೆ ಎಂಬುದು ನಮಗೆ ತಿಳಿದಿದೆ, ಆದಾಗ್ಯೂ, ಇನ್ಮುಂದೆ, ಟ್ವಿಟ್ಟರ್‌ ನಲ್ಲಿ ನಿರ್ದಿಷ್ಟ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಉಚಿತ ಪ್ರಚಾರವನ್ನು ಟ್ವಿಟ್ಟರ್‌ ಇನ್ನು ಮುಂದೆ ಅನುಮತಿಸುವುದಿಲ್ಲ ಎಂದು ಕಂಪೆನಿ ತಿಳಿಸಿದೆ.

ಯಾವ್ಯಾವ ಪ್ಲಾಟ್‌ಫಾರ್ಮ್‌ಗೆ ನಿಷೇಧ

ಯಾವ್ಯಾವ ಪ್ಲಾಟ್‌ಫಾರ್ಮ್‌ಗೆ ನಿಷೇಧ

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಮುಖ್ಯ ವಾಹಿನಿಯ ವೆಬ್‌ಸೈಟ್‌ಗಳು, ಮಾಸ್ಟೋಡಾನ್, ಟ್ರೈಬಲ್, ನಾಸ್ಟ್ರ್, ಪೋಸ್ಟ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಟ್ರೂತ್ ಸೋಷಿಯಲ್‌ಗೆ ನಿಷೇಧ ಹೇರಲಾಗಿದೆ. ಟ್ವಿಟ್ಟರ್‌ನ ಬ್ಲ್ಯಾಕ್‌ ಲಿಸ್ಟ್‌ನಲ್ಲಿ ಈ ಏಳು ವೆಬ್‌ಸೈಟ್‌ಗಳನ್ನು ಯಾಕೆ ಸೇರಿಸಲಾಗಿದೆ ಎಂಬ ಬಗ್ಗೆ ಟ್ವಿಟ್ಟರ್‌ ನಿಖರ ಮಾಹಿತಿ ನೀಡಿಲ್ಲ. ಅದರಲ್ಲೂ ಟಿಕ್‌ಟಾಕ್ ಹಾಗೂ ಲಿಂಕ್ಡ್‌ಇನ್‌ನಂತಹ ಇತರೆ ಆಪ್‌ಗಳಿಗೆ ಟ್ವಿಟ್ಟರ್‌ ನಿಷೇಧ ಹೇರದಿರುವುದು ಚರ್ಚೆಯ ವಿಷಯವಾಗಿದೆ.

ಹೊಸ ನಿರ್ಧಾರಗಳ ಹಿಂದೆ ಈ ಉದ್ದೇಶ ಅಡಗಿದೆ?

ಹೊಸ ನಿರ್ಧಾರಗಳ ಹಿಂದೆ ಈ ಉದ್ದೇಶ ಅಡಗಿದೆ?

ಟ್ವಿಟ್ಟರ್‌ ಏನೇ ನಿರ್ಧಾರ ಮಾಡಿದರೂ ಅದೂ ಸಂಪಾದನೆಯನ್ನೇ ಗುರಿಯಾಗಿಸಿಕೊಂಡು ಹೊಸ ಆದೇಶಗಳನ್ನು ಹೊರಡಿಸುತ್ತಾ ಬರುತ್ತಿದೆ. ಈ ಹಿಂದೆ ಟ್ವಿಟ್ಟರ್‌ ಬ್ಲೂಟಿಕ್‌ಗೆ ಚಂದಾದಾರಿಕೆ ಫೀಚರ್ಸ್‌ ಅನ್ನು ಪರಿಚಯಿಸಿದೆ. ಹಾಗೆಯೇ ಇದಾದ ನಂತರ ಬ್ಲೂಟಿಕ್‌ ಜೊತೆಗೆ ಇತರೆ ಎರಡು ದೃಢೀಕೃತ ಚಿಹ್ನೆಗಳ ವಿಷಯದಲ್ಲೂ ಬದಲಾವಣೆ ತರಲು ಮುಂದಾಗಿದ್ದು, ಇವೆಲ್ಲವೂ ಚಂದಾದಾರಿಕೆ ಕ್ರಮಗಳಾಗಿವೆ. ಅದೇ ರೀತಿ ಈ ಫೀಚರ್ಸ್‌ನಲ್ಲೂ ಹಣ ಮಾಡಲು ಟ್ವಿಟ್ಟರ್‌ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಹಣ

ಇದರಲ್ಲಿ ಹಣ ಮಾಡುವ ಉದ್ದೇಶಕ್ಕಾಗಿಯೇ 'ಉಚಿತ ಪ್ರಚಾರ ಇಲ್ಲ' ಎನ್ನುವುದನ್ನು ಟ್ವಿಟ್ಟರ್‌ ಒತ್ತಿ ಹೇಳಿದ್ದು, ಮುಂದಿನ ದಿನಗಳಲ್ಲಿ ಈ ಲಿಂಕ್‌ ಶೇರ್‌ ಪ್ರಕ್ರಿಯೆಗೆ ಯಾವ ರೀತಿ ಚಂದಾದಾರಿಕೆ ಹಣವನ್ನು ನಿಗದಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಜನರ ಅಭಿಪ್ರಾಯ ಕೇಳಲು ಮುಂದಾದ ಟ್ವಿಟ್ಟರ್

