ಐಫೋನ್‌ ಬಳಕೆದಾರರನ್ನು ಕಂಡರೆ ಮಸ್ಕ್‌ಗೆ ಯಾಕಿಷ್ಟು ಕೋಪ... ಬ್ಲೂಟಿಕ್‌ ಬೆಲೆ ಹೆಚ್ಚಳಕ್ಕೆ ಪ್ಲ್ಯಾನ್!

|

ಟ್ವಿಟರ್‌ನ ಹೊಸ ಮಾಲೀಕ ಎಲಾನ್ ಮಸ್ಕ್ ಕಂಪೆನಿಯನ್ನು ಖರೀದಿಸಿದಾಗಿನಿಂದ ಹಣ ಗಳಿಸಲು ಆಗಾಗ್ಗೆ ಕೆಲವು ಯೋಜನೆ ಜಾರಿ ಮಾಡುತ್ತಲೇ ಬರುತ್ತಿದ್ದಾರೆ. ಅದರಂತೆ ಟ್ವಿಟರ್‌ನಲ್ಲಿ ಬ್ಲೂ ಟಿಕ್ ಬಗ್ಗೆ ಎಲಾನ್ ಮಸ್ಕ್ ಮತ್ತೊಮ್ಮೆ ಸಸ್ಪೆನ್ಸ್ ಹೆಚ್ಚಿಸಿದ್ದಾರೆ. ಅಂತೆಯೇ ಕೆಲವು ದಿನಗಳ ಹಿಂದೆ ಟ್ವಿಟರ್ ಬ್ಲೂ ಟಿಕ್‌‌ಗೆ ಬಳಕೆದಾರರು 657.59 ರೂ. ಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿ ಆ ಯೋಜನೆಯನ್ನು ಜಾರಿ ಸಹ ಮಾಡಿದ್ದರು. ಆದರೆ, ಬಳಕೆದಾರರ ತೀವ್ರ ಆಕ್ರೋಶದ ನಂತರ ಆ ಪ್ಲ್ಯಾನ್‌ ಅನ್ನು ವಾಪಸ್‌ ತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೆ ಟ್ವಿಟರ್ ಬ್ಲೂ ಟಿಕ್‌ ದೃಢೀಕರಣಕ್ಕೆ ಸಂಬಂಧಿಸಿದಂತೆ ಐಫೋನ್ ಬಳಕೆದಾರರಿಗೆ 657.59 ರೂ. ಗಳ ಬದಲಿಗೆ ಬರೋಬ್ಬರಿ 904.01 ರೂ. ಗಳನ್ನು ವಿಧಿಸಲು ಪ್ಲ್ಯಾನ್‌ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಟ್ವಿಟ್ಟರ್‌

ಹೌದು, ಒಂದು ಕಡೆ ಟ್ವಿಟ್ಟರ್‌ ವಿರುದ್ಧ ಹಲವರು ಮುಗಿ ಬೀಳುತ್ತಿದ್ದಾರೆ, ಇನ್ನೊಂದು ಕಡೆ ಫಾಲೋವರ್ಸ್‌ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಇಷ್ಟಾಗಿಯೂ ಟ್ವಿಟ್ಟರ್‌ನಲ್ಲಿ ಈಗ ಕೆಲವು ಬದಲಾವಣೆ ಆಗುತ್ತಿದ್ದು, ಟ್ವಿಟ್ಟರ್‌ ಬಳಕೆದಾರರಿಗೆ ಸಾಕಷ್ಟು ಗೊಂದಲ ಉಂಟಾಗುವಂತೆ ಮಾಡಲಾಗಿದೆ. ಇದರ ಬೆನ್ನಲ್ಲೇ ಈಗ ಆಪಲ್‌ ಬಳಕೆದಾರರಿಗೆ ಬ್ಲೂಟಿಕ್‌ ಚಂದಾದಾರಿಕೆ ಬೆಲೆ ಹೆಚ್ಚಳ ಮಾಡಲಾಗುತ್ತಿದ್ದು, ಇದು ಯಾವ ರೀತಿಯ ಪರಿಣಾಮ ಎದುರಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಮೂಲ ಬೆಲೆಗಿಂತ ಹೆಚ್ಚಿನ ಬೆಲೆ ತೆರಬೇಕು

ಮೂಲ ಬೆಲೆಗಿಂತ ಹೆಚ್ಚಿನ ಬೆಲೆ ತೆರಬೇಕು

ಈ ಬಗ್ಗೆ ಹೊಸ ವಿಷಯವೊಂದು ಬೆಳಕಿಗೆ ಬಂದಿದ್ದು, ಈ ಹಿಂದೆ ಐಫೋನ್ ಬಳಕೆದಾರರಿಗೆ ನೀಡಲಾಗಿದ್ದ ಮೂಲ ಚಂದಾದಾರಿಕೆ ಬೆಲೆಗಿಂತ ಈಗ ಹೊಸ ಪ್ಲ್ಯಾನ್‌ನಲ್ಲಿ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಎಲಾನ್‌ ಮಸ್ಕ್‌ ಹಾಗೂ ಆಪಲ್‌ ಸಿಇಓ ಟಿಮ್‌ ಕುಕ್‌ ಅವರು ಇತ್ತೀಚಿಗೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಬೆಲೆ ಹೆಚ್ಚಳಕ್ಕೆ ಮೊದಲು ಐಫೋನ್‌ ಬಳಕೆದಾರರನ್ನೇ ಮಸ್ಕ್‌ ಗುರಿಯಾಗಿಸಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ನಮಗೂ ಆಪಲ್‌ಗೂ ಯಾವುದೇ ವಿವಾದವಿಲ್ಲ..

