ಟ್ವಿಟ್ಟರ್‌ ಖಾತೆಗಳಲ್ಲಿ ಈ ಬ್ಯಾಡ್ಜ್‌ಗಳನ್ನು ಗಮನಿಸಿದ್ದೀರಾ... ಇವುಗಳ ಅರ್ಥವೇನು?

|

ಟ್ವಿಟ್ಟರ್‌ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ಬೆಳವಣಿಗೆಗಳು ನಿರಂತರವಾಗಿ ಜರುಗುತ್ತಿದೆ. ಅದರಲ್ಲೂ ಎಲಾನ್ ಮಸ್ಕ್‌ ಅವರು ಟ್ವಿಟ್ಟರ್‌ ಅನ್ನು ಖರೀದಿಸಿದ ನಂತರ ತೀವ್ರಗತಿಯಲ್ಲಿ ಏರುಪೇರುಗಳು ಜರುಗುತ್ತಿವೆ. ಇದರ ನಡುವೆ ಈಗ ಬಳಕೆದಾರರಿಗೆ ಮೂರು ರೀತಿಯ ಬ್ಯಾಡ್ಜ್‌ ನೀಡಲಾಗುತ್ತಿದ್ದು, ಈ ಮೂಲಕ ಅವರ ಸ್ಟೇಟಸ್‌ ಏನು ಎಂಬುದನ್ನು ಇತರರು ಅರ್ಥ ಮಾಡಿಕೊಳ್ಳಬಹುದಾಗಿದೆ.

ಟ್ವಿಟ್ಟರ್‌

ಹೌದು, ಸಾಮಾನ್ಯವಾಗಿ ಟ್ವಿಟ್ಟರ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದದ್ದು ಬ್ಲೂಟಿಕ್‌ ಚಂದಾದಾರಿಕೆ. ಈ ಕಾರಣಕ್ಕೆ ಬಹುಪಾಲು ಬಳಕೆದಾರರು ಕೇವಲ ಬ್ಲೂಟಿಕ್‌ ಬಗ್ಗೆ ಮಾತ್ರ ತಿಳಿದುಕೊಂಡಿದ್ದಾರೆ. ಆದರೆ, ಇದರ ಹೊರತಾಗಿ ಗೋಲ್ಡನ್ ಹಾಗೂ ಅಧಿಕೃತ ಬ್ಯಾಡ್ಜ್‌ಗಳನ್ನು ಸಹ ನೀಡುತ್ತಿದೆ ಎನ್ನುವುದು ನಿಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ?. ಈ ಕಾರಣಕ್ಕೆ ಈ ಗೋಲ್ಡನ್ ಹಾಗೂ ಅಧಿಕೃತ ಬ್ಯಾಡ್ಜ್‌ಗಳನ್ನು ಯಾರ್ಯಾರಿಕೆ ಕೊಡಲಾಗುತ್ತದೆ, ಇವುಗಳನ್ನು ಪಡೆಯಲು ಬಳಕೆದಾರರು ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಬ್ಲೂ ಬ್ಯಾಡ್ಜ್ ಎಂದರೇನು?

ಬ್ಲೂ ಬ್ಯಾಡ್ಜ್ ಎಂದರೇನು?

ಸಾಮಾನ್ಯವಾಗಿ ಬಹುಪಾಲು ಮಂದಿಗೆ ಈ ಬ್ಲೂ ಬ್ಯಾಡ್ಜ್ ಬಗ್ಗೆ ತಿಳಿದಿರುತ್ತದೆ. ಯಾರ ಖಾತೆಯಲ್ಲಿ ಈ ಬ್ಲೂ ಬ್ಯಾಡ್ಜ್ ಇದೆಯೋ ಅದನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ಇನ್ನು ಬ್ಲೂ ಬ್ಯಾಡ್ಜ್ ಈಗ ಟ್ವಿಟ್ಟರ್‌ ಬ್ಲೂ ಚಂದಾದಾರಿಕೆಯ ಭಾಗವಾಗಿದ್ದು, ಬಳಕೆದಾರರು ವೆಬ್‌ ಆವೃತ್ತಿಗೆ $8 (661.69 ರೂ. ಗಳು) ಮತ್ತು ಐಫೋನ್‌ಗಳಲ್ಲಿ $11 (909.76 ರೂ. ಗಳನ್ನು) ಮಾಸಿಕ ಶುಲ್ಕವಾಗಿ ಪಾವತಿ ಮಾಡಬೇಕಿದೆ. ಈ ಮೂಲಕ ಪ್ರೊಫೈಲ್‌ನಲ್ಲಿ ಬ್ಲೂ ಟಿಕ್ ಅನ್ನು ಉಳಿಸಿಕೊಳ್ಳಬಹುದಾಗಿದೆ.