ಜನರ ಅಭಿಪ್ರಾಯ ಕೇಳಲು ಮುಂದಾದ ಟ್ವಿಟ್ಟರ್

ಟ್ವಿಟ್ಟರ್‌ನ ಈ ನಿರ್ಧಾರದಿಂದ ಈಗ ಅನೇಕ ಬಳಕೆದಾರರು ಟ್ವಿಟ್ಟರ್‌ಗೆ ಪರ್ಯಾಯವಾಗಿ ಬೇರೆ ಪ್ಲಾಟ್‌ಫಾರ್ಮ್ ನತ್ತ ಮುಖ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದಾಗ್ಯೂ ಈ ನಿರ್ಧಾರಕ್ಕೆ ಟ್ವಿಟ್ಟರ್‌ ಬ್ರೇಕ್‌ ಹಾಕಿದ್ದು, ಬಳಕೆದಾರರ ಪ್ರತಿಕ್ರಿಯೆ ಪಡೆಯಲು ಮುಂದಾಗಿದೆ. ಟ್ವಿಟರ್ ಹೊಸ ನೀತಿಯ ಬಗ್ಗೆ ಜನರ ಅಭಿಪ್ರಾಯವನ್ನು ತಿಳಿಯಲು ಬಯಸಿದ್ದು, ಇದಕ್ಕಾಗಿ ಕಂಪೆನಿಯು ತನ್ನ ವೇದಿಕೆಯ ಮೂಲಕ ಮತದಾನ ಪ್ರಕ್ರಿಯೆಗೆ ಮುಂದಾಗಿದೆ. ಇದರಲ್ಲಿ ಗಮನಿಸುವ ವಿಷಯ ಎಂದರೆ ಇದುವರೆಗೂ ಮಾಡಲಾದ ಮತದಾನದಲ್ಲಿ ಶೇ.80ಕ್ಕೂ ಹೆಚ್ಚು ಬಳಕೆದಾರರು ಕಂಪೆನಿಯ ಈ ಹೊಸ ನೀತಿಯನ್ನು ವಿರೋಧಿಸಿದ್ದಾರೆ.

ಮಾಸ್ಟೋಡಾನ್‌ ನತ್ತ ಮುಖ ಮಾಡಿದ ಬಳಕೆದಾರರು

ಮಾಸ್ಟೋಡಾನ್‌ ನತ್ತ ಮುಖ ಮಾಡಿದ ಬಳಕೆದಾರರು

ಇನ್ನು ಮಸ್ಕ್ ಅವರು ಅಕ್ಟೋಬರ್ ಅಂತ್ಯದಲ್ಲಿ ಕಂಪೆನಿಯನ್ನು $44 ಶತಕೋಟಿಗೆ ಖರೀದಿಸಿದಾಗಿನಿಂದ ಮತ್ತು ದ್ವೇಷಪೂರಿತ ನಡವಳಿಕೆ ಹಾಗೂ ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದ ಖಾತೆಗಳನ್ನು ಮರುಸ್ಥಾಪಿಸಲು ಪ್ರಾರಂಭಿಸಿದಾಗಿನಿಂದ ಹೊಸ ಬೆಳವಣಿಗೆ ಕಂಡು ಬಂದಿವೆ. ಈ ಕಾರಣಕ್ಕೆ ಮಾಸ್ಟೋಡಾನ್ ಇತ್ತೀಚಿನ ದಿನಗಳಲ್ಲಿ ಟ್ವಿಟ್ಟರ್‌ಗೆ ಪರ್ಯಾಯವಾಗಿ ವೇಗವಾಗಿ ಬೆಳೆಯುತ್ತಿದೆ.

ಪ್ಲಾಟ್‌ಫಾರ್ಮ್‌

ಟ್ವಿಟರ್ ಪ್ಲಾಟ್‌ಫಾರ್ಮ್‌ನಿಂದ ತಮ್ಮ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಉಚಿತ ಪ್ರಚಾರವನ್ನು ಬಯಸುವ ಬಳಕೆದಾರರ ವಿರುದ್ಧ ಕಠಿಣ ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಟ್ವಿಟರ್ ತಿಳಿಸಿದ್ದು, ಆ ರೀತಿಯ ಎಲ್ಲಾ ಟ್ವೀಟ್‌ಗಳನ್ನು ಸಹ ತೆಗೆದುಹಾಕಲಾಗಿದೆ. ಈ ಹಿಂದೆ, ಟ್ವಿಟರ್ ಬ್ಲೂ ಟಿಕ್, ಗೋಲ್ಡ್ ಟಿಕ್ ಮತ್ತು ಗ್ರೇ ಟಿಕ್ ಬಗ್ಗೆ ಬದಲಾವಣೆಗಳನ್ನು ಮಾಡಿತ್ತು.

Best Mobiles in India

English summary
Twitter bans linking to Facebook, Instagram and other rivals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X