ಟ್ವಿಟ್ಟರ್‌ನಲ್ಲಿ ಇನ್ಮುಂದೆ ಕಾಣಿಸಿಕೊಳ್ಳಲಿವೆ ರಾಜಕೀಯ ಜಾಹೀರಾತುಗಳು

|

ಟ್ವಿಟ್ಟರ್‌ನಲ್ಲಿ ಪ್ರತಿ ದಿನವೂ ಒಂದಲ್ಲಾ ಒಂದು ಬೆಳವಣಿಗೆ ಕಂಡುಬರುತ್ತಿದ್ದು, ಕೆಲವರಿಗೆ ಈ ನಿರ್ಧಾರಗಳು ಅಗತ್ಯ ಎನಿಸಿದರೆ ಹಲವರಿಗೆ ಎಲಾನ್‌ಮಸ್ಕ್‌ ಅವರ ನಿರ್ಧಾರಗಳು ದೊಂಬರಾಟದಂತೆ ಕಾಣುತ್ತಿದೆ. ಅದಾಗ್ಯೂ ಮೊನ್ನೆಯಷ್ಟೇ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದ ಮಸ್ಕ್‌ ಭಾರೀ ಸಂಚಲನ ಉಂಟು ಮಾಡಿದ್ದರು. ಇದಾದ ಬಳಿಕ ಈಗ ಮತ್ತೊಂದು ಮಹತ್ವದ ನಿರ್ಧಾರ ಮಾಡಿದ್ದಾರೆ.

ಟ್ವಿಟ್ಟರ್‌

ಹೌದು, ಟ್ವಿಟ್ಟರ್‌ನಲ್ಲಿ ಇನ್ಮುಂದೆ ರಾಜಕೀಯ ಜಾಹೀರಾತುಗಳ ಪ್ರಕಾರಗಳನ್ನು ವಿಸ್ತರಿಸಲಾಗುತ್ತದೆ ಎಂದು ಎಲಾನ್‌ ಮಸ್ಕ್‌ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ ಸಹ ಅಧಿಕೃತವಾಗಿ ಮಾಹಿತಿ ನೀಡಿದೆ. ವಿಷಯ ಏನೆಂದರೆ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಉದ್ದೇಶದಿಂದ 2019 ರಲ್ಲಿ ನಿ‍ಷೇಧಿಸಲಾಗಿದ್ದ ಈ ಸೇವೆಯನ್ನು ಈಗ ಮತ್ತೆ ಪ್ರಾರಂಭಿಸಲು ಮುಂದಾಗಿರುವುದು. ಹಾಗಿದ್ರೆ, ಇದು ಯಾವ ರೀತಿಯ ಸೇವೆ ನೀಡುತ್ತದೆ?, ಮಸ್ಕ್‌ರವರ ಮುಂದಿನ ನಿರ್ಧಾರ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

2019 ರಲ್ಲಿ ನಿಷೇಧಿಸಲಾಗಿತ್ತು

2019 ರಲ್ಲಿ ನಿಷೇಧಿಸಲಾಗಿತ್ತು

ಟ್ವಿಟ್ಟರ್‌ನ ಹಿಂದಿನ ಸಿಇಒ ಜಾಕ್ ಡಾರ್ಸೆ 2019 ರಲ್ಲಿ ಹೆಚ್ಚಿನ ರಾಜಕೀಯ ಜಾಹೀರಾತುಗಳನ್ನು ನಿಷೇಧಿಸಿದ್ದರು. ಆದರೆ, ಟ್ವಿಟರ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ರಾಜಕೀಯ ಜಾಹೀರಾತುಗಳ ಸಂಖ್ಯೆಯನ್ನು ವಿಸ್ತರಿಸಲು ಯೋಜಿಸಿದ್ದು, ಎಲಾನ್‌ ಮಸ್ಕ್ ಅವರ ಪ್ರಮುಖ ನೀತಿಯಲ್ಲಿ ಒಂದಾಗಿದೆ. ಈ ಮೂಲಕ ಮಸ್ಕ್‌ ಹೆಚ್ಚಿನ ಆದಾಯ ಪಡೆಯಲು ಮುಂದಾಗಿದ್ದಾರೆ.

ಟ್ವಿಟರ್

ಟ್ವಿಟರ್ ಯುಎಸ್‌ನಲ್ಲಿ ತನ್ನ ಕಾರಣ ಆಧಾರಿತ ಜಾಹೀರಾತು ನೀತಿಯನ್ನು ಸಡಿಲ ಮಾಡುತ್ತಿದೆ ಎಂದು ತಿಳಿಸಿದ್ದು, ನಾಗರೀಕರ ಪಾಲ್ಗೊಳ್ಳುವಿಕೆ, ಆರ್ಥಿಕ ಅಭಿವೃದ್ಧಿ, ಪರಿಸರ ಉಸ್ತುವಾರಿ ಮತ್ತು ಸಾಮಾಜಿಕ ಸಮಾನತೆ ಕುರಿತು ಜಾಗೃತಿ ಮೂಡಿಸುವ ಮತ್ತು ಜನರಿಗೆ ಶಿಕ್ಷಣ ನೀಡುವ ಮತ್ತು ಕ್ರಮಕ್ಕೆ ಕರೆ ನೀಡುವ ಜಾಹೀರಾತುಗಳು ಹೊಸ ನೀತಿಯ ಅಡಿಯಲ್ಲಿ ಇರಲಿವೆ ಎಂದು ಮಾಹಿತಿ ನೀಡಿದೆ.