ನಮಗೂ ಆಪಲ್‌ಗೂ ಯಾವುದೇ ವಿವಾದವಿಲ್ಲ..

ಇನ್ನು ಆಪಲ್ ಜೊತೆ ಎಲಾನ್ ಮಾಸ್ಕ್ ಅವರ ವಿವಾದವು ಕೆಲವು ದಿನಗಳಿಂದ ಜರುಗುತ್ತಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯವಾಗಿದೆ. ಆದಾಗ್ಯೂ ಮಸ್ಕ್ ಈ ವಿವಾದಗಳ ಅಂತ್ಯದ ಬಗ್ಗೆ ಬಳಕೆದಾರರಿಗೆ ತಿಳಿಸುವ ಉದ್ದೇಶದಿಂದ ಟ್ವೀಟ್ ಒಂದನ್ನು ಮಾಡಿದ್ದು, ಟಿಮ್ ಕುಕ್ ಅವರ ಸಂಭಾಷಣೆ ಸಕಾರಾತ್ಮಕವಾಗಿದೆ ಹಾಗೂ ಎಲ್ಲಾ ವಿವಾದಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಆಪಲ್ ತನ್ನ ಪ್ಲೇ ಸ್ಟೋರ್‌ನಿಂದ ಟ್ವಿಟರ್ ಅನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕುತ್ತಿದೆ ಎಂದು ಎಲಾನ್ ಮಸ್ಕ್ ಆರೋಪಿಸಿದ್ದನ್ನು ಇಲ್ಲಿ ಗಮನಿಸಿಬಹುದು.

ಬೆಲೆ ಹೆಚ್ಚಳ ಎಷ್ಟು?

ಬೆಲೆ ಹೆಚ್ಚಳ ಎಷ್ಟು?

ಆಪಲ್‌ ಫೋನ್‌ನಲ್ಲಿ ಟ್ವಿಟ್ಟರ್ ಬ್ಲೂ ಚಂದಾದಾರಿಕೆಗೆ ತಿಂಗಳಿಗೆ 656.48 ರೂ. ಗಳಿಂದ 903.95 ರೂ. ಗಳ ವರೆಗೆ ಪಾವತಿ ಮಾಡಬೇಕಿದೆ. ಅಂದರೆ ಆಪಲ್ ಫೋನ್‌ನಲ್ಲಿ 903.95 ರೂ ಪಾವತಿ ಮಾಡಬೇಕಿದ್ದರೆ ವೆಬ್‌ ಆವೃತ್ತಿಗೆ 656.48 ರೂ. ಗಳಿಗಿಂತಲೂ ಕಡಿಮೆ ಹಣ ಪಾವತಿ ಮಾಡಬೇಕಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಟ್ವಿಟರ್ ಬ್ಲೂ ಪ್ಲಾನ್

ಟ್ವಿಟರ್ ಬ್ಲೂ ಪ್ಲಾನ್ ಮೂಲಕ ತನ್ನ ಸೈಟ್‌ನಿಂದ ನಕಲಿ ಖಾತೆಗಳನ್ನು ತೆರವು ಮಾಡಲು ಟ್ವಿಟರ್ ತಯಾರಿ ನಡೆಸುತ್ತಿದೆ. ಕಂಪನಿಯು ಬ್ಲೂ ಟಿಕ್ ವೆರಿಫೈ ಅಕೌಂಟ್ ವೆಬ್‌ ಬಳಕೆದಾರರಿಂದ 657.64 ರೂ ಹಾಗೂ ಐಫೋನ್ ಬಳಕೆದಾರರಿಂದ 904.26 ರೂ. ಗಳನ್ನು ಪಾವತಿ ಮಾಡುವಂತೆ ಕೇಳಲು ಮುಂದಾಗಿದೆ. ಇದೇ ರೀತಿಯ ಹಾಗೂ ಇದಕ್ಕಿಂತ ಹೆಚ್ಚಿನ ಶುಲ್ಕವನ್ನು ಸ್ಪಾಟಿಫೈ ನಂತಹ ಪ್ಲಾಟ್‌ಫಾರ್ಮ್‌ಗಳು ಐಫೋನ್ ಬಳಕೆದಾರರಿಗೆ ವಿಧಿಸುತ್ತಿರುವುದನ್ನು ಈ ವೇಳೆ ನಾವು ನೆನಪಿಸಿಕೊಳ್ಳಬಹುದಾಗಿದೆ. ಯಾಕೆಂದರೆ ಆಪಲ್‌ನ ಐಫೋನ್ ಆಪ್‌ ಚಾರ್ಜ್, ಇದು ಸುಮಾರು 30 ಪ್ರತಿಶತ ವಾಗಿರುವುದರಿಂದ ಈ ಬೆಲೆ ಹೆಚ್ಚಳ ಸಾಮಾನ್ಯ ವಿಷಯದಂತೆ ಆಗಿದೆ.

Best Mobiles in India

English summary
Twitter Blue tick may cost may a lot more on an iPhone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X