ಬ್ಲೂ ಬ್ಯಾಡ್ಜ್

ಬ್ಲೂ ಬ್ಯಾಡ್ಜ್ ಮೂಲಭೂತವಾಗಿ ನಿಮ್ಮ ಪ್ರೊಫೈಲ್ ಅಧಿಕೃತ ಮತ್ತು ಸಕ್ರಿಯವಾಗಿದೆ ಎಂದು ತಿಳಿಸುವ ಮಾರ್ಗವಾಗಿದೆ. ಈ ಹಿಂದೆ ಟ್ವಿಟರ್ ಬ್ಲೂ ಬ್ಯಾಡ್ಜ್ ಗಮನಾರ್ಹ ವ್ಯಕ್ತಿಗಳಿಗೆ ಮಾತ್ರ ನೀಡುತ್ತಿತ್ತು. ಹಾಗೆಯೇ ಬಳಕೆದಾರರು ಪರಿಶೀಲನೆಗಾಗಿ ತಮ್ಮ ವಿವರವನ್ನು ಸಲ್ಲಿಸಬೇಕಾಗಿತ್ತು. ಇದಾದ ನಂತರ ಹೊಸ ರೂಲ್ಸ್‌ ಪರಿಚಯಿಸಲಾಗಿದ್ದು, ಹಳೆಯ ಪರಿಶೀಲಿಸಿದ ಪ್ರೊಫೈಲ್‌ಗಳಲ್ಲಿ ಬ್ಲೂ ಬ್ಯಾಡ್ಜ್ ಅನ್ನು ಉಳಿಸಿಕೊಳ್ಳಬೇಕು ಎಂದರೆ ಮಾಸಿಕ ಚಂದಾದಾರಿಕೆ ಪಾವತಿ ಮಾಡಬೇಕಿದೆ.

ಹಳದಿ ಬ್ಯಾಡ್ಜ್‌

ಹಳದಿ ಬ್ಯಾಡ್ಜ್‌

ಕಳೆದ ತಿಂಗಳ‍ಷ್ಟೇ ಈ ಹಳದಿ ಬ್ಯಾಡ್ಜ್‌ ಅನ್ನು ಅನೇಕ ಬಳಕೆದಾರರು ಪಡೆದುಕೊಂಡಿದ್ದಾರೆ. ಈ ಬ್ಯಾಡ್ಜ್‌ ಅನ್ನು ರಾಜಕಾರಣಿಗಳು, ಪ್ರಭಾವಿಗಳು ಮತ್ತು ಸುದ್ದಿ ವಿಭಾಗಗಳಿಗೆ ಸಂಬಂಧಿಸಿದ ಆಯ್ದ ಪ್ರೊಫೈಲ್‌ಗಳಿಗೆ ಇದನ್ನು ನೀಡಲಾಗುತ್ತಿದೆ. ವಿಷಯ ಏನೆಂದರೆ ಈ ಬ್ಯಾಡ್ಜ್‌ ಗಾಗಿ ಯಾವುದೇ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಬದಲಾಗಿ ಹೆಚ್ಚಿನ ಸಂಖ್ಯೆಯ ಅನುಯಾಯಿಗಳಿದ್ದರೆ ಆ ಪ್ರೊಫೈಲ್‌ಗಳನ್ನು ಟ್ವಿಟ್ಟರ್‌ ಆಟೋಮ್ಯಾಟಿಕ್‌ ಆಗಿ ಗುರುತಿಸಿ ಈ ಬ್ಯಾಡ್ಜ್‌ ನೀಡುತ್ತಿದೆ.