ಟ್ವಿಟ್ಟರ್‌

ಈ ಸಂಬಂಧ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಲಾಗಿದ್ದು, ಮುಂದೆ, ನಾವು ನಮ್ಮ ಜಾಹೀರಾತು ನೀತಿಯನ್ನು ಟಿವಿ ಮತ್ತು ಇತರ ಮಾಧ್ಯಮಗಳ ಜೊತೆಗೆ ಹೊಂದಾಣಿಕೆ ಮಾಡುತ್ತೇವೆ. ಎಲ್ಲಾ ನೀತಿ ಬದಲಾವಣೆಗಳಂತೆ, ವಿಷಯವನ್ನು ಪರಿಶೀಲಿಸುವ ಮತ್ತು ಅನುಮೋದಿಸುವ ನಮ್ಮ ವಿಧಾನವು ಟ್ವಿಟ್ಟರ್‌ ಬಳಕೆದಾರರನ್ನು ರಕ್ಷಿಸುತ್ತದೆ. ಈ ಬಗ್ಗೆ ನಾವು ಮೊದಲೇ ಖಚಿತಪಡಿಸಿಕೊಳ್ಳುತ್ತೇವೆ. ಈ ಕೆಲಸ ಮುಂದುವರೆದಂತೆ ನಾವು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುತ್ತೇವೆ ಎಂದು ಉಲ್ಲೇಖಿಸಲಾಗಿದೆ.

ಮತದಾರ

ಇನ್ನು ಈ ಹೊಸ ಬದಲಾವಣೆಯಲ್ಲಿ ಮತದಾರರ ನೋಂದಣಿಗೆ ಸಂಬಂಧಿಸಿದ ಜಾಹೀರಾತುಗಳಿಗೆ ಕೆಲವು ವಿನಾಯಿತಿ ಸಹ ನೀಡಲಾಗುತ್ತದಂತೆ. ಈ ಸಮಯದಲ್ಲಿ ರಾಜಕೀಯ ಜಾಹೀರಾತುಗಳು ಟ್ವಿಟ್ಟರ್‌ನ ಒಟ್ಟು ಜಾಹೀರಾತು ಆದಾಯದ ಒಂದು ಸಣ್ಣ ಭಾಗವನ್ನು ನೀಡಲಿದೆ ಎಂದು ತಿಳಿದುಬಂದಿದೆ.

ಸಾಮಾಜಿಕ

ಟ್ವಿಟರ್ ಇತರೆ ಸಾಮಾಜಿಕ ಮಾಧ್ಯಮದಂತೆಯೇ ಜಾಹೀರಾತಿನ ಮೇಲೆ ಅವಲಂಬಿತವಾಗಿದೆ. 2021 ರಲ್ಲಿ ಜಾಹೀರಾತಿನಿಂದ $5.1 ಶತಕೋಟಿ ಆದಾಯ ಬಂದಿದೆ. ಅಂದರೆ ಒಟ್ಟಾರೆ ಆದಾಯದಲ್ಲಿ 89% ಆದಾಯ ಜಾಹೀರಾತು ವಿಭಾಗದಿಂದಲೇ ಬಂದಿದೆ. ಆದರೆ, ಮಸ್ಕ್‌ ಟ್ವಿಟ್ಟರ್‌ ಅನ್ನು ಸ್ವಾಧೀನ ಪಡಿಸಿಕೊಂಡಾಗಿನಿಂದ ಟ್ವಿಟ್ಟರ್‌ಗೆ ಬಹಳ ಸಂಕಷ್ಟ ಎದುರಾಗಿದೆ.

ಟ್ವಿಟ್ಟರ್‌

ಇದರೊಂದಿಗೆ ಟ್ವಿಟ್ಟರ್‌ ಶೀಘ್ರದಲ್ಲೇ ಬಳಕೆದಾರರಿಗೆ ಟ್ವೀಟ್‌ಗಳು, ಟ್ರೆಂಡ್‌ಗಳು, ಕಂಟೆಂಟ್‌ಗಳು ಹಾಗೂ ಇನ್ನೂ ಹೆಚ್ಚಿನವುಗಳ ಮೂಲಕ ಸೈಡ್ ಸ್ವೀಪ್ ಮಾಡಲು ಅನುಮತಿಸುತ್ತದೆ . ಅಕ್ಟೋಬರ್ ಅಂತ್ಯದಲ್ಲಿ ಮಸ್ಕ್ ಟ್ವಿಟ್ಟರ್ ಅನ್ನು ವಹಿಸಿಕೊಂಡಾಗಿನಿಂದ, ಟೆಸ್ಲಾ ಸಿಇಒ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವುದಕ್ಕೆ ಪ್ರತಿಕ್ರಿಯೆಯಾಗಿ ಕಾರ್ಪೊರೇಟ್ ಜಾಹೀರಾತುದಾರರು ಪಲಾಯನ ಮಾಡಿದ್ದಾರೆ.

ತಿಂಗಳು

ಕಳೆದ ತಿಂಗಳು ಮಸ್ಕ್ ತನ್ನ ವೆಚ್ಚ ಕಡಿತ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದು, ಮುಂದಿನ ವರ್ಷ ಟ್ವಿಟರ್ $3 ಬಿಲಿಯನ್ (ಸುಮಾರು 24,900 ರೂ. ಕೋಟಿ) ಋಣಾತ್ಮಕ ನಗದು ಹರಿವು ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಟ್ವಿಟರ್ ಸರ್ವರ್ ಆರ್ಕಿಟೆಕ್ಚರ್ ಬದಲಾವಣೆಗಳನ್ನು ಪಡೆಯುತ್ತದೆ, ಈ ಮೂಲಕ ಇನ್ನಷ್ಟು ವೇಗವಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.

Best Mobiles in India

English summary
Twitter to reverse its 2019 ban on political ads.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X