ಅಧಿಕೃತ

ಕಂಪೆನಿಯು ಅಧಿಕೃತ ಲೇಬಲ್ ಅನ್ನು ಕೆಲವು ವ್ಯಾಪಾರ ಖಾತೆಗಳಲ್ಲಿ ಚಿನ್ನದ ಚೆಕ್‌ಮಾರ್ಕ್‌ನೊಂದಿಗೆ ಬದಲಾಯಿಸುತ್ತಿದೆ. ಇದರೊಂದಿಗೆ ಸರ್ಕಾರಿ ಮತ್ತು ಬಹುಪಕ್ಷೀಯ ಖಾತೆಗಳಿಗೆ ಬೂದು ಬಣ್ಣದ ಚೆಕ್‌ಮಾರ್ಕ್ ಅನ್ನು ಸಹ ಸೇರಿಸುತ್ತಿದೆ. ಆದರೆ, ಈ ಬೂದು ಬಣ್ಣದ ಚೆಕ್ ಗುರುತು ಅಧಿಕೃತ ಸ್ಟೇಟಸ್‌ ಅನ್ನು ಹೊಂದಿರುವುದಿಲ್ಲ.ಆದರೆ, ಈ ರೀತಿಯ ಖಾತೆಗಳು ಸಂಯೋಜಿತವಾಗಿರುವ ದೇಶದ ಮಾಹಿತಿಯನ್ನು ಒಳಗೊಂಡಿರುತ್ತದೆ. ಹಾಗೆಯೇ ಈ ಖಾತೆಗಳನ್ನು ಸರ್ಕಾರ ಅಥವಾ ರಾಜ್ಯ-ಸಂಯೋಜಿತ ಮಾಧ್ಯಮದಿಂದ ನಿರ್ವಹಿಸಲಾಗಿದೆಯೇ ಎಂದು ತಿಳಿಯಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ ಎಂದು ಟ್ವಿಟ್ಟರ್‌ ನ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

ಆಟೋಮ್ಯಾಟಿಕ್‌ ಲೇಬಲ್‌ಗಳು

ಆಟೋಮ್ಯಾಟಿಕ್‌ ಲೇಬಲ್‌ಗಳು

ಬ್ಲೂಟಿಕ್‌ ಹಾಗೂ ಹಳದಿ ಬ್ಯಾಡ್ಜ್‌ ಸೇರಿದಂತೆ ಲೇಬಲ್‌ ಆಯ್ಕೆಯನ್ನು ನೀಡಲು ಟ್ವಿಟ್ಟರ್‌ ಎಲ್ಲಾ ರೀತಿಯ ಪ್ಲ್ಯಾನ್‌ಗೆ ಮುಂದಾಗಿದೆ. ಟ್ವಿಟ್ಟರ್‌ ಕಂಪೆನಿಯೇ ಆಟೋಮ್ಯಾಟಿಕ್‌ ಆಗಿ ಲೇಬಲ್‌ಗಳನ್ನು ನೀಡಲು ರೆಡಿಯಾಗುತ್ತಿದ್ದು, ಇದಕ್ಕೆ ಕೆಲವು ಮಾನದಂಡಗಳನ್ನು ಆಧಾರವಾಗಿರಿಸಿಕೊಂಡಿದೆ. ಇನ್ನು ಖಾತೆಯಲ್ಲಿ ಈ ಆಟೋಮ್ಯಾಟಿಕ್‌ ಲೇಬಲ್ ಅನ್ನು ಪ್ರದರ್ಶಿಸಿದಾಗ, ಈ ಖಾತೆಯು ಮಾನವ ನಿರ್ಮಿತ ಕಂಟೆಂಟ್‌ ಅನ್ನ ಒಳಗೊಳ್ಳದೆ, ತಾನೇ ಕಂಟೆಂಟ್‌ ಅನ್ನು ರಚಿಸುತ್ತದೆ ಎನ್ನುವುದನ್ನು ಬಳಕೆದಾರರು ಕಂಡುಕೊಳ್ಳಬಹುದಾಗಿದೆ. ಈ ಫೀಚರ್ಸ್‌ ಸದ್ಯಕ್ಕೆ ಪರೀಕ್ಷಾ ಹಂತದಲ್ಲಿದ್ದು, ಇದು ಪ್ರೊಫೈಲ್ ಹೆಸರುಗಳು ಮತ್ತು ಹ್ಯಾಂಡಲ್‌ಗಳ ಅಡಿಯಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Twitter blue, golden and official badges explained.